ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೆನು ಹರಿಯ | ಭವಹಾರಿಯ ಇಂದು ಕಂಡೆನು ಕಂಬದಿಂದಲಿ ಪ ಬಂದು ದೈತ್ಯನ ಕೊಂದು ಕಂದನಿ- ಗಂದು ಒಲಿದಾನಂದ ಸಾಂದ್ರನ ಇಂದಿರಾ ಮಂದಿರನ ವಂದ್ಯನ ಅ.ಪ. ಎಂದಿನಂದದಿ ಬರುತ | ಮನದಲಿ ಶ್ರೀ ಮು- ಕುಂದ ನಾಮವ ನೆನೆಯುತ ಮುಂದು ಮುಂದಕೆ ನಡೆಯುತ | ಆ- ನಂದದಿ ಹೋಗುತಲಿರೆ ಸುಂದರಿ ಶ್ರೀ ತುಲಸಿಗೊಲಿದು ಬೃಂದೆಯನು ಕರವಿಡಿದು ಪೊಳೆದು ಬಂದು ಗಂಡಕಿಯಿಂದ ಭಕ್ತರ ವೃಂದ ಪೊರೆಯಲು ಪಥದಿ ನಿಂದನ1 ಸುಕೃತ | ಬಂದೊದಗಿತೊ ಶ್ರೀಶನೆನಗೆ ದೊರೆತ | ಪ್ರಭಾವದೆ ದುರಿತ | ರಾಶಿಯು ಇನ್ನು ದಾಸರಾಯರ ಕುಲದಿ ಜನಿಸಿದ ಕೂಸೆನುತ ದೇಸಿಗರ ಸೇವೆಗೆ ಮೀಸಲಾಗಿಸಲೋಸುಗೆನ್ನ ಮ- ಹಾಶಯವ ಲೇಸೆನಿಸಿ ಬಂದವ 2 ವಿಕಳ ತತಿಗೆ ಬಾಧಕ | ಈತನ ನಾಮ ಪ್ರಕಟಿಸಲಿನ್ನು ಸುಖ | ಪಾಲಿಸುವನು ಯುಕುತಿಗೆಂದಿಗು ನಿಲುಕ | ಸುಕೃತರಿಂದ ಭಕುತಿ ಸೇವೆಯನೊಂದೆ ಕೊಳ್ಳುವ ಭಕುತಿ ಮುಕುತಿಗಳನ್ನು ಕೊಡುವ ಸಕಲ ಕಾಲದಿ ನಿಂತು ಸಲಹುವ ಲಕುಮಿಕಾಂತನ ಸರ್ವ ಶಕ್ತನ 3
--------------
ಲಕ್ಷ್ಮೀನಾರಯಣರಾಯರು
ಕರುಣಿಸೊ ಗುರುವೆ ಚರಣ ಸ್ಮರಣೆಯು ನಿಮ್ಮ ಧ್ರುವ ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ ಅರಿತು ಮಾಡುವದು ದಯ ತರಣೋಪಾಯದ 1 ಒಲಿಸಿಕೊಳ್ಳಲು ನಿಮ್ಮ ಫÀಲ್ಗುಣನಂಥವನಲ್ಲ ಗೆಲಿಸುವದೊ ನೀ ಸುಪಥ ನೆಲೆನಿಭದೋರಿ 2 ಮೊರೆ ಇಡಲು ನಾ ನಿಮ್ಮ ಕರಿರಾಜನÀಂಥವನಲ್ಲ ಕರುಣಿಸುವದೊ ಎನಗೆ ಕರವಿಡಿತು ಪೂರ್ಣ 3 ಶರಣ ಹೋಗಲು ನಿಮ್ಮ ಧೀರ ವಿಭೀಷಣನಲ್ಲ ಪಾರ ಗೆಲಿಸುವದೊ ನಿಮ್ಮ ವರಕೃಪೆಯಿಂದ 4 ಭಕ್ತಿ ಮಾಡಲು ನಿಮ್ಮ ಶಕ್ತಸಮಥನಲ್ಲ ಯುಕ್ತಿದೋರುವದೊ ನಿಮ್ಮ ಮುಕ್ತಿಮಾರ್ಗದ 5 ಸ್ತುತಿಯ ಮಾಡಲು ನಿಮ್ಮ ಅತಿಶಯ ಭಕ್ತ ನಾನಲ್ಲ ಗತಿಸುಖದೋರುದೆನಗೆ ಪತಿತಪಾವನ 6 ದಾಸರ ದಾಸನೆಂದು ಲೇಸಾಗಿ ಮಹಿಪತಿಗೆ ವಾಸನೆ ಪೂರಿಸೊ ಪೂರ್ಣ ದೇಸಿಗರ ದೇವ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು