ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ದಾನವನು ನೋಡಿರೋ | ಅವನವೇ ದಾನವನು ಪ ದಾವನು ಸಾಕುವ ದೇವರ ಮರೆದು | ಅವಿವೇಕತನದಲಿ ಜೀವಿಸುತಿಹಾ ಅ.ಪ ವಿಷಯದ ಸಂಭ್ರಮದಾ ಸ್ಥಿರಪಟ್ಟಾ | ವಸುಧಿಲಿ ಬಗದಾವಾ | ಆಶನ ವ್ಯಸನದೊಳು ಪಶುವಿನ ಪರಿಯಲಿ | ನಿಶಿದಿನ ಗಳೆವುತ ದೆಶೆಗೆಟ್ಟು ಹೋದಾ 1 ಸಾಧು ಸಂಗಕ ದೂರಾ ಶ್ರವಣದ | ಹಾದಿಗೆಂದಿಗೆ ಬಾರಾ | ಸಾಧಿಸಿ ಕುವಿದ್ಯಾವಾದಾ ಆಟಗಳನು | ಸಾದರ ನೋಡುತಾ ತಾ ದಿನಗಳೆವಾ 2 ಗುರು ಮಹಿಪತಿ ಬೋಧಾ ನಂದನು | ಸಾರಿದನಾ ಹಿತವಾದಾ | ಹರಿನಾಮಾವೆಂದಿಗೆ ಸ್ಮರಿಸು ಮುಖದೊಳು | ನರದೇಹವೆಂಬುದು ಬಾರದು ನೋಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತ್ಯಾದ ನಡಿ ಹಿಡಿರೋ ಮನಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ಧ್ರುವ ಸತ್ಯದಾನಡಿಗಿನ್ನು ಸತ್ಯ ನುಡಿಯಲು ಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ಯಾಡಿಸುವಂತೆ ಮೈಯೊಳಗಿಹ ಕಾವನೈಯನ ಮರಿಯಬ್ಯಾಡಿ 1 ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿ ಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ 2 ಅಶೆಯಕೊಟ್ಟು ನಿರಾಶಯೆ ಮಾಡಲಿಬ್ಯಾಡಿ ಘಾಸಿ ಮಾಡಲಬ್ಯಾಡಿ 3 ಘಟ್ಟಿಸಿ ಒಬ್ಬರ ಹೊಟ್ಟೆಹೊರಿಯಬ್ಯಾಡಿ ಸಿಟ್ಟಿಲಿ ನೆಂಟರು ತುಟ್ಟಿಸಿ ಬಿಡಬ್ಯಾಡಿ4 ಗುಟ್ಟಿನೊಳಿಹ ಮಾತು ತುಟ್ಟಿಗೆ ತರಬ್ಯಾಡಿ ಹೊಟ್ಟೆಲೆ ಹಡೆದವರ ಕಟ್ಟಿಗೆ ತರಬ್ಯಾಡಿ 5 ಲೆತ್ತಪಗಡಿ ಅಡಿ ಹೊತ್ತುಗಳಿಯಬ್ಯಾಡಿ ತುತ್ತುಕುಡಿಯೊಳಿದ್ದಾ ಪತ್ತಬಡಲಿಬ್ಯಾಡಿ 6 ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೋ 7 ಅನ್ನಬೇಡಿದವ ಗಿಲ್ಲೆನ ಬ್ಯಾಡಿ ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ 8 ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ ಸ್ವಾತ್ಮ ಸುಖದ ಸವಿ ಸೂರ್ಯಾಡಿಕೊಳಲಿಕ್ಕೆ 9 ಸ್ವಹಿತ ಸುಖದ ಮಾತು ಸಾಧಿಸಿಕೊಳಲಿಕ್ಕೆ ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಿಕೊಳ್ಳಿ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು