ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ಆತ್ಮನಿವೇದನಾ ಕೃತಿಗಳು ಎಂದಿಗೊ ಕಂದನ ಪಾಲಿಸುವದು ಇನ್ನೆಂದಿಗೊ ಪ ಅಂದಿನಿಂದಲಿ ನಿನ್ನ ಸುಂದರ ಸೇವೆಗೆ ಬಂದು ಬೇಡುವೇನೋ ಮುಕುಂದ ಮಾಧವಾ 1 ಸಾಧು ಸಜ್ಜನರೊಳು ಭೇದವಳಿದು ನಿಜ ಪಾದವ ಕಾಣುವ ಬೋಧೆ ಆನಂದ 2 ವಾರವಾರ್ಚಿತ ಹರಿ ದಾಸ ತುಲಸಿರಾಮಾ ದೇಸಿಕ ನಿನ್ನ ನಿಜ ದಾಸನಾಗುವುದು3
--------------
ಚನ್ನಪಟ್ಟಣದ ಅಹೋಬಲದಾಸರು
ರಾಯ ಬಾರೋ ತಂದೆ ತಾಯಿ ಬಾರೋ ನಮ್ಮ ಕಾಯೊ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ ಪ ಭಾಸುರ ಚರಿತನೆ ಭೂಸುರ ವಂದ್ಯನೆ ಶ್ರೀ ಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ ಶ್ರೀ ಸುಧೀಂದ್ರಾರ್ಯರ ವರಪುತ್ರರೆನಿಸಿದ ದೇಸಿಕರೊಡೆಯ ರಾಘವೇಂದ್ರರಾಯ ಬಾರೋ 1 ವಂದಿಪ ಜನರಿಗೆ ಮಂದಾರ ತರುವಂತೆ ಕುಂದಾದಭೀಷ್ಟೆಯ ಸಲಿಸುತಿಪ್ಪ ರಾಯ ಕುಂದದಾಭೀಷ್ಟ ಸಲಿಸುತಿಪ್ಪ ಸರ್ವಜ್ಞ ಮಂದನಮತಿಗೆ ರಾಘವೇಂದ್ರ ರಾಯ ಬಾರೋ 2 ಆರು ಮೂರೇಳು ನಾಲ್ಕೆಂಟು ಗ್ರಂಥ ಸಾರಾರ್ಥ ತೋರಿಸಿದೆ ನ್ಯಾಯದಿಂದ ಸರ್ವರಿಗೆ ರಾಯ ಬಾರೋ ಸೂರಿಗಳರಸನೆ ರಾಘವೇಂದ್ರಾ ರಾಯ ಬಾರೋ 3 ರಾಮ ಪಾದಾಂಬುಜ ಸರಸಭೃಂಗ ಕೃಪಾಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ ಭ್ರಾಮಕಜನ ಸನ್ಮಾನಭಂಗ ಮಾಡೀದಾ ಧೀಮಂತರೊಡೆಯನೆ ರಾಘವೇಂದ್ರಾ ರಾಯ ಬಾರೋ4 ಭೂತಳಾಧಿಪನಾ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದ ಮಹಿಷಿಯಾ ರಾಯ ಬಾರೋ ಪ್ರೇತತ್ವ ಕಳೆವ ಮಹಿಷಿಯಾ ಶ್ರೀಜಗ ನ್ನಾಥ ವಿಠ್ಠಲನಾ ಪ್ರೀತಿಪಾತ್ರಾ ರಾಯ ಬಾರೋ 5
--------------
ಜಗನ್ನಾಥದಾಸರು