ಒಟ್ಟು 7 ಕಡೆಗಳಲ್ಲಿ , 1 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸ್ತುತಿ ಗುರುಗಳ ಕರುಣವಿದು ಇರುಳು ಹಗಲು ಹರಿಸ್ಮರಣೆಯೊಳಿರುವದು ಪ ಕಲಿಯುಗ ಒದಗಿತಲ್ಲ | ವಿಷಯದಿ ಚಲಿಸಿತು ಮನವೆಲ್ಲ ಇಳೆಯೊಳು ಹಿರಿಯರಿಲ್ಲ ನೆರೆಜನ ಖಳರು ಸಜ್ಜನರಲ್ಲ 1 ವೇದ ಓದುಗಳಿಲ್ಲ ಸುಮ್ಮನೆ ಕಾದಿ ಕಳೆವರು ಕಂಡ್ಹಾಗೆ ಮೋದತೀರ್ಥರ ಮತ ಇದರೊಳು ಓದಿ ಪೇಳುವರಿಲ್ಲ 2 ಮೋಸ ಪೋಗದ ಹಾಗೆ ಹರಿಪದ ದಾಸ್ಯವ ಬಿಡದಾಗೆ ವಾಸುದೇವವಿಠಲನ್ನೆ ಕರುಣದಿ ವಾಸರ ಕಳೆಯುವನೋ | ನಮ್ಮ 3
--------------
ವ್ಯಾಸತತ್ವಜ್ಞದಾಸರು
ಚರಣವೆಂಬ ದುರ್ಗಮ ದುರ್ಗ ಸೇರಿದೆ ನಿಜಭಕ್ತ ಜನರಿಗೆ ಆಭಯವ ಕೊಡುವಂಥ ಧ್ವಜವುಳ್ಳ ಪುರವಿದು ಪರರಿಗಸಾಧ್ಯ 1 ತನ್ನ ನಂಬಿದ ಇಂದ್ರ ಗಣಪತಿ ಇಹರೆಂದು ಚನ್ನ ವಜ್ರಾಂಕುಶ ಧರಿಸಿದೆ ನಿಧಿ ಪೂರ್ಣ 2 ನಿತ್ಯ ನಿರ್ಮಲವಿದು ಅಜ ಮೊದಲಾದವರು ಇಲ್ಲೆ ಸೇರುವರಯ್ಯ 3 ಕೆಳಗ ರವಿಯ ಕಾಂತಿ ಮ್ಯಾಲರ್ಧಾ ಶಶಿ ಛವಿ ಸ್ಥಳವಿದೆ ಭಾಗ್ಯಾಭಿಮಾನಿ ದೇವತೆಗೆ 4 ಸವಿಯಾದ ನದಿ ಇಲ್ಲಿ ಜನಿಸಿದೆ ಫಲ ಪದ್ಮ ಯವ ಮೊದಲಾದವಿವೆ ವಾಸುದೇವವಿಠಲನ್ನ ಚರಣವೆ 5
--------------
ವ್ಯಾಸತತ್ವಜ್ಞದಾಸರು
ನೋಡು ನೋಡು ಟೀಕಾಚಾರ್ಯರ ಮಾಡು ವಂದನೆಗಳ ಬೇಡು ವರಗಳನ್ನು ಪ ದುರ್ಮಾಯಿ ಮತಗಳ ಮರ್ಮ ಭೇದಿಸಿ ಸುಧಾ ನಿರ್ಮಾಣ ಮಾಡಿದ ಆರ್ಯರ 1 ಲಲಿತೋಧ್ರ್ವ ಪುಂಡ್ರ ಶ್ರೀ ತುಲಸೀಭೂಷಿತ ಕರ್ನ ವಿಲಸಿತ ಕಾಪಾಯಧಾರ್ಯರ 2 ಯಾವಾಗಲೂ ವಾಸುದೇವವಿಠಲನ್ನಸೇವಿಸುವರ ಭಜಿಸುವರ 3
--------------
ವ್ಯಾಸತತ್ವಜ್ಞದಾಸರು
ಪ್ರಾಣನಾಥನೆ ನಿನ್ನ ತುತಿಯ ಮಾಡಲು ಇನ್ನು ತ್ರಾಣ ಎನಗುಂಟೆ ಗುರುವೆ ಪ ದಾನಿ ಸಿರಪತಿಯ ಭಕುತರ ಶಿಖಾಮಣಿಯೆ ಗುಣಶ್ರೇಣಿ ಎಣೆಗಾಣೆ ಶ್ರುತಿಧಿ ಸ್ಮøತಿಧಿ ಅ.ಪ ನಿಖಿಳ ಜೀವರಿಗೆ ಮಾನಿ ಪುರುಷ ನೀ ಸಕಲ ಮಹದಾಭಿಮಾನೀ ಸುಖರೂಪ ಪುರುಷನಿಗೆ ವಾಯು ಅಗ್ನಿ ಆದಿತ್ಯ ತ್ವಕುರೂಪ ಪುತ್ರನಾದೀ ಮೋದಿ 1 ಕಮಠರೂಪದಿ ಲೋಕಕಾಧಾರ ಸಮನೋ ಆಖಣಾಶ್ಮನೆ ಸುಮನಸರನ್ನ ಪೊರೆವೆ ಬೆರೆವೆ 2 ವಾಸುದೇವವಿಠಲನ್ನ ಸಂತತವು ಶ್ವಾಸಮಂತ್ರದಿ ಸೇವನ ಲೇಸಾಗಿ ಮಾಡುವ ಜೀವರೊಳು ನೀನೇವೆ ದಾಸನ್ನ ಪೊರೆಯೊ ಧೀರ ವೀರ 3
--------------
ವ್ಯಾಸತತ್ವಜ್ಞದಾಸರು
ಲಕ್ಷ್ಮೀದೇವಿ ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ ಅಂಜಿಸಿದರೆ ಲೋಕ ಅಂಜದಿರುವುದೆ ಪ ಕುಂಜರಗಮನೆ ನಾವಂಜನದೇವಿ ಸಂಜಾತನಾದ ಪ್ರಭಂಜನನಣುಗರು ಪಾದ ಕಂಜಕ್ಕೆ ವಿಮುಖ ಸಂಜಿಲಿ ಚಲಿಸುವ ಪುಂಜರು ಕಡಿಮೆ 1 ನಿನ್ನನೆ ನಂಬಿ ನಾವಿನ್ನು ಸಂಸೃತಿಯ ಬನ್ನವೆ ಕಳಕೊಂಡು ಚನ್ನಾಗಿ ಜಗದಿ ಧನ್ಯರಾದೇವೆಂದು ಮನ್ನಾದಿ ಬಯಸೆ ಅನ್ಯಾರಂದದಲಿ ನೀ ನಮ್ಮನ್ನ ನೋಡುವರೆ2 ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀನು ಕರವಶ ಮಾಡಿಪ್ಪೆ ಪರವೇನೆ ನಿನಗೆ ಪರಮೇಷ್ಠಿ ಮೊದಲಾದಮರರ ನೀ ಪೊರೆವೆ ಸಿರಿ ವಾಸುದೇವವಿಠಲನ್ನ ತೋರಮ್ಮ 3
--------------
ವ್ಯಾಸತತ್ವಜ್ಞದಾಸರು
ವಾಯುದೇವರು ಆನಂದ ಸಾಧನ ತಿಳಿ ಕಂಡ್ಯಾ ಮನವೆ ಪ ಶಕುತಿಯು ಇದ್ದಷ್ಟು ತಿಳಿದು ಮತವು ಬಲು ಯುಕುತಿಯಿಂದಲಿ ನೀ ಒಲಿಸು ಕಂಡ್ಯ ಭಕುತಿಯು ಗುರುಗಳ ಪದದಲಿ ಮಾಡಲು ಮುಕುತಿಯು ಕರವಶವಾಗುವದೊ ಸಿದ್ಧ 1 ತಿಳಿಯದಿದ್ದರೆ ನೀನು ತಿಳಿದವರ ಬಳಿಯಲ್ಲಿ ಮಿಳಿತನಾಗಿ ಪೋಗಿ ತಿಳಿದುಕೊಳ್ಳೊ ಖಳಜನ ಸಹವಾಸ ಕುಮತಗಳಭ್ಯಾಸ ಒಳಿತಲ್ಲವೊ ನಿನಗೆಂದಿಗನ್ನ 2 ಪ್ರವಚನ ಮಾಡುವ ಬುಧಜನ ಪೇಳುವ ಸುವಚನ ಕೇಳಿ ನೀ ಬದುಕು ಕಂಡ್ಯಾ ಭವ ಛಳಿ ಬಾಧಿಗೆ ಪ್ರವಚನ ಬಾಹೋದೆಂದಿಗನ್ನ3 ಇದ್ದವರಿಗೆ ಕೊಟ್ಟು ಅವರ ಹಿಂದೆ ಇಷ್ಟು ಮೆದ್ದರೆ ಕೋಟಿ ಭೋಜನದ ಪುಣ್ಯ ಗೆದ್ದರು ಇವರನ್ನ ನಂಬಿದ ಜನರು ಬಿದ್ದರು ದೂಷಕ ಜನ ತಮದಿ 4 ಕಾಸುವೀಸಕೆ ನೀನು ಮೋಸಗೊಳಲು ಬ್ಯಾಡ ತಾಸು ಘಳಿಗೆ ನೆಚ್ಚಲು ಬೇಡ ಏಸೇಸು ಸುಕೃತದಿ ದೊರಕಿತು ಈ ಮತ ವಾಸುದೇವವಿಠಲನ್ನ ಪಾಡೊ 5
--------------
ವ್ಯಾಸತತ್ವಜ್ಞದಾಸರು
ಸಿರಿದೇವಿ ಹರಿಯ ದಯವು | ಆವಾವ ಪರಿ ಪಾಲಿಸೆ ಪ ಆಲದೆಲೆಯಲಿ ಅಂದು | ನಿನ್ನಯ ಮ್ಯಾಲೆ ಮಲಗಿಪ್ಪ ಹರಿಯ ತೋಳು ಬಿಗಿದಾಲಂಗಿಸಿ | ಸೃಷ್ಟಿಯ ಲೀಲೆಯನು ಮಾಡಿಸಿದ ತಾಯೆ 1 ವಕ್ಷವಾಲಯವ ಮಾಡಿದೆ | ಆವಾಗ ದಕ್ಷಣಾದೇವ್ಯೆನಿಸಿದೆ ಲಕ್ಷ್ಯವಿಲ್ಲದೆ ಭಾಗ್ಯವ | ಭಕ್ತರಿಗೆ ವೀಕ್ಷೆಯಿಂದಲ್ಲಿ ಈವೆ 2 ದೇವತಾಜನ ಸ್ತುತಿಸೆ | ನೀ ಎನ್ನ ಭಾವ ಹರಿಯಲಿ ನಿಲ್ಲಿಸೆ ಕಾವ ಭಾರವು ನಿನ್ನದೆ | ಶ್ರೀ ವಾಸು ದೇವವಿಠಲನ್ನ ರಾಣಿ 3
--------------
ವ್ಯಾಸತತ್ವಜ್ಞದಾಸರು