ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ವಾಜಿಥರವಲ್ಲಾ | ಪ್ರಾಣಿ ಪ ಕಡಲಶಯನೆಚ್ಚರ ಗಳದೆಲ್ಲಾ | ಬಿಡದೇ ನಿನ್ನ ನೀ ಮರೆವುದು ಸಲ್ಲಾ | ಎಡಬಲ ನೋಡದೆ ನೀ | ವಿಡಿ ಗುರುಗಳ ಅಡಿಗಳ | ಪಡಿ ನಿಜಗತಿಯಾ 1 ಏಸು ಜನ್ಮವ ಸುತ್ತಿ ಬಂದ್ಯೋಯತ್ತಿ | ನ್ನೇಸು ಜನ್ಮವ ತಾಳಬೇಕು ಮುಂದ | ಹೇಸಲಿಲ್ಲವನೊಂದು ಘಾಸಿಯಿಂದ | ಅಶನ ವ್ಯಸನ ತೃಷಿ ಭಸಿಯೊಳು ನಿಶಿದಿನ | ಪಶುವಿನ ಪರಿಯಲಿ ದೆಶೆಗೆಡ ಬ್ಯಾಡಾ 2 ಎಂತು ಹೇಳಲಿನ್ನು ಮನವೇ ನಾನು | ಸಾಧು | ಸಂತರ ಸಂಗದಿ ಬಾಳು ನೀನು | ಅಂತರಂಗದಿ ಹರಿ ಮೂಡುವನು | ಹಿತಾಹಿತ ನರಿತು ಸುಮತಿಯಲಿ ಗುರು ಮಹೀ | ಪತಿ ಸುತ ಪ್ರಭು ಸ್ತುತಿರತಿಯಲಿ ಬಾಳು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಳಿರೆ ಭಳಿರೆ ನರಸಿಂಹ ಮಹಾಸಿಂಹ | ವೈರಿ ಉರಿಮಾರಿ ಪ ನಗನಗಾ ನಗನಗಗಳಲ್ಲಾಡೆ ಚತುರ್ದಶ | ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ || ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ | ಉಗು ಉಗು ಉಗುಳುತ್ತ ಬಂದ ನರಸಿಂಹ 1 ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ | ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ || ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ | ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ 2 ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ | ಬಗ ಬಗ ಬಗ ಬಗದು ರಕುತವನ್ನು | ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ | ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ 3 ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು | ಝಗ ಝಗಾ ಝಗಝಗಿಪ ಮಕುಟ ತೂಗೆ | ಸುರರು ಗಗನದಿ ನೆರೆದು | ಮಿಗಿ ಮಿಗಿ ಮಿಗಿ ಮಿಗಿಲೆನೆ ನರಸಿಂಹಾ 4 ಒಂದೊಂದೊಂದೊಂದು ಮುನಿಗಳಿಗೊಲಿದು | ಅಂದಂದಂದಂದದೀಗಾಯತ ವೊಲಿದು | ಅಂದಂದಂದವ ಕಾವ ಚೊಳಂಗಿರಿ | ಮಂದಿರನೆ ವಿಜಯವಿಠ್ಠಲ ನರಸಿಂಹಾ 5
--------------
ವಿಜಯದಾಸ