ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಪ ಕಳ್ಳರಿಗೆ ಕಳ್ಳನಂತೆ - ಬೆಳ್ಳಕ್ಕಿಯಂದದಿ ಡಂಭಅ ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನುಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ1 ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡುಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯಾ 2 ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆಹೊಕ್ಕುಳ ಹೂವಿನ ಬಾಡದಾದಿಕೇಶವನ ಮೊರೆಹೊಕ್ಕೆನಿಂದು ಮನ್ನಿಸಿ ಕಾಯೋ ದೇವದೇವೋತ್ತಮನೆ 3
--------------
ಕನಕದಾಸ
ಕೈವಲ್ಯಪತಿ ವಿಠಲ | ಇವಳ ನೀ ಸಲಹೋ ಪ ದೇವದೇವೊತ್ಮತವ | ದಾಸ್ಯಕಾಂಕ್ಷಿಪಳಾ ಅ.ಪ. ಗುರುಗಳೊಂದಗೆ ಯಾತ್ರೆ | ಭರದಿ ಸ್ವಪ್ನದಿಗೈದು |ಮರಳಿ ಕೊಲ್ಹಾಪುರದ | ಶಿರಿರಮೆಯ ಕಂಡೂ |ಮರುತ ದರ್ಶನದಿಂದ | ವರಸು ಉಪದೇಶಕ್ಕೆತರುಣಿ ಶುದ್ಧಳು ಇಹಳು | ಉರಗಾದ್ರಿವಾಸಾ 1 ತೈಜಸನು ನೀನಾಗಿ ನೈಜದಂಕಿತ ಪ್ರಾಪ್ತಿಮಾಜದಲೆ ಸೂಚಿಸಿಹೆ | ಭ್ರಾಜಿಷ್ಣು ಮೂರ್ತೇ|ಯೋಜಿಸಿದೆ ಅದಕಾಗಿ | ತರಳೆಗಂಕಿತವನ್ನುರಾಜಿಸೋ ಮನದಿ ತವ | ನೈಜರೂಪವನೂ 2 ತರತಮದ ಸುಜ್ಞಾನ | ಹರಿಗುರೂ ಸದ್ಭಕ್ತಿಮರುತ ಮತ ದೀಕ್ಷೆಯನು | ಪರಮ ವೈರಾಗ್ಯಕರುಣಿಸುತ ಸಂಸಾರ ಶರಧಿಯನೆ ದಾಂಟಿಸೊಅರವಿದೂರನೆ ಹರಿಯೆ | ಪ್ರಾರ್ಥಿಸುವೆ ನಿನ್ನಾ 3 ಕರ್ಮ ನಿಷ್ಕಾಮದಲಿ | ಪೇರ್ಮೆಯಲಿ ಚರಿಪಂತೆಭರ್ಮಗರ್ಭನ ಪಿತನೆ | ಸನ್ಮನವನಿತ್ತೂ |ನಿರ್ಮಮತೆ ನೀಡಿ | ಕರ್ಮನಿರ್ಲೇಪದಲಿಹಮ್ರ್ಯ ವೈಕುಂಠವನು | ಗಮಿಪ ತೆರಮಾಡೋ 4 ಭಾವುಕರ ಪರಿಪಾಲ | ಭೂವೈಕುಂಠಲೋಲದೇವದೇವೋತ್ತಮನೆ | ಗೋವಿಂದ ಮೂರ್ತೇ |ನೀ ವೊಲಿಯದಿಲ್ಲ ಗುರು | ಗೋವಿಂದ ವಿಠ್ಠಲನೆಸೇವಕಳ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 5
--------------
ಗುರುಗೋವಿಂದವಿಠಲರು
ಪುಂಡರೀಕ ವರದ ವಿಠಲ | ಪೊರೆಯಿವನಾ ಪ ತೊಂಡ ವತ್ಸಲನೆ ಬ್ರಂ | ಹ್ಮಾಂಡಗಳ ಒಡೆಯಾ ಅ.ಪ. ಅನುವಂಶಿಕವಾಗಿ | ಆಧ್ಯಾತ್ಮ ಪರಿನಿಷ್ಠಧಾನವಾಂತಕ ಕೃಷ್ಣ | ಧೀನವತ್ಸಲನೇ |ನೀನೇಗತಿ ಎಂದೆಂಬ | ಸ್ವಾನುಭಾವದಿಇವಗೆಮಾನನಿಧಿ ತವದಾಸ್ಯ | ಧಾನಮಾಡುವುದೋ 1 ಪವನವಂದಿತದೇವ | ಕವನಶಕ್ತಿಯು ಇವಗೆದಿವಸದಿವಸಕ್ಕೆ ವೃದ್ಧಿ | ಭಾವವನೆ ಪೊಂದೀ |ಧೃವವರದ ನಿನ್ನಂಘ್ರಿ | ಸ್ತವನಮಾಳ್ವಂತೆಸಗಿಭವವನಿಧಿ ಉತ್ತರಿಸೊ | ಶರ್ವದೇವೇಡ್ಯಾ 2 ಮಧ್ವಮತ ದೀಕ್ಷೆಯಲಿ | ಶ್ರದ್ಧಾಳು ಎಂದೆನಿಸಿಸಿದ್ದಾಂತ ಪದ್ಧತಿಯ | ಶುದ್ಧಮತಿಯಿತ್ತೂಅಧ್ವೈತತ್ರಯ ತಿಳಿಸಿ | ಉದ್ದಾರ ಗೈಯುವುದೂಕೃದ್ಧಕಶ ಸಂಹಾರಿ | ಮಧ್ವವಲ್ಲಭನೇ 3 ಕರ್ಮ ಅಕರ್ಮಗಳ | ಮರ್ಮಗಳ ತಿಳಿಸುತ್ತನಿರ್ಮಲನು ಎಂದೆನಿಸೊ | ಪೇರ್ಮೆಯಲಿ ಇವನಾ |ಭರ್ಮಗರ್ಭನನಯ್ಯ | ನಿರ್ಮಮತೆ ವೃದ್ಧಿಸುತಪ್ರಮ್ಮೆಯಂಗಳ ತಿಳಿಸಿ | ಹಮ್ರ್ಯದೊಳು ತೋರೀ 4 ಭಾವಙ್ಞ ತೈಜಸನೆ | ನೀವೊಲಿದು ಪೇಳ್ದಂತೆಭಾವುಕಗೆ ಇತ್ತಿಪೆನೊ | ಈ ವಿಧಾಂಕಿತವಾ |ನೀವೊಲಿಯದಿನ್ನಿಲ್ಲ | ದೇವದೇವೋತ್ತಮನೆಕಾವಕರುಣೆಯೆಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು