ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಿ ಭಜನೆ ಓಂ ನಮೋ ಓಂ ನಮೋ ಓ ನಮೋ ದೇವಿ || ಓಂ ನಮೋ ಓಂ ನಮೋ ಭಕ್ತ ಸಂಜೀವಿ ಪ. ಶಂಭು ಮನೋಹರೆ | ಶಾಂಭವಿ ದೆÉೀವಿ || ಜಂಭಾರಿ ಸುರನರ | ವಂದಿತೆ ದೇವಿ ಅ.ಪ. ಮಧುಕೈಟಭಾಖ್ಯರ ವಧಿಸಿದ ದೇವಿ || ಮುದದೊಳೀ ಮಹಿಯ | ನುದ್ಧರಿಸಿದ ದೇವಿ 1 ಮಹಿಷಾಖ್ಯ ದಾನವ ಮರ್ದಿನಿ ದೇವಿ || ದಹಿಸಿದೆ ಧೂಮ್ರಾಕ್ಷ | ನನು ಮಹಾದೇವಿ 2 ಚಂಡಮುಂಡಾಖ್ಯರ | ಖಂಡಿಸಿ ಶಿರಗಳ || ಚೆಂಡಾಡಿದ ಶ್ರೀ ಚಾಮುಂಡಿ ದೇವಿ 3 ರುಧಿರಬೀಜಾಖ್ಯನ | ರುಧಿರವ ಹೀರಿ || ವಧಿಸಿದೆ ಅದ್ಭುತ | ಮಹಿಮೆಯದೋರಿ 4 ಶುಂಭ ನಿಶುಂಭ ನಿ | ಷೂದಿನಿ ದೇವಿ || ಕುಂಭಿನಿ ಭಾರವ | ಹರಿಸಿದ ದೇವಿ 5 ಅರುಣಾಸುರ ಸಂ | ಹಾರಿಣಿ ದೇವಿ || ಶರಣರಿಗೊಲಿದ ಶ್ರೀ | ಭ್ರಾಮರಿ ದೇವಿ6 ನಂದಿನಿ ನದಿಯೊಳು | ನೆಲೆಸಿದ ದೇವಿ || ಕಂದರಂತೆಮ್ಮನು | ಸಲಹುವ ದೇವಿ7 ನಂಬಿದ ಭಕ್ತರ | ವೃಂದವ ದೇವಿ || ಅಂಬಿಕೆ ಪಾಲಿಸು | ಜಗದಂಬ ದೇವಿ 8 ಜಟಾಧರೇಶನ | ರ್ಧಾಂಗಿನೀ ದೇವಿ || ಕಟಿಲೊಳು ಮೆರೆದ | ಭ್ರಮರಾಂಬ ದೇವಿ9
--------------
ವೆಂಕಟ್‍ರಾವ್
ಶಾರದೆ ನಿನ್ನ ಪಾದವ ಆರಾಧಿಸುವೆವುವಾರಿಜ ಭವಕ್ಕೆ ಸೇರಿಸು ಹರಸು ಪ. ನಿತ್ಯ ಭಜಿಸುವೆವುಸಚ್ಚಿದಾನಂದನ ಚಿತ್ತದಿ ನಿಲ್ಲಿಸ1 ರಂಭೆ ನಮ್ಮಯ ಹೃದಯ ಅಂಬರದೊಳು ನಿಂತುಅಂಬುಜನಾಭನ ತುಂಬಿಸು ಮನದಿ2 ಅರಿಷಿಣ ಕುಂಕುಮ ಬೆರೆಸಿದ ಪರಿಮಳಸರಸದಿ ಕೈ ಕೊಂಡು ಅರಸಿಯರ ಗೆಲಿಸ 3 ಅತ್ತಿ ಹೂವಿನಸೀರೆ ಮುತ್ತಿನಾಭರಣವಅರ್ಥಿಲೆ ಕೈ ಕೊಂಡು ಮಿತ್ರೆಯರ ಗೆಲಿಸ4 ಪತಿ ಸೌಭಾಗ್ಯವ ರಚಿಸಲುಶೀಘ್ರದಿ ತೋರಿಸೆ ಕುಗ್ಗದೆ ನಮಗೆ 5 ಪತಿ ನಿತ್ಯ ರಾಮೇಶನ ತತ್ವವ ರಚಿಸುವೆ ಸತ್ಯವ ನುಡಿಸೆ ಶಾರದಾದೇವಿ6
--------------
ಗಲಗಲಿಅವ್ವನವರು