ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದೆನ್ನ ಜನ್ಮ ಪಾವನವಾಯಿತು ತಂದೆ ಶ್ರೀಗುರು ನಿಮ್ಮ ಚರಣ ದರುಶನದಿ ಧ್ರುವ ಅರ್ಕ ಮಂಡಲಗಳು ರವಿಶಶಿ ಕಿರಣವು ಝಳಝಳಿಸುವ ಪ್ರಭೆ ನೋಡಿ ಅನಿಮಿಷದಾದೃಷ್ಟಿಲೆನ್ನ ಲಕ್ಷಿಯೊಳು ಸಾಕ್ಷಾತ್ವಸ್ತು ಗತಿಯು ನಿಮ್ಮ ಪ್ರಕಾಶವನು ಕಂಡಾಂಧತ್ವಗಳದಿನ್ನು 1 ಓಂಕಾರ ಮೊದಲಾದ ದ್ವಾದಶ ನಾದದಾ ಭೇದದಾ ಘೋಷವನು ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ ಲಯಲೀಲೆಯೊಳು ಸಾದೃಶ್ಯ ಮೂರ್ತಿಯು ನಿಮ್ಮ ಶ್ರುತಿಗಳು ಕೇಳಿ ಬಧಿರತ್ವವಾಗಳಿದಿನ್ನು 2 ಜಪವನ್ನು ತಿಳಿದು ಪ್ರಣಮ್ಯಲೆನ್ನ ಮೂರ್ತಿ ನಿಮ್ಮ ಮಂತ್ರವನು ತಿಳಿದು ಪಿಶಾಚತ್ವ ಕಳೆದಿನ್ನು 3 ಸ್ತುತಿ ಸ್ತೌತ್ಯ ಸ್ಮರಿಸುವ ದಿವ್ಯನಾಮಾಮೃತವ ನುಡಿದು ಪಯಸ್ವನೀ ಜಿಹ್ವೆಲೆನ್ನ ಮೂರ್ತಿ ನಿಮ್ಮ ಸ್ಮರಿತ ಗತಿವರಿತು ಮೂಕತ್ವ ಕಳೆದಿನ್ನು 4 ಚಿನ್ಮಯ ಚಿದ್ರೂಪ ಕಂಡು ಬೆರಗಾಗಿ ಮನ ಭ್ರಾಂತಿ ಅಜ್ಞಾನವನ್ನು ಜರಿಯಲೆನ್ನ ಏಕೋದೇವ ಈತ ವಿಶ್ವಾತ್ಮ ಹಂಸನೆಂದು ಸಂದೇಹ ಸಂಕಲ್ಪ ಬಾಧೆಯಾಗಳದಿನ್ನು 5 ಭಕ್ತಿ ಮುಕ್ತಿ ಉದಾರಿ ಆತ್ಮದಲಿ ಸಾರಿದೋರಿ ನಿಜ ಬೋಧಾಮೃತ ಬೆರೆದು ತಾರಿಸಲೆನ್ನ ಗರ್ಭಪಾಶದ ಬಲಿಯು ಹರಿದು ಧರೆಯೊಳಿನ್ನು ಉತ್ಪತ್ತಿ ಸ್ಥಿತಿ ಲಯದ ಬೀಜವನ್ನು ಹುರಿದಿನ್ನು 6 ಭಾಸ್ಕರಸ್ವಾಮಿಯ ಕರುಣಾಳು ಮೂರ್ತಿಯ ಮೂಢ ಮಹಿಪತಿಯ ಕೃಪಾಂಬುಧಿಯು ಕರುಣದಭಯ ಹಸ್ತವನು ಶಿರಸದಲ್ಲಿಡಲಾಗಿ ಧನ್ಯನಾದೆನು ಸತಿಪತಿ ಸಹಿತವಾಗಿನ್ನು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಕಾಯೊ ಕಾಯೊ ಕೃಪಾನಿಧಿ ಕಾಯೊ ಕೃಪಾಳು ಸದ್ಗುರು ದಯ ನೀ ಪಾಲಿಸಿ ಸೋಹ್ಯಸೊನ್ನೆ ಸೂತ್ರಗುಹ್ಯ ಗೂಢದೋರಿ ಸಾಹ್ಯಮಾಡೊ ಸ್ವಾಮಿ ಸಾಕ್ಷಾತ್ಕಾರ ನೀ ದೋರಿಸಿ ನ್ಯಾಯದಲಿ ಮಿಥ್ಯಾಮಾಯ ಮೊನೆಮುರಿಸಿ ತೋಯಜಾಕ್ಷ ನಿಮ್ಮ ಶ್ರಯ ಸುಖ ಬೀರಿ ಭವ ಭಯ ಹರಿಸೊ ಗುರು ಕರುಣಿಸೊ 1 ನಾನಾರು ಎಂದು ಸಾಖೂನ ತಿಳಿಯದೆ ನಾನಾ ಯೋನಿಮುಖ ಜನಿಸಿ ಬಂದೆÀನಯ್ಯ ಜನುಮ ಜ್ಞಾನಗಮ್ಯವಾದ ಸ್ಥಾನದೋರಿ ನಿಜ ಧ್ಯಾನ ಮೌನದನುಭವ ಸುಖ ನೀಡೊ ನಿಮ್ಮ ನ್ಯೂನ ಪೂರ್ಣ ಎನ್ನ ನೀ ನೋಡದೆ ಸ್ವಾಮಿ ಸ್ವಾÀನುಭವದ ಸುಜ್ಞಾನ ದೀಪಲಿಡೊ ನಮ್ಮ ಮನೋನ್ಮನವಾಗಿ ಘನ ಕೈಗೂಡುವಾ ಸನ್ಮತ ನೋಡಿ ಸುವರ್ಮ 2 ನೋಡದೆ ಗುಣದೋಷ ಮಾಡಿ ಉಪದೇಶ ದೃಢಭಾವದ ಸುಪಥ ಒಡನೆ ಗೂಡಿಸೊ ನೋಡಿ ದೃಷ್ಟಿಲೆನ್ನ ಒಡೆಯ ಸದ್ಗುರು ಪೂರ್ಣ ಓಡಿಹೋಗುವಂತೆ ಭಕ್ತಿ ಜ್ಞಾನ ವೈರಾಗ್ಯವಿಡಿಸೊ ನೀಡಿ ಅಭಯಕರುಣಕವಚವ ತೊಡಿಸೊ ಪಿಡಿದು ಎನ್ನ ಕೈಯಾ ಮೂಢ ಮಹಿಪತಿಯ ಬಿಡದೆ ಕಡೆಗಾಣಿಸೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಧವ ಬೇಡಿಕೊಂಬೆ ಪ ನೋಡಿ ನೀ ದಯಮಾಡಿ ಎನ್ನಯ ಪೀಡೆ ದೂರಮಾಡು ಬೇಗದಿಅ.ಪ ಅದ್ರಿಧರನೆ ಪರಮದಯಾಸ ಮುದ್ರ ಎನ್ನನು ಕೊಲ್ಲುವ ಕಡುದಾ ರಿದ್ರ್ಯಕಳೆದು ಬಯಲುಮಾಡಿ ಭದ್ರವಾಗಿ ಕಾಯೊ ಹರಿಯೆ 1 ಕ್ಷುದ್ರದನುಜರ ಸದೆದು ಭರದಿ ಅದ್ರಿಯೆತ್ತಿ ಭಕ್ತಜನರ ಸುಖ ಸ ಮುದ್ರದಿರಿಸಿ ಪೊರೆದೆಯೊ ಭುಜ ಗಾದ್ರಿಶಾಯಿ ಸುದೃಷ್ಟಿಲೆನ್ನ 2 ಎನ್ನ ಮನಸಿನ ಡೊಂಕ ತಿದ್ದಿ ನಿನ್ನ ಚರಣದಾಸನೆನಿಸಿ ಬನ್ನಬಡಿಸದೆ ಇನ್ನು ಜಗದಿ ಮನ್ನಿಸಿ ಪೊರೆ ವರದ ಶ್ರೀರಾಮ3
--------------
ರಾಮದಾಸರು