ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ಧನ್ಯನಾದೆನಿಂದು | ಸತ್ಯ | ಬೋಧರಾಯರ ದಿವ್ಯ | ಪಾದಕಮಲವ ಕಂಡು ಪ ಹಿಂಗಿದವಖಿಳದೋಷಂಗಳು ಸನ್ಮುನಿಗಳವ ರಂಘ್ರಿ ಸಂದರುಶನದೀ ಗಂಗಾದಿತೀರ್ಥ ಭುಜಂಗಾದಿ ಮೊದಲಾದ ತುಂಗ ತೀರ್ಥಯಾತ್ರೆ ಫಲ ಸಮನಿಸಿತು1 ಆವ ಮುನಿಗಳೋ ಮತ್ತಾವ ದೇವತೆಗಳೋ ಆವಾವಬಲ್ಲ ಮತ್ತಾವಾಗಲೂ ಸೇವಿಸುವರ ಕೃಪಾವಲೋಕನದಿಂದ ಪಾವನ ಮಾಡಲು ಕೋವಿದಾರ್ಯರ ಕಂಡು 2 ಸೀತಾರಮಣ ಜಗನ್ನಾಥ ವಿಠ್ಠಲರೇಯಾ ಭೂತಳದೊಳಗೀ ಮಹಾತ್ಮರನಾ ಪ್ರೀತಿಯಂ ಸೃಜಿಸಿದನಾಥ ಜನರನ ಪು ನೀತರ ಮಾಡಲು ಆತ ತಕ್ಷಣದಿ 3
--------------
ಜಗನ್ನಾಥದಾಸರು
ವೃಂದಾವನಕೈತಂದನು ಆ-ನಂದದಿಂ ಕ್ಷೀರಾಬ್ಧಿಯಿಂದ ಶ್ರೀಕೃಷ್ಣನು ಪ ತೆತ್ತೀಸರೂಪಿ ದೇವತೆಗಳೋಲೈಸಲುಮುತ್ತಿನ ಚಾಮರಗಳನಿಕ್ಕಲುಮುತ್ತೈದೆಯರೆಲ್ಲಾ ಧವಳವ ಪಾಡಲುಅರ್ಥಿಯಿಂದಿಂದಿರೆ ಸಹಿತ ಶ್ರೀಕೃಷ್ಣನು 1 ದ್ವಾರಾವತಿಯಿದ್ದು ಕ್ಷೀರಸಾಗರವಿದ್ದುಸಾರತರ ಶ್ವೇತದ್ವೀಪವಿರ್ದುಶ್ರೀ ವೃಂದಾವನ ಸುಖಮಂದಿರವೆನುತಲಿಕ್ಷೀರಸಾಗರವಾಸಿಯಾದ ಶ್ರೀಕೃಷ್ಣನು 2 ನಂದಗೋಕುಲವಿದ್ದು ಮಂದರಗಿರಿಯಿದ್ದುಚಂದವಾದ ವೈಕುಂಠಲೋಕವಿದ್ದುವೃಂದಾವನಪತಿಸುಖ ಗೃಹವೆನುತಲಿಇಂದಿರಾದೇವಿಯಿಂ ಸಹಿತ ಶ್ರೀಕೃಷ್ಣನು3 ಸುರದುಂದುಭಿ ದಂಧಣರೆಂದು ಮೊಳಗಲುಸುರರು ಹೂವಿನ ಮಳೆಯನು ಕರೆಯತರುಣ ತುಲಸಿಮಾಲೆಯಲುಗಲಿಂದಿರೆ ಸಹಗರುಡನ ಹೆಗಲಿನಿಂದಿಳಿದು ಶ್ರೀಕೃಷ್ಣನು4 ಉರದ ಕೌಸ್ತುಭರತ್ನ ಥಳಥಳಥಳಿಸಲುಕೊರಳ ವೈಜಯಂತಿಯ ಸರವಲುಗೆಸರಸಿಜ ಭವಮುಖ್ಯ ಸುರರೋಲೈಸಲುಪರಮ ಸಂಭ್ರಮದಿಂದ ಶ್ರೀಕೃಷ್ಣರಾಯನು5
--------------
ಕೆಳದಿ ವೆಂಕಣ್ಣ ಕವಿ