ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಏಳು ಕೇಶವಾ ಶ್ರೀಮಾಧವಾ ಏಳು ಏಳು ಕೇಶವಾ ಪ ಏಳಯ್ಯ ಮಧುಸೂದನ ಚಕ್ರಧಾರೀ ಏಳಯ್ಯ ನಿಜಶೌರಿ ದಶರೂಪಧಾರೀ ಏಳಯ್ಯ ದೇವಕಿಕಂದ ಉದಾರೀ ಏಳಯ್ಯ ಮುರಹರ ಕೌಸ್ತುಭಧಾರೀ1 ತ್ರಿಜಗವನ್ನು ಬೇಗ ಪಾಲಿಸಲೇಳು ಭಜಕರ ಕರುಣದಿ ರಕ್ಷಿಸಲÉೀಳÀು ಸುಜನರ ಮರೆಯದೆ ವರದೆತ್ತಲಿಕೆ ಯೇಳು ಕುಜನರ ಹರುಷದಿ ತರಿಯಲೇಳು 2 ದಾಸದಾಸರು ಬಂದು ಸೇವಿಸುತಿಹರೇಳು ತಾಸು ತಾಸಿಗೆ ತತ್ವವರುಹಲೇಳು ದಾಸಗೆ ನಿತ್ಯದಿ ಭಾಸವಾಗಲೇಳು ದಾಸಗೆ ಮುಕ್ತಿಯ ಪಾಲಿಸಲೇಳು 3 ಅರುಣೋದಯವಾಯ್ತು ಕಿರುಣೋದಯವಾಯ್ತು ಭರದಿಂದ ಸೂರ್ಯನು ಮೇಲೇರುತಿಹನು ಚರಣ ಕಿಂಕರರೆಲ್ಲ ಸಂಸಾರ ಶರಧಿಯ ಸರಸದಿ ದಾಂಟಿ ನಿಂನನು ಸೇರುತಿಹರು 4 ವಿದ್ಯೆಯರುಹಲು ಯೇಳು ಜ್ಞಾನವೀಯಲು ಯೇಳು ಬುದ್ದಿಯ ಕಲಿಸಿ ಆತ್ಮವ ಸೇರಲೇಳು ಮದ್ದು ಭವರೋಗಕ್ಕೆ ಬೇಗನೀಯಲು ಯೇಳು ಎದ್ದು ಲೋಕಕ್ಕೆ ನೀ ಬೆಳಗಲೇಳು 5 ಸನ್ನುತ ವರ ದೂರ್ವಾಪುರಕೆ ದಿಗ್ದೇಶದಿಂ ದೀನದಾಸರು ಬಂದು ಘನಭಕ್ತಿಯಿಂದ ನಿತ್ಯ ಮಾಡುವರಯ್ಯ ಚನ್ನಕೇಶವಾ ಸೇವೆ ಸ್ವೀಕರಿಸೇಳು 6
--------------
ಕರ್ಕಿ ಕೇಶವದಾಸ
ಜಗತ್ಪಾಲಾ ಸದ್ಗುಣಶೀಲಾ ರಮಾಲೋಲಾ ಪ ನಿತ್ಯ ವಿಮಲಾ ಬಹುಗುಣ ಶೀಲಾ ಪಾಹಿ ಕೃಪಾಲಾ1 ನಿತ್ಯಾನಂದಾ ದೇವಕಿಕಂದಾ ಕಂಸನ ಕೊಂದಾ ಬಾಲ ಗೋವಿಂದ ನೀ ದಯದಿಂದಾ ಪಾಹಿ ಮುಕುಂದಾ 2 ಅಮರಾಧೀಶಾ ಅಸುರನಾಶಾ ಪರಮ ಪ್ರಕಾಶಾ ಗೋಕುಲವಾಸಾ ಭಕ್ತಪೋಷಾ ಶ್ರೀಹನುಮೇಶವಿಠಲ 3
--------------
ಹನುಮೇಶವಿಠಲ
ಜೋ ಜೋ ದೇವಕಿಕಂದ ಮುಕುಂದ ಜೋ ಜೋ ಗೋಪಿಯಾನಂದ ಗೋವಿಂದಾ ಪ ಜೋ ಜೋ ಜೋ ಭಕ್ತಮನಕಾನಂದ ಜೋ ಜೋ ಜೋ ಗೋಪಿಕಾವೃಂದ ಅ.ಪ ಗೋಕುಲಬಾಲಾ ಮುರಳೀಲೋಲಾ ಶ್ರೀಕರಶೀಲಾ ತುಳಸೀಮಾಲಾ ರಾಕಾಚಂದ್ರ ಸಮಾನಕಪೋಲ ಗೋಕುಲ ಬೃಂದಾವನ ಸಲ್ಲೀಲಾ 1 ದೇವದೇವೋತ್ತಮ ಭಾನುಪ್ರಕಾಶ ಭಾವಜಪಿತ ಸರ್ವಸುರ ಮುನಿಪೋಷಾ ಶ್ರೀವನಿತಾಪ್ರಿಯ ದನುಜವಿನಾಶ ಪಾವನ ಮಾಂಗಿರಿನಿಲಯ ರಂಗೇಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜೋ ಸಚ್ಚಿದಾನಂದನೆ ಜೋ ಜೋ ದೇವಕಿಕಂದನೆ ಜೋಜೋ ಬ್ರಹ್ಮಾದಿವಂದ್ಯನೆ ಧ್ರುವ ಹುಟ್ಟಿ ಬಂದು ನಿಜದೋರಿದೆ ಖೂನ ಮುಟ್ಟಿ ಬೀರುವ ಸುಚಿನ್ನಸಾಧನ ಇಟ್ಟ ಕಾವಲಿ ಹಾಕಿದೆ ಮೌನ ಮೆಟ್ಟಿಮರ್ದಿಸಿ ಬಂದೆ ಮಾವನ 1 ಮಾಡಬಂದೆ ನೀ ಧರ್ಮಸ್ಥಾಪನಿಯ ನೋಡಬಂದೆನಿಷ್ಟ ಜನರಾರ್ಚನಿಯ ಆಡಬಂದೆ ನಂದಯಶೋದೆ ಮನಿಯ ನೀಡಬಂದೆ ನಿಜಸುಖಸಾಧನಿಯ 2 ಶಿಷ್ಟಜನರಿಗಾಗಿ ಸಹಾಕಾರಿ ಸೃಷ್ಟಿಯೊಳು ತೋರಬಂದೆ ಶ್ರೀಹರಿ ದುಷ್ಟ ಜನರ ಮರ್ದಿಸುವಾವತಾರಿ ಕಂಸಾರಿ 3 ದೇವಾದಿಗಳ ಮಗುಟಮಣಿಯೆ ಭಾವಿಸಲಳವಲ್ಲ ಸದ್ಗುಣಿಯೆ ಕಾವ ದೈವ ನೀನೆ ಕೃಷ್ಣ ಕರುಣೆಯೆ ದೇವಕಿ ಗರ್ಭನಿಧಾನದ ಖಣಿಯೆ 4 ಬಲವಾಗಿ ಎನಗಬಂದೆ ಸರ್ವೇಶ ಒಲಿದು ಭಾನುಕೋಟಿತೇಜಪ್ರಕಾಶ ಫಲವ ನೀಡಿ ತೋರಬಂದೆ ಸಂತೋಷ ಸಲಹಬಂದೆ ಮಹಿಪತಿ ಪ್ರಾಣೇಶ 5 ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ ನೀನೆ ಮುರಾರಿ 6 ಅನೆ ಕಾಯಲಿಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀಹರಿ 7 ಪತಿತ ಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀರಂಗನಾಟದ ಪರಿಯ ತೋರುದು ನೋಡಚ್ಚರಿಯ ದೇವಕಿಕಂದ ದೇವಮುಕುಂದ ಮಾವಕಂಸನ ಕೊಂದ ಧ್ರುವ ಫಣಿ ಮೆಟ್ಯಾಡಿದ ಚಂದ ಕಾವನಯ್ಯ ಗೋವಿಂದ 1 ಆಸುಹೀರಿದ ಪೂತಣಿಯ ಮೊಸರು ಹಾಲು ಬೆಣ್ಣಿಗೆ ದಣಿಯ 2 ಕುಸುಮನಾಭನೆ ಶೇಷಶಯ್ಯ ಲೇಸಾಗ್ಹೊರೆವ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು