ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ದೇವರ ದೇವ ಶರಣು ಸುರವರ ಮಾನ್ಯ ಶರಣು ಶತಕೋಟಿ ಲಾವಣ್ಯ | ಲಾವಣ್ಯ ಮೂರುತಿಯೆ ಶರಣೆಂಬೆ ಸ್ವಾಮಿ ಕರುಣೀಸೊ 1 ಆದಿನಾರಾಯಣನು ಭೂದೇವಿ ಮೊರೆ ಕೇಳಿ ಯಾದವರ ಕುಲದಲ್ಲಿ ಜನಿಸೀದ | ಜನಿಸೀದ ಕೃಷ್ಣ ಪಾದಕ್ಕೆ ಶರಣೆಂಬೆ ದಯವಾಗೊ 2 ನಿನ್ನ ವಿಸ್ಮøತಿ ದೋಷ ಜನ್ಮ ಜನ್ಮಕ್ಕೆ ಕೊಡದಿರು ಎನ್ನ ಕುಲ ಬಂಧು ಎಂದೆಂದು |ಎಂದೆಂದು ನಿನಗಾನು ಬಿನ್ನೈಪೆ ಬಿಡದೆ ಸಲಹಯ್ಯ 3 ವಸುದೇವನಂದನನ ಹಸುಗೂಸು ಎನಬೇಡಿ ಶಿಶುವಾಗಿ ಕೊಂದ ಶಕಟನ್ನ | ಶಕಟನ್ನ ವತ್ಸಾಸುರನ ಅಸುವಳಿದು ಪೊರೆದ ಜಗವನ್ನ 4 ವಾತರೂಪಿಲಿ ಬಂದ ಆ ತೃಣಾವರ್ತನ್ನ ಮಡುಹಿ ಮೊಲೆಯುಣಿಸಿದಾ ಪೂತನಿಯ ಕೊಂದ ಪುರುಷೇಶ 5 ನಿನ್ನ ಸ್ಮøತಿಗಿಂತಧಿಕ ಪುಣ್ಯ ಕರ್ಮಗಳಿಲ್ಲ ನಿನ್ನ ವಿಸ್ಮøತಿಗಿಂತ | ಅಧಿಕವಾದ ಮಹಪಾಪಗಳು ಇನ್ನಿಲ್ಲ ಲೋಕತ್ರಯದೊಳು 6 ಅಂಬುಜಾಂಬಕಿಗೊಲಿದ ಜಂಭಾರಿಪುರದಿಂದ ಕೆಂಬಣ್ಣದ ಮರ ತೆಗೆದಂಥ | ತೆಗೆದಂಥ ಕೃಷ್ಣನ ಕ ರಾಂಬುಜವೆ ನಮ್ಮ ಸಲಹಲಿ 7 ದೇವಕೀಸುತನಾಗಿ ಗೋವುಗಳ ಕಾದದೆ ನಲಿವೋನೆ ಮೂರ್ಲೋಕ ಓವ ದೇವೇಂದ್ರ ತುತಿಪೋನೆ 8 ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ ಜಗದಿ ಜೀವರನ ಸೃಜಿಸುವಿ | ಸೃಜಿಸಿ ಜೀವರೊಳಿದ್ದು ಜಗದನ್ಯನೆಂದು ಕರೆಸುವಿ 9 ಕರಣನೀಯಾಮಕನೆ ಕರುಣಾಳು ನೀನೆಂದು ಮೊರೆಹೊಕ್ಕೆ ನಾನಾ ಪರಿಯಲ್ಲಿ | ಪರಿಯಲ್ಲಿ ಮಧ್ವೇಶ ಮರುಳು ಮಾಡುವರೆ ನೀಯೆನ್ನ 10 ಕುವಲಯಾಪೀಡನನು ಲವಮಾತ್ರದಿ ಕೊಂದು ಶಿವನ ಚಾಪವನು ಮುರಿದಿಟ್ಟಿ | ಮುರಿದಿಟ್ಟಿ ಮುಷ್ಟಿಕನ ಬವರದಲಿ ಕೆಡಹಿ ಬಲಿಗೈದೆ 11 ಗಂಧವಿತ್ತಬಲೆಯೊಳ ಕುಂದನೆಣಿಸದೆ ಪರಮ ಸುಂದರಿಯ ಮಾಡಿ ವಶವಾದಿ | ವಶವಾದಿ ನಮ್ಮ ಗೋ ವಿಂದ ನೀನೆಂಥ ಕರುಣಾಳು 12 ವಂಚಿಸಿದ ಹರಿಯೆಂದು ಪರಚಿಂತೆಯಲಿ ಕಂಸ ಮಂಚದ ಮ್ಯಾಲೆ ಕುಳಿತಿದ್ದ | ಕುಳಿತಿದ್ದ ಮದಕರಿಗೆ ಪಂಚಾಸ್ಯನಂತೆ ಎರಗೀದೆ 13 ದುರ್ಧರ್ಷ ಕಂಸನ್ನ ಮಧ್ಯರಂಗದಿ ಕೆಡಹಿ ಜನನೋಡೆ ದುರ್ಮತಿಯ ಮರ್ದಿಸಿದ ಕೃಷ್ಣ ಸಲಹೆಮ್ಮ 14
--------------
ಜಗನ್ನಾಥದಾಸರು
ರಂಗನಹುದೋ ನೀನು ಕನಕಾಚಲರಂಗನಹುದೋ ನೀನುತುಂಗಮಹಿಮ ಕೃ-ಪಾಂಗ ಚೆಲುವ ಮುದ್ದು ರಂಗಲಕ್ಷ್ಮಿಯ ರಮ-ಣಾಂಗ ಜಪಿತಮೂರ್ತಿಪದುರುಳರಕ್ಕಸನು ವೇದ ಕದ್ದೊಯ್ಯೆಮೀನಾಗಿ ತಂದೆಯದನ ಕೂರ್ಮನಾಗಿಗಿರಿಯ ಪೊತ್ತು ಎರೆದೆ ಸುರರಿಗೆ ಅಮೃತವವರಾಹನಾಗಿ ಧರೆಯ ಕದ್ದವನಶಿರವ ಖಂಡಿಸಿ ನೃಕೇಸರಿಯಾಗಿಯೆಕಂಬವನೊಡೆದು ನಿಶಾಚರನ ಸಂಹ-ರಿಸಿದೆ ರಣಧೀರಮಾಧವ1ಪುಟ್ಟ ಮಾನವನಾಗಿ ಬಲಿಯ ದಾನವ ಬೇಡಿಅಷ್ಟು ಬ್ರಹ್ಮಾಂಡವನೆಲ್ಲಈರಡಿಮಾಡಿತುಟ್ಟ ತುದಿಗೆ ಅವನ ಶಿರದ ಮೇ-ಲಿಟ್ಟು ದ್ವಾರವ ಕಾಯ್ದನಾ ಭೂಸುರರಿಗೆಕೊಟ್ಟ ಮೇದಿನಿಯ ದಾನವ ಭಳಿರೆ ಜಗಜಟ್ಟಿ ಪರಶುರಾಮ ಕ್ಷತ್ರಿಯ ಛೇದನ2ದಶರಥನ ಸುತನಾಗಿ ವಸುಧಜೆಯ ಕಳೆದುಅಸಮ ಕಪಿವೀರರ ನೆರಪಿ ಸೇತುವೆಕಟ್ಟಿಅಸದಳ ರಾಕ್ಷಸರ ಇಂದ್ರಜಿತುದಶಶಿರಅತಿಕಾಯರ ಕುಂಭಕರ್ಣಅಸಹಾಯ ರಣಶೂರರ ಛೇದಿಸಿ ಸೀತಾಶಶಿಮುಖಿಯ ಕರೆತಂದ ರಘುರಾಮಕಂಠೀರವ3ದೇವಕೀಸುತನಾಗಿ ಬಾಣನ ಭಂಗಿಸಿಮಾವ ಕಂಸನ ಶಿಶುಪಾಲ ನರಕಾಸುರ ಕೌ-ರವ ವೀರರನು ಕೊಂದು ಪಾಂಡುರಾಜನ ಪುತ್ರ-ರನು ಪಾಲಿಸಿ ಪೃಥವಿ ಪಾವನರಾದರನು ರಕ್ಷಿಸಿ ಬೌ-ದ್ಧಾವತಾರ ತಾನಾಗಿ ವ್ರತ ಭಂಗಿಸಿದೆ ನೀನು4ತೇಜಿಯನೇರಿ ನೇಣನೆ ಹಿಡಿದು ಪಾಪದಬೀಜವನುರುಪಿ ಪುಣ್ಯದ ಬಿತ್ತನುರುಹಿಯೆಸೋಜಿಗಸಹಸ್ರರ ಕನಕಗಿರಿಮೂಜಗದೊಳು ವಿಸ್ತಾರವಾಗಿಹಘನತೇಜೋ ಮೂರುತಿ ಗಂಭೀರ ಸಿದ್ಧ ಪರ್ವತರಾಜ ಸದ್ಗುರು ಚಿದಾನಂದಾವಧೂತ5
--------------
ಚಿದಾನಂದ ಅವಧೂತರು