ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಕಿತನಾಮ ಪದಗಳು ಅಚ್ಯುತಾನಂತವಿಠಲ | ಸಲಹ ಬೇಕಿವನಾ ಪ ಸ್ವಚ್ಛಶಪಥದಿ ಹರಿಯ | ನಾಮ ನಂಬಿಹನಾ ಅ.ಪ. ಜೀವಕಾರಣವೆನೆ | ಆವನ ವಿದ್ಯಾಪಟಲಓವಿಕಡಿಯಲು ಸಾಧ್ಯ | ನಾಮ ಸಾಧನದೀಈ ವಿಧದ ಸಂಪ್ರಜ್ಞೆ | ಭಾವ ಉಳ್ಳವನೀತತೀವರದಿ ಕೈಪಿಡಿದು | ಕಾಯೋ ಕೃಪ ಸಾಂದ್ರ 1 ಗುರು ಭಕ್ತಿಯುಳ್ಳವನು | ಸುಜ್ಞಾನಕಾಂಕ್ಷಿತನುಇರುವನೀತನು ಎಂದು | ವರ ಸು ಉಪದೇಶಹರಿಯ ನಾನಿತ್ತಿಹೆನು | ಸ್ವಪ್ನ ಸೂಚೀಯಂತೆಕರುಣದಿಂ ನಿಜತೋರೊ | ಮರುತಂತಾರಾತ್ಮ 2 ಹರಿ ನಾಮ ವೆಂಬಂಥ | ವಜ್ರಾಂಗಿ ತೊಡಿಸಿವಗೆದುರಿತರಾಶಿಗಳಳಿದು | ಪೊರೆಯ ಬೇಕಿವನಾಸುರು ಭೂರಹವು ಆಗಿ | ಪರಿಪರಿಯ ವರಗಳನುಗೆರೆಯುತ್ತ ಹರ್ಷವನೆ | ಸುರಿಸೊ ಶ್ರೀಹರಿಯೇ 3 ಸತ್ಸಂಗವನೆ ಕೊಟ್ಟು | ದುಸ್ಸಂಗವನೆ ಕಳೆಯೊಮತ್ಸಕೇತನ ಜನಕ | ಸಚ್ಚಿದಾನಂದಾತ್ಮಾವತ್ಸಾರಿ ಕೃಷ್ಣ ಗೋ | ವತ್ಸ ದನಿಗಾವು ಬಹುಉತ್ಸವದಿ ಬರುವಂತೆ | ನೀನೆ ಪೊರೆ ಇವನಾ4 ಭಾವಜ್ಞ ನೀನಿರುವೆ | ಪೇಳ್ವದೇನಿಹುದೆನಗೆದೇವ ದೇವೇಶನೆ | ಹರಿ ಸಾರ್ವಭೌಮಗೋವರ್ಧನೊದ್ಧಾರನೆ | ಗೋವಿಂದ ಪತಿಯೆ ಗುರುಗೋವಿಂದ ವಿಠಲ ಮದ್ | ಭಿನ್ನಪವ ಸಲಿಸೊ 5
--------------
ಗುರುಗೋವಿಂದವಿಠಲರು
ಕರುಣಾಕರ ಭಕ್ತ ಪಾರಾಯಣ ಸತ್ಯನಾರಾಯಣ ಪ ಭಕ್ತಿ ಭಾವದೆ ನಿನ್ನ ಸೇರಿದೆನು ವ್ರತ ಮಾಡಿದೆನು ಸತ್ಯ ದೇವನೆ ಕೃಪೆ ತೋರುವುದು ವರ ನೀಡುವುದು ಸತ್ಯ ದೇವೇಶನೆÀ ಬೇಡುವೆನು ನುತಿ ಮಾಡುವೆನು 1 ಗಂಧ ಪುಷ್ಪಾಕ್ಷತೆ ದೀಪಗಳಿಂ ಪಂಚಫಲಂಗಳಿಂ ಇಂದಿರೇಶನೆ ನಿತ್ಯ ಭಾವಿಸಿದೆ ವಂದಾರು ಮಂದಾರ ಪಾಲಿಸೆನ್ನನು ಬೇಡಿಕೊಂಬೆನು 2 ಮೌನೀಶ ವಂದ್ಯನೆ ಸರ್ವೇಶನೆ ದೀನಪಾಲಕನೆ ಸುಜ್ಞಾನ ಭಾವಿಪುದು ನಿಜತೋರುವುದು ದಯೆಯಿಂದ ಬಹು ವಿಧದಿಂದ 3
--------------
ಬೇಟೆರಾಯ ದೀಕ್ಷಿತರು
ಕರುಣೆ ತೋರಿಸೊ ದೇವಾ ಕರಿವರದನೆ ಪ. ಕರುಣ ತೋರಿಸೊ ದೇವ ಗರುಡಗಮನ ನಿನ್ನ ಕಮಲ ಧ್ಯಾನ ನಿರುತ ನೆನೆವ ಹರಿಅ.ಪ. ವೇದಾಂತ ವೇದ್ಯ ನೀನೆ ಆದಿನಾರಾಯಣ ಸಾಧುವಂದಿತನು ನೀನೆ ದೇವೇಶನೆ ವೇದವ್ಯಾಸನು ನೀನೆ ಬಾದರಾಯಣ ನೀನೆ ಭವ ಭಯಹರ ನೀನೆ 1 ಚಿಂತೆ ಕೊಡುವ ನೀನೆ ಚಿಂತಿತಾರ್ಥನು ನೀನೆ ಅಂತಕ ದೂತರಿಂದೆಳೆಸುವ ನೀನೆ ಸರ್ವ ಅಂತರ್ಯಾಮಿ ಅಂತÀರಂಗದಿ ನಿಂತು ಪ್ರೇರಿಸಿ ನಿನ ಪಾದ ಪಂಥದಿ ಸ್ತುತಿಗೊಂಡು ಸಂತಸ ಪಡುವವ ನೀನೆ2 ಮಾನುನಿ ದ್ರೌಪದಿಯಾ ಮೊರೆಯ ಕೇಳಕ್ಷಯ ನೀನೆ ಪಾಲಿಸಲಿಲ್ಲವೆ ಶ್ರೀ ಕೃಷ್ಣ ನೀನಿತ್ತು ಸಲಹಿದ ಶ್ರೀ ಶ್ರೀನಿವಾಸ ದೊರೆ ಗಾನಲೋಲನೆ ಭಕ್ತರ ಸಲಹುವೆನೆಂಬುವ ಆಭಯ ಹಸ್ತವ ನೀನಿತ್ತು ಸಲಹೆನ್ನದೇವಾಧಿದೇವ 3
--------------
ಸರಸ್ವತಿ ಬಾಯಿ
ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ಪ ಭಂಗ ಪಡಿಸಿದೆ ನಿನಗೆಣೆ-ಯಿಲ್ಲ ಶನೈಶ್ಚರನೆ ಅ ಹರಿಹರ ಬ್ರಹ್ಮಾದಿಗಳ ಭಂಗಪಡಿಸಿದೆ ಕರುಣವಿಲ್ಲವೆ ನಿನಗೆ ಹರಿಶ್ಚಂದ್ರ ನಳಚಕ್ರವರ್ತಿ ಷೋಡಶ ಮಹಾರಾಯ ಪಾಂಡ್ಯರ ದಣಿಸಿ ತೋರಿಸಿದೆ ಮನೆ ಮನೆ ವಾರ್ತೆಗಳೆಲ್ಲವ ತಿರಿದುಂಡು ಮರುಳುಗೊಂಡು ಪರರ ಪೀಡಿಸಿ ಭ್ರಮೆಪಟ್ಟು ಲಜ್ಜೆಗೆಟ್ಟು ತಿರುಗುವಂದದಿ ಮಾಡಿದೆ 1 ಕಟ್ಟಿದ ಪಶು ಕರೆಯದು ತಾನಾಡಿದ ಮಾತು ಕಟ್ಟದು ಸಭೆಯೊಳಗೆ ಮೆಟ್ಟಿದ ನೆಲ ಮುನಿವುದು ಹೊನ್ನ ಹಿಡಿದರೆ ಬಕ್ಕಟ್ಟೆ ಬಯಲಹುದು ಉಟ್ಟದ್ದು ಹಾವಾಗಿ ಹರಿವುದು ಸಾಲಿ-ಗರಟ್ಟುಳಿ ಘನವಹುದು ಮುಟ್ಟ ಹೇಸುವರು ಕುರುಹ ನಾರಿಯರು ನೆಂಟರಿಷ್ಟರೆ ಕಾಣರು 2 ಸತಿ ಬದ್ಧದ್ವೇಷದಿ ಬೈವಳು ಇದ್ದ ಮನುಜರ ಪಾಡೇನು ನೀ ಬಂದು ಹೊದ್ದಿದ ಮಾತ್ರದಲಿ ನಿದ್ದೆ ಹಸಿವು ಬಳಲಿಕೆ ದಟ್ಟ-ದಾರಿದ್ರ್ಯವು ಕೈಗೊಂಬುದು 3 ಒಳ್ಳೆದಾಗಿದ್ದ ಸಂಗಾತಿಯ ಸ್ನೇಹವೆಲ್ಲವನು ಬಿಡಿಸಿ ಅಲ್ಲಲ್ಲಿ ಕೊಡುವ ದಾನಿಗಳ ಮನದಿ ಪೊಕ್ಕು ಇಲ್ಲಿಲ್ಲ ಹೋಗೆನಿಸಿ ಇಲ್ಲದ ಅಪವಾದ ಭಾಳ ಕಂಟಕ-ರೋಗದಲ್ಲಿ ನೋಯಿಸಿ ಒಲ್ಲೆನೀ ಜನ್ಮವೆಂದೆನಿಸಿ ಸಾಧಿಸಿ ಕಡೆಯಲ್ಲಿ ಗುಣ ತೋರಿಸಿ4 ದೇಶದೇಶದ ರಾಯರ್ಗಳನೆಲ್ಲರನು ಪರದೇಶಿಗಳನು ಮಾಡಿದೆ ವಾಸವನೆ ಬಿಡಿಸಿ ತಿರುಗಿಸಿ ಗಾಸಿ-ಯಿಂದಲೆ ನೋಯಿಸಿ ಶೇಷಶಯನ ಸರ್ವೇಶ ದೇವೇಶನೆ ಲೇಸು ಪಾಲಿಸೊ ಎನಗೆ ದೇಶದಂತರ್ಯಾಮಿ ನೆಲೆಯಾದಿಕೇಶವತೋಷದಿ ಸಲಹೊ ಎನ್ನ 5
--------------
ಕನಕದಾಸ
ಭಕ್ತಿಯಲಿ ನಡೆವರಿವರೇ ಸುಗುಣರೊ ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ ಪ ಉದಯದಲೆದ್ದು ಉನ್ನತ ಸ್ವರದಿಂದ ಹರಿ ಪದವೇ ಗತಿ ಎನುತಾ ಎಲ್ಲ ಕಾಲಕೆ ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ 1 ಭಾಗವತ ಮಿಕ್ಕ ಪುರಾಣಾದಿ ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ 2 ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ ಭೇದ ಪೇಳುವದು ಬಿಡೆನೆಂಬೊ ಸೊಲ್ಲು ಆದಿತ್ಯ ಲೋಕಕ್ಕೆ ಮುಟ್ಟುವಂತೆ ಕೂಗಿ ಸಾಧನ ಮಾಡುತಲಿಪ್ಪ ಶುಭಮಾರ್ಗದಲಿ ನಿತ್ಯಾ 3 ಅವಾವ ಮೋಹಕವು ಶಾಸ್ತ್ರದಲ್ಲಿದ್ದರೂ ಭಾವದಲಿ ಗುಣಿಸದೆ ನಿಕ್ಕರಿಸೀ ದೇವದೇವೇಶನೆ ಬ್ರಹ್ಮಾದಿಗಳು ವಂಚಿಪ ಕಾವ ಕೊಲ್ಲುವನೀತನೆಂದು ತಿಳಿದು ನಿತ್ಯಾ 4 ಅನ್ಯಶಬ್ದವು ಅನ್ಯಸ್ಪರಿಶ ರೂಪಕ ರಸಾ ಅನ್ಯಗಂಧಗಳಿಗೆ ಇಂಬುಗೊಡದೇ ಧನ್ಯರಾಗಿದ್ದವರ ಕರುಣ ಸಂಪಾದಿಸಿ ಪುಣ್ಯಭೂಮಿಯನು ಹಾರೈಸುವ ನಿತ್ಯಾ 5 ಅವೈಷ್ಣವನು ಹರಿ ಎಂದು ನುಡಿವಡೆ ತಾನು ಅವನಂತೆ ಸ್ಮರಿಸದೇ ಸುಮ್ಮನಿದ್ದೂ ಭವವದ್ದು ಭಾಗ್ಯವನು ಅಪೇಕ್ಷಿಸದೇ ಮುಂದೆ ನಿತ್ಯ 6 ಭೂಸುರರ ಪಾದದಲಿ ವಿಶ್ವಾಸ ಇಟ್ಟು ದು ರಾಶೆಯನು ಮಾಡಿ ನರರಾಶ್ರೈಸದೆ ಏಸೇಸು ವಿಪತ್ತು ಗುಣ ಮೇಲಟ್ಟಿದರು ನಿತ್ಯ 7 ಕಾಲ ಮೃತ್ಯು ಬಂದು ಹುಂಕರಿಸಿ ನಿಂದು ಮಹ ಜ್ವಾಲೆಯನು ತೋರಿ ಕಠಿಣೋಕ್ತಿಯಲ್ಲೀ ಏಳೇಳು ಎನುತ ಎಬ್ಬಿಸಿದ ಕಾಲಕೆ ತನ್ನ ನಾಲಿಗೆಲಿ ಹರಿ ಕೃಷ್ಣ ಕೇಶವನೆನುತ ನಿತ್ಯಾ 8 ಸಕಲ ಚೇಷ್ಟಾದಿಗಳು ಹರಿಮಾಡಿಸಲು ಉಂಟು ಮುಕುತಿ ನರಕವೆಂಬ ಯೋಚನ್ಯಾಕೆ ಸಿರಿ ವಿಠ್ಠಲನಲ್ಲಿ ಸುಖ ದು:ಖವಿತ್ತದು ಸಮ್ಮತವೆನುತ ನಿತ್ಯಾ 9
--------------
ವಿಜಯದಾಸ
ಮರೆತು ಹೋದೆನೊ ದೇವ ರಂಗಯ್ಯ ರಂಗ ಸಿರಿದೇವಿ ರಮಣನೆ ಪರನೆಂದು ತಿಳಿಯದೆ ಪ ನೀರೊಳು ಮುಳುಗುತ್ತ ಮೀನಮತ್ಸ್ಯನು ಎಂದು ವೇದವ ತಂದಿತ್ತೆ ದೇವೇಶನೆ ವಾರಿಧಿಶಯನನೆ ವಾರಿಜಾಕ್ಷನು ಎಂದು ಸಾರಸಾಕ್ಷನ ಗುಣ ಸ್ಮರಿಸದೇ ಮನದಲಿ 1 ಬೆಟ್ಟ ಬೆನ್ನಿಲಿ ಪೊತ್ತು ಪೊಕ್ಕು ನೀರೊಳು ಬೇಗ ಭಕ್ತರನುದ್ಧರಿಸಿದ ದೇವನ ಪೃಥ್ವಿಯ ಕೋರೆಯಿಂದೆತ್ತಿ ಅಸುರನ ಕೊಂದ ಸಿಸ್ತು ತೋರಿದ ಪರವಸ್ತುವ ಸ್ಮರಿಸದೆ 2 ಘುಡು ಘುಡಿಸುತ ಬಂದು ಒಡಲ ಸೀಳಲು ಖಳನ ಅಡವಿ ಮೃಗವು ಎಂದು ಬೆರಗಾದೆನೊ ಹುಡುಗನಂದದಿ ಪೋಗಿ ಪೊಡವಿಪಾಲಕನ ಬೇಡಿ ಕೊಡಲಿಯ ಪಿಡಿಯುತ್ತ ತಾಯತರಿದನ ಸ್ಮರಿಸದೆ 3 ನಾರಿಯನರಸುತ ವನವ ಚರಿಸಿದಿ ನಾರಿಚೋರನ ಕೊಂದೆ ವಾನರ ಸಹಿತ ನವನೀತ ಚೋರನೆ ಮನೆಮನೆಗಳ ಪೊಕ್ಕು ಗಾರು ಮಾಡಿದ ಕೃಷ್ಣ ಹರಿಯೆಂದು ಸ್ಮರಿಸದೆ 4 ಬೆತ್ತಲೆ ನಿಂತರು ಉತ್ತಮ ನೆನಿಸಿದಿ ಸತ್ಯಮೂರುತಿ ಪುರುಷೋತ್ತಮನೆ ಕತ್ತಿ ಕಯ್ಯಲಿ ಪಿಡಿದು ಮತ್ತೆರಾವುತನಾಗಿ ಸುತ್ತಿ ಸುತ್ತಿದ ಸರ್ವೋತ್ತಮನರಿಯದೆ 5 ಭಕ್ತವತ್ಸಲಸ್ವಾಮಿ ಭಯನಿವಾರಣನೆಂದು ಭೃತ್ಯರು ನೃತ್ಯದಿ ಕುಣಿಯುವರೊ ಸತ್ಯ ಸಂಕಲ್ಪನೆ ಸತ್ಯಭಾಮೆಯ ಪ್ರಿಯ ಭಕ್ತರೊಡೆಯ ಪರವಸ್ತುವ ಸ್ಮರಿಸದೆ6 ಕರುಣವಾರಿಧಿಯೆಂದು ಸ್ಮರಿಸುವ ಭಕುತರ ಪರಿ ಅಘಗಳು ಪರಿಹಾರವೊ ಪತಿ ಕಮಲನಾಭ ವಿಠ್ಠಲ ಸ್ಮರಿಸದೆ ಅಪರಾಧ ಸಲಹೆಂದು ಸ್ಮರಿಸದೆ 7
--------------
ನಿಡಗುರುಕಿ ಜೀವೂಬಾಯಿ
ಏಳಯ್ಯ ಶ್ರೀಹರಿ ಬೆಳಗಾಯಿತು ಪ.ಏಳು ದೇವಕಿತನಯ ನಂದನಕಂದಏಳು ಗೋವರ್ಧನ ಗೋವಳರಾಯ ||ಏಳುಮಂದರಧರ ಗೋವಿಂದ ಫಣಿಶಾಯಿಏಳಯ್ಯ ನಲಿದು ಉಪ್ಪವಡಿಸಯ್ಯ 1ಕ್ಷಿರಸಾಗರವಾಸ ಬೆಳಗಾಯಿತು ಏಳುಮೂರುಲೋಕದರಸು ಒಡೆಯ ಲಕ್ಷ್ಮೀಪತಿ ||ವಾರಿಜನಾಭನೆ ದೇವ ದೇವೇಶನೆಈರೇಳು ಲೋಕಕಾಧಾರ ಶ್ರೀ ಹರಿಯೇ 2ಸುರರುದೇವತೆಗಳು ಅವಧಾನ ಎನುತಿರೆಸುರವನಿತೆಯರೆಲ್ಲ ಆರತಿ ಪಿಡಿದರೆ ||ನೆರೆದು ಊರ್ವಶಿ ಭರದಿ ನಾಟ್ಯವಾಡಲುಕರುಣಿಸೊ ಪುರಂದರವಿಠಲ ನೀನೇಳೋ 3
--------------
ಪುರಂದರದಾಸರು