ಒಟ್ಟು 10 ಕಡೆಗಳಲ್ಲಿ , 5 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ ತ್ರಾಹಿ ಶ್ರೀನಾಥ ಕರುಣಿಸೆನ್ನನು ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು 1 ಹಿಂದೆ ಅನೇಕ ಜನ್ಮವನು ಸೋಸಿ ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ ಕಂದಿ ಕುಂದಿದೆ ಗರ್ಭಪಾಶದೊಳು ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ ಮುಂದಗಾಣದೆ ಕುರುಡನಂತಾದೆ ಧರೆಯೊಳು ಬಂದೆ ಶ್ರೀಗುರು ಪಾದವನ್ನರಿಯದೆ 2 ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ ಇಂದೆನ್ನ ಜೀವ ಪಾವನವಾಯಿತು ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು ತಂದೆ ಶ್ರೀಗುರು ಚರಣದರುಶನದಲಿ 3 ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ ವಾಸುದೇವನು ತ್ರೈಲೋಕ್ಯ ತಾರಕಮಣಿಯೆ ಭಾಸಿ ಪಾಲಿಪ ಭವನಾಶ ಮಣಿಯೆ 4 ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ ಹೊರೆದು ಸಲಹುವದೆನ್ನ ಇಹಪರವನು ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ ತ್ರಾಹಿ ತ್ರಾಹಿಯೆಂಬೆನು ಮನದಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾಸರ ದಾಸರ ದಾಸನೆಂದೆನಿಸುವ ಲೇಸು ಭಾಗ್ಯವ ಕೊಡೊ ಶಾಶ್ವತವಾಗಿಪ ಆಶಾಪಾಶವ ನಾಶನಗೈಸಿ ದೇಶಿಗರೆಲ್ಲರ ಕೂಸೆಂದೆನಿಸಿ ಅ.ಪ. ಉಪಟಳ ಬಹಳ ನೇಮ ನಿಷ್ಠೆಯ ಸುಳಿವೆನಗಿಲ್ಲ ತಾಮಸನಾಗಿ ಬಳಲಿದೆನಯ್ಯ ಪ್ರೇಮದಿ ಪಿಡಿದು ಸಲಹೊ ದಮ್ಮಯ್ಯ 1 ವದನದಿ ನಿನ್ನ ನಾಮವ ನುಡಿಸೊ ಪದದಲಿ ನಿನ್ನ ಯಾತ್ರೆಯ ನಡೆಸೊ ಹೃದಯದಿ ನಿನ್ನ ರೂಪವÀ ತೋರಿ ಅನುದಿನ ಶೌರಿ 2 ಭಕ್ತವತ್ಸಲ ಭಾಗ್ಯಸಂಪನ್ನ ಭಕ್ತರ ಸಂಗತಿ ಪಾಲಿಸೊ ಘನ್ನ ಉಕ್ತಿಯ ಲಾಲಿಸೊ ನಾನು ಅನಾಥ ಮತ್ತೇನು ಬೇಡೆನೊ ಶಕ್ತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ಪ ಭಂಗ ಪಡಿಸಿದೆ ನಿನಗೆಣೆ-ಯಿಲ್ಲ ಶನೈಶ್ಚರನೆ ಅ ಹರಿಹರ ಬ್ರಹ್ಮಾದಿಗಳ ಭಂಗಪಡಿಸಿದೆ ಕರುಣವಿಲ್ಲವೆ ನಿನಗೆ ಹರಿಶ್ಚಂದ್ರ ನಳಚಕ್ರವರ್ತಿ ಷೋಡಶ ಮಹಾರಾಯ ಪಾಂಡ್ಯರ ದಣಿಸಿ ತೋರಿಸಿದೆ ಮನೆ ಮನೆ ವಾರ್ತೆಗಳೆಲ್ಲವ ತಿರಿದುಂಡು ಮರುಳುಗೊಂಡು ಪರರ ಪೀಡಿಸಿ ಭ್ರಮೆಪಟ್ಟು ಲಜ್ಜೆಗೆಟ್ಟು ತಿರುಗುವಂದದಿ ಮಾಡಿದೆ 1 ಕಟ್ಟಿದ ಪಶು ಕರೆಯದು ತಾನಾಡಿದ ಮಾತು ಕಟ್ಟದು ಸಭೆಯೊಳಗೆ ಮೆಟ್ಟಿದ ನೆಲ ಮುನಿವುದು ಹೊನ್ನ ಹಿಡಿದರೆ ಬಕ್ಕಟ್ಟೆ ಬಯಲಹುದು ಉಟ್ಟದ್ದು ಹಾವಾಗಿ ಹರಿವುದು ಸಾಲಿ-ಗರಟ್ಟುಳಿ ಘನವಹುದು ಮುಟ್ಟ ಹೇಸುವರು ಕುರುಹ ನಾರಿಯರು ನೆಂಟರಿಷ್ಟರೆ ಕಾಣರು 2 ಸತಿ ಬದ್ಧದ್ವೇಷದಿ ಬೈವಳು ಇದ್ದ ಮನುಜರ ಪಾಡೇನು ನೀ ಬಂದು ಹೊದ್ದಿದ ಮಾತ್ರದಲಿ ನಿದ್ದೆ ಹಸಿವು ಬಳಲಿಕೆ ದಟ್ಟ-ದಾರಿದ್ರ್ಯವು ಕೈಗೊಂಬುದು 3 ಒಳ್ಳೆದಾಗಿದ್ದ ಸಂಗಾತಿಯ ಸ್ನೇಹವೆಲ್ಲವನು ಬಿಡಿಸಿ ಅಲ್ಲಲ್ಲಿ ಕೊಡುವ ದಾನಿಗಳ ಮನದಿ ಪೊಕ್ಕು ಇಲ್ಲಿಲ್ಲ ಹೋಗೆನಿಸಿ ಇಲ್ಲದ ಅಪವಾದ ಭಾಳ ಕಂಟಕ-ರೋಗದಲ್ಲಿ ನೋಯಿಸಿ ಒಲ್ಲೆನೀ ಜನ್ಮವೆಂದೆನಿಸಿ ಸಾಧಿಸಿ ಕಡೆಯಲ್ಲಿ ಗುಣ ತೋರಿಸಿ4 ದೇಶದೇಶದ ರಾಯರ್ಗಳನೆಲ್ಲರನು ಪರದೇಶಿಗಳನು ಮಾಡಿದೆ ವಾಸವನೆ ಬಿಡಿಸಿ ತಿರುಗಿಸಿ ಗಾಸಿ-ಯಿಂದಲೆ ನೋಯಿಸಿ ಶೇಷಶಯನ ಸರ್ವೇಶ ದೇವೇಶನೆ ಲೇಸು ಪಾಲಿಸೊ ಎನಗೆ ದೇಶದಂತರ್ಯಾಮಿ ನೆಲೆಯಾದಿಕೇಶವತೋಷದಿ ಸಲಹೊ ಎನ್ನ 5
--------------
ಕನಕದಾಸ
ಅನುದಿನಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿಮುಳುಗುತಿಹೆ ಕೈಯ ಪಿಡಿಯೊ ಜನಕ ಕೃಷ್ಣಯ್ಯ ಪ.ಶ್ರೀನಿವಾಸ ನಿನ್ನ ಭಕ್ತಿ ಮಾಡದ ಅಘವಂತನೆಂದುಹೀನ ಜನರ್ಪಾಳಕಿಟ್ಟರೇನ ಹೇಳಲೊನೀನು ಪಾಲಿಪ ರಾಜ್ಯದಲ್ಲಜ್ಞಾನಿ ದೇಶಿಗನೊಬ್ಬ ಕೆಡಲುಹಾನಿ ಹೆಚ್ಚಳ ನಿನ್ನದಲ್ಲೆ ದೀನದಯಾಳು 1ಚಿತ್ತವೇಗಕ್ಕವಧಿ ಇಲ್ಲ ಹೊತ್ತುಕೊಂಡು ಕಂಡ ಕಡೆಗೆಸುತ್ತುತಿದೆ ತನ್ನ ದಳವ ಕೂಡಿ ರಂಗಯ್ಯಕರ್ತನಿನ್ನ ಪಾದದೆಡೆಯೆ ಒತ್ತಿ ನೀನಿದನಾಳಬೇಕುಹೆತ್ತ ತಾಯಿ ನೀನೆ ಗಡಾನೆತ್ತಿಕೊಳ್ಳಯ್ಯ 2ಹಳುವಗಳು ದಾರಿಕಾಣೆ ಸೆಳವಿನೊಳಾಶ್ರಯ ಕಾಣೆನಳಿನನೇತ್ರ ನೀನೆ ಕಾಯೊ ಸುಲಭರೊಡೆಯನೆಲೆಯ ತೋರಾತಂಕಹಾರಿ ಒಲಿದು ವರಾಭಯವ ಬೀರಿಒಲಿಯೊ ಪ್ರಸನ್ವೆಂಕಟಾದ್ರಿನಿಲಯ ಉದಾರಿ 3
--------------
ಪ್ರಸನ್ನವೆಂಕಟದಾಸರು
ಆವಾಗ್ಗೆ ಕಾಂಬೆ ನಿನ್ನ ಮೈಯ ನನ್ನಕಾವಮುಕುಂದ ಮುರಾರಿಯ ಸರ್ವಜೀವಕೆ ಛಾಯನಾದವನ ನನ್ನಸಾವು ಹುಟ್ಟು ತಪ್ಪಿಸುವನ ಪ.ದೇಶ ದೇಶ ತಿರುಗಿ ಸೋತೆ ನಾ ಬಲುದೇಶಿಗನಾದೆ ಕೃಶಾದೆ ನಾ ತನ್ನದಾಸರ ಹಾನಿ ಇನ್ನಾರಿಗೆ ಆವಾಸುಕಿಶಯನಗೆ ಹೇಳಿದೆ 1ಆಪತ್ತು ಬರಲೀಸ ಎಂದಿಗೆತ್ರಿವಿಧತಾಪವನಾರೈವದಾವಾಗ್ಗೆ ಬಹುಪಾಪ ನೂಕಿದೆ ಅವನ ನಾಮದೆ ಕಂಡಶ್ರೀಪತಿಗೆಲ್ಲ ಬಿನ್ನೈಪೆನಿಂದೆ 2ಕಂಗಳುದಣಿವನ್ನ ಕಾಂಬೆನೆ ಎನ್ನಿಂಗಿತ ಹರಿಮೆಚ್ಚಿ ಕೇಳ್ವನೆನಿತ್ಯಮಂಗಳ ಪ್ರಸನ್ವೆಂಕಟಾಚಲವಾಸರಂಗನು ನಿಜಭಕ್ತವತ್ಸಲ 3
--------------
ಪ್ರಸನ್ನವೆಂಕಟದಾಸರು
ಆಶಾವಿಡಿದು ಬಂದಿಹೆ ದೇಶಿಗ ನಾನು ಅಭಿಲಾಷೆ ಪೂರಿಸೆಮ್ಮಯ್ಯ ಶೇಷಗಿರಿಯ ತಿಮ್ಮ್ಮಯ್ಯ ಪ.ಘೊರ ಭವಾರಣ್ಯದಲ್ಲಿ ದಾರಾಪತ್ಯಬಂಧು ಜನರೆಂಬಕ್ರೂರಮೃಗಾಸ್ಯಕೆ ಸಿಲುಕಿ ದಾರಿವರಿಯೆನಾರಸಿಂಹ ನಿನ್ನವರು ತೋರಿದರು ಶ್ರೀಮಂಗಳಮೂರುತಿಯ ಕಂಡು ಸುಖಸಾರಾಮೃತವುಣ್ಣಲಾಗಿ 1ಒಡಲಿಗೋಸುಗವೃತ್ತಿಹಿಡಿದು ತಡವರಿಸುತಕಡೆಗಾಣದೊರಲಿ ಅಂಜ್ಯೋಡುತಿರಲುಒಡೆಯ ನಿನ್ನಯ ಸಿರಿಸಡಗರ ನಾಮಕೇಳಿಹುಡುಕುತ ನಲಿವಿಂದ ಬಡತನ ಹಿಂಗಲೆಂದು 2ಈಗಿದೆÉೀ ವೈಕುಂಠವೆಂದುಭೋಗಿವಾಸುದೇವನೆಂದುಬಾಗಿಶ್ರುತಿಸ್ಮøತಿಗಳು ಕೂಗುತಲಿವೆಯೋಗಿಪ್ರಸನ್ವೆಂಕಟ ಭಾಗವತರ ಪ್ರಿಯನೆಂದುಹೀಗೆ ಘನಗೋಳಿಡುತ ನಾ ನೀಗುವೆ ಚಿಂತೆಯನೆಂದು 3
--------------
ಪ್ರಸನ್ನವೆಂಕಟದಾಸರು
ಎನ್ನವಳಗೆ ಇದ್ದು ಪರದೇಶಿ ನಾನೆನ್ನ ನೀಗ ಹಳಿವರೇನೋ ಪರದೇಶಿಪಎನ್ನಲಿಂದ ಮಲಗುತಿದ್ದೆ ಪರದೇಶಿಎನ್ನಲಿಂದ ಉಣ್ಣುತಿದ್ದೆ ಪರದೇಶಿ ನೀಎನ್ನಲಿಂದ ಉಡುವುತಿದ್ದೆ ಪರದೇಶಿ1ಎನ್ನಲಿಂದ ನಡೆವುತಿದ್ದೆ ಪರದೇಶಿ ನೀಎನ್ನಲಿಂದ ನಡೆವುತಿದ್ದೆ ಪರದೇಶಿಎನ್ನಲಿಂದ ಮಲಗುತಿದ್ದೆ ಪರದೇಶಿ ನೀಎನ್ನಲಿಂದ ಕುಡಿವುತಿದ್ದೆ ಪರದೇಶಿ2ಉಪಕಾರವ ನೀನರಿಯಾ ಪರದೇಶಿ ನೀನಪಕಾರವ ಮಾಡುತಿದ್ದೆ ಪರದೇಶಿಗುಪಿತಗುರುಚಿದಾನಂದ ಪರದೇಶಿನಿಪುಣ ನಾನು ನೀನೇ ಕಂಡ್ಯಾ3
--------------
ಚಿದಾನಂದ ಅವಧೂತರು
ಕೆಡಗೊಡದಿರು ದೇಶಿಗ ನಾ ರಂಗಕೆಡಗೊಡದಿರು ದೇಶಿಗ ನಾ ಪ.ನುಡಿ ನುಡಿದು ಮುಪ್ಪಾದೆ ನನ್ನಯನಡೆ ನೋಡಲು ಹುರುಳಿಲ್ಲಹುಡಿ ಹುಡಿಯಾದೆನೊ ವಿಷಯದ ಬಯಕೆಲಿಅಡಿಗಡಿಗೊದಗಿತು ಪಾಪವು ರಂಗ 1ಜಪತಪವ್ರತಗಳ ನೇಮವನರಿಯೆನಿಪುಣ ಪೂಜಾವಿಧಿಯರಿಯೆಅಪರಿಮಿತಶುಭಕ್ರಿಯದೊಳು ಕಾಮನಚಪಲತೆ ಭ್ರಮೆಗೊಳಿಸುತಿದೆ ರಂಗ 2ಹಿಡಿ ಹಿಡಿ ಮುಳುಗುವೆ ಯಾರಿಲ್ಲವೊ ಪಾಲ್ಗಡಲೊಡೆಯ ಭವಾಬ್ಧಿಯಲಿಚಡಪಡಿಸುವೆ ಮೂರುರಿಯಲಿಹರಿನಿನ್ನಡಿಯೆಡೆಲಿಡು ಪ್ರಸನ್ವೆಂಕಟ ರಂಗ 3
--------------
ಪ್ರಸನ್ನವೆಂಕಟದಾಸರು
ನೋಡಬಾರದೆ ಕೃಷ್ಣಾ ಕರುಣದಿನೋಡಬಾರದೆ ಕೃಷ್ಣಹಾಡಿ ಹರಸಿ ನಿನ್ನನೆ ಹೊಗಳುವಪರಿಮಾಡಬಾರದೆ ಹರಿಯೆ ಪ.ಹಾನಿ ಹಿತಗಳನರಿಯೆ ಸುಜ್ಞಾನ ಭಕುತಿಗಳರಿಯೆದೀನ ದೇಶಿಗನುದ್ಧರಿಸೆಲೆ ದೇವಸಾನುರಾಗದಿ ದೇವ 1ಏಸುಜನ್ಮದಿ ಬಂದೆ ನಾಘಾಸಿಯಾದೆನೊ ತಂದೆದಾಸರೊಳು ಆವಕಾಲಭಿಲಾಷೆಯುಳ್ಳ ಶ್ರೀಲೋಲ 2ಏನು ಹೇಳಲಿ ಮನವು ನಿನ್ನಧ್ಯಾನಕೊದಗದು ಕ್ಷಣವುತಾನೆ ಹರಿದಡೆ ಕೇಡು ಅದರಿಂದಪ್ರಾಣನಾಥ ಮುಕುಂದ 3ಕುಂಬಳವು ಕೈಗತ್ತಿ ಕರಾಂಬುಜಕೆ ನಿನಗಿತ್ತೆನಂಬಿದವಗಿನ್ನೇನಾರೆ ಮಾಡಯ್ಯಅಂಬುಜಜ ಸ್ಮರರಯ್ಯ 4ಕಿಂಕರೌಘದೊಳಿಡೊ ನಿಶ್ಶಂಕನೆ ದಯಮಾಡೊಪಂಕಜಾಕ್ಷ ಮುರಾರಿ ಪ್ರಸನ್ನವೆಂಕಟಾದ್ರಿಪಾವನ್ನ5
--------------
ಪ್ರಸನ್ನವೆಂಕಟದಾಸರು