ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ಎಲ್ಲ ಆಳ್ವಾರರು ಆಳ್ವಾರ್ ತಿರುವಡಿಗಳೆ ಶರಣೆನ್ನುತ ಬಾಳ್ವರು ಭಜಿಪುದು ಬಕುತಿಯಲಿ ಪ ಕೇಳ್ವರು ಕಥೆಗಳ ಮಮತೆಯಿಂದಲಿ ಮಾಳ್ವರು ಮನೆ ವೈಕುಂಠದಲಿ ಅ.ಪ ಮೊದಲಿನ ಮೂವರು ಮಾಧವನೆನುತ್ತ ಪದುಮನಾಭನೊಡನಾಡಿದರು ಅದುಭುತ ಮಹಿಮಾ ತಿರುಮೊಳಿಶಯ್ಯರ ಮುದದಿಂ ಶಿವ ಕೊಂಡಾಡಿದನು 1 ಮಧುರಕವಿಗಳು ನಮ್ಮಾಳ್ವಾರರ ಪದಗಳ ಪೂಜಿಸಿ ಹಾಡಿದರು ತದುಪರಿ ತಿರುವಾಯ್ಮೊಳಿಯನು ಅವರಿಂ ದಧಿಕರಿಸುತ ಹಿತವೆಸಗಿದರು 2 ಪೆರಿಯಾಳ್ವಾರರು ಹರಿಯನು ಪಾಡುತ ವರವೇದಕೆ ತಾವ್ ಮೊದಲಿಗರು ಪರಮಪಾವನೆ ಗೋದಾದೇವಿಯು ದೊರೆ ಶ್ರೀರಂಗನ ಕೈವಿಡಿದಳ್ 3 ಪೆರಿಯ ತಿರುಮೊಳಿಯ ತಿರುಮಂಗೈಯ್ಯರು ತಿರುಪ್ಪಾಣ ವಿಪ್ರನಾರಾಯಣ ತಿರುವನಂತಪುರದ ಕುಲಶೇಖರರು ಸಿರಿಯರಸನ ತೇರ ಮಾಡಿದರು 4 ಪರಮಾತ್ಮನ ಸನ್ನಿಧಿಯಿಂದಲ್ಲಿಗೆ ತೆರಳುತ ಮಹಿಮೆಯ ತೋರಿದರು ನಿರುತ ದೇವರೆಡೆ ಪೂಜೆಗೊಂಬರು ವರಜಾಜೀಶನ ಸೇವಕರು 5
--------------
ಶಾಮಶರ್ಮರು
ಈ ಉಪಾಯವು ತೋರಿ ಕೊಡುವೆನು ಪ ಉದಯದಲಿ ಎದ್ದೀಗ ಊರ ವಾರ್ತಿಯ ಬಿಟ್ಟು ಮುದದಿಂದ ವೃಂದಾವನ ಸೇವಿಸಿ ವದನದಲಿ ಶ್ರೀ ಹರಿಯನಾಮ ಗುಣಕಥೆಗಳನು ಪದೋಪದಿಗೆ ಪಾಡಿ ಕೊಂಡಾಡು ನಲಿದಾಡು 1 ಆಮೇಲೆ ದೇವರೆಡೆ ರಂಗವಾಲಿಯನಿಕ್ಕಿ ಕಾಮುಕನಾಗದಲೆ ಸ್ನಾನ ಸಂಧ್ಯಾ ನೇಮ ನಿತ್ಯವ ಮುಗಿಸಿ ದೇವತಾ ಪೂಜೆಗೈದು ಪ್ರೇಮದಿಂದಲಿ ದಾನ ಕರದಲ್ಲಿ ಮಾಡೊ 2 ಮಂಗಳ ಮೂರುತಿಯ ಅಂತರಂಗದಿ ನಿಲಿಸಿ ಶೃಂಗಾರದುಡಿಗೆ ಇಡಿಗಿಯನು ತೊಡಿಸಿ ಮಂಗಳಾರುತಿ ಬೆಳಗಿ ಮನದಲ್ಲಿ ನಲಿನಲಿದು ಕಂಗಳಿಂದಲಿ ನೋಡು ಹರಿಯ ಕೂಡಾಡು 3 ಮೂಲ ಗುಣ ಅವತಾರ ಮಹಿಮೆ ಮಹ ಉನ್ನತ ಲೀಲೆ ವಿನೋದ ಅತಿ ಆಶ್ಚರ್ಯವ ವ್ಯಾಳವ್ಯಾಳೆಗೆ ಪೋಗಿ ಉತ್ತಮ ಜ್ಞಾನಿಗಳಿಂದ ಕೇಳು ಕರ್ಣದಲಿ ಪರಮ ಹರುಷದಲೆ4 ಹರಿಚರಣಕ್ಕೇರಿಸಿದ ಶಿರಿ ತುಲಸಿ ಚಂಪಕ ವರ ಜಾಜಿ ಮಲ್ಲೆ ಮಲ್ಲಿಗೆ ಕ್ಯಾದಿಗೆ ಪರಿಪರಿ ಗಂಧ ಚಂದನ ದಿವ್ಯ ಪರಿಮಳ ಸರಕು ನಾಶಿಕದಲ್ಲಿ ಕೊಳ್ಳು ಸುಖ ಬಾಳು 5 ಅಶಿವರುಣ ಮಧ್ಯ ತ್ರಿವೇಣಿ ವಿಷ್ಣುಪಾದ ಎಸೆÀವ ಕುರುಕ್ಷೇತ್ರ ಅಯೋಧ್ಯ ಮಾಯಾ ವೃಷಭ ಗಿರಿ ಶ್ರೀರಂಗ ಕಂಚಿ ಮೊದಲಾಗ್ಯುಳ್ಳ ಹೆಸರಾದ ಪುಣ್ಯನಿಧಿ ಮಟ್ಟು ದುರಿತವ ಕುಟ್ಟು 6 ಬೇಸರದಲೀಪರಿಚರಿಸಿದರೆ ಜನನಾದಿ ನಾಶನವÀ ಮಾಡಿ ನಾರದವರದನು ದಾಸ ಪುರಂದರಗೆ ವೊಲಿದಂತೆ ವಿಜಯವಿಠ್ಠ ಲೇಶ ವೆಂಕಟ ನಿನಗೆ ಪರಮ ಪದವೀಯನೀವ 7
--------------
ವಿಜಯದಾಸ