ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂವರಾಹ ಪಾಲಿಸೆನ್ನ ಶ್ಯಾಮಲಾಂಗ ಕಾಮ ತಾತ ಚಾರು ಚರಣ ಪ ಧರೆಯನ್ನೆತ್ತಿ ತೊಡೆಯೊಳಿಟ್ಟು ಕರಗಳಿಂದಲಪ್ಪಿಕೊಂಬ ಕರುಣದಿಂದ ಸುರರಿಗಭಯ ವಿತ್ತ ದಿವ್ಯ ಕೋಲಮೂರ್ತಿ 1 ಎರಡನೆಯ ಹಿರಣ್ಯಾಕ್ಷ ದೈತ್ಯನನ್ನು ಮಥಿಸಿದಂಥ ಜನಿಸಿದಂಥ ಮಂಗಲಾಂಗ 2 ದೇಶದೊಳ್ ಶ್ರೀಮುಷ್ಣವೆನಿಪ ಕ್ಷೇತ್ರದೊಳಗೆ ನೆಲಸಿದಂಥ ಶೇಷ ಶಿರದೊಳ್ ಚರಣವಿತ್ತ ರಾಜನಾಥ ಹಯಮುಖಾತ್ಮ 3
--------------
ವಿಶ್ವೇಂದ್ರತೀರ್ಥ
ಶ್ರೀಹರಿ ಸಂಕೀರ್ತನೆಗಳು ಅಪ್ರಮೇಯ ಎನ್ನ ಪಾಲಿಸೈ ಅಪ್ಪ ನಿನ್ನ ಪದವ ನಂಬಿರ್ಪೆ ಪಾಲಿಸೈ ಪ ಸರ್ಪಶಯನ ಕಂದರ್ಪಜನಕ ಕೃಪೆಯ ತೋರಿಸೀಗ ಎನ್ನ ತಪ್ಪುಗಳನು ಒಪ್ಪಿಸಿರುವೆ ಒಪ್ಪಿಕೊಂಡು ಮನ್ನಿಸೆನ್ನ ಅ.ಪ ಕರಿಯ ಬಾಧೆಯನ್ನು ಹರಿಸಿದೆ ತರುಣಿಗಂದು ಕರುಣದಿಂದ ವರವ ನೀಡಿದೆ ಕರೆಯೆ ಕಂಬದಿಂದ ಬಂದು ದುರುಳ ದೈತ್ಯನನ್ನು ಕೊಂದು ತರಳನನ್ನು ಪೊರೆದೆಯೆಂದು ಶರಣು ಹೊಕ್ಕೆ ದೀನಬಂಧು 1 ರಾಜೇಂದ್ರ ಪುರವರಾಧಿಪ ರಾಜ ರಾಜ ಮಾಜದೆನ್ನ ಮೊರೆಯ ಕೇಳುತ ಸುಜನಪಾಲ ನಿನ್ನ ಪದವ ಭಜನೆಗೈವೆ ವಿಮಲಮತಿಯ ಭುಜಗಶಯನ ಕರುಣಿಸೆಂದೆ ಭಜಕ ರಕ್ಷಕ ರಾಘವೇಂದ್ರ 2
--------------
ನಂಜನಗೂಡು ತಿರುಮಲಾಂಬಾ