ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಜನುಮ ಸಖನೇ ನಮ್ಮಯ್ಯಾ ಪ ಅವಿದ್ಯ ಬಲಿಯೊಳು ಸಿಲುಕಿ ಬಳಲುವನ | ಸುವಿದ್ಯ ನೋಟದ ಕರುಣವ ಬೀರಿದನಾ1 ಏನರಿಯದಲಿರೆ ವಿಷಯ ಮದಾಂಧದಿ | ಜ್ಞಾನಾಂಜನವ ಮಾಡಿ ಕಂಗಳದೆರಿಸಿದನಾ 2 ಹೃದಯ ಭೂಮಿಗೆ ಹರಿ ನಾಮಬೀಜವ ಬಿತ್ತಿ | ಸದಮಲ ಭಕುತಿಯ ಬೆಳೆಗಳ ನುಣಿಸಿದನಾ 3 ಕೇಳದ ನುಡಿಗಳ ಹೇಳುತ ಕಿವಿಯೊಳು | ಕಾಲ ಕಾಲಕ ಎನ್ನ ಹಿತವನೆ ಯೋಜಿಪನಾ4 ತಂದೆ ಮಹಿಪತಿ ಕಂದನೆನಿಸಿತ್ತ ನಾ | ಪರ ಭಾಗ್ಯವ ನೀಡಿದನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂತು ದೊರೆವುದೋ ಇಂತು ನರದೇಹ ಮುಂದೆ ಬಾಹ ದಿನ್ನೆಂದಿಗೆ ಇಚಿದು ಕರುಣಿಸಿ ಸಲಹುಯನ್ನ ಮು| ಕುಂದ ನಿನ್ನಂಘ್ರಿಗಳ ತೋರಿಸಿ 1 ಮೊದಲೇ ದುರ್ಲಭ ಮನುಷ್ಯಾಂಗವು ಅದರೊಳುತ್ತಮ ವರ್ಣದಿ ಉದಿಸಿ ಭಗವಂತಾಂಘ್ರಿ ದರುಶನ ವದಗಿ ಗತಿಗೈದಿಸುವ ಜನುಮವು 2 ಗುರುಹಿರಿಯರೆಂದೆರಿಸಿ ಅವರನು ಸ್ಮರಿಸಿ ಭಕ್ತಿಗೆ ಸೇರಿಸಿ ಮರೆಸಿ ಅನ್ಯವ ಬೆರೆಸಿ ನಿಜದೊಳು ತರಿಸಿ ತಾರಿಸುತಿಹ ಜನುಮವು 3 ಹರಿಯ ಲಾಂಛನ ಪೌಂಡ್ರವು ಕೊರಳು ತುಳಸಿಯ ಮಾಲೆಯಾ ಧರಿಸಿದಂಡಿಗೆ ವಿಡಿದು ಮಾಧವ ಚರಿತ ಪಾಡುತ ನಲಿವ ಜನುಮವು 4 ತನ್ನವರ ಪರಿಚಾರಕೆನಿಸುವ ಘನ್ನ ಬಿರದಿಗೆ ಪಾಲಿಸೀ ಸನ್ನುತನೆ ಗುರುಮಹಿಪತಿ ಪ್ರಭು ನಿನ್ನ ವಲುಮಿಂದಾದರಾಗಲಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೊ ಕರುಣಾನಂದ ಶ್ರೀಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮದಯಾನಿಧೆ ಧ್ರುವ ತೊಡಿಸಿ ಕರುಣಾನಂದ ಕವಚವ ಇಡಿಸೊ ಭಗುತಿ ವೈರಾಗ್ಯವ ದೃಢಗೊಳಿಸುವ ಙÁ್ಞನಪೂರ್ಣ ನೀ ಕಡಿಸೊ ಕಾಮಕ್ರೋಧವ ನಡೆಸಿ ನಿತ್ಯವಿವೇಕ ಪಥದಲಿ ಕೂಡಿಸೊ ನಿಜಸುಬೋಧವ ಬಿಡಿಸೊ ಭವಭವ ಮೂಲದಿಂದಲಿ ಬಡಿಸೊ ಹರುಷಾನಂದವ 1 ಬಟ್ಟೆ ಕೊಟ್ಟು ಕಾಯೊ ಸತ್ಸಂಗವ ಮುಟ್ಟಿಮುದ್ರಿಸೊದೃಷ್ಟಾಂತವ ಸಟೆಯ ಮಾಡೊ ಅವಿದ್ಯವ ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯವ 2 ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ ಕಣ್ದೆರಿಸಿ ಅಣುರೇಣುದಲಿ ಪೂರ್ಣಖೂನದೋರೊ ಸಾಕ್ಷಾತವ ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವನ ಚಿಣ್ಣಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾರಿ ದೋರೆನಗ ಮುಕುಂದಾ ಪ ದಾರಿ ತೋರೆನಗೆ ಶ್ರೀ ಹರಿ ನಿನ್ನ ಭಕುತಿಯಾ| ಸಾರಿದೆ ನಿನ್ನವನಾನು ಮುಕುಂದಾ ಅ.ಪ ಜನುಮಾನುಜನುಮದಲಿ|ನಾಮವಾ| ನೆನೆಯದ ತಪ್ಪಿನಲಿ|| ಜ್ಞಾನದೃಷ್ಟಿಯಲಂಧನಾದೆನು ಹರಿ ನಿಮ್ಮ| ಕಾಣದ ಕಂಗಳನಾ ಮುಕುಂದಾ1 ಭ್ರಾಂತತನವ ಬಿಡಿಸಿ|ವಿವೇಕ| ಶಾಂತಿಯ ನೆಲೆಗೊಳಿಸಿ| ಅಂತರಂಗದ ನಿಜ ಸುಖವ ಸೂರ್ಯಾಡುವ| ಸಂತರೊಳಗ ಕೂಡಿಸೋ ಮುಕುಂದಾ2 ಅರಹುನಯನ ದೆರಿಸಿ|ನಿಜರೂಪ| ಗುರುತದ ನೆಲೆ ತೋರಿಸೀ| ಗುರುವರ ಮಹಿಪತಿ ನಂದನ ಪ್ರಭು ನಂದನ ಪ್ರಭು ನಿಮ್ಮ| ಸ್ಮರಣೆ ಪಡೆಯ ನಡಿಸೋ ಮುಕುಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ನೋಡಿರೋ ಅಂಬುಜಾಕ್ಷನ ಗುಂಭಗುರುತ ಹಂಬಲಿಸದೆ ಇಂಬುದೋರುದು ಧ್ರುವ ಬಿಡದೆ ವಂದಿಸಿ ನೋಡಿ ಸಂಧಿಸಿದರೆ ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಕೂಡಿಕೊಂಬ ಧನ್ಯಗೈಸಿ ಜೀವ ಪ್ರಾಣ ಪಾವನ ಮಾಡುವ 1 ಕಂತು ಪಿತನ ನಿತ್ಯ ಯೋಗಕ್ಷೇಮ ತಾ ಹೊತ್ತು ನಡೆಸುವ ಹತ್ತಿಲೆ ತಂದು ತಪ್ಪದೆ ತುತ್ತು ಮಾಡ್ಯುಣಿಸುವ 2 ಸಣ್ಣ ದೊಡ್ಡದೆನ್ನ ಗುಡದೆ ಕಣ್ಣದೆರಿಸಿ ಚಿನ್ನುಮಯದ ಬಣ್ಣ ಭಾಸುತ ಪುಣ್ಯಮಹಿಮೆ ಕಾಣಿಸುವದು ವಾಸನೆ ಪೂರಿಸಿದ ವಾಸುದೇವ ನಿಶ್ಚಯ ಲೇಸಾಗಿ ಪಾಲಿಸುತಿಹ್ಯ ದಾಸ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು