ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭ ಮಂಗಲಂ ಮಂಗಲಂ ಮಾರುತಿಯ ಪೆಗಲೇರಿ ಬರುವನಿಗೆ ಪ. ಮಂಗಲಂ ಮಾರೀಚ ವೈರಿಹರಿಗೆ ಮಂಗಲಂ ಸೀರಜಾ ಮುಖಪದ್ಮ ಭೃಂಗನಿಗೆ ಮಂಗಲಂ ವೀರ ರಾಘವ ದೇವಗೆ ಅ.ಪ. ರಾವಣಾದಿಗಳಿಂದ ಲಾಹವದಿ ಬಹು ನೊಂದ ದೇವತೆಗಳನು ಬೇಗ ಕಾವೆನೆಂದು ತಾ ಒಲಿದು ಕೌಸಲ್ಯದೇವಿ ಗರ್ಭದಿ ಬಂದು ಸಾವಧಾನದಿ ಸಕಲ ಸಜ್ಜನರ ಸಲಹಿದಗೆ 1 ಮಂದಮತಿಗಳೊಳಧಿಕ ತುಂಡಿಲನು ಮಾತ್ಸರ್ಯ ದಿಂದ ಮಾಡಿರುವ ಪ್ರತಿ ಬಂಧಕವನು ಇಂದಿಲ್ಲಿ ಬರಲು ಸಮಂಧಗೈಸದೆ ದಾಸ ನೆಂದೆನ್ನ ಮೇಲೆ ದಯದಿಂದಲೊಲಿದವಗೆ 2 ಇಂಗಿತಾಭೀಷ್ಟದ ಕುರಂಗ ಮರ್ದನ ರಾಮ ಶೃಂಗರಿಸಿ ಸರ್ವಪರಿವಾರ ಸಹಿತಾ ಮಂಗಲಾರತಿ ಕೊಂಡು ಮಂಗಳವ ಬೆಳೆಸುವ ಭು ಜಂಗ ರಾಜೇಂದ್ರ ಗಿರಿಶೃಂಗನಾಥನಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬರಿದೆ ಮೋಹದೊಳು ಬೆರೆದೆ ನಮ್ಮ ಗುರುವಾದಿರಾಜಾರ್ಯ ಚರಣಗಳ ಮರೆದೆ ಪ. ಸರ್ವಜ್ಞಗುರುಮತವ ನಿರ್ವಹಿಸಿ ಮಾಯಿಗಳ ಗಣಪತಿಶಕ್ತಿ ಪೂರ್ವದೇವತೆಗಳನು ಸರ್ವ ಪರರೆಂದೊರೆವ ದುರ್ವಾದಿಗಳ ಭಂಗಿಸಿ ಹಯವದನ- ಪರ ದೈವವೆನಿಸಿ ಮೆರೆವಂಥ ಪಾರ್ವತೀವರವಂದ್ಯಪದ ಪಾತ್ರನೆನಿಸದೆ 1 ಅಂತರ್ಬಹಿಃಶತ್ರು ಸಂತತಿಯ ಗೆಲುವ ತೋರಿಸುವ ಚಂತಿತಾಭೀಷ್ಟಗಳ ಪರಮಾಂತರಂಗದಿ ಕೊಡುವ ಕಂತುಕೃತ ಬಾಧೆಯನ್ನು ನಿಲದಂತೆ ಸಂತೈಸಿಸುವರನ್ನು ಕಾವ ಕ- ಲ್ಪಾಂತದಲಿ ಪವಮಾನನಾಗುವನ ಮರೆದೆ 2 ಮೂರಾರು ಎಂಬತ್ತು ಭಾರಿ ಕಲ್ಪಗಳಲ್ಲಿ ಶ್ರೀ ರಮಾರಮಣಪದ ವಾರಿಜಗಳನು ಭಜಿಸಿ ತೋರಿ ವೈಷ್ಣವ ತತ್ವ ಸಾರವನು ಸಮಧರಿಸಿ ಮಾರುತನ ಮತವೆ ಮಧುವೈರಿಪ್ರಿಯಕರವೆನಿಸಿ ಧೀರ ಕವಿ ಶುಭಕರವಜ್ಞಾನ ಸುಖ ಸಾರ ವೆಂಕಟಪತಿಯ ಮನದಿ ಧರಿಸಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬೇಡಲೇತಕೆ ಪರರ ದೇಹಿಯೆಂದು ಪ ನೀಡುವಾ ಧೊರೆ ಎನಗೆ ನೀನಿರಲು ಸರ್ವದಾ ಅ.ಪ. ಗ್ರಾಸವನು ಬೇಡೆ ದೂರ್ವಾಸ ಮುನಿಗಂದನ್ನ ಅನಾ ಯಾಸದಿಂ ತತ್ಕಾಲದಲಿ ಕಲ್ಪಿಸಿ ಆ ಸಂಯಮಿಗೆ ಉಣಿಸಿ ದಣಿಸಿದ ಮಹಾ ದಾತಾ ದಾಶರಥೆ ನಿನ್ನ ಬಿಟ್ಟನ್ಯ ದೇವತೆಗಳನು 1 ಖಳ ದುಶ್ಯಾಸನನು ದ್ರೌಪದಿಯ ಸಭೆಯೊಳು ದು ಕೂಲವನು ಸೆಳೆಯೆ ದ್ವಾರಕ ಮಂದಿರಾ ಶ್ರೀ ಲೋಲ ಶ್ರೀ ಕೃಷ್ಣ ಕರುಣಿಸು ಕರುಣಿಸೆನೆ ಪಾಂ ಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ 2 ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ ಬಡತನವ ಕಳೆದೆ ಒಪ್ಪಿಡಿಯವಲಿಗೆ ಪೊಡವಿಯನ್ನಾಳಿಸಿದೆ ಕ್ರಿಮಿಗೊಲಿದು ಕಾರುಣ್ಯದಲ್ಲಿ ಮೃಡ ಬಿಡೌಜರೀಪ್ಸಿತ ಕೊಡುವೆ 3 ತಾಪಸೋತ್ತಮ ಮೃಕಂಡಾತೃಜಗೆ ಕಲ್ಪಾಯು ನೀ ಪೂರ್ತಿ ಮಾಡಿ ಅಲ್ಪಾಯು ಕಳೆದು ಆ ಪರ್ವತೇಶ್ವರನ ಪಟ್ಟಣವ ಸಾರ್ದು ಸಾಂ ದೀಪ ತನಯನ ತಂದ ಸರ್ವಾಂತರ್ಯಾಮಿ 4 ವಿಶ್ವ ಜೀವರಿಗನ್ನ ಕಲ್ಪಕನೆ ನೀನಿರಲು ಜ್ಞಾನ ದ್ರವ್ಯ ಅಲ್ಪ ಮಾನವರಿಗಾಲ್ಪರಿರೇನಹುದು ಅಹಿ ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು 5
--------------
ಜಗನ್ನಾಥದಾಸರು
ರಘುವರ್ಯ ಕರಜಾತ ಶ್ರೀ | ರಘೋತ್ತಮ ತೀರ್ಥಾ ಪ ಅಘಹರ ಶ್ರೀ ರಾಮ ಪದ ಭಜಕ ನೇಮಾ ಅ.ಪ. ಪ್ರವಚನಾಚಾರ್ಯರಿಂ | ದವಮಾನ ತಡೆಯದಲೆಸವನ ಮೂರರ ಮೇಲೆ | ಪವಡಿಸಿರೆ ತಾನೂ |ಪವನ ಪಿತ ತೈಜಸನು | ಗುರುವರರ ರೂಪಿನಲಿಪ್ರವಚಿಸೆನೆ ನ್ಯಾಯ ಸುಧೆ | ಪ್ರವಚಿಸಿದ ಮಹಿಮಾ 1 ಪ್ರಮೆಯ ದೀಪಿಕೆ ತತ್ವ | ಅಮಮ ಬೃಹದಾರಣ್ಯಸುಮನ ವ್ಯಾಹರಣೆಯನು | ನೀ ಮಾಡಿ ಮುದದೀ |ಕಮಲನಾಭನ ಮಹಿಮೆ | ಅಮೃತವನು ತೆಗೆಯುತಲಿಸುಮನಸರಿಗುಣಿಸಿದೆಯೋ | ರಾಮ ಪದ ಭಜಕಾ 2 ತತುವನ್ಯಾಸವ ಮಾಡೆ | ತತ್ವ ದೇವತೆಗಳನುತತುತತೂ ರೂಪದಲಿ | ಸತತ ನೋಡುವನೇ |ಕ್ಷಿತಿಪತಿ ಶ್ರೀ ಗುರೂ | ಗೋವಿಂದ ವಿಠ್ಠಲನೆಉತ್ತಮೋತ್ತಮನೆನುತ | ಬಹು ಮೆರೆಸಿದಾತ 3
--------------
ಗುರುಗೋವಿಂದವಿಠಲರು
ಶ್ರೀಪತಿಯ ನೈವೇದ್ಯ ಕೊಡುವದು ಧೂಪದಾಂತರ ಭೂಮಿಶೋಧನ ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ಸೂಪ ಅನ್ನವು ಅಗ್ನಿಕೋಣದಿ ಆ ಪರಮ ಅನ್ನವನು ಈಶಾ ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ 1 ವಾಯುದಿಶದಲಿ ಉಪಸುಭೋಜ್ಯವು ವಾಯಸಾನ್ನದ ಮಧ್ಯ ಘೃತಸಂ ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ಬಾಯಿಯಿಂದಲಿ ದ್ವಾದಶ ಸ್ತುತಿ ಗಾಯನದಿ ನುಡಿಯುತಲಿ ಈ ಕಡೆ ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ 2 ಓದನಕ ಅಭಿಮಾನಿ ಶಶಿಪರ ಮೋದನಕ ಅಭಿಮಾನಿ ಭಾರತಿ ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ಸ್ವಾದುಕ್ಷೀರಕ ವಾಣಿ ಮಂಡಿಗಿ ಲೀ ದ್ರುಹಿಣನವನೀತ ಪವನಾ ದಾದಧಿಗೆ ಶಶಿವರುಣ ಸೂಪಕೆ ಗರುಡ ಅಭಿಮಾನಿ 3 ಶಾಕದಲಿ ಶೇಷಾಮ್ಲ ಗಿರಿಜಾ ನೇಕನಾಮ್ಲದಿ ರುದ್ರಸಿತದಲಿ ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ ಈ ಕಟು ಪದಾರ್ಥದಲಿ ಯಮ ಬಾ ಹ್ಲೀಕ ತಂತುಭದಲ್ಲಿ ಮನ್ಮಥ ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ 4 ಕೂಷುಮಾಂಡದ ಸಂಡಿಗಿಲಿ ಕುಲ ಮಾಷದಲಿ ದಕ್ಷ ಪ್ರಜಾಪತಿ ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ ಈ ಸುಫಲ ಷಡ್ರಸದಿ ಪ್ರಾಣ ವಿ ಶೇಷ ತಾಂಬೂಲದಲಿ ಗಂಗಾ ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ 5 ಸಕಲ ಭಕ್ಷ್ಯಗಳಲ್ಲಿ ಉದಕದಿ ವಿಶ್ವ ಮೂರುತಿ ಮುಖದಲೀ ನುಡಿ ಅಂತಿಲೀ ಶ್ರೀ ಕೃಷ್ಣ ಮೂರುತಿಯ ನಖ ಚತು ಪದಾರ್ಥದಲಿ ಆ ಸ ಮ್ಯಕು ಚತುರವಿಂಶತಿ ಅಭಿಮಾ ನಿಕರ ಚಿಂತಿಸಿ ಸರ್ಪಿ ಸಹ ಶ್ರೀ ತುಳಸಿಯನು ಹಾಕಿ6 ಕ್ಷೀರ ದÀಧಿ ಕರ್ಪೂರ ಸಾಕ ರ್ಜೀರ ಪನಸ ಕಪಿಥ್ಥ ಪಣ್ಕದ ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ ಪೂರ ಶಂಖದಿ ಉದಕ ಓಂ ನಮೊ ನಾರೆಯಣಾ ಅಪ್ಟಾಕ್ಷರವು ತನ ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ7 ಸೌರಭೀ ಮಂತ್ರದಲಿ ಪ್ರೇಕ್ಷಿಸಿ ಮೂರೆರಡು ಮೊದಲಾಗಿ ಶಂಖವು ಅಂತಿಮಾಡಿ ತಥಾ ಪೂರ್ವ ಆಪೋಶನವು ಹೇಳಿ ಅ ಪೂರ್ವ ನೈವೇದ್ಯವು ಸಮರ್ಪಿಸಿ ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ 8 ಪೂಗ ಅರ್ಪಿಸಿದಂತರದಿ ಅತಿ ಬ್ಯಾಗದಲಿ ಲಕ್ಷ್ಯಾದಿ ನೈವೇ ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ ಸಾಗಿಸೀ ಶ್ರೀ ಹರಿಯ ಸಂಪುಟ ದಾಗ ನಿಲ್ಲಿಸಿ ವೈಶ್ವದೇವವು ಸಾಗಿಸೀ ಶ್ರೀ ವಿಜಯವಿಠಲನ ಧೇನಿಸುತ ಮುದದಿ9
--------------
ವಿಜಯದಾಸ