ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸುವುದೆನಗಿತು | ಕರಿವರದ ಕೃಷ್ಣಾ |ನಿರುತ ನಿನ್ನಯ ಸ್ಮರಣೆ | ವೆರಕವಾಗಲಿ ಮನಕೆ ಪ ಪರಸತಿಯರೊಲಿಮೆಗೇ |ಎರಗುವೀ ಮನವನ್ನು ಬರ ಸೆಳೆದು ನಿನ್ನಂಘ್ರಿ | ಸರಸಿಜದೊಳಿರಿಸೋ |ಶರಣ ವತ್ಸಲನೆಂಬೊ | ಬಿರಿದು ನಿನ್ನದು ಇರಲುಬರಿದೇಕೆ ತಡಗೈವೆ | ಮರುತಾಂತರಾತ್ಮಾ 1 ಮುದಿತನದ ತನುವಿನಲಿ | ಮದಡಾಗಿ ಮೈಮರೆವೆಹೃದಯ ಸದನದಿ ನಿನ್ನ | ಪದವ ನೋಡದಲೇಎದುರಾಳಿ ತತ್ವೇಶ | ರಧಿಕಾರ ತಪ್ಪಿಸುತಪದುಮನಾಭನೆ ನಿನ್ನ | ಪದ ತೋರೊ ಘನ್ನಾ 2 ಪುಂಡಲೀಕನಿಗೊಲಿದೆ | ಪಾಂಡವರ ಪಾಲಿಸಿದೆಪುಂಡರೀಕಾಕ್ಷ ದೃಹಿ | ಣಾಂಡಗಳ ವಡೆಯಾ |ಅಂಡಜಾಧಿಪ ತುರಗ | ಕುಂಡಲಿಯ ಶಯನ ಹೃತ್‍ಪುಂಡರೀಕದಿ ತೋರೊ | ಗುರು ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಪಾಲಿಸೆನ್ನ ಮಾತೆ ಕರುಣದಿ ಪಾಲಾಂಬುಧಿ ಜಾತೆ ಪ ಕಾಲಕಾಲಕೆ ಕಮಲಾಲಯೆ ಗೋಪಿಯ ಬಾಲನಾಳುಗಳ ಊಳಿಗವಿತ್ತು ಅ.ಪ ಜಾನಕಿಶುಭಗಾತ್ರೆ ನಮಿಸುವೆ | ಮಾನಿತೆ ಚರಿತ್ರೆ ಸಾನುರಾಗದಿ ತವ ಸೂನುವೆನಿಪ ಪವ ಮಾನಸುಶಾಸ್ತ್ರದ ಜ್ಞಾನವಿತ್ತು ಸದಾ 1 ಶಂಭು ದೃಹಿಣಿ ವಿನುತೆ ತ್ರೈಜಗ ದಂಬೆ ಸುಗುಣ ಭರಿತೆ | ಕುಂಭಿಣಿ ಸುತೆ ದುರ್ಗಾಂಭ್ರಣಿ ಮಮಹೃದ ಯಾಂಬುಜದೊಳಿಹ ಬಿಂಬನ ತೋರಿ 2 ಪ್ರೇಮದಿಂದ ನೋಡೆ ಮನ್ಮನ | ಧಾಮದಿ ನಲಿದಾಡಿ | ಕಾಮಿನಿಮಣೀ ಗಜಗಾಮಿನಿ ಗೋಮಿನಿ ಶಾಮಸುಂದರನ ವಾಮಾಂಗಿಯೆ ಸದಾ 3
--------------
ಶಾಮಸುಂದರ ವಿಠಲ