ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಧವ ಸರ್ವೇಶ ಗೋವಿಂದಗೆಲಿಸೆಂದು ಕೋಲಸರ್ವೇಶ ಗೋವಿಂದಗೆಲಿಸೆಂದು ವಿಷ್ಣುವಿನ ಸೋಸಿಲೆ ಮೊದಲೆ ಬಲಗೊಂಬೆ ಕೋಲ 1 ಮಧುಸೂದನ ತ್ರಿವಿಕ್ರಮ ವಿಧಿಪಿತ ವಾಮನ ಸುದತೆ ಶ್ರೀಧರ ಋಷಿಕೇಶ ಕೋಲಸುದತೆ ಶ್ರೀಧರ ಋಷಿಕೇಶನ ನೆನೆದರೆ ಹದಕಾನೆ ವರವ ಕೊಡುವೊನು ಕೋಲ 2 ಪದ್ಮನಾಭ ದಾಮೋದರ ಮುದ್ದು ಸಂಕರ್ಷಣವಸುದೇವ ನಮ್ಮ ಗೆಲಿಸೆಂದು ಕೋಲವಸುದೇವನಮ್ಮ ಗೆಲಿಸೆಂದು ಪ್ರದ್ಯುಮ್ನಅನಿರುದ್ಧರ ಮೊದಲೆ ಬಲಗೊಂಬೆ ಕೋಲ 3 ಅಧೋಕ್ಷಜ ಹರುಷಾಗೊ ನಾರಸಿಂಹ ಪುರುಷ ಸೂಕ್ತದಲೆ ಪ್ರತಿಪಾದ್ಯ ಕೋಲಪುರುಷಸೂಕ್ತದಲೆ ಅಚ್ಯುತಹರುಷದಿ ನಮ್ಮ ಗೆಲಿಸೆಂದು ಕೋಲ 4 ಪಾದ ನೆನದೆವ ಪಂಥಗೆಲಿಸೆಂದು 5
--------------
ಗಲಗಲಿಅವ್ವನವರು
ರಂಗಪ್ಪ ಬಂದವ್ನೆ ಬಾಗ್ಲಲ್ಲಿ ನಿಂತವ್ನೆ ಸಿಂಗಾರದಿಂದವ್ನೇ ತೆಂಗಿನಕಾಯ್ಬಾಳೆಹಣ್ತಂದು ನೋಡಿರೋ ಹೊಂಗೂಳನೊತ್ತವ್ನೇ ಪ ನಾಕ್ಮಳ ನಿಂತವ್ನೆ ನೀರಲ್ಲಿ ನಿಂತವ್ನೆ ನಾಕೈಯಾ ಪಡೆದವ್ನೇ ಇಕ್ಕೆಲದಲಿ ಸಂಕುಚಕ್ರವ ಹಿಡಿದವ್ನೆ ರಾಕ್ಷಸನ್ನ ಮೆಟ್ಟವ್ನೆ1 ಗಟ್ಟಿ ಬೆನ್ನಿನ ಮ್ಯಾಗೆ ಬೆಟ್ಟವ ಹೊತ್ತವ್ನೆ ಗಟ್ಟಿ ಗದೇ ಹಿಡಿದವ್ನೇ ಮಟ್ಟಸವಾದ ನಾಕ್ಕಾಲಲ್ಲಿ ನಿಂತವ್ನೆ ಸಿಟ್ಟಿಲ್ಲ ನಗತವ್ನೇ 2 ಮೊಳದುದ್ದ ಮೂಗ್ಯ್ಮಾಲೆ ಭೂಮಿಯ ಹೊತ್ತವ್ನೇ ಬೆಳಸವ್ನೇ ಕೋರೆಹಲ್ಲಾ ತೊಳಲಿಬಳಲವನಪ್ಪ ನಮ್ಮಪ್ಪ ರಂಗಪ್ಪ ಯೆಳನಗೆ ನಗ್ತಾನೇ 3 ಮೂಡ್ತವ್ನೆ ಕಂಬ್ದಲ್ಲಿ ನರಸಿಮ್ಮನಾಗವ್ನೆ ಹಿಡಿದವ್ನೆ ದೊಡ್ರಾಕ್ಷಸ್ನಾ ದೊಡ್ದುಗ್ರಲೊಟ್ಟೆಯ ಬಗಿತವ್ನೆ ಸಿಗಿತವ್ನೆ ಕೊಡುತೀನ್ವರವನೆಂತಾನೇ 4 ಗಿಡ್ಡ ಹಾರುವನಂತೆ ಮೂರೆಜ್ಜೆ ಭೂಮಿಯನಡ್ಡಡ್ಡ ಅಳೆದವ್ನೆ ಪಾಡ್ಯದ ಹಬ್ದಲ್ಲಿ ಬಲಿಯ ಕರೆತರುತಾನೆ ಬೇಡಿದ್ದ ಕೊಡುತಾನೇ 5 ಜಯ ಜಯ ಜಯವೆಂತಾನೇ ಕೈಯಲ್ಲಿ ಹಿಡಿದವ್ನೆ ಗಂಡುಗೊಲ್ಲಿಯ ನೋಡೋ ಭಯವಿಲ್ಲ ಕೈಮುಗಿಯೋ 6 ಶಿವನ ಬಿಲ್ಮುರಿದವ್ನೆ ರಾವಣನ ತರಿದವ್ನೆ ಭೂಮಿಯೆಲ್ಲವಾಳ್ತವ್ನೆ ತವಕದಿ ನೋಡಿರೆಲ್ಲಾ 7 ಮಡುವಿಗೆ ಧುಮುಕಿ ಕಾಳಿಂಗನ ತುಳಿದವ್ನೆ ಹಿಡಿದವ್ನೆ ಹೊಂಗೊಳಲಾ ಮಾನವ ಕಡುರೂಪವಂತ ನಮ್ಮ 8 ಮತ್ತರ ಮಡದೀರ ವ್ರತವನು ಕೆಡಿಸಲು ಬೆತ್ತಲೆ ನಿಂತವ್ನೇ ಕೃತ್ತಿವಾಸನ ಕೈಯ್ಯೊಳಿಂಬಾಗಿ ನಿಂದವ್ನೆ ಉತ್ತಮ ದೇವನಮ್ಮ 9 ದುರುಳರನೊದೆಯಾಕೆ ಹೊಂಟವ್ನೇ ಪದಕಮಲಕೆ ಯೆರಗೋ 10 ಮುದ್ದು ರಂಗಪ್ಪನಿಗೆ ಪೊಂಗಲು ನೇವೇದ್ಯ ಸಿದ್ಧ ಮಾಡಿರಯ್ಯಾ ಬದ್ಧವು ಅವ ನಮ್ಮ ಕಾಯೋದು ಸಟೆಯಲ್ಲ ಎದ್ದೆದ್ದು ತಲೆಬಾಗಿರೊ 11 ರಾಮನು ಅವನೇ ಕಾಮನಪ್ಪನು ನಿಸ್ಸೀಮ ನಮ್ಮ ರಂಗನೇ ರಾಮದಾಸನ ಮನದೊಳು ಮನೆ ಮಾಡ್ಯವ್ನೇ ಪಾಮರ ವರದನೆಂಬ ಮಾಂಗಿರಿ 12
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನಾಯಿತು ರಂಗನೆ ನೋಡಿರಮ್ಮ-ನಿ-|ಧಾನಿಸಿ ಎನಗೊಂದು ಪೇಳಿರಮ್ಮ ಪಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ-ತಾನು |ಎಷ್ಟಾದರೂ ಮೊಲೆಯುಣ್ಣನಮ್ಮ ||ಸೊಟ್ಟಾದ ಮುಖ ಮೇಲಕ್ಕೆತ್ತನಮ್ಮ-ಹೀಗೆ |ಎಷ್ಟು ಹೇಳಲಿ ಬಾಯ ಮುಚ್ಚನಮ್ಮ 1ಕಾಯಇದ್ದಂತಿದ್ದು ಹೆಚ್ಚಿತಮ್ಮ-ಹೆತ್ತ |ತಾಯಿಯ ಬಲವಿಲ್ಲದಾಯಿತಮ್ಮ ||ನೋಯೆ ನೋಟಕೆಅಬ್ಧಿಬತ್ತಿತಮ್ಮ-ಅವನ |ಬಾಯಿಯೊಳಗೆವಿಶ್ವತೋರಿತಮ್ಮ2ಅತ್ಯಂತ ಮಾತುಗಳನಾಡಿದನಮ್ಮ-ಮುಂದೆ |ಸತ್ಯವು ಕುದುರೆಯನೇರುವನಮ್ಮ ||ನಿತ್ಯನಿರ್ದೋಷಪುರಂದರವಿಠಲ ತನ್ನ-|ಭಕ್ತರ ಸಲಹುವದೇವನಮ್ಮ 3
--------------
ಪುರಂದರದಾಸರು