ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಖ) ಶತಸ್ಥಮರುತುಗಳು ಮರುತಗಳ ನಾಮವನು ಉದಯದಲಿಯೆದ್ದು | ದುರಿತ ಪರಿಹಾರವಾಗುವುದು ಪ ಪ್ರಾಣ ಅಪಾನನು ವ್ಯಾನ ಉದಾನ ಸ | ಮಾನ ಮತ್ತೆ ನಾಗ ಕೈಕಲಕೂರ್ಮ || ಏನೆಂಬೆ ದೇವದತ್ತನು ಧನಂಜಯ ಪ್ರವಾ | ಹನನು ವಿವಹ ಸಂಯಾ ಸಂವಾಹನೆಂದು 1 ಶೀಲ ಪರಾವಹ ಉದ್ವಹ ವಾಹಶಂಕು | ಕಾಲ ಶ್ವಾಸ ಅನಳ ಅನಿಲಪ್ರತಿಯೂ || ಬಾಲ ಕುಮುದಾಕಾಂತ ಶುಚಿಶ್ವೇತ ಅಜಿತಗುರು | ಮೇಲಾಗಿ ಸಂಸಾರ ಪ್ರವರ್ತಕ ಕಿಲರನ್ನ 2 ತರುವಾಯ ಅಜಿತ ಸಂಯನು ಕಪಿ ಜಡದೇವ | ಮರಳೆ ಮಂಡುಕ ಸತತ ಸಿದ್ಧ ರಕ್ತಾ || ಸರಸ ಕೃಷ್ಣ ಪಿಕಶುಕ ಯತಿ ಭೀಮಹನು | ಮರಿಯದಲೆ ಪಿಂಗ ಅಹಂಪ್ರಾಣ ಕಂಪನ 3 ಇವರ ಸಹಿತವಾಗಿ ಸೂತ್ರನಾಮಕ ಮೂಲ | ಪವಮಾನನೊಡನೆ ಗಣಣೆಯನು ಮಾಡಿ || ತವಕದಿಂದಲಿ ತಾರತಮ್ಯವನೆ ತಿಳಿದು | ನಿತ್ಯ 4 ಇವನೆ ಪಠಿಸಿದರೆ ಜನ್ಮ ಜನುಮದ ಪಾಪ | ಉದರಿ ಪೋಗುವದು ಲೇಶ ಉಳಿಯದೆ || ಪಮಮನಾಭ ನಮ್ಮ ವಿಜಯವಿಠ್ಠಲರೇಯನ | ಪದವ ಭಜಿಸುವದಕ್ಕೆ ಙÁ್ಞನವೇ ಪುಟ್ಟವದು 5
--------------
ವಿಜಯದಾಸ
ಪರಲೋಕವಿಲ್ಲೆಂಬೊ ಪರಮ ಪಾಪಿಗಳಿಗೆ ನರಲೋಕವೇ ನರಕವಣ್ಣ ಪ ಪರಲೋಕವಿಹುದೆಂದು ಗುರುಕರುಣವನು ಪಡೆದ ಕುರುಬನದ ಅರಿತನಣ್ಣ ಅ.ಪ ಈಶ ಜಡ ಜೀವರೆಂಬುವ ಭಿನ್ನ ತತ್ವಗಳು ಈಶನೊಬ್ಬನೆ ಕರ್ತನಣ್ಣ ಸಾಸಿರದಿ ಆಸೆ ಭಂಗಗಳ ಪೊಂದುತಲಿರಲು ಮೀಸೆಯನೇತಕೆ ತಿರುವಬೇಕಣ್ಣ 1 ಹರಿಯು ಪರನಲ್ಲದಿದ್ದರೆ ಸರ್ವಭುವನಗಳು ಹರಿಯಧೀನದಲಿರುವುದೇಕೆ ಹರಿಯಧೀನಲಿಲ್ಲದಿದ್ದರೀ ಜಗದೊಳಗೆ ಕೊರತೆಯೇತಕೆ ಮಂದಿಗಳಿಗೆ 2 ದೇವದತ್ತನು ಧನಿಕ ಪ್ರೇತದತ್ತನು ಬಡವ ಯಾವ ಕಾರಣ ವಿಷಮಗತಿಗೆ ಸಾವು ನೋವುಗಳ ಪ್ರತಿಕ್ಷಣಗಳಲಿ ನೋಡಿ ದೊರೆ ಭಾವವಿರುವುದು ನ್ಯಾಯವೇ 3 ಈಶನಿಲ್ಲೆಂಬುವರು ಹೇಸಲಾರರು ಪಾಪ ರಾಶಿ ರಾಶಿಯ ಗಳಿಸಲು ಆಶೆಬಡುಕರ ಜಗವ ನಾಶಮಾಡಲು ರಾಜ ಶಾಸನಕೆ ಬುಡವೆಲ್ಲಿಯಣ್ಣ 4 ಇಂದು ಇದನು ಪಡೆಯುವೆ ಮುಂದೆ ಅಧಿಕ ಧನವನು ಗಳಿಸುವೆ ಸದೆ ಬಡಿಯುವೆನು ಪರರನೆಂಬ ನುಡಿ ತಮಗುಣದ ಬೆದೆಯಲಿರುವನು ನುಡಿವನು 5 ಎಲ್ಲಿಂದ ಬಂದೆ ಹೋಗುವುದೆಲ್ಲಿಗೆಂಬುದನು ಬಲ್ಲವಗೆ ಮುಕುತಿ ಇಲ್ಲೇ ಒಳ್ಳೆ ಮನವನು ಪಡೆದು ಬಲ್ಲವರ ಸೇವೆಯಿಂ ದೆಲ್ಲವನು ತಿಳಿಯಲಳವಣ್ಣ 6 ಕಾಯವಾಚಾಮನಸದಿ ತಪವಗೈಯುತ ಶುದ್ಧ ಭಾವವನು ಗಳಿಸಿರಣ್ಣ ದೇವಗುರು ಪ್ರಾಜ್ಞ ಪೂಜನ ಲಾಭವಿದು ವಿನಯ ಭಾವಕೆ ಪ್ರಸನ್ನರಿವರು 7
--------------
ವಿದ್ಯಾಪ್ರಸನ್ನತೀರ್ಥರು