ಹೇಸಿಕಿಲ್ಲವೊ | ಎನಗೆ ಹೇಸಿಕಿಲ್ಲವೋ ಪ
ಮೀಸಲೆನಿಸಿ ಮನವ ನಿನ್ನ | ಆಶೆಯಲ್ಲಿ ಇರಿಸದಾಲೆ ಅ.ಪ.
ವೈರಿ ಕಾಡುತಿಹನು 1
ವಿಷಯದಾಶೆ ಪೋಗಲಿಲ್ಲ | ಹಸಿವು ತೃಷೆಯು ಮೀರಲಿಲ್ಲಕುಸಿಯುತಿದೆ ದೇಹವೆಲ್ಲ | ಎಸೆವ ವ್ರತವ ಚರಿಸಲಿಲ್ಲ 2
ನಾನು ನನ್ನದೆಂಬ ಮಮತೆ | ಹೀನವೆಂದು ತಿಳಿದು ತಿಳಿದುಗೇಣು ಎಂಟು ದೇಹಕಾಗಿ | ಹೀನ ವಿಷಯದಾಶೆ ಇಹುದು 3
ಸಂದು ಪೋದ ಜನ್ಮ ತಿಳಿಯೆ | ಮುಂದೆ ಬಾಹುದೆಂತೊ ಕಾಣೊಇಂದಿರೇಶ ನೀನೆ ಗತಿಯೊ | ಮಂದಹಾಸ ಬೀರಿ ಪೊರೆಯೊ 4
ನಿನ್ನ ಕಾಣಧಾಂಗೆ ದೇಹ | ಇನ್ನೂ ಪೋಗದಂತೆ ಮಾಡಿ |ಘನ್ನ ಮಹಿಮ ರೂಪ ತೋರೊ | ಚೆನ್ನ ಗುರು ಗೋವಿಂದ ವಿಠಲ5