ಒಟ್ಟು 66 ಕಡೆಗಳಲ್ಲಿ , 16 ದಾಸರು , 56 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಘವೇಂದ್ರ ಯತಿಸಾರ್ವಭೌಮ ದುರಿ ತೌಗಘದೂರ ತೇ ನಮೋ ನಮೋ ಪ ಮಾಗಧರಿಪು ಮತಸಾಗರ ಮೀನ ಮ ಮಾಘ ವಿನಾಶಕ ನಮೋ ನಮೋ ಅ.ಪ. ಶ್ಲಾಘಿತ ಗುಣಗಣ ಸೂರಿಪ್ರಸಂಗ ಸ ದಾಗಮಜ್ಞ ತೇ ನಮೋ ನಮೋ ಮೇಘ ಶ್ಯಾಮಲ ರಾಮಾರಾಧಕ ಮೋಘ ಬೋಧತೇ ನಮೋ ನಮೋ 1 ತುಂಗಭದ್ರ ಸುತರಂಗಿಣಿ ತೀರಗ ಮಂಗಳಚರಿತ ಶುಭಾಂಗ ನಮೋ ಇಂಗಿತಜ್ಞ ಕಾಳಿಂಗ ಮರ್ದ ಯದು ಪುಂಗವ ಹೃದಯ ಸುಸಂಗ ನಮೋ ಸಂಗಿರ ಚಿಹ್ನಿತ ಶೃಂಗಾರಾನನ ತಿಂಗಳ ಕರುಣಾಪಾಂಗ ನಮೋ ಗಾಂಗೇಯ ಸಮಾಭಾಂಗ ಕುಮತ ಮಾ ತಂಗ ಸಿಂಗ ಶಿತ ಪಿಂಗ ನಮೋ 2 ಶ್ರೀ ಸುಧೀಂದ್ರ ಕರಜಾತ ನಮೋ ನಮೋ ಭೂಸುರ ನುತ ವಿಖ್ಯಾತ ನಮೋ ದೇಶಿಕ ವರ ಸಂಸೇವ್ಯ ನಮೋ ನಮೋ ದೋಷವಿವರ್ಜಿತ ಕಾವ್ಯ ನಮೋ ಕ್ಲೇಶಿತಜನ ಪರಿಪಾಲ ನಮೋ ನಮೋ ಭಾಸಿತ ಕರುಣಾಶೀಲ ನಮೋ ವ್ಯಾಸ ರಾಮ ಪದ ಭಕ್ತ ನಮೋ ನಮೋ ಶಾಶ್ವತ ಕರುಣಾಸಕ್ತ ನಮೋ 3 ಮಣಿ ಸಂ ಭಾವಿತ ಮಹಿಮ ಪಾಲಯ ಮಾಂ ಸೇವಾಪರ ಸರ್ವಾರ್ಥಪ್ರದ ವೃಂ ದಾವನ ಮಂದಿರ ಪಾಲಯ ಮಾಂ ಮಾರ್ಗಣ ಭುಜಗ ವಿನಾಯಕ ಭಾವಜ್ಞ ಪ್ರಿಯ ಪಾಲಯ ಮಾಂ ಕೇವಲ ನತಜನ ಪಾವನರೂಪ ಸ ದಾ ವಿನೋದಿ ಹೇ ಪಾಲಯ ಮಾಂ 4 ಸನ್ನುತ ಮಹಿಮ ಜಗನ್ನಾಥ ವಿಠಲ ಸನ್ಹಿತ ಮಾನಸ ಜಯ ಜಯ ಭೋ ಚಿಹ್ನಿತ ದಂಡಕಮಂಡಲ ಪುಂಡ್ರ ಪ್ರ ಪನ್ನೆ ಭಯಾಪಹ ಜಯ ಜಯ ಭೋ ಮಾನ್ಯ ಮಹಾತ್ಮ ಪ್ರಸನ್ನ ವದನ ಕಾ ರುಣ್ಯ ಪ್ರಯೋದಧೆ ಜಯ ಜಯ ಭೋ ಧನ್ಯ ಕ್ಷಮಾಸಂಪನ್ನ ಬುಧಜನ ಶ ರಣ್ಯ ಸದಾರ್ಚಿತ ಜಯ ಜಯ ಭೋ 5
--------------
ಜಗನ್ನಾಥದಾಸರು
(ಅ) ಗುರುರಾಯರ ನಂಬಿದೇ - ಶ್ರೀ ರಾಘವೇಂದ್ರ ಪ ವರಮಂತ್ರಾಲಯದಲ್ಲಿ ಇರುತ ಸೇವೆಯಗೊಂಬ ಅ.ಪ ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ ದಾಶರಥಿಯ ಭಕ್ತ ದೇಶಿಕವರ್ಯರ 1 ಸಂತಾನಸೌಭಾಗ್ಯ ಚಿಂತಿತಾರ್ಥವನೀವ ಪಾದ ಸ್ವಾಂತದಿ ಭಜಿಸುವ 2 ಅಜ್ಞಾನ ತಿಮಿರಕ್ಕೆ ಸುಜ್ಞಾನಪರಿಪೂರ್ಣ ಪ್ರಜ್ಞರ ಗುರುವ್ಯಾಸರಾಜ್ಞಾಧಾರಕರಾದ 3
--------------
ಲಕ್ಷ್ಮೀನಾರಯಣರಾಯರು
(1) ಸತಿ-ಪತಿ ಭಾವದ ಸ್ತುತಿಗಳು (ಜಾವಡಿಗಳು) ಎಂದಿಗೆ ತೀರಿದೆ ಸುಂದರನಾಯಕಿ ಅಂಗಜ ಬಾಣದ ಅತುರವನ್ನೂ ಪ ಚಂದ್ರಮುಖಿಯೇ ನೀ ನಾದಿನ ಹೇಳಲ್ ಬಂದೆನುನಾನಹುದೇ ಭಾವಕರನ್ನೇ ಕುಂದುಗಳನೀಪರಿ ಉಸುರುವೆ ಉಚಿತವೆ ಸಂದಣಿಯಾಗೆನ್ನೊಳಿಂದಿನ ಕಾಲಯೆಂದಿಗೆ 1 ಬಲ್ಲೆನು ನಿನ್ನಂ ಭಾವದ ಸೊಲ್ಲಂ ಬೆಲ್ಲದ ಮಾತನಾಡಿ ಕಳುಹಿಪೆನೇಂ ಬೊಲ್ಲಿದಿಗೆ ಸಾಕುಬಿಡು ಇಂಪಿನ ಕವಚತೊಡು ಸಲ್ಲಿದೆ ಸುಂಕವ ಸಮ್ಮತಿಯಿಂದಾ 2 ಮಾರನು ಬಂದೂ ಮನದೊಳು ನಿಂದೂ ದಾರಿಯನು ತಪ್ಪಿಸಿ ಧಣಿಸುವ ಕಾಣೆ ಓರದೆ ಕೋರಿದ ಕಾರ್ಯವ ತೀರಿಸೆ ಕಾಂಕಳು ನೀನಾಗಿ ಕಾಮಶಾಸ್ತ್ರವಂ 3 ಈ ಸುಖಸಂಪದ ಈಶ್ವರ ಬಲ್ಲಂ ಆಸೆಯ ತೋರಿ ನೀ ಮೋಸವಗೆಯ್ವೆ ದಾಸನು ವಂದಿಪ ಸುಖತೋರಿದೆ ದೇಶಿಕನಲೆ ತುಲಸಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
(2) ತುಳಸಿರಾಮದಾಸರ ಅಂತಿಮ ಯಾತ್ರೆ ಬೆಂಗಳೂರಿಗೆ ಹೋಗಿ ಬಂದರೂ ಮೈಸೂರಿಂದಾ ಪ ಬೆಂಗಳೂರಿಗೆ ಹೋಗಿಬಂದ ಜಂಗಮನು ತಾನಾಗಿ ನಿಂದಾ ಕಂಗಳೆರಡರ ಮಧ್ಯ ತಾ ನಿಜ ಲಿಂಗನಾಗಿ ಕಾಣಬಂದಾ ಅ.ಪ ಬಿದಿಗೆ ಪಾಡ್ಯವ ಮಾಡಿ ನೋಡೆಂದಾ ಬಂದಾಗ ಬರದಾ ವಿಧಿಯ ಬರಹವ ತೊಡೆದುಕೊಂಡೆಂದ ಕದಿವ ಕಳ್ಳರ ಕಂಡುಹಿಡಿದು ಮದನಪಿತನಾ ಯುಧದಿ ಹೊಡೆದೂ ನದಿಯ ಸ್ನಾನವ ಮಾಡಿ ನಿಜ ಪದವಿ ತೋರಿದ ನಮ್ಮ ದೇಶಿಕ 1 ಸೃಷ್ಟಿ ತದಿಗೆಯೊಳಿರಲು ಬೇಡೆಂದಾ ಅಲ್ಲಾಗ ತನ್ನ ಇಷ್ಟದೈವದ ಪೂಜೆ ಮಾಡೆಂದಾ ದೃಷ್ಟಿಗೋಚರಮಾದ ಗುರುವು ಸೃಷ್ಟಿಗಧಿಕಾ ತುಲಶಿರಾಮನ ಇಷ್ಟದಿಂದಲಿ ಭಜಿಸಿನೋಡಲು ಸ್ಪಷ್ಟನಾಗಿ ಕಾಣುತೈತೆ 2
--------------
ಚನ್ನಪಟ್ಟಣದ ಅಹೋಬಲದಾಸರು
(2) ವೇದಾಂತದೇಶಿಕರು ವೇದಾಂತ ಗುರು ಸಾರ್ವಭೌಮ ಜ್ಞಾನ ಬೋಧಾನುಕೂಲ ನಿಸ್ಸೀಮ ಪ ಆದಿನೋಡು ಅನಾದಿಯೆನ್ನುತ ಬೋಧೆಗೊಳಿಸುಪದೇಶ ಮಾಡಿದ ಸಾಧುಶಿಖರನೆ ಸರ್ವತಂತ್ರನೆ ವಾದಭೀಕರ ವೈಷ್ಣವೋ ನಿಜ 1 ದ್ವಿದಳ ದಾಸನ ಕೈದಸಿದ ನಿಜ ಪದವಿನೋಡೆಂದೆನುತ ಮನಸನು ಕದಿವ ಕಳ್ಳರ ಕೊಂದು ಹಿಡಿಯೆಂ ದೊದಗಿತ್ತನು ಮೊದಲಿನಕ್ಷರಾ2 ಮೂರು ಬಿಡು ನೀ ಮೂರು ಹಿಡಿ ಕೇ ಳಾರು ಚಕ್ರವ ದಾಂಟಿ ತ್ರಿಕುಟಿಯ ಸೇರಿ ಸಂಪದವಾರಿಯೊಳಗದ್ದು ತೋರಿದ ಪರಮಾತ್ಮ ಪರತರ 3 ಎಂಟು ಹಾರಿಸಿ ಎಂಟುಲಿಪಿಯನು ಗಂಟು ಮಾಡೆಂದೆನುತ ನನ್ನೊಳ ಗುಂಟುಮಾಡಿಯು ತೋರಿದ ವೈ ಕುಂಠನಾಥನ ನನ್ನೊಳಗ ನಿಜ 4 ಶುದ್ಧ ಹಂಸನ ಮಾಡಿ ನನಗಾ ಚಿದ್ವಿವೇಕದ ಕವಚ ತೊಡಿಸಿದ ಸತ್ಸ್ವರೂಪಾಚಾರ್ಯನಹುದೆಲೊ ಮದ್ಗುರುವೆ ಶ್ರೀ ತುಲಶೀರಾಮಾ 5
--------------
ಚನ್ನಪಟ್ಟಣದ ಅಹೋಬಲದಾಸರು
(ಅ) ಶ್ರೀಹರಿ ಸ್ತುತಿಗಳು ನಾರಿಯರೂಪನು ತಾಳ್ದನೇದೇವಾ ಪ ನಗೆ ಮುಖ ಮಾಗಿಹ ನಾರಾಯಣದೇವಾ 1 ಸತ್ವಗುಣಾಧಿಕನೆಂದೆನಿಸೆನ್ನಾ 2 ಅಂತಕ ದಾಸಜನಾರ್ಚಿತ ದೇವಸುಶೀಲಾ ದಾಸರು ವಂದಿಪೆ ದಾಹವ ನಿಂಗಿಸೋ ದೇಶಿಕ ತುಲಶೀರಾಮದಾಸನೆ ದೇವಾ 3
--------------
ಚನ್ನಪಟ್ಟಣದ ಅಹೋಬಲದಾಸರು
(ಇ) ಆಳ್ವಾರಾಚಾರ್ಯ ಸ್ತುತಿಗಳು (1) ರಾಮಾನುಜರು ನಾದ ಮೂರರೊಳೆನ್ನೊಳು ನೀ ಕಂಡುಬಾರೊ ಪ ಆದಿ ಆನಾದಿಯ ಭೇದವೇನದು ತೋರಿ ನಾದಬಿಂದು ಕಳೆಯೊಳ್ ನೀ ಕಂಡುಬಾರೊ 1 ಪಂತಗೊಳಿಸಿ ಕೊಟ್ಟ ಪರಮದೇಶಿಕನೆ 2 ಮೂಲ ಪ್ರಣವ ಬ್ರಹ್ಮ ಬಾಲ ಬ್ರಹ್ಮಚಾರೀ ಕೋಲೂಪ್ಯಾಟಕಾ ಮಾಂ ಪಾಲ ತುಲಶಿರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
3. ಪಾರ್ವತಿ ರಾಜರಾಜೇಶ್ವರಿ ವೀರಮಹೇಶ್ವರಿ ಭೈರವಿ ದುರ್ಗಾಂಬಿಕೆ ಪ ಅಜಸುರ ಮುನಿಜನ ಭಜ ಭೋಜಾರ್ಚಿತೆ ಕುಜನ ಹಾರಿಣೆ ಕೇಳು ಭಜನೆ ಮಾಡುವೆ 1 ಭೂಷಿತೆ ನಿಜವರ ಭಾಷಿತೆ ಕೇಳು 2 ಧಾರುಣಿ ಗೌರಿ ರಮಾ ಸಿಂಹಾಸಿನಿ ಕಾರಣ ದೇಶಿಕ ತುಳಶಿಮಣಿ 3
--------------
ಚನ್ನಪಟ್ಟಣದ ಅಹೋಬಲದಾಸರು
ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪಒಪ್ಪಿ ಮಾತನ್ನಾಡಿಸಿದರೆ ನೀನೆ ಜಗದಪ್ಪ ಪ ನಾನದಾರು ಬಂದೆನೆಲ್ಲಿಗೆ ಎನ್ನುತ ನೀನಪ್ಪನಾನು ಹೋಗುವೆ ಎಲ್ಲಿಗೆ ಎಂದು ಚಿಂತಿಸು ನೀನಪ್ಪನೀನು ಸುಳಿಗಾಳಿಯ ಶಾವದ ತೆರದಂದದಿ ಇಹೆಯಪ್ಪನಾನಾ ಭವವಾಚರಿಸುತಿಹೆ ಆದಿ ಅಂತ್ಯವಿಲ್ಲಪ್ಪತನುವ ನೆಚ್ಚಬೇಡ ಮೊದಲಿನ ತನುವದೇನಾಯಿತಪ್ಪತನಯ ಸತಿಯರನೆಲ್ಲ ಬಿಟ್ಟುಬಂದೆ ನೀನುಮನೆ ಕಟ್ಟುವೆ ನೀನು ಮೊದಲಿನ ಮನೆ ಏನಾಯಿತಪ್ಪಾನಿನಗೆ ಕುಲವು ಎಷ್ಟಾದವು ಎಣಿಸಿಕೊಳ್ಳಪ್ಪ2 ಹಿಂದೆ ಮುಂದೆ ಕಾಣದಂತೆ ತಿರುಗಿ ತಿರುಗಿ ಅಪ್ಪಬೆಂದು ಬೆಂದು ಓಡಾಡುತಿಹೆ ಸ್ವರ್ಗ ನರಕಕಪ್ಪಎಂದೆಂದಿಗೂ ಅರಿವಾಗದ ಮರೆವು ಮುಚ್ಚಿ ಅಪ್ಪಅಂಧಕಾರ ಸಂಸಾರದಿ ಕಳವಳಿಸುತ ಅಪ್ಪ3 ಕಣ್ಣುಯಿದ್ದು ಕಣ್ಣಿಗೀಗ ಬೀಳಬೇಡವಪ್ಪನಿನ್ನ ನರಿವುದಕ್ಕೆ ಮನುಜ ಜನ್ಮ ಸಾಧನವಪ್ಪಹೊನ್ನು ಹೆಣ್ಣು ಮಣ್ಣು ಎನಗೆ ಬೇಡ ಬೇಡಪ್ಪಎನ್ನ ಬೋಧೆ ಕೇಳದಿರಲು ಕೆಟ್ಟುಹೋದೆಯಪ್ಪ 4 ವಾಸನದಿಂದ ತಿರುಗುವೆ ರಾಟಾಳರಂತಪ್ಪದೇಶಿಕ ಸದ್ಗುರು ಹೊಂದು ದೇವನಹೆಯಪ್ಪನಾಶವಹವು ನಾನಾ ಗುಣಗಳು ಜೀವನ ತನುವು ಅಪ್ಪಈಶ ಚಿದಾನಂದನಹೆ ಜನ್ಮವಳಿದು ಅಪ್ಪ 5
--------------
ಚಿದಾನಂದ ಅವಧೂತರು
ಏಸು ಜನ್ಮದ ಸುಕೃತವದು ಬಂದು ಒದಗಿತೋದೇಶಿಕೋತ್ತಮನ ದಯದಿಆಸೆಗಳು ಮರೆಯಾಗಿ ಆಷ್ಟ ಪಾಶಗಳಳಿದುಈಶ ಸರ್ವೇಶನಾಗಿ ಹೋದೆ ಪ ಕಂಗಳ ಮುಚ್ಚಿ ದೇಹದೊಳು ದಿಟ್ಟಿಸಿ ನೋಡೆಮಂಗಳವೆ ತೋರುತಿಹುದು ಅಹುದುತಿಂಗಳಿನ ಕಳೆಯಂತೆ ಬೆಳಕಬೀರುತ ಬೆಳು-ದಿಂಗಳನೆ ಹರಡಿದಂತೆ ಅಂತುಕಂಗೊಳಿಸುತಿಹುದು ಬಗೆಬಗೆಯ ವರ್ಣಛಾಯೆಅಂಗ ವರ್ಣಿಸುವರಾರೋ ಆರೋಬಂಗಾರ ಪುಟದಂತೆ ನಡುಮಧ್ಯೆ ಹೊಳೆಹೊಳೆದುಹಿಂಗದನುದಿನ ತೋರುವ ಗುರುವಾ 1 ಅಮೃತ ಕಳದಿ ಝಳದಿ 2 ನಿತ್ಯವಹ ಪರಮಾತ್ಮ ನಿಶ್ಚಲದಿ ತೋರುತಿದೆಚಿತ್ತವೆಂಬುದು ಸಾಯೇ ಬೇಯೆಮತ್ತೆ ಮನ ದೃಗ್ ದೃಶ್ಯ ಧಾರಣರವರುಎತ್ತ ಹೋದರೋ ಎಲ್ಲರೂಸತ್ಯವಾಗಿಹ ಪರಮ ಬಾಹ್ಯಾಂತರೀಯ ಹೆಸರುಎತ್ತುವರು ಇಲ್ಲದಾಯ್ತು ಹೋಯ್ತುಪ್ರತ್ಯಗಾತ್ಮನು ಚಿದಾನಂದ ಗುರು ತಾನಾದಅತ್ಯುಕ್ತಿ ಹೇಳ್ವುದೇನು ಏನು 3
--------------
ಚಿದಾನಂದ ಅವಧೂತರು
ಕನಸು ಕಂಡೆನು ಕೇಳೇ ಪ್ರಾಣ ಸಖೀ ಒಳ್ಳೆ ಪ ಕನಸು ಕಂಡೆನು ಕೇಳು ಘನತರ ಸುಖದೊಳೂ ಮನದೊಳಗನುದಿನ ನೆನೆಸೇ ಸಖಿಅ.ಪ ಎಳೆಯ ಚಂದ್ರನ ಚೆಲ್ವ ಪೊಳೆವ ಬೆಳಕಿನೊಳು ಝಳಿಪಾ ಚೆಂದುಟಿಯಂ ತಿಳಿವೇ ಸಖಿ 1 ವಾಸವಾರ್ಚಿತ ಹರಿದಾಸ ತುಲಸಿರಾಮಾ ದೇಶಿಕನಾದಾನು ತಾನಹುದೇ ಸಖಿ ಅಸ್ಮದ್ದೇಶಿಕನಾದಾನು 2 ಯಾತರ ಸುಖ ಬರಿ ಮಾತಿನೊಳಿಗೆ ಜಾಣೆ ಪ್ರಿತಿಯಿಲ್ಲದೆಲೇ ತಾಮಾತರಮಳಿವುದೇನೇ 3 ಬರಿಯ ಮಾತಿನೊಳೆನ್ನಾ ಬೆರಗು ಮಾಡಲಿಬೇಡಾ ಸುರತಕೇಳಿಗೆ ಬಂದೂ ಸರಸವನಾಡೆಲೆ 4 ವಾಸವನುತ ಹರಿ ದಾಸತುಲಸಿರಾಮಾ ಆಸೆಯ ತೋರಿಯೀಪರಿಯೋಳ್ ಮೋಸಗೈವುದು ಸರಿಯೆ 5
--------------
ಚನ್ನಪಟ್ಟಣದ ಅಹೋಬಲದಾಸರು
ಕರುಣಿಸೊ ಕರುಣಿಸೊ ಗುರುವೆಂಕಟೇಶ ಕರುಣಿಸೆನ್ನ ನೀ ನೋಡೊ ಪರಮ ಪುರುಷ ಧ್ರುವ ಬಿನ್ನಹವ ಪಾಲಿಸೊ ಚಿನುಮಯ ರೂಪ ಉನ್ನತ ಮಹಿಮ ನೀ ಘನ್ನ ಗುರು ಕೃಪ 1 ಅನಾಥ ಬಂಧು ನೀ ಶರಣ ರಕ್ಷಕ ಅನಂತ ಕೋಟಿ ಬ್ರಹ್ಮಾಂಡ ನಾಯಕ 2 ವಾಸುದೇವ ಚಿದ್ರೂಪ ದೇಶಿಕರದೇವ ಭಾಸಿ ಪಾಲಿಪ 3 ವಂದಿತ ತ್ರೈಲೋಕ್ಯ ವೇದಾಂತ ಮಹಿಮ ಇಂದಿರಾಪತಿ ಘನಗುರುಬ್ರಹ್ಮ 4 ಶ್ರೀನಾಥ ನೀನಲ್ಲದೆ ನನಗಾರು ಇಲ್ಲ ನೀನೆ ಸಕಲಪೂರ್ಣ ಭಕ್ತವತ್ಸಲ 5 ಮತಿಹೀನನವಗುಣ ನೋಡದಿರೆನ್ನ ಕ್ಷಿತಿಯೊಳು ಸದ್ಗೈಸೊ ಪತಿತಪಾವನ 6 ದೀನನಾಥ ನೀ ಬಂದು ಮನದೊಳು ನಿಂದು ಮನ್ನಿಸಿ ದಯಬೀರೊ ಘನಕೃಪಾಸಿಂಧು7 ವಿಶ್ವವ್ಯಾಪಕ ಸಾಧುಹೃದಯನಿವಾಸ ದಾಸ ಮಹಿಪತಿ ಪ್ರಾಣ ಹೊರಿಯೊ ಪ್ರಾಣೇಶ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಗುರುನಾಥತ್ರಯಗುಣಾತೀತ ಧ್ರುವ ಭಾನುಕೋಟಿ ಸುಪ್ರಭೆಯ ಅನುದಿನಕ್ಷಯ ಘನಮಹಿಮರ ಹೃದಯ ಆನಂದೋದಯ ಅನಾಥರಿಗೆ ಆಶ್ರಯ ನೀನಹುದೊನÀಮ್ಮಯ 1 ದೇಶಿಕÀರಿಗೆ ನೀ ದೇವ ಲೇಸಾಗಿ ಕಾವ ಋಷಿ ಮುನಿಗಳ ಸಂಜೀವ ವಾಸವಾಗಿವ್ಹ ವಿಶ್ವಾತ್ಮನಹುದೊ ಶ್ರೀದೇವ ಭಾಸುತಲಿವ್ಹ ಭಾಷೆಯ ಪಾಲಿಸುವ ಈಶ ನೀನೆ ಕೇಶವ 2 ಬಾಹ್ಯಾಂತ್ರ ನೀ ಸದೋದಿತ ಗುಹ್ಯಗುರುತು ಶ್ರೀಹರಿ ನೀನೆ ಸಾಕ್ಷಾತನಹುದೊ ಸ್ವಹಿತ ಇಹಪರ ನೀನು ದಾತಮಹಿಪತಿ ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಲಮಹಿಮೆ ಕೇಳಿ ಜಗದಾಲೋಚನೆ ತಾಳೀ ಪ ಕೀಳು ಖೂಳರಿಗೆ ಮೇಲು ಹಾಸಿಗೆ ಮಂಚ ಬಾಲಾಜಿ ಭಜನೆ ಜನಕೆ ಜೋಳಿಗೆ ಯೀ ಪ್ರಪಂಚಾ 1 ಉತ್ತಮಪುರುಷರಿಗೆಲ್ಲ ತುತ್ತಿಗೆ ಮಾನಹೋಗಿ ಹೆತ್ತವ್ವೆ ಹೋಗೆ ಕಳ್ಳ ಚಿತ್ತರ್ಗೆ ಮಂಚಾ ತೂಗೆ 2 ಡಂಬಾಚಾರಿಗಳಿಗೆಲ್ಲಾ ಕೊಂಬು ಕುದುರೆಯಗಾಡಿ ಶಂಬೂನುತರೂ ಪಾಪಿಗಾಡಿಗಳ ಹಿಂದೆ ವೋಡೆ 3 ನಿಚ್ಚಾ ಮುತ್ತೈದೆರ್ಗೆಲ್ಲಾ ಅಂಜಿಕೆ ಅರುಶನವಿಲ್ಲಾ ಬಿಚ್ಚಾಲೆಯಿಲ್ಲದ ರಂಡೇರ್ಹೆಚ್ಚಿ ಹೀಗಾಯಿತಲ್ಲ 4 ದೋಷರಹಿತ ಹರಿದಾಸ ತುಲಸೀರಾಮಾ ದೇಶಿಕಾ ತನ್ನ ನಿಜದಾಸಾನ ಮಾಡಿಕೊಂಡಾ 5
--------------
ಚನ್ನಪಟ್ಟಣದ ಅಹೋಬಲದಾಸರು
ಜಯ ಜಯ ಕರುಣಾಕರ ಗುರುದೇವ ವಾಸುದೇವ ಧ್ರುವ ಮುನಿಜನ ಪಾಲಕ ದೀನ ದಯಾಳ ಅನಾಥ ಬಂಧು ಶರಣಾಗತ ವತ್ಸಲ ಸನಕಾದಿಗಳೊಂದಿತ ಸಿರಿಸುಖಲೋಲ ಅನುದಿನ ಅಣುರೇಣುಕ ನೀನೆ ಸುಕಾಲ 1 ಪತಿತ ಪಾವನ ಪರಮ ಉದಾರ ಭಕ್ತವತ್ಸಲ ಮಾಮನೋಹರ ಅತಿಶಯಾನಂದ ಸುಜ್ಞಾನಸಾಗರ ಚತುರ್ದಶ ಭುವನಕೆ ನೀ ಸಹಕಾರ 2 ದೇಶಿಕರಿಗೆ ದೇವ ನೀನೇ ನಿಧಾನ ವಿಶ್ವಪಾಲಕ ಸ್ವಾಮಿ ನೀ ಸುಗುಣ ಭಾಸ್ಕರ ಕೋಟಿ ತೇಜ ನೀನೇ ಪೂರ್ಣ ಲೇಸಾಗ್ಹೊರಿಯೊ ದಾಸ ಮಹಿಪತಿ ಪ್ರಾಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು