ಒಟ್ಟು 9 ಕಡೆಗಳಲ್ಲಿ , 2 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1 ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2 ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಕಾಯಲಾ ಭಕ್ತವತ್ಸಲಾ ಬಂದು ಒದಗಿ ನಿಂದು ಭಯವ ದೂರ ಮಾಡಲಾ ಧ್ರುವ ಮೊರಿಯು ಕೇಳೆಲಾ ಹರಿಯು ನಿಶ್ಚಲಾ ದುರಿತ ಹರಿಸೆಲಾ 1 ಸುಳವದೋರಲಾ ಹೊಳೆದು ವಿಠ್ಠಲಾ ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ 2 ಬಂಧುಬಳಗ ದೈವ ಕುಲಕೋಟಿ ನೀನೆಲಾ3 ಹಿಂದೆ ಶರಣರ ಬಂದು ಕಾಯ್ದೆಲಾ ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ 4 ಅಂದು ಒದಗಿ ನೀ ಬಂದ ಪರಿಯಲಾ ಇಂದು ಅಭಿಮಾನ ಕಾವ ಬಿರುದು ನಿನ್ನದಲ್ಲಾ 5 ದಾತ ನೀನೆಲಾ ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ 6 ಪುಣ್ಯಪ್ರಭೆಯಿಂದಾ ಕಣ್ಣುದೆರಿಯಲಾ ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಲೆ ಮನವೆ ಸಲೆ ನಿನ್ನ ಮರೆವದು ಗುಣವೇ ಪ ಹರಿಯೋ ಮರವಿನ ಮುಸುಕಿದೆ ಮರೆಯೋ | ಸಿರಿ ಸೌಖ್ಯ ಮೃಗಜಳ ಪರಿಯೋ | ಚರವೆಂಬ ಹಂಬಲ ಮರಿಯೋ | ಪರಿ ವಾಸನೆಯ ಜರಿಯೋ | ಪ್ರಾರಬ್ಧ ನಿಜ ವೆಂದರಿಯೋ | ತಾಪ ಮೊನೆ ಮುರಿಯೋ | ಅರವಿನ ನಯನವದೆರಿಯೋ | ಪಾದ ಪದ್ಮಕ ಬೆರೆಯೋ 1 ತಿಳಿಯೋ ಇಳಿಯೊಳು ಸತ್ಪಥ ನೆಲಿಯೋ | ಕಳೇವರ ಸ್ಥಿರ ಬೊಬ್ಬುಳಿಯೋ | ನಲವಾರು ಅರಿಗಳ ನಳಿಯೋ | ಬಲಿತಿಹ ಹಮ್ಮಲ ಕಳಿಯೋ | ಬಳಲಿಪಾಗುಣ ಮಲ ತೊಳಿಯೋ | ಬಲು ಶಾಂತಿ ಹೃದಯದಲಿ ತಳೆಯೋ | ಒಲುವಂತೆ ಗುರುನಡಿ ಕಲಿಯೋ | ಸಲಹುವಾಗರದು ದಯ ಮಳಿಯೋ 2 ಜಡಿಯೋದೃಢ ಭಾವನೆಯನು ಹಿಡಿಯೋ | ಕೆಡುವ ಭಾವ ಮೂಲವ ಕಡಿಯೋ | ತಡಿಯದೆ ಮಹಿಪತಿ ದಯ ಪಡಿಯೋ | ಅಡಿಗಳಾಶ್ರಯವನು ಹಿಡಿಯೋ | ಒಡೆಯನಾಜ್ಞೆಯಂದದಿ ನಡೆಯೋ | ಕಡು ಪ್ರೀತಿಲಿ ಸ್ತುತಿ ನುಡಿಯೋ | ಮಡಿದ್ಹುಟ್ಟುವ ಜನ್ಮದ ಮುಡಿಯೋ | ಒಡನ ಹಾದಿದರಿಂದ ಕಡಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏಳಯ್ಯಾ ಏಳು ಕಂದಾ | ಏಳು ಪರಮಾನಂದಾ | ಏಳು ಈರೇಳು ಜಗದೊಡೆಯ ಶ್ರೀಮುಕುಂದಾ ಪ ಮೊರೆವದೊಂದೇಗಾಲಿ | ಪರಿವಹರಿವೇಗಮಂ | ಜರಿದು ಯೇಳು ಕುದುರೆಂಗಳದರಾ | ಪೋರವರುಣನಿಂದ ಭೋರ್ಗರೆವ ಸ್ಯಂದನದೊಳಗ | ಮೆರೆವ ದಿನಕರ ಉದಯವಾದ ಪೂರ್ವಾದ್ರಿಯಲಿ 1 ಬಿರಿಯೆ ಕಮಲದ ಮೋಗ್ಗೆ ಕರಿಯೆ ಗೋವತ್ಸಗಳು | ಪರಿಯೆ ನಕ್ಷತ್ರಗಳು ಗಗನದೊಳಗ || ಸರಿಯೆ ಚೋರ್ವಿರಹಿಗಳು ವರಿಯದಂತಾಲಯಕೆ | ದೆರಿಯ ಕಣ್ಣೆವಿಯಗಳು ನಿದ್ರೆಗೈದಿದ ಜನರು 2 ಓಡುತಿದೆ ಕತ್ತಲೆಯು ಬಾಡುತಿದೆ ಕುಮುದ ಮುಖ | ಕೂಡುತಿವೆ ಚಕ್ರವಾಕಂಗಳೀಗ | ಆಡುತೆಳೆದುಂಬಿ ಚಲ್ಯಾಡುತಿದೆ ಮಧುರನವ | ಪಾಡುತಿದೆ ಮಹೀಪತಿ ಸುತನಾಮ ಕೀರ್ತಿಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿಗಿಲ್ಲಾ ಈ ಮನಸಿನಾ ಪ ಒಂದು ನೆನೆಯೆ ಮತ್ತೊಂದು ನೆನೆಯುತಾ | ಒಂದರೆ ಘಳಿಗೆ ಹೊಂದದೆ ಸದ್ಗುಣ | ಕೂಪ ಹೋಗುವಂದದಿ ವಿಷಯ | ಮ | ದಾಂಧದಿ ಜೀವನ ಬಂಧಿಸುದೈಯ್ಯಾ 1 ಧೀರ ಶಾಸ್ತ್ರ ವಿಚಾರ ಕರ್ಮದಿ | ಶೂರರ ತಪ ವಿಹಾರರ ಜಗದೊಳು | ಆರಾದರಾಗಲಿ ಕ್ರೂರ ಕರ್ಮದಾ | ಗಾರ ಹುಗಿಸಿ ಘನ ಹೊರುವದೈಯ್ಯಾ 2 ಪುಣ್ಯದ ದಾರಿಗೆ ಕಣ್ಣವ ದೆರಿಯದು | ಅನ್ಯಾಯದಿ ಒಡಲನೇ ಹೊರುವದು | ಸನ್ನತ ಮಹಿಪತಿ ಚಿನ್ನನ ಪ್ರಭುದಯ | ಮುನ್ನಾದರ ಇನ್ನಾನರಿಯೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೆಳಗಾಯಿ ತೇಳಿರಯ್ಯಾ ಪ ಕರ ಪುಷ್ಕರದ ನೆಲೆಯ ಲೊಗದು | ಬಲಿದ ವೈರಾಗ್ಯ ವೈರಾಗ್ಯ ಮುಂಬೆಳಗ ಸುಖ ತಂಗಾಳಿ | ರವಿ ಉದಯಿಸಿದ 1 ನ್ಮತ್ತದುರ್ವಾದಿ ನಕ್ಷತ್ರದೆಡೆಗೆ | ಭವ ದ್ವಿಜ ರಿಂದ ಸುತ್ತುಗಟ್ಟಿ ಭಜಿಸುತಿದೆ 2 ನೆರೆಭಾವ ಭಕುತಿ ರಥ ಚಕ್ರನೆರೆಯೆ | ದುರಿತೌಘ ಮಂಜು ಮುಸುಕು ದೆರಿಯೇ | ಸಂಚಿತ ಮೊದಲ | ಹಂಸನು ಮೆರಿಯೆ 3 ಸಾಲ ಸ-ಚ್ಚಾಸ್ತ್ರಾ ದೇಳಿಗೆಗೆವಿದ್ವಜ್ಜ | ನಾಳಿ ಝೇಂಕರಿಸುತಲಿ ಮ್ಯಾಲನಲಿಯಿ | ಮೂಲ ರಘು ಪತಿಯ ದೇವಾಲಯದ ವಾದ್ಯಗಳು | ಘೇಳೆನಿಪ ನಿಜ ವೇದ ಘೋಷ ಕೇಳ ಬರುತಿದೆ ಜನಕೆ4 ಘನ ಪುಣ್ಯ ಪೂರ್ವಾದ್ರಿ ಕೊನಿಗೆ ಅರುಣಾಂಬರದಿ | ವಿನುತ ಜ್ಞಾನದ ಕಿರಣವನೆ ಪಸರಿಸಿ | ಜನದ ವಿದ್ಯದ ನಿದ್ರೆಯನೇ - ಜಾರಿಸಿ ಹೋದ | ಮಹಿಪತಿ ನಂದನ ನುಭಿವದಿ ಕೀರ್ತಿ ಪಾಡಿದನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾನವನೇನಣ್ಣಾ | ಅವನೀಗ | ತಾನುದ್ಧರಿಸಲುದೆರಿಯನು ಕಣ್ಣಾ ಪ ಭಕುತಿಗೆ ಕಾಯವ ಕದ್ದಾ | ವಿ | ರಕುತಿಗೆ ಮನವನುತಿದ್ದಾ | ಸಕುತಲಿ ವಿಷಯ ಮೆದ್ದಾ | ಮುಕುತಿ ಪಥದಿಂ ಜಾರಿ ಬಿದ್ದಾ 1 ಸಿಂತರ ಗುಣಗಳ ಕಡಿಯಾ | ಈ | ಭ್ರಾಂತರ ಸಂಗದಿ ಸಿಡಿಯಾ | ಸಂತರ ಕೇಳದೇ ನುಡಿಯಾ | ಅಂತರಂಗದ ಸುಖವನು ಪಡಿಯಾ 2 ಅರ | ವಿಂದನ ಭಜನೆಯ ಸ್ವಾದಾ | ಮಂದನು ತಿಳಿಯದೆ ಮರೆದಾ | ತಂದೆ ಮಹೀಪತಿ ನಂದನ ಸಾರಿದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೈಹೋಳು ನೀ ಬಂದು ಮೈಯ ಮರಿಯ ಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ಧ್ರುವ ಮಾಯಾ ಮೋಹದೊಳು ಸಿಲ್ಕಿ ದೇಹ್ಯ ಭ್ರಮೆಯಗೊಂಡು ಕಾಯ ಸೌಖ್ಯಕೆ ಬಾಯಿದೆರಿಯಬ್ಯಾಡವೋ 1 ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಪರಿಯಲಿನ್ನು ಕಣ್ಣು ಗೆಟ್ಟು ಕರುಡನಂತೆ ದಣಿಯಬ್ಯಾಡವೋ 2 ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿತೇಜನಂಘ್ರಿ ಬೆರೆದು ಮನಕೂಡವೂ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿದಾಸನವನೇ ನೋಡಿ| ಬರೇ ವೇಷ ದೋರಲ ಬೇಡಿ ಪ ಒಂದರ ಘಳಗೆಯ ಕುಂದದಿ ಕಳೆಯಾ|ಮು| ಕುಂದನ ನಾಮವ ಛಂದದಲಿಹ 1 ಅನ್ಯರ ದೂಷಿಸಿ ತನ್ನನೇ ಹೊಗಳನು| ಸಣ್ಣ ದೊಟ್ಟದರಲಿ ಘನ್ನರಿತಿಹ 2 ಹುಲ್ಲ ಮನುಜರಿಗೆ ಹಲ್ಲವದೆರಿಯದೆ| ಫುಲ್ಲನಾಭನಪದದಲಿಹ ಮನ 3 ಮುಂದಿನ ಹಾನಿಯು ಇಂದಿವೆ ತೋರಲಿ| ಮುಂದಿಟ್ಟಟಡಿಯನು ಹಿಂದಕೆಳೆಯ 4 ನುಡಿವದು ಸಲಭ ನಡೆವುದು ದುರ್ಲಭ| ನಡೆನುಡಿಯಲಿ ಸಮಧೃಡಗಂಡಿಹ 5 ಹಂಗವಳಿದು ಸತ್ಸಂಗದಿ ಶ್ರವಣದಿ| ಕಂಗಳ ಸಿರಿಸುಖ ಮಂಗಳಲಿಹ 6 ತಂದೆ ಮಹಿಪತಿ ನಂದನ ಪ್ರಭುದಯ| ದಿಂದ ಭವಾಲಯ ಸಂದ ಜರಿದ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು