ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ಕರುಣಾಕರ ಗುರುದೇವ ವಾಸುದೇವ ಧ್ರುವ ಮುನಿಜನ ಪಾಲಕ ದೀನ ದಯಾಳ ಅನಾಥ ಬಂಧು ಶರಣಾಗತ ವತ್ಸಲ ಸನಕಾದಿಗಳೊಂದಿತ ಸಿರಿಸುಖಲೋಲ ಅನುದಿನ ಅಣುರೇಣುಕ ನೀನೆ ಸುಕಾಲ 1 ಪತಿತ ಪಾವನ ಪರಮ ಉದಾರ ಭಕ್ತವತ್ಸಲ ಮಾಮನೋಹರ ಅತಿಶಯಾನಂದ ಸುಜ್ಞಾನಸಾಗರ ಚತುರ್ದಶ ಭುವನಕೆ ನೀ ಸಹಕಾರ 2 ದೇಶಿಕರಿಗೆ ದೇವ ನೀನೇ ನಿಧಾನ ವಿಶ್ವಪಾಲಕ ಸ್ವಾಮಿ ನೀ ಸುಗುಣ ಭಾಸ್ಕರ ಕೋಟಿ ತೇಜ ನೀನೇ ಪೂರ್ಣ ಲೇಸಾಗ್ಹೊರಿಯೊ ದಾಸ ಮಹಿಪತಿ ಪ್ರಾಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಮಂಗಳ ಮುನಿಜನ ಪಾಲ ಜಯ ಜಯ ಸ್ವಾಮಿ ಸದ್ಗುರು ಕೃಪಾಲ ಧ್ರುವ ತೇಜ:ಪುಂಜವು ನಿಮ್ಮ ಘನಸುಖಸಾಂಧ್ರ ರಾಜ ತೇಜೋನಿಧಿ ರಾಜ ರಾಜೇಂದ್ರ ಸುಜನರ ಹೃದಯ ಸುಜ್ಞಾನ ಸಮುದ್ರ ಅಜಸುರವಂದ್ಯ ಶ್ರೀ ದೇವದೇವೇಂದ್ರ 1 ಪತಿತ ಪಾವನ ಪೂರ್ಣ ಅತಿಶಯಾನಂದ ಯತಿ ಮುನಿಗಳಿಗೆ ನೀ ದೋರುವೆ ಚಂದ ಪಿತಾಮಹನ ಪಿತನಹುದೊ ಮುಕುಂದ ಸತತ ಸುಪಥದಾಯಕ ನೀ ಗೋವಿಂದ 2 ದೇಶಿಕರಿಗೆ ದೇವ ನಿಮ್ಮ ಸ್ವಭಾವ ಋಷಿ ಮುನಿಗಳಿಗೆ ನೀ ಜೀವಕೆ ಜೀವ ದಾಸ ಮಹಿಪತಿಗೇನಹುದೊ ಮನದೈವ ವಾಸುದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇಶಿಕರಿಗೆ ದೇವ ನೀನಹುದಯ್ಯ ಲೇಸು ಲೇಸಾಗಿ ಪಾಲಿಸೊ ಎನ್ನಯ್ಯ ಧ್ರುವ ಅನಾಥನಾಥ ನೀನೆ ಸಾನುಕೂಲ ಅನುದಿನ ಮಾಡುವೆ ನೀ ಪ್ರತಿಪಾಲ 1 ಅಣುರೇಣುಕ ಸಾಹ್ಯ ಮಾಡುವ ಸ್ವಾಮಿ ನ್ಯೂನ ನೋಡದೆ ತಪ್ಪು ಮಾಡುವಿ ಕ್ಷಮೆ 2 ನೀನೆ ಸಕಲಕೆಲ್ಲ ಸಲಹುವ ದಾತ ಜನವನದೊಳು ಘನಗುರು ಸಾಕ್ಷಾತ 3 ದೇವಾದೀದೇವ ಶ್ರೀದೇವ ಅವಧೂತ ಭವ ಹರ ಗುರು ನೀನೆ ಸದೋದಿತ 4 ದೀನಮಹಿಪತಿ ಸ್ವಾಮ್ಯಹುದೋ ಕೃಪಾಲ ಭಾನುಕೋಟಿತೇಜ ನೀನೆ ಅಚಲ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಿರಿಯನಾಳುವ ದೊರೆಯ ಮರೆಯದೆ ಮುರಾರಿಯ 1 ಕರುಣದಾಯಕನೀತ ಶರಣಜನರ ಸುಶೋಭಿತ ವರಮುನಿಗಳ ಹೃದಯ ಸದೋದಿತ ಹರಿಯ ಸಾಕ್ಷಾತ 2 ನಂಬಿದವರ ಕಾವ ಬಿಂಬಿಸುವ ಮನದೊಳಗೀವ ಇಂಬು ಅಗಿಹ್ಯ ದೈವ 3 ದೇಶಿಕರಿಗೆ ದೇವ ವಸುದೇವಸುತ ವಾಸುದೇವ ಲೇಸಾಗಿ ಸುಭಕ್ತರ ಪಾಲಿಸುವ ಈಶ ಶ್ರೀಕೇಶವ 4 ದೃಢ ಭಕ್ತರಿಗೊಲಿವ ಮೂಢ ಮಹಿಪತಿ ಮನದೈವ ಪಿಡಿದು ಕೈಯ ಕಡೆಗಾಣಿಸುವ ಬಿಡದೆ ಸಲಹುವ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು