ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಮುನಿದು ಇಳೆಯೊಳಗೇ| ಸುರಮುನಿ ಜನಪಾಲನ ಮನದಲಿ ಬಂದದಿ ನೆರೆಯದೇ ಸಾರುವದೀಗ ಪ ನಿನ್ನಯ ಒಪ್ಪುವ ಮಾರ್ಗವ ನೋಡುತ| ಮುಚ್ಚನು ಕುಡಿಗಂಗಳ ಯವಿಯಾ| ಪನ್ನಗವೇಣೀ ನಿನ್ನವಿಯೋಗ ದುಗುಡದೀ| ಕುಳಿತನುಡಗಿ ಅವಯವ ಸೋಹ್ಯಾ 1 ನಿನ್ನ ಕಾಣುವೆ ನೆಂಬಂಥ ವಾಣಿಯಲೆದ್ದು ಲಜ್ಜಿಸಿ ಹಿಂದಕ ಕಾಲೆಳೆದಾ| ಘನ್ನ ವಿರಹ ತಾಪದ ದೆಶೆಯಿಂದಲಿ ಕಿಡಿ ಕಿಡಿ ಜ್ವಾಲಾಂಗನು ಆದಾ 2 ಕಪಟದಿ ಬಂದು ನೋಡುವೆ ನಿನ್ನೆನುತಲಿ ಯಾಚಕ ರೂಪತಾಳಿದನು| ವಿಪುಳಾಂಗ ತಾಳಲಾದರದೇ ನಿನ್ನ ಕುವರಿಯ ತೊರೆಂದೆ ಚಂದನು ಶರಧಿಯನು3 ದಿನದೊಳಗರಗಳಗಿ ಗಮಿಸದು ಯನುತಲಿ ವನದೋಳು ಪೋಗಿ ಹೊತ್ತುಗಳೆವಾ|ಮನಿ ಮನಿ ಪೊಕ್ಕು ಗೋಕುಲದಲಿ ನಿನ್ನನು ಅರಸುತಿಹನು ಪಾವನ ದೇವಾ4 ಕ್ಷತ್ರೀಯರು ನಿಷ್ಠುರರೆಂದು ನಿನ್ನಮ್ಯಾಲಿನ ಕೋಪದಿ ಕಂಡ ವೃತವಳದಾ| ಅತಿತವನೋಡದೇ ತಾನಾಗಿ ಬಂದನು ಹಯವೇ ನೋಡೆ ಜೀವನ ಜಗದಾ 5 ಕುವಲಯ ಲೋಚನೆ ಕೂಡಿದ ನಿಮ್ಮಿರ್ವರ ಹಾಸ್ಯದ ಮುಖವನು| ಜವದೀ ಅವನಿಲಿ ಕಂಡೆನು ಧನ್ಯಧನ್ಯಾದೆನು ಮಹಿಪತಿ ಸುತ ಪ್ರಭುವಿನ ದಯದೀ6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಪ ಅಂದು ಭೃಗುಮುನಿಯೆದೆಯಲೊದೆಯಲವನಿಗೆ ಪಾಪ ಬಂದುದೇ ಮೂದಲಿಸಿ ಬೈದವನಿಗಾ ದೋಷವು ನಿಂದುದೇ ಹಣೆಯೊಡೆಯಲೆಸೆದ ಭೀಷ್ಮಂಗಘವು ಹೊಂದೀತೆ ಪಾಂಡವರ್ಗೆ ಕುಂದು ಬಂದೀತೆ ದೇವಾ 1 ವರದನಾಕಾರದೊಳಗುಷ್ಣಜಲ ಮೃತ್ತಿಕೆಯ ತರಲು ಕೈಸುಡಲು ಹಣೆಯನು ಟೊಣದು ಬೈದೇ ಮರಳಿ ನಾಚಿಕೆಯಿಲ್ಲದೆ ಚರಣಕ್ಕೆ ಪಾವುಗೆಯ ನಿರಿಸಿದಪರಾಧ ನಿನ್ನದೋ ಯೆನ್ನದೋ ದೇವಾ 2 ಕುರುಡನಿಗೆ ದಾರಿಯನು ತೋರುವಾಪ್ತನು ಮುಳಿದು ಜರಿದು ನೂಕಿದೊಡಾತನೇನ ಮಾಡುವನೂ ಗುರಿಯನಿಡುವವನು ತಪ್ಪೆಸೆಯೆ ಸರಳಿನದೇನು ಅರಸಾಳಕೊಂದಡವನೇನು ಮಾಡುವನೂ 3 ಕುಣಿಸಿದಂತಾಡುವುದು ಬೊಂಬೆಯು ಸ್ವತಂತ್ರವದ ಕಿನಿತುಂಟೆ ಕಪಟನಾಟಕ ಸೂತ್ರಧಾರೀ ಎನಿತಾಡಿಸಿದೊಡಾಡುವೆನು ಪಾಪಪುಣ್ಯವೆಂ ಬೆಣಿಕೆಗಾನಲ್ಲ ನೀನಲ್ಲದೆಲೆ ದೇವಾ4 ತಂದೆ ತಾಯ್ಗಳು ತಮ್ಮ ಕಂದನನು ಸರ್ಪಮುಖ ದಿಂದ ಕಚ್ಚಿಸಲು ತರಳನಲಿ ತಪ್ಪೇನೂ ಮುಂದರಿಯದಜ್ಞಾನಿಯೆಂದು ನೀಕ್ಷಮಿಸಿಕೋ ತಂದೆ ವೈಕುಂಠ ವೇಲಾಪುರಾಧೀಶಾ 5
--------------
ಬೇಲೂರು ವೈಕುಂಠದಾಸರು
ವರಗಡದಿನ್ನೀಶೇಷ ವಿಠಲ ಪೊರೆ ಇವನ ಪ ನಿರುತ ತವ ಚರಿತೆಗಳ | ಸ್ಮರಿಸುತ್ತ ಭಕ್ತಿಯಲಿಮರುತಾಂತರಾತ್ಮ ತವ | ಚರಣಕರ್ಪಿಪನ ಅ.ಪ. ಭವ | ಬಂಧದೊಳು ಸಿಲ್ಕಿ ಬಹುನೊಂದವಗೆ ಕರುಣದಲಿ | ಕುಂದನೆಣೆಸದಲೇಮಂದ ಹಾಸವ ಬೀರಿ | ಸಂಧಿಸೋ ಸಂತೋಷಇಂದಿರಾರಾಧ್ಯ ಪದ | ಮಂದರೋದ್ಧಾರೀ 1 ಉತ್ತಮ ಸುಸಂಸ್ಕøತಿಯ | ಪೊತ್ತು ಜನಿಸಿಹನಿವನುಮತ್ತೆ ದಾಸರ ಕರುಣ | ಪಾತ್ರನಿರುವಾಅರ್ಥಿಯಲಿ ದಾಸತ್ವ | ಪ್ರಾರ್ಥಿಸುತ್ತಿಹಗೆ ನಾ-ನಿತ್ತಿಹೆನೊ ಅಂಕಿತವ | ಸುಪ್ತೀಶನಾಜ್ಞಾ2 ಮೋದ ತೀರ್ಥರ ತತ್ವ | ವಾದಾನುವರ್ತಿ ಇವಭೋಧಿಸೀ ಪರತಮವ | ಭೇದ ಪಂಚಕನಆದರದಿ ಕೈ ಪಿಡಿದು | ಉದ್ಧರಿಸ ಬೇಕೆಂದುವೇದ ವೇದ್ಯನೆ ನಿನ್ನ | ಪ್ರಾರ್ಥಿಸುವೆ ಹರಿಯೇ 3 ಶ್ರವಣ ಮನಕಾನಂದ | ಭುವನ ಪಾವನವೆನಿಪತವಮಹಿಮೆ ಪೊಗಳಲ್ಕೆ | ಕವನ ಶಕ್ತಿಯನೂನೀವೊಲಿದು ಅಭಿವೃದ್ಧಿ | ಗೈವುದಿವನಲಿಯೆಂದುಪವನಾಂತರಾತ್ಮ ಬಿ | ನ್ನವಿಪೆನೋ ದೇವಾ4 ಭಾವಕ್ರಿಯೆ ದ್ರವ್ಯದೊಳು | ಅದ್ವಿತಿಯ ನೀನೆಂಬಭಾವದನುಭವವಿತ್ತು | ನೀ ವೊಲಿಯೊ ಇವಗೇಕಾವರನ್ಯರ ಕಾಣೆ | ಗೋವರ್ಧನೋದ್ಧರನೆಕೋವಿದರ ಒಡೆಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು