ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೀವ ನಾನೆನ್ನಬೇಡ ಮುಕ್ತಾ ಜೀವ ನಾನೆನ್ನ ಬೇಡ ಮುಕ್ತಾ ನೀನೆದೇವ ಚಿದಾನಂದನು ನೀನೆ ಸತ್ಯ ಅವಶ್ಯಕ್ತಾ ಪ ಸತಿ ಇಲ್ಲಿ ಸುತರು ಎಂಬುದಿಲ್ಲಭಾಗ್ಯವು ಎಂಬುದಿಲ್ಲ ಮನೆಇಲ್ಲವು ಇಲ್ಲವು ದೇಹವು ನಿನಗೆಎಲ್ಲವು ಭ್ರಾಂತಿಯು ನೀ ಪರಮಾತ್ಮ 1 ಆರು ನಿನಗೆ ತಾಯಿಯು ಯಾರು ತಂದೆಯ ತಾ ನಾರು ಹಿತರುಯೆಂಬರಾರು ಮೊದಲು ನೀನಾರುಆರಾರಿಲ್ಲವು ಕೆಡಬೇಡ ವ್ಯರ್ಥವುಪೂರಣ ತಿಳಿ ನಾ ಸಾಕ್ಷಾತ್ತೆಂದು 2 ಒಳಗೆ ದೃಷ್ಟಿಯಿಡು ದೃಷ್ಟಿಯೊಳಗೆ ಉಕ್ಕುವ ಕಳೆಯೊಳಗೆ ಉಕ್ಕುವ ತೇಜದೊಳಗೆ ಆ ಬೆಳಗಿನ್ನೊಳಗೆಥಳಥಳಿಸುತ ಕಲೆ ತಾ ಬಂಡದಿನಳನಳಿಸುವ ಚಿದಾನಂದನೆ ಆಗೋ 3
--------------
ಚಿದಾನಂದ ಅವಧೂತರು
ತಲೆ ಬೆಳಗಾಯಿತು ತಲೆ ಬೆಳಗಾಯಿತು ಎನ್ನ ಬೆಳಗದೊಳು ಕೂಡಿ ಧ್ರುವ ಹಿಂದೆ ಗೋವಿಂದನು ಮುಂದೆ ಮುಕುಂದನು ಅಂದಿಗಿಂದಿಗೆ ಅನಿರುದ್ಧ ತಂದೆ ತಾಯಿಯ ವೃಂದಾವನ ಪತಿಯು ಮಂದರಧರ ಬಂಧು ಬಳಗ 1 ಕುಂದ ನೋಡದೆ ಸಲಹುವ ಸಂಕರುಷಣಾ ನಂದ ಮೂರುತಿ ತ್ರಿ ವಿಕ್ರಮನ ದುರಿತ ದೂರಮಾಡಿ ದಾಮೋದರ ಚಂದ ಮಾಡುವ ಜನಾರ್ದನನು 2 ಎಡಕ ಯಾದವ ನಾರಾಯಣ ಕೃಷ್ಣನು ಬಲಕ ಬಾಲಮುಕುಂದ ಎತ್ತ ನೋಡಿದರತ್ತ ಸುತ್ತ ಪುರುಷೋತ್ತಮ ಚಿತ್ತ ಮನದೊಳು ಅಚ್ಯುತನು 3 ಪ್ರಾಣಪತಿಕರಿಸಿಹ್ಯ ಪ್ರದ್ಯುಮ್ನ ಆಭಯನಿತ್ತಿಹ ಪದ್ಮನಾಭ ಮಾಧವ ಮಧುಸೂದನ ಯದು ಕುಲೋತ್ತಮ ಶ್ರೀಧರನು 4 ತುಂಬಿ ಹೃಷಿಕೇಶ ದೃಷ್ಟಿಮೂರುತಿ ನರಸಿಂಹ ದೃಷ್ಟಿಯೊಳಗೆ ಹರಿ ವಿಷ್ಣು ವಾಸುದೇವ ಸೃಷ್ಟೇಶ ಗುರು ಕೇಶವನು 5 ಲಕ್ಷ್ಮಿಯೊಳಗೆ ಗುರು ಲಕ್ಷುಮಿಕಾಂತನು ರಕ್ಷಿಸುವ ಅಭೋಕ್ಷಜನು ಉಪೇಕ್ಷವಿಲ್ಲದೆ ಹೊರೆವ ಉಪೇಂದ್ರನು ಮೂರ್ತಿ ವಾಮನನು 6 ತುಂಬಿದ ಬಳಗವು ಕಂಡ ಮೇದಿನಿಯೊಳು ಕಂದ ಮಹಿಪತಿ ಸ್ತುತಿಸಿದನು ಬಂದ ಜನ್ಮವು ಕಡೆ ಆಯಿತೆಂದು ಮನದೊಳು ತ್ರಾಹಿ ತ್ರಾಹಿ ಎಂದ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೃಷ್ಟಿಯೊಳಗೆ ದೃಷ್ಟಿ ನಿಂತಿತು | ನೋಡಲಿನ್ನು ದೃಶ್ಯ ನಷ್ಟವಾಯಿತು | ಕಷ್ಟವೆಲ್ಲ ಕಡೆಗೆ ಸಾರಿ | ಅದೃಷ್ಟವನ್ನು ಮೀರಿ ನಿಂದು ನಿಷ್ಠೆಯಲ್ಲಿ ತುಷ್ಟಿಯಾಯ್ತು ನೀ ನೋಡು ಸಖಿಯೆ ಪ ಐದು ಮಂದಿ ಅಗಲಿ ಹೋದರೆ | ಐದಕೈದು ಕೂಡಿ ಬಂದು ಕೂಡದಾದರೆ | ಐದರೊಳಗೆ ನೋಡಲಿನ್ನು || ಐದು ಐದು ತಾನೆ ಅಲ್ಲ | ಐದನೇದರಲ್ಲಿ ನಿಂತೆನೇ | ನೀ ಕೇಳಿದೇನೆ ? 1 ಕರ್ಮವೆಲ್ಲ ಕಾಣದಾಯ್ತು | ಧರ್ಮವೊಂದು ಸರ್ವಕಾಲ ತೂಗಿ ನಿಂತಿತು |ಶರ್ವನಲ್ಲದಿನ್ನು ಮತ್ತೆ | ಉರ್ವಿಯಲಿ ಪೇಳದಾಗಿ ಪರ್ವತಾಗ್ರ ಭೂಮಿ ಒಂದು ನಿರ್ವಿಕಾರ ತೋರಿತಲ್ಲಾ 2 ಹಿಂದೆ ಎಂದು ಕಂಡಿದಿಲ್ಲ | ಈ ಸೋಜಿಗವನ | ಮುಂದೆ ದಾರಿಗುಸುರಲೀಗತೀ | ತಂದೆ ಭವತಾರಕನ | ಹೊಂದಿದವರ ಕೇಳಿದೇನೆ | ಎಂದು ಎಂದು ಹೀಗೆಂಬರೆ | ನೀ ಬಲ್ಲಿಯೇನೇ 3
--------------
ಭಾವತರಕರು
ಬಗಳೆ ತಾನಾದವಗೆ ಏನು ಚಿಂತೆನಿಗಳಬಂಧನದ ಮತ್ತಗಜದಂತೆಪನಿದ್ರೆಯೊಳಗಣ ನಿದ್ರೆ ನಿತ್ಯದಿ ತಾಳ್ದಿಳಿದುನಿದ್ರೆ ದೃಷ್ಟಿಯೊಳಗೆ ದೃಷ್ಟಿಯಿಟ್ಟುನಿದ್ರೆಯನು ಸೋಂಕದಲೆನಿಂದುನಿದ್ರೆಯ ಸುಖವನಿದ್ರೆಯೊಳಗನುಭವಿಸಿನಿತ್ಯತಾನಾದ1ಕುಣಿಯುತಿಹ ಚಿತ್ಕಳೆಯ ಮನಕೆ ತಾ ತೋರುತಲಿಘಣ ಘಣಿಪ ಘಂಟೆ ನಾದವನಾಲಿಸಿಎಣಿಕೆಯಿಲ್ಲದಸೂರ್ಯಚಂದ್ರ ಬೆಳಗನೆ ಬೆಳಗಿಮನ ಸುಖಿಸಿ ಮನವಳಿದು ಮಹಿಮ ತಾನಾದ2ನಿಂದ ನಿಜದಲಿ ಬೆರತು ಬಾಹ್ಯಾಂತರವ ಮರೆತುಹೊಂದದಲೆ ದುರ್ಗುಣದ ವಾಸನೆಗಳಾಬಂಧನಂಗಳ ಕಳೆದು ಬವಣೆಗಳ ತಾನೀಗಿಸುಂದರಾತ್ಮನೆ ಆಗಿಶೂನ್ಯತಾನಾದ3ಎಲ್ಲೆಲ್ಲಿ ತಾನುಂಡು ಎಲ್ಲೆಲ್ಲಿ ತಾ ಮಲಗಿಎಲ್ಲ ಸ್ಥಳದೊಳು ತಾನು ಚರಿಸಿಎಲ್ಲ ಜನ ಬೆರಗಾಗೆ ತನ್ನ ದರುಶನ ನೀಡಿಸೊಲ್ಲುಡುಗಿ ಸಾಕ್ಷಾತ್ತು ಸಹಜ ತಾನಾದ4ತೂಗಾಡುತ ಕಣ್ಣ ಮುಚ್ಚಿ ತೆರೆಯುತ್ತಆಗಜರೆಜನನ ಮರಣಂಗಳಳಿದುಯೋಗಿಚಿದಾನಂದಗುರುತಾನಾದಬಗಳಾಂಬ ತಾನಾಗಿ ಪೂರ್ಣಬ್ರಹ್ಮ ತಾನಾದ5
--------------
ಚಿದಾನಂದ ಅವಧೂತರು