ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ರಮಾರಮ ರಾಮ ಶ್ರೀರಾಮ ಪ ರಾಮ ಸೀತಾರಾಮ ರಾಮ ಜಯರಾಮ ಅ.ಪ. ಶ್ರೀ ರಘುವಂಶ ಲಲಾಮನೆ ರಾಮ ತಾರಕ ಮಂಗಳ ರಾಮನೆ ರಾಮ ನೀರದ ನಿರ್ಮಲ ಶ್ಯಾಮನೆ ರಾಮ ಸಾರಸಲೋಚನ ಸೌಮ್ಯನೆ ರಾಮ 1 ಕೌಸಲ್ಯದೇವಿ ಕುಮಾರಕ ರಾಮ ಕೋಸಲ ದೇಶಾನಂದಕ ರಾಮ ಆಸುರೀ ತಾಟಕ ಶಿಕ್ಷಕ ರಾಮ ಕೌಶಿಕ ಯಜ್ಞ ಸಂರಕ್ಷಕ ರಾಮ 2 ಮುನಿಪತಿ ಶಾಪ ವಿಮೋಚಕ ರಾಮ ಕಾರ್ಮುಕ ಭಂಜಕ ರಾಮ ಜನಕ ಸುತಾನಂದ ವರ್ಧಕ ರಾಮ ಅನುಪಮ ಲೀಲಾದ್ಯೋತಕ ರಾಮ 3 ಸತ್ಯಪರಾಕ್ರಮ ಸಾತ್ವಿಕ ರಾಮ ಪಿತೃವಾಕ್ಯ ಪರಿಪಾಲಕ ರಾಮ ಉತ್ತಮ ಚರಿತಾದರ್ಶಕ ರಾಮ ಚಿತ್ರಕೂಟಾದ್ರಿ ನಿವಾಸಕ ರಾಮ 4 ಕಾಕುತ್ಥವಂಶ ಸುಧಾರಕ ರಾಮ ಲೋಕೇಶ ಲೋಕ ಮನೋಹರ ರಾಮ ಶ್ರೀಕರಾಶ್ರಿತ ಜನ ಮಂದಾರ ರಾಮ ಶ್ರೀ ಕರಿಗಿರೀಶ ಸುಂದರ ರಾಮ 5
--------------
ವರಾವಾಣಿರಾಮರಾಯದಾಸರು