ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭಗವದ್ಭಕ್ತ ಸಂಮೋಹ ಪ್ರಾರ್ಥನೆ) ಗಜಮುಖನ ಪ್ರಪಿತಾಮಹನಹಿಮನ ಗಜೆಯರಸನ ಪಿತನ ಪೆತ್ತನ ಸಾರಥಿ ಪಾದ ಪಂಕಜವ ಭಜಿಸಿ ಭಾರತಿವರನ ನಮಿಸುವೆ ಅಜಭವಾದಿ ಗುರೂತ್ತಮರ ನಿಜ ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1 ಅವ್ಯವಹಿತಾಸದೃಶ ಭಕ್ತಿಯ ಸವ್ಯಸಾಚಿ ಸಹಾಯ ಸಲಿಸಾ ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ ಕಾವ್ಯ ವ್ಯಾಕರಣಗಳಿಂದ ವಹಿಸಿದ ಸೇವ್ಯ ಗುರು ಲಾ- ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2 ಪುಂಡರೀಕ ದಲಾಯತಾಕ್ಷನೆ ಹಿಂಡು ದೈವದ ಗಂಡನೆಂದತಿ ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ ಪಾಂಡ್ಯದೇಶದೊಳವತರಿಸಿದಾ ಖಂಡಲಾತ್ಮನ ನಮಿಪೆ ಮಮ ಹೃ- ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3 ಮೋದತೀರ್ಥ ಮಹಾಬ್ಧಿಯನು ಕಡೆ- ದಾದಿಯಲಿ ನ್ಯಾಯಾಮೃತವ ತೆಗೆ- ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ ಮಾಧವನ ಗುಣತರ್ಕ ತಾಂಡವ ವೋದಿಸುತ ಚಂದ್ರಿಕೆಯ ತೋರಿದ ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4 ಮಂಗಳಾಂಬುತರಂಗ ತುಂಗಾ ಸಂಗಿ ಮಂತ್ರಾಲಯದಿ ನಿಂದು ಕು ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ ಪಂಗು ಬಧಿರಾದ್ಯಂಗ ಹೀನರ ಪಾಂಗ ನೋಟದಿ ಪಾಲಿಸುವ ಯತಿ ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5 ಜೋಲಿಸುವ ಕಂಠದಲಿ ತುಳಸೀ ಮಾಲೆಯನು ಕರಯುಗದಿ ವೀಣಾ ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ ಶ್ರೀಲಲಾಮನ ಲೀಲೆಗಳಿಗನು- ಕೂಲರಾದ ಸುರರ್ಷಿ ನಾರದ ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6 ಸತ್ಯಭಾಮಾಕಾಂತನಿದಿರಲಿ ನಿತ್ಯ ನಡೆಸುವನೆಂಬ ಸೇವೆಗೆ ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ ಹತ್ತು ದೆಶೆಯಲಿ ನಿಂತು ರಕ್ಷಿಪ ಕೃತ್ತಿವಾಸ ಸುರೇಶಮುಖ ದೇ- ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7 ಪಾವಮಾನ ಮತೀಯ ವೈಷ್ಣವ- ರಾವಳಿಗೆ ಶರಣೆಂಬೆ ನಿಮ್ಮ ಕೃ- ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ ದೇವ ದೇವವರೇಣ್ಯ ಭಕ್ತರ ಕಾವ ಶೇಷಗಿರೀಂದ್ರನಾಥನ ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8
--------------
ತುಪಾಕಿ ವೆಂಕಟರಮಣಾಚಾರ್ಯ
ಬಂದನು ರಘುವೀರ ರಣಧೀರ ಪ ತಡೆ ಭರತನೆ ಮುಂದಡಿಯಿಡಬೇಡ ದುಡುಕಿ ಬೀಳದಿರು ಬಡಜನ ಮುಖಕೆ 1 ಸೀತಾನಾಥನ ದೂತನಾದೆನ್ನ ಮಾತನು ಕೇಳು ಆತುರಪಡದೆ 2 ಭ್ರಾತನ ನೋಡಲು ಕಾತರನಾಗಿ ವಾತವೇಗದೊಳು ಆತನು ಬರುತಿಹ 3 ಅದೊ ನೋಡದೊ ನೋಡದರ ದೆಶೆಯಲಿ ವಿದುಶತಕಿಲ್ಲದಗದಿರದದ್ಯುತಿಯ 4 ಅದೊ ಪುಷ್ಪಕವು ಅದರ ಪ್ರಭೆ ನೋಡು ಅದರಿರವ ನೋಡು ಒದಗಿ ಬರುತಿದೆ 5 ಧಾಮ ಮಧ್ಯೆ ನಿ ಸ್ಸೀಮ ನಿಮ್ಮಣ್ಣ ರಾಮನ ನೋಡು 6 ವಾಮದಿ ಸೀತಾಭಾಮೆ ಕುಳ್ಳಿಹಳು ಪ್ರೇಮದಿ ಲಕ್ಷ್ಮಣ ಚಾಮರ ಬೀಸುವ 7 ಬಲದಿ ಸುಗ್ರೀವ ನೆಲೆಸಿಹ ನೋಡು ಕೆಲದಿ ವಿಭೀಷಣ ನಲಿಯುತ ನಿಂತಿಹ8 ಅಂಗದ ತನ್ನಯ ಜಂಘೆಲಿ ದೇವನ ಮಂಗಳ ಚರಣವ ಹಿಂಗದೆ ಸೇವಿಪ 9 ವೃದ್ಧ ಜಾಂಬವ ಗದ್ದುಗೆ ಮುಂದಿಹ ಯುದ್ಧ ಪ್ರವೀಣರು ಸಿದ್ಧರಾಗಿಹರು 10 ಉಳಿದ ಕಪಿ ದನುಜ ದಳಗಳು ಹಿಂದೆ ಕಲಕಲ ಮಾಡುತ ಉಲಿಯುತಲಿಹವು 11 ಅರರೆ ವಿಮಾನವು ತಿರುಗಿತು ನೋಡು ಧರಣಿಗೆರಗುತಿದೆ ಭರದೊಳು ನೋಡು 12 ಭಳಿರೇ ರಾಮನು ಇಳಿದನು ನೋಡು ಕಳವಳವೆಲ್ಲವ ಕಳೆಯುತ ನೋಡು 13 ಬಂದನು ಅದಕೊ ಬಂದೇ ಬಂದನು ಇಂದುಮುಖಿಯ ತಾ ಹಿಂದಿಟ್ಟುಕೊಂಡು14 ಮುಂದೆ ಬರುವ ಕಪಿಯನು ಉಳಿದು ಸುಂದರ ಮುಖವು ಕುಂದಿದೆ ನೋಡು 15 ನಡೆದು ಬರುತಿಹ ಮಡದಿಯೊಡಗೂಡಿ ತಡಮಾಡದಿರು ಪೊಡಮಡು ಪೋಗು 16 ಇಂತು ನುಡಿದು ಧೀಮಂತನಾದ ಹನು- ಮಂತ ಚಿಗಿದು ಖಗನಂತೆ ಬಂದಿಳಿದ17 ವಾತಸುತನ ಸವಿಮಾತಲಿ ಭರತನು ಪ್ರೀತಿಲಿ ತಿರುಗಿದನಾತುರದಿಂದ 18 ನೋಡುತ ರಾಮನ ಓಡುತ ಬಂದೀ ಡಾಡಿದ ತನುವ ಬಾಡಿದ ಮುಖದಿ 19 ಅನುಜನ ನೋಡಿ ದನುಜಾರಿಯಾಗ ಮನ ಮರುಗಿದ ಬಲು ಕನಿಕರದಿಂದ 20 ರಂಗೇಶವಿಠಲ ಕಂಗಳ ಜಲದೊಳು ಮಂಗಳಯುತನಾಲಿಂಗನಗೈದ 21
--------------
ರಂಗೇಶವಿಠಲದಾಸರು
ಸುದ್ದಿಯ ಕೊಟ್ಟು ಬಾರೆ ಶರಧಿ ಸುಮ ಗಂಭೀರೆ ನೀರೆ ಪ ಹದ್ದನೇರಿ ಮೆರೆವ ಮುದ್ದು ಮೋಹನ್ನ ಇಂದುವದನ ಗೋಪಾಲಕೃಷ್ಣಗೆ ಅ.ಪ ಮುಟ್ಟಳು ಅನ್ನ ಆಹಾರವನ್ನು ಬಿಟ್ಟಳು ಇಷ್ಟ ಪದಾರ್ಥವೆಲ್ಲ ದೃಷ್ಟೀಸಿ ನೋಡಳನ್ಯರು ಸೃಷ್ಟೀಲಿ ಭಾರಜೀವಿತ ಕಷ್ಟದೆಶೆಯಲಿರುವುಳೆಂದು1 ಇಡಳು ಕನಕಾಭರಣಂಗಳು ತೊಡಳು ವರವಸ್ತ್ರಂಗಳು ಬಡುವಾಗಿ ನಡು ಬಳುಕುತಿಹಳು ಒಡೆಯ ನೀ ಬಾರದಿರಲು ಪ್ರಾಣ ಬಿಡುವಳು ನಿಶ್ಚಯವೆಂದು 2 ಬಯಸುವಳು ನಿನ್ನ ಆಗಮನವನ್ನು ಸಯಿಸಳು ವಿರಹ ತಾಪ ಧ್ಯೇಯ ವಿಜಯ ರಾಮಚಂದ್ರವಿಠಲ ಕಾಯ ಸಮರ್ಪಿಸುವಳೆಂದು 3
--------------
ವಿಜಯ ರಾಮಚಂದ್ರವಿಠಲ