ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸುಕೃತವ ಮಾಡಿದಳೊ ಯಶೋದೆಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆಪ ಗಂಗಾಜನಕನಿಗೆ ಗಡಿಗೆನೀರೆರೆವಳಂತೆಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ1 ನಗವನೆತ್ತಿದವನ ಮಗುವೆಂದೆತ್ತುವಳಂತೆನಿಗಮಗೋಚರನ ತಾ ನಿಟ್ಟಿಪಳಂತೆಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ 2 ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆಅಹಿತಲ್ಪನಿಗೆ ಹಾವತುಳಿದೀಯೆಂಬಳಂತೆಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ 3 ಚತುರ್ಮುಖಪಿತನ ಸುತನೆಂದೆತ್ತುವಳಂತೆಶ್ರುತಿವಿನುತಗೆ ಜೋಗುಳ ಪಾಡುವಳಂತೆಶತರವಿತೇಜಗಾರತಿಯನೆತ್ತುವಳಂತೆಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ 4 ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದಪಡುಗಡಲತಡಿಯ ದ್ವಾರಕೆನಿಲಯಬಿಡದೆ ನೆಲೆಸಿದ ಹಯವದನ ಮುದ್ದುಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ5
--------------
ವಾದಿರಾಜ
ಮನರಥದಿಂದಲಿ ಘನರಥಕೀಗಲೆ ಬೇಗನೆ ಬಾರೊ ಪ. ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ದನುಜದಲ್ಲಣ ಬೇಗ ಬಾರೋ ಕೃಷ್ಣ ಅ.ಪ. ಮುತ್ತಿನ ತೋರಣ ಸುತ್ತು ಛತ್ತರಿಗೆಯು ಬೇಗನೆ ಬಾರೊ ಸಿರಿ ಸಹ ಬೇಗನೆ ಬಾರೊ ಉತ್ತಮ ಭಕ್ತರು ಎತ್ತಿ ಕೈ ಕರೆವರು ಬೇಗನೆ ಬಾರೊ ನಿತ್ಯ ಮಂಗಳ ನಿನ್ನ ಉತ್ತಮ ರೂಪವ ಚಿತ್ತದಿ ತೋರುತ ಸತ್ಯ ಸಂಕಲ್ಪನೆ 1 ಗಡಗಡ ನಡೆಯುವ ಘನರಥದಲಿ ನಿಂದು ಬೇಗನೆ ಬಾರೊ ಎಡಬಲದಲಿ ಶ್ರೀ ಭೂಮಿಯರೊಡಗೂಡಿ ಬೇಗನೆ ಬಾರೊ ಧಡಧಡ ನಡೆಯುತ ದೈತ್ಯದಲ್ಲಣನೆ ಬೇಗನೆ ಬಾರೊ ನುಡಿಸುವ ವಾದ್ಯಗಳ್ ಪಿಡಿದಿಹ ಚಾಮರ ಕಡೆಗಣ್ಣೊಳು ಭಕ್ತರನೀಕ್ಷಿಸುತಲಿ 2 ನಾರದ ತುಂಬುರ ನಾಟ್ಯವನಾಡ್ವರು ಬೇಗನೆ ಬಾರೊ ಬಾರಿ ಬಾರಿಗೆ ಭಕ್ತರು ನುತಿಗೈವರು ಬೇಗನೆ ಬಾರೊ ವಾರಿಜಾಸನ ವಂದ್ಯ ಶ್ರೀನಿವಾಸ ದೊರಿ ಬೇಗನೆ ಬಾರೊ ತೋರುತ ರೂಪವ ಬೀರುತ ಕರುಣವ ಮಾರಜನಕ ಅಪಾರ ಮಹಿಮನೆ 3 ವಂದಿಸಿ ಕರೆವರೊ ನಿಂದು ಭಕ್ತರೆಲ್ಲ ಬೇಗನೆ ಬಾರೊ ಇಂದಿರೆಯರಸನೆ ಮಂದರೋದ್ಧರ ಕೃಷ್ಣ ಬೇಗನೆ ಬಾರೊ ಇಂದು ಸ್ಥಿರವಾರ ಸ್ಥಿರವಾಗಿ ಸಲಹಲು ಬೇಗನೆ ಬಾರೊ ಹಿಂದೆ ಮುಂದೆ ಭಕ್ತ ಸಂದಣಿಯೊಳು ಗುರು ವೃಂದ ಬಿಂಬ ಮನ್ಮನ ಬಿಂಬನೆ ರಥಕೆ 4 ಅಪಾರ ಕರುಣದಿ ಭಕ್ತರ ಪೊರೆಯಲು ಬೇಗನೆ ಬಾರೊ ಶ್ರೀಪತಿ ಶೇಷಾಚಲನಿಲಯನೆ ಹರಿ ಬೇಗನೆ ಬಾರೊ ಗೋಪಾಲಕೃಷ್ಣವಿಠ್ಠಲನೆ ತ್ವರಿತದಿ ಬೇಗನೆ ಬಾರೊ ಭೂಪರೈವರ ಕಾಯ್ದ ಗೋಪಕುವರ ಕೃಷ್ಣ ಈ ಪರಿಯಿಂದಲಿ ಭಕ್ತರ ಪೊರೆಯಲು 5
--------------
ಅಂಬಾಬಾಯಿ
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯ ಕಾಮಿತಪ್ರದ ಸುರಸ್ತೋಮಾಗ್ರಗಣ್ಯಪ. ಜನ್ಮ ಜನ್ಮಾಂತರದ ಕರ್ಮಾನುಸಾರದಿಂ ದುರ್ಮತಿಗೆಳಸಿಯಹಮ್ಮಮತೆಯಲಿ ದುರಿತ ದೂರವಿರಿಸು ನಿರ್ಮಲಜ್ಞಾನೋಪದೇಶವನಿತ್ತೆನ್ನ1 ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತ ಭಕ್ತಿಸೌಭಾಗ್ಯವಿರಕ್ತಿಯ ನೀಡು ಭೃತ್ಯವತ್ಸಲ ಭವಭಯಹರ ಗಿರಿಜಾ- ಪುತ್ರನೆ ಪರಮಪವಿತ್ರ ಸುಚರಿತ್ರನೆ2 ಸುರಲೋಕವನು ಕಾವ ಧುರಧೀರ ಪ್ರಭು ನಿನಗೀ ನರಲೋಕವನು ಕಾವದುರು ಕಷ್ಟವೇನು ಪರಿಶುದ್ಧ ಸ್ಥಾನಿಕಧರಣೀಸುರಕುಲ- ಗುರುವೆಂದು ಚರಣಕ್ಕೆ ಶರಣಾಗತನಾದೆ3 ಸಾಕುವಾತನು ನೀನೆ ಸಲಹುವಾತನು ನೀನೆ ಬೇಕು ಬೇಡೆಂಬುವರ ನಾ ಕಾಣೆ ದೊರೆಯೆ ಲೋಕೇಶ ಸುಕುಮಾರ ಶೋಕಮೋಹವಿದೂರ ನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ4 ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆ ಸುತ್ರಾಮಾದಿ ಸುರಮೊತ್ತ ಪೂಜಿತನೆ ಕರ್ತ ಲಕ್ಷ್ಮೀನಾರಾಯಣನ ಸಾರೂಪ್ಯನೇ ದೈತ್ಯದಲ್ಲಣ ವಲ್ಲೀದೇವಿ ಮನೋಹರನೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯಕಾಮಿತಪ್ರದ ಸುರಸ್ತೋಮಾಗ್ರಗಣ್ಯ ಪ.ಜನ್ಮ ಜನ್ಮಾಂತರದ ಕರ್ಮಾನುಸಾರದಿಂದುರ್ಮತಿಗೆಳಸಿಯಹಮ್ಮಮತೆಯಲಿದುರ್ಮದಾಂಧನಾದೆದುರಿತದೂರವಿರಿಸುನಿರ್ಮಲಜ್ಞಾನೋಪದೇಶವನಿತ್ತೆನ್ನ 1ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತಭಕ್ತಿಸೌಭಾಗ್ಯವಿರಕ್ತಿಯ ನೀಡುಭೃತ್ಯವತ್ಸಲ ಭವಭಯಹರ ಗಿರಿಜಾ-ಪುತ್ರನೆ ಪರಮಪವಿತ್ರ ಸುಚರಿತ್ರನೆ 2ಸುರಲೋಕವನುಕಾವಧುರಧೀರ ಪ್ರಭು ನಿನಗೀನರಲೋಕವನು ಕಾವದುರು ಕಷ್ಟವೇನುಪರಿಶುದ್ಧ ಸ್ಥಾನಿಕಧರಣೀಸುರಕುಲ-ಗುರುವೆಂದು ಚರಣಕ್ಕೆ ಶರಣಾಗತನಾದೆ 3ಸಾಕುವಾತನು ನೀನೆ ಸಲಹುವಾತನು ನೀನೆಬೇಕು ಬೇಡೆಂಬುವರ ನಾ ಕಾಣೆ ದೊರೆಯೆಲೋಕೇಶ ಸುಕುಮಾರ ಶೋಕಮೋಹವಿದೂರನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ 4ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆಸುತ್ರಾಮಾದಿ ಸುರಮೊತ್ತ ಪೂಜಿತನೆಕರ್ತಲಕ್ಷ್ಮೀನಾರಾಯಣನ ಸಾರೂಪ್ಯನೇದೈತ್ಯದಲ್ಲಣ ವಲ್ಲೀದೇವಿ ಮನೋಹರನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ