ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಪ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ1 ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ 2 ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ 3 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಪಾವನವು ಸಂದೇಹವಿಲ್ಲ ಮಜ್ಜನ ಪಾನ ಮಾಡಿದಗೆ ಪೊಳೆಗೆ ವೈಕುಂಠಪುರ ಅವನ ಹೃದಯದಲಿ 4 ದೇಶದೇಶಗಳಿಂದ ಬಂದ ಸುಜನರ ಪಾಪ ನಾಶನವ ಮಾಳ್ಪ ನೀ ನಿಷ್ಕಾಮದಿ ಮಾಧವ ವಿಜಯವಿಠ್ಠಲನ ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ 5
--------------
ವಿಜಯದಾಸ
ರಕ್ಷಿಸು ಶ್ರೀ ವೆಂಕಟೇಶಾ ನಿನ್ನ ನಂಬಿದೆನೈ ಶ್ರೇಷಗಿರಿವಾಸಾ ಪ ಶ್ರೀ ಹರಿ ಮಲಗಿರಲಂದೂ ತಾಡನೆ ಮಾಡಿದನೆಂದೂ 1 ಅದು ಕೇಳಿ ಸಿರಿದೇವಿ ಸೈರಿಸಲಾರದೆ ತಿಳಿದು ಹರಿಬೇಗಾ ಧರೆಗಿಳಿದನು ಆಗಾ 2 ಸುರಮುನಿವಂದ್ಯ ಶರಣು ಗೋವಿಂದಾ 3 ದೇಶದೇಶಗಳಿಂದಾ ಭಕ್ತಜನರು ಬಂದೂ ಮಹಾನುಭಾವಾ ಪಾಲಿಸುದೇವಾ 4 ಅಪ್ಪಲು ಅಕಿರಸಿ ಒಪ್ಪದಿಂದಲಿಮಾರಿ ಸರಿಯಾರಿಲ್ಲ ಕಂದ್ಯ5 ಮೋಸ ಹೋಗುವನಲ್ಲಾ ಭವಪಾಶ ಬಿಡಿಸಲು ಬಲ್ಲ ಇದಕೆ ಸಂಶಯವಿಲ್ಲ 6 ಬೇರೆ ದೈವಗಳನ್ನ ಬಯಸಲ್ಯಾತಕೆ ಹೇಳು ದೀನ ದಯಾಳೂ ಭಕ್ತಕೃಪಾಳೂ 7 ನಿನ್ನ ಹೊರತು ಪೊರೆವರನ್ಯರಕಾಣೆನು ಘನ್ನ ಮಹಿಮಾ ಮನಮಾಡೋ ಮೋಹನ್ನಾ 8 ಭಕ್ತ ವತ್ಸಲ ನೀನಭಯವಿತ್ತ ಮೇಲೆ ಭಯವ್ಯಾಕೊನಮಗಿನ್ನು ಭಕ್ತರಭಿಮಾನೀ ಸತ್ಯ ನಿನವಾಣೀ ನಿನ್ನ ಸಮರ್ಯಾರೊದಾನೀ 9 ಆದರದಿಂಧ ಪೊರೆವಾಪ್ರೇಮಸುಧೆಯ ಕರೆವಾ ಕನಕಾದ್ರಿಯೊಳಿರುವಾ ಕೀರ್ತಿಯೊಳ್ ಮೆರೆವಾ 10 ವೆಂಕಟವಿಠಲಾ ಕರುಣಾಲವಾಲಾ ಪದ್ಮಿನಿಲೋಲಾ 11
--------------
ರಾಧಾಬಾಯಿ