ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ನಿನಗೆ ಲೋಕದುಸಾಬರಿ ಜಗ ದೇಕನಾಥನಿಗೆ ಬೀಳು ಮೊರೆ ಪ ಸಾಕುಯೆಂದು ಲೋಕೈಕನ ಬೇಡಿ ನಡಿ ಏಕಚಿತ್ತದಿ ವೈಕುಂಠದಾರಿ ಅ.ಪ ಸತ್ಯಸಂಗವೆಂಬ ಛತ್ತರ್ಹಿಡಿ ಪಥ ಚಿತ್ತ ಶುದ್ಧಿಯಿಂದ ಗುರ್ತುಮಾಡಿ ಭಕ್ತವತ್ಸಲನ ಸತ್ಯ ಬಿರುದುಗಳ ಭಕ್ತಿಯಿಂ ಕೂಗುತ್ತ ನಿರ್ತ ತುರ್ತುನಡಿ 1 ವನಜನಾಭನ ಕಥೆ ಶ್ರವಣಮಾಡಿ ಬಿಡ ದನುಭವದೊಳು ನಿಜಮರ್ಮ ಹುಡುಕಾಡಿ ಮನಸಿಜ ಜನಕನ ಚರಣದಾಸರ ಕೂಡಿ ಪಡಿ 2 ಮಾನ ಅಭಿಮಾನವೆಲ್ಲ ಸಮ ನೋಡಿ ನಿನ್ನ ನಾನಾ ಕಲ್ಪನೆಗಳ ಕಡೆಮಾಡಿ ಜ್ಞಾನಜ್ಯೋತಿ ಹಚ್ಚಿ ಧ್ಯಾನದೃಷ್ಟಿ ಚಾಚಿ ಜಾಣ ಶ್ರೀರಾಮನ ಖೂನ ಹಿಡಿ 3
--------------
ರಾಮದಾಸರು
ಯಾಕೆ ಮನದಲಿ ಶೋಕಿಸುತ್ತಿರುವೆ ಜಗ ದೇಕನಾಥನು ಸಾಕುತಿರುವನು ನೀ ತಿಳಿಯದಿರುವೆ ಪ ಲೋಕನಾಥನ ವಿವೇಕದಿ ಸ್ತುತಿಸದೆ ವ್ಯಾಕುಲದಿಂ ಮನ ಕಳವಳಗೊಳುತಲಿ ಅ.ಪ ಸೃಷ್ಟಿಕರ್ತನು ರಕ್ಷಿಸುತ್ತಿರುವ ದುರಿತಂಗಳ ರಾಸಿಯ ಬೆಟ್ಟಗಳ ತರಿದೊಟ್ಟು ತಿರುವ ಅದು ತಿಳಿಯದು ನೀ ಬಲು ಕಷ್ಟಗಳ ಪಡುತಿರ್ಪ ವಿಷಯಗಳ ನೋಡುತ ನಗುತಿರುವ ಇಷ್ಟು ಈತನ ಪ್ರಭಾವವು ತಿಳಿಯದೆ ಲಕ್ಷ್ಮಿರಮಣ ರಕ್ಷಿಸೆನ್ನುತ ಸ್ಮರಿಸದೆ 1 ನಾನು ನನ್ನದು ಎಂಬ ಅಭಿಮಾನ ಅದು ಪೋಗುವ ತನಕ ಜ್ಞಾನ ಮಾರ್ಗಕೆ ಇಲ್ಲ ಸಾಧನ- ವೆಂದರಿಯುತ ಮನದಲಿ ಧ್ಯಾನಿಸುತ್ತಿರು ಶ್ರೀನಿಧಿ ಗುಣಗಳನು ಹೀಗಿರುವುದೆ ಪ್ರಧಾನ ಧ್ಯಾನ ಗಾನ ಮೌನಾದಿ ವ್ರತಗಳನು ಶ್ರೀನಿಧಿಗರ್ಪಿಸಿ ಮನ ಹರುಷಿಸದಲೆ2 ತಂದೆ ಶ್ರೀ ವೆಂಕಟೇಶ ವಿಠ್ಠಲನು ಹರಿಭಕುತರ ಮೊರೆಯನು ಛಂದದಿಂದಲಿ ಕೇಳಿ ಪೋಷಿಪನು ಮುಕುಂದನಲಿ ಭಕುತಿ ಎಂದೆಂದಿಗೂ ತಪ್ಪದೆ ಉದ್ಧರಿಸುವನು ನಿಜವೆಂದರಿ ಇದನು ಮುಂದೆ ಕಮಲನಾಭ ವಿಠ್ಠಲ ಭಕುತರ ಸಂದಣಿ ಪೊರೆದು ಸಂತೈಸುತಲಿರೆ ವೃಥ 3
--------------
ನಿಡಗುರುಕಿ ಜೀವೂಬಾಯಿ
ಶ್ರೀವಿನಾಯಕ ಪಿನಾಕಿ ಸುತ ಜಗ ದೇಕನಾಥನ ನಾಭಿಮಂದಿರ ಲೇಖಕಾಗ್ರಣಿ ವಿಷ್ಣುಕೀರ್ತನ ಮಾನಿ ಸಾಧಕನೆ ಪರಾಕು ನುಡಿಯುವೆ ನೂಕಿ ವಿಘ್ನವ ಸಾಕು ನಮ್ಮನು ನೋಕನೀಯನ ಭಜಿಸಲನುವಾಗೆಂದು ಬೇಡುವೆನು 1 ಕಾಣೆ ನಿನಗೆಣೆ ಮೂರುಲೋಕದಿ ಮಾನ್ಯನಾಗಿಹೆ ಸರ್ವರಿಂದಲು ಶ್ರೀನಿಧಿಯ ದಯದಿಂದ ಪ್ರಾಣಾವೇಶಸಂಯುತನೆ ಧ್ಯಾನ ಮಾಡುವೆ ವಿಶ್ವತೈಜಸ ನನ್ನು ಮಹದಾಕಾಶಮಾನಿಯೆ ಆನತಾಮರಧೇನು ಸಿದ್ಧಿವಿನಾಯಕನೆ ನಮಿಪೆ 2 ದೈತ್ಯಗಣಗಳಿಗಿತ್ತು ವರವು ನ್ಮತ್ತರನು ಮಾಡುತಲಿ ಶ್ರೀಪುರು ಷೋತ್ತಮನ ಸೇವಿಸುವೆ ವಿದ್ಯಾಧೀಶ ಸುಖಭೋಕ್ತ ಮಾತರಿಶ್ವನ ದಾಸರಿಗೆ ಹರಿ ಭಕ್ತಿ ವಿಷಯ ವಿರಕ್ತಿ ನೀಡುವೆ ಶಕ್ತಿ ನೀ ನಾಲ್ಕೆರಡು ಕಲ್ಪದಿ ಸಾಧಿಸಿರೆ ಪದವಿ 3 ವಕ್ರ ತುಂಡನೆ ನೀಗಿಸೆನ್ನಯ ವಕ್ರಬುದ್ಧಿ ವಿವೇಕನೀಡುತ ದಕ್ಕಿಸೈ ಶಾಸ್ತ್ರಾರ್ಥ ಚಯನವ ಚಾರುವಟು ಗಣಪ ರಕ್ತಗಂಧಪ್ರೀಯ ಸೋಮನ ಸೊಕ್ಕು ಮುರಿದೆಯೊ ಭೂಪ ಭಕ್ತಿಯ ಉಕ್ಕಿ ಸೈ ಹರಿಯಲ್ಲಿ ತವಕದಿ ಮಂಗಳಪ್ರದನೆ 4 ರಂಗ ಮಂದಿರ ದಕ್ಷಿಣಸ್ಥವಿ ಹಂಗಗಮನನ ರಾಣಿ ರುಕ್ಮಿಣಿ ಯಂಗದಲಿ ಪುಟ್ಟುತಲಿ ದಿತಿಜಾಂತಕನೆನಿಸಿಕೊಂಡು ಗಂಗೆಪಿತನನು ಸೇವಿಸಿದೆ ಮಾ ತಂಗಮುಖ ಮಹಕಾಯ ನಾರೀ ಸಂಗವರ್ಜಿತ ಬೀರು ಕರುಣಾಪಾಂಗ ದೃಷ್ಟಿಯನು 5 ಮೊದಲು ಪೊಜೆಯ ನಿನಗೆ ವಿಹಿತವು ವಿಧಿ ಭವಾದ್ಯರ ಪೊರೆವ ವಿಶ್ವನು ಮುದದಿ ನೀಡಿಹ ವರವ ಸಿದ್ಧಿಯ ಕೊಡುವೆ ಭಕ್ತರಿಗೆ ಮದದಿ ಬಿಡುವರಿಗೆಲ್ಲ ಖೇದವೆ ಒದಗಿ ಬರ್ಪುದು ಬಾಗಿ ಭಜಿಸುವೆ ಸದಯನಾಗುತ ವಿಷ್ಣು ಭಕ್ತರ ಸಂಗ ನೀಡೆನಗೆ 6 ವ್ಯಾಪ್ತ ದರ್ಶಿಯೆ ವಂದಿಸುವೆ ಪರ ಮಾಪ್ತ ಹರಿ ಭಕ್ತರಿಗೆ ನೀನಿಹೆ ಸೂಕ್ತ ಸಾಧನೆ ಗೈಸು ಖೇಶನೆ ಸೋಮಪಾನಾರ್ಹ ಆರ್ತನಿಹೆ ಬಹುಮೂಢ ಖರೆವೇ ದೋಕ್ತಮರ್ಮವ ಭಾಸಗೈಸಿ ಕೃ ತಾರ್ಥನೆನಿಸೈ ಮೃದ್ಭವ ವಿರೂಪಾಕ್ಷ ತತ್ವೇಶ 7 ಬರೆದೆ ಭಾರತ ವೇದವ್ಯಾಸರ ಕರುಣದಿಂದಲಿ ಭಕ್ತಿಯೋಗಿಯೆ ಶರಣು ಶೇಷಶತಸ್ಥರಿಗೆ ಗುರುವಿರ್ಪೆ ಹೇರಂಭ ದುರಳ ಗಣಗಳ ಕಾಟತಪ್ಪಿಸಿ ಹರಿಗೆ ಸಮ್ಮತವಿಲ್ಲ ದೆಡೆಯಲಿ ಮರುಳುಗೊಲ್ಲದ ಮನವು ನನಗಿರಲೆಂದು ಹರಸೆಂಬೆ 8 ಜಯಜಯತು ವಿಶ್ವಂಭರ ಪ್ರೀಯ ಜಯಜಯವು ಮೈನಾಕಿತನಯಗೆ ಜಯಜಯವು ಶ್ರೀಕೃಷ್ಣವಿಠ್ಠಲನ ದಾಸವರ್ಯನಿಗೆ ಜಯಜಯವು ಸದ್ವಿದ್ಯೆಕೋಶಗೆ ಮೀನಾಂಕ ಭ್ರಾತೃವೆ ಜಯಜಯವು ವಿಘ್ನೇಶ ಮಂಗಳಮೂರ್ತಿ ಗಣಪನಿಗೆ 9
--------------
ಕೃಷ್ಣವಿಠಲದಾಸರು