ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸು ಕಂಡೆನು ನಾನು ಸಂತೋಷದಿ| ಕನಸು ಕಂಡೆನು ನಾನು ಅರನಿಮಿಷದೊಳು ಹರಿಯ ಮನಸಿನಲಿ ಸ್ಮರಿಸಿ ಮಹಾರೂಪವನು ಕೂಡ ಪ ವೆಂಕಟರಮಣನ ಯಾತ್ರೆಗೆ ಹೋದ್ಹಾಗೆ ಶಂಕೆ ಇಲ್ಲದೆ ಪರಶಿಜನಕ ಕಂಡ್ಹಾಗೆ ಬಿಂಕದಿಂದಲಿ ದೇವಸ್ಥಾನ ಪವಳಿಯ ಸುತ್ತ ಅಂಕುರಾರ್ಪಣ ಧ್ವಜಸ್ತಂಭದಲಿ ನಿಂತ್ಹಾಗೆ 1 ಅಡಗಿ ಶಾಲೆಯ ಅನ್ನಪೂರ್ಣೆಯನ್ನು ಕಂಡ್ಹಾಗೆ ದೃಢದಿ ಶ್ರೀನಿವಾಸ ದೇವರ ನೋಡಿದ್ಹಾಗೆ ಕಡು ಹರುಷದಲಿ ತೊಟ್ಲ ತೀರ್ಥ ಸೇವಿಸದ್ಹಾಗೆ ಸಡಗರದ ಮಧ್ಯರಂಗದಲಿ ನಿಂತ್ಹಾಗೆ 2 ಶಿರzಲ್ಲಿ ಕಿರೀಟ ಲಲಾಟ ತಿಲಕ ವಿಟ್ಟ್ಹಾಗೆ ಕೊರಳೊಳ್ ಮುತ್ತೀನಹಾರ ಪದಕ ತೋರಿದ ಹಾಗೆ ಕರದಲ್ಲಿ ಶಂಖಚಕ್ರ ಧರಿಸಿ ಕೊಂಡಿರುವ ಹಾಗೆ ಉರದಲ್ಲಿ ಶಿರಿಲಕುಮಿ ವಾಸವಿದ್ಹಾಗೆ 3 ಹೊನ್ನ ಹೊಸ್ತಿಲ ದಾಟಿ ವಳಗ್ಹೋಗಿ ನಿಂತ್ಹಾಗೆ ಚಿನ್ಮಯನ ರೂಪವನು ಚಿಂತಿಸಿದ ಹಾಗೆ ಅನ್ನ ಪ್ರಸಾದಾತಿ ರಸದÉೂೀಶಿ ಕೊಟ್ಹಾಗೆ ಪನ್ನ ಗಾದ್ರಿ ವಾಸನ ಕಣ್ಣಿಂದ ನೋಡಿದ್ಹಾಗೆ 4 ನಡುವಿನಲಿ ಒಡ್ಯಾಣ ಪೀತಾಂಬರವನುಟ್ಹಾಗೆ ಯಡಬಲದಿ ಜಯು ವಿಜಯ ನಿಂತಿರೋಹಾಗೆ ಪೊಡವಿಯೊಳ್ 'ಹೆನ್ನೆವಿಠ್ಠಲ’ ವೆಂಕಟೇಶನ್ನ ಕಡು ಹರುಷದಲಿ ಕಂಡು ಕೈಮುಗಿದು ನಿಂತ್ಹಾಗೆ 5
--------------
ಹೆನ್ನೆರಂಗದಾಸರು
ನೋಡಿದೆನು ಯಾದವ ಕೃಷ್ಣನ | ಪಾಡಿದೆನೊ ಮನದಣಿಯ ವರಗಳ | ಬೇಡಿದಾಕ್ಷಣ ಕೊಡುವ ಜಗತ್ರಯ | ವಾಡಿಸುವ ವಾಗೀಶ ಜನಕನ ಪ ಮೇದಿನಿ ಪ್ರ | ಹ್ಲಾದ ಸುರಪನ ಕಾದ ವಂಶವ | ಛೇದ ಸಾಗರ | ಹಾದಿ ಬಿಗಿದ ಗೋಯಿದ ಬತ್ತಲೆ | ಯಾದ ತುರಗವ | ಬೀದಿ ವದಿಸಿದನೀತ ಹಯಮೊಗ | ಬಾದರಾಯಣ ದತ್ತ ವೈಕುಂಠ | ಬೋಧ ಮೂರುತಿ ಕಪಿಲ ನಾನಾ ವಿ | ನೋದ ರೂಪದ ಆದಿ ದೈವವ 1 ಜನನಿಗಾಟವ ತೋರಿ ಕಡಗೋ | ಲನು ನೇಣರು ಕರದಲಿ ಪಿಡಿದು | ರು ಕ್ಮಿಣಿಯ ಕೈಯಿಂದ ಪೂಜೆಗೊಂಡರ್ಜು | ಗೋಪಿ ಚಂ | ದನದೊಳಡಗಿ ಅಲ್ಲಿಂದ ಆನಂದ | ಮುನಿಗೊಲಿದು ಬಲು ವೇಗ ಪಡುವಣ | ವನಧಿ ತೀರದಲಿಪ್ಪನಂತಾಸನ ಬಳಿಯ ನಿಂದಿದ್ದ ಚಲುವ 2 ಸುತ್ತ ಯೋಜನ ಕ್ಷೇತ್ರವಿದರೊಳು | ಉತ್ತಮ ವಿಮಾನ ವೇದ ಪ | ರ್ವತಗಳು ಅಲ್ಲೆಲ್ಲಿ ಸರೋವರ | ಕತ್ತಲಿಗಭಿಮಾನಿನಿ ದುರ್ಗಾ | ದುರಿತ ಪರಿಹರ | ಸೋತ್ತಮರಿಗಿದು ಸಿದ್ಧ ಸರ್ವದ | ತತ್ತಳಿಪ ಪರತತ್ವ ಹರಿಯ3 ತಂತ್ರ ಸಾರೋಕ್ತದಲಿ ಪೂಜೆ ನಿ | ರಂತರದಿ ಕೈಗೊಂಬ ಬಲು ಗುಣ | ವಂತ ನೀತನ ಹೊಳವು ಪೊಗಳಿದ | ರಂತ ಗಾಣವು ಶ್ರುತಿ ಪುರಾಣಗ | ಳೆಂತು ಪೇಳಲಿ ಮೆರೆವ ವೈಭವ | ಸಂತರಿಗೆ ಅತಿ ಪ್ರಿಯನಾಗಿಪ್ಪ | ನಿತ್ಯ ಸ್ವಾತಂತ್ರ ಪುರುಷನ 4 ಮಕರ ತಿಂಗಳು ಮೊದಲು ಪಕ್ಷದ | ಲಕುಮಿರಮಣನ ದಿವಸದಲ್ಲೀಗ | ಭಕುತಿಯಿಂದಲಿ ಬಂದು ವಂದಿಸಿ | ಅಕುಟಿಲರ ವೊಡಗೊಡಿ | ನಿಂದು ಗೋ | ಳಕವ ಚಿಂತಿಸಿ ಸ್ನಾನ ಒಂದೆ | ಸುಖ ತೀರ್ಥ ಸರೋವರದಲಿ ಮಾಡೆ | ಮುಕುತರೊಳು ಪೊಂದಿಸುವ ದಾತನ 5 ಶುಕ್ರವಾರದ ಪೂಜೆ ನೋಡಲು | ವಕ್ರಗತಿಗಳು ಮುಟ್ಟಲಂಜೊವು | ಚಕ್ರವರ್ತಿ ತಾನಾಗಿ | ಸಕಲ ಪರಾಕ್ರಮದಲಿ ಚರಿಸಿ ಜಗದೊಳು | ಶುಕ್ರ ದೇವಸ್ಥಾನದೊಳು ಕಾ | ಲಕ್ರಮಣ ಮಾಡೆ | ಗೋತ್ರದೊಡನೆ ಪೂ ರ್ಣ ಕ್ರೀಡೆÀಯಾಡಿಸುತ ಸಲಹುವ | ಚಕ್ರಧರ ಅಕ್ರೂರ ವರದನ 6 ಕಣಿಸಿ ಉಡಿಸುವ ಕುಣಿಸಿ ನೋಡುವ | ಕನಸಿನೊಳಗಾವಾಗ ತನ್ನನು | ಮನಸಿನಲಿ ಕ್ಷಣ ಬಿಡದೆ ಗುಣಗಳ | ಎಣಿಸಿ ಮೈ ಮರೆದಡಿಗಡಿಗೆ ಈ | ತನುವೆ ನಿನ್ನಾಧೀನವೆಂದಾ | ಜನರಿಗಪವಾದ ಬರಲೀಸನು | ದನುಜದಲ್ಲಣ ವಿಜಯವಿಠ್ಠಲನ್ನ 7
--------------
ವಿಜಯದಾಸ
126-1ದ್ವಿತೀಯಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪವೇಲೂರು ಚಿತ್ತೂರು ಚಂದ್ರಗಿರಿ ಮಾರ್ಗದಲಿಅಲ್ಲಲ್ಲಿ ಪ್ರಮುಖ ಭೂಪಾಲರ ಕೈಯಿಂದಬಲು ಭಕ್ತಿಯುತ ಪೂಜೆ ಮರ್ಯಾದೆಕೊಂಡುವ್ಯಾಳಗಿರಿ ವೇಂಕಟನ ತಿರುಪತಿ ಸೇರಿದರು 1ತಿರುಪತಿಯಲಿ ಹನುಮದಾದಿ ಲಕ್ಷ್ಮಣಸೇವ್ಯಶ್ರೀರಾಮಸೀತಾ ಸಮೇತನಿಗೆ ನಮಿಪೆಉರುಗೇಶಶಯ್ಯ ಶ್ರೀ ಗೋವಿಂದರಾಜನಿಗುಶಿರಬಾಗುವೆ ಶ್ರೀ ಲಕ್ಷ್ಮೀಗೂ ಸತತ 2ಒಂದು ಗಾವುದ ದೂರದೊಳಗೇವೆ ಇರುತಿಹುದುಪದ್ಮ ಸರೋವರವು ತತ್ತೀರದಲ್ಲಿವೇದವಿಗ್ರಹ ಘೃಣಿ ಆದಿತ್ಯ ಸೂರ್ಯನುನಿಂತಿಹನು ಸರ್ವೇಷ್ಟ ಶ್ರೀದವೃಷ್ಟಿದನು 3ಸಮೀಪದಲಿ ದೊಡ್ಡ ಆಲಯವಿಹುದಲ್ಲಿಬೊಮ್ಮದಿ ಸುಮನಸಾರ್ಚಿತ ಕೃಷ್ಣ ಅಣ್ಣರಾಮನ ಸಹಕುಳಿತು ವಂದಿಸುವ ಸಜ್ಜನರಕ್ಷೇಮಲಾಭವ ಸದಾ ಪಾಲಿಸುತಿಹನು 4ದಕ್ಷಪಾಶ್ರ್ವದ ಗುಡಿಯಲ್ಲಿ ಸುಂದರರಾಜಲಕ್ಷ್ಮೀಸಮೇತನು ಕಾರುಣ್ಯಶರಧಿಪಕ್ಷ್ಮಗಳು ಅಕ್ಷಿಗಳ ರಕ್ಷಿಸುವ ತೆರದಲ್ಲಿವಿಷ್ಣು ಭಕ್ತರ ಸದಾಕಾಯುತಿಹನು 5ಕೃಷ್ಣನಾಲಯ ವಾಮಪಾಶ್ರ್ವ ಮಂದಿರದಲ್ಲಿವನಜಆಸನದಲ್ಲಿ ಶ್ರೀ ಪದ್ಮಾವತಿಯುದೀನ ಕರುಣಾಕರಿಯುವರಅಭಯನೀಡುತ್ತಶ್ರೀನಿವಾಸನ ಬದಿಯಲ್ಲಿ ಕುಳಿತಿಹಳು 6ದ್ವಾದಶಾಕ್ಷರ ಕಮಲವಾಸಿನಿ ಮಂತ್ರಪ್ರತಿಪಾದ್ಯಳು ಪದ್ಮಾವತಿ ಕಮಲವಾಸಿನಿಯುಪದ್ಮಲೋಚನೆ ಸರ್ವಾಲಂಕಾರ ಸಂಪನ್ನೆಸದಾಯೆಮ್ಮ ಪಾಲಿಸುವಳಿಗೆ ನಮೋ ಎಂಬೆ 7ವೇಂಕಟಾಚಲದ ಅಡಿವಾರದಲಿ ಇರುತಿದೆಅಕಳಂಕ ಸುಪವಿತ್ರ ಕಪಿಲತೀರ್ಥಲಿಂಗ ಆಕಾರದಲಿ ಕಪಿಲೇಶ್ವರ ಇಹನುಬಾಗುವೆ ಶಿರ ಶಿವಗು ಉಮಾಮಹೇಶ್ವರಿಗೂ 8ಕಪಿಲೇಶ್ವರಾನುಗ್ರಹದಿಂದ ಗಿರಿ ಏರಿಗೋಪುರಾಲಯದಲ್ಲಿ ನೃಸಿಂಹನ ನಮಿಸಿಶ್ರೀಪವರಾಹವೇಂಕಟನ ಕಾಣಿಸುವಂತಆ ಭೇಟಿ ಹನುಮನಿಗೆ ಶರಣು ಶರಣೆಂಬೆ 9ಸ್ವಾಮಿವೇಂಕಟನ ಆಲಯದ ಗೋಪುರಕಂಡುಸ್ಮರಿಸಿದ ಮಾತ್ರದಲೆ ಪಾಪ ನೀಗಿಸುವಸ್ವಾಮಿ ತೀರ್ಥಕು ಭೂರಾಹಕರುಣಾಬ್ಧಿಗೂನಮಿಸುವೆ ಅಶ್ವತ್ಥನಾರಾಯಣಗು 10ಕಪಿಲೇಶ್ವರಾನುಗ್ರಹದಿ ಹನುಮಂತನಅ ಪವನಜನ ದಯದಿ ಭೂಧರಾ ವರಾಹನಪುಷ್ಪಭವ ಪೂಜಿತ ಶ್ರೀ ಶ್ರೀನಿವಾಸನಶ್ರೀ ಪದ್ಮ ಪದಯುಗದಿ ಶರಣು ಶರಣಾದೆ 11ಶ್ರೀವಕ್ಷ ವೇಂಕಟೇಶನ್ನ ಧ್ಯಾನಿಸಿ ನಮಿಪೆದೇವ ದೇವಶಿಖಾಮಣಿಕೃಪಾನಿಧಿ ಸುಹೃದನವರತ್ನ ಖಚಿತ ಆಭರಣ ಕಿರೀಟಿಯುಶಿವದವರಅಭಯಕರಕಟಿ ಚಕ್ರಿಶಂಖಿ12ಭಕ್ತವತ್ಸಲ ದಯಾನಿಧಿ ಶ್ರೀನಿವಾಸನ್ನಸತ್ಯಬೋಧತೀರ್ಥಾರ್ಯರು ವಂದಿಸಿ ಸುತ್ತಿಸಿಆ ದೇವಸ್ಥಾನದಲಿ ಮಾರ್ಯಾದೆಗಳ್ ಕೊಂಡುಪದುಮ ಸರೋವರಾಲಯಗಳ ಐದಿದರು 13ವೇಂಕಟಗಿರಿಯಿಂದ ಕರ್ನೂಲು ಗದ್ವಾಲಪೋಗಿ ಸತ್ತತ್ವ ಸಿದ್ಧಾಂತವ ಬೋಧಿಸಿಭಕುತರಿಗೆ ದರ್ಶನ ಉಪದೇಶ ಕೊಟ್ಟರುಮಾರ್ಗದಲಿ ಹನುಮಂತ ಕ್ಷೇತ್ರ ಇಹುದು 14ಕ್ಷೇತ್ರಗಂಡಿಗ್ರಾಮ ತತ್ರಸ್ಥ ಹನುಮನಿಗೆಶರಣೆಂಬೆ ಸ್ಮರಿಸಲು ಬುದ್ಧಿರ್ಬಲ ಯಶಸ್ಸುಧೈರ್ಯವು ನಿರ್ಭಯತ್ವವು ಆರೋಗ್ಯವುದೊರೆಯುವುದು ನಿಶ್ಚಯ ಆಜಾಡ್ಯ ವಾಕ್ಪಟುತ್ವ 15ಹೇಮಗರ್ಭನತಾತಶ್ರಿಪತಿ ಜಗನ್ನಾಥಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 16 ಪ|| ಇತಿ ದ್ವಿತಿಯ ಕೀರ್ತನೆ ||
--------------
ಪ್ರಸನ್ನ ಶ್ರೀನಿವಾಸದಾಸರು