ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಗುರುರಾಯರ ನಂಬಿದೇ - ಶ್ರೀ ರಾಘವೇಂದ್ರ ಪ ವರಮಂತ್ರಾಲಯದಲ್ಲಿ ಇರುತ ಸೇವೆಯಗೊಂಬ ಅ.ಪ ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ ದಾಶರಥಿಯ ಭಕ್ತ ದೇಶಿಕವರ್ಯರ 1 ಸಂತಾನಸೌಭಾಗ್ಯ ಚಿಂತಿತಾರ್ಥವನೀವ ಪಾದ ಸ್ವಾಂತದಿ ಭಜಿಸುವ 2 ಅಜ್ಞಾನ ತಿಮಿರಕ್ಕೆ ಸುಜ್ಞಾನಪರಿಪೂರ್ಣ ಪ್ರಜ್ಞರ ಗುರುವ್ಯಾಸರಾಜ್ಞಾಧಾರಕರಾದ 3
--------------
ಲಕ್ಷ್ಮೀನಾರಯಣರಾಯರು
ವಂದ್ಯಗೆ ನಮೋ ನಮೋ ನಮೋ ನಮೋ ಪ ದೇಶಿಕವರ್ಯಗೆ ನಮೋ ನಮೋ ದೋಷವಿದೂರಿಗೆ ನಮೋ ನಮೋ ಭಾಸುರ ಚರಿತಗೆ ನಮೋ ನಮೋ 1 ವಸುಧೀಂದ್ರರ ಕರಜಾತನಿಗೆ ವಸುದಿಜೀವರ ಸಂಪ್ರೀತನಿಗೆ ದಶದಿಶೆಯೊಳು ವಿಖ್ಯಾತನಿಗೆ ಕಸವರಭಾಂಗ ಪ್ರಖ್ಯಾತನಿಗೆ 2 ಮರುತ ಮತಾಂಬುಧಿ ಸೋಮನಿಗೆ ತಿಮಿರ ತರಣಿ ನಿಭಗೆ ವರದೇಶ ವಿಠಲನ ಸ್ಮರಿಸುತ ಲಿಂಗಸು - ಗುರುಸುಕ್ಷೇತ್ರ ನಿವಾಸನಿಗೆ 3
--------------
ವರದೇಶವಿಠಲ
ವಾದಿರಾಜ ಅಸ್ಮದ್ಗುರು ವಾದಿರಾಜ ಪ ವಾದಿರಾಜ ತವ ಪಾದಕಮಲಕಭಿ ವಾದನ ಮಾಳ್ಪೆ ಸಮೋದವಿತ್ತು ಕಾಯೊ 1 ಸಾರಿದರಿಗೆ ಕಲ್ಪ ಭೂರುಹ ದಂತೆ ಮ ನೋರಥ ಸಲಿಸುವ ಸೂರಿಗಳರಸೇ 2 ಭೇದ ಪಂಚಕವನು ಸಾಧಿಸಿ ಕುಮತಕು ವಾದಿಗರ್ವಾದ್ರಿ ವಿಭೇದನ ಗೈದೆ 3 ದೇಶಿಕವರ್ಯ ವಾಗೀಶ ಕುವರನೆ ಕ್ಲೇಶ ಹರಿಸು ಅಘನಾಶ ಗೈದು 4 ಸಿರಿ ಜಗನ್ನಾಥವಿಠಲನ ಸುಗುಣಗಳನುದಿನ ಪೊಗಳಿ ಹಿಗ್ಗುವೊ 5
--------------
ಜಗನ್ನಾಥದಾಸರು