ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

|| ಶ್ರೀ|| ಪದ್ಯ|| ಮುಂದೆ ತುಳುಜಾ ದೇವಿ ಬಂದು ನಿಂತಿರಲು ತ್ವರದಿಂದ ನೋಡ್ಯನುಭೂತಿ ಬಂದಂಥ ದೇವಿಯ ಚಂದದ ಬಹು ತೇಜವೆಂದು ತಿಳಿಯದೆ ಎನ್ನ ಮುಂದೆದುರಿಗೆ ಏನು ಬಂದಿರುವುದೆಂದು ತ್ವರದಿಂದ ನಡುಗಿದಳು|| ಮುಂದ ಆದೇವಿ ತಾ ಮುಂದಕ್ಕೆ ಕರೆಯುತಲೇ ಕುಂದರದನಿಯೇ ಕೇಳು ಕುಂದು ನಿನ್ನಲ್ಲಿ ಇಲ್ಲ ಎಂದು ನಿನ್ನ ಭಕ್ತಿಗೆ ಚಂದಾಗಿ ಅಭಯದ ಕೂಟ್ಟಂದಳೀಪರಿಯ||1 ಪದ ರಾಗ:ಕಾನಾಡ ಆದಿತಾಳ ಬೇಡು ಬೇಕಾದ್ದು ಬ್ಯಾಗನೇ|| ಅನುಭೂತಿ|| ಬೇ|| ನೀಡುವೆ ನಾನು|| ಪ ಮಾನಸ ದುಃಖವ್ಯಾಕಿದು || ನಿನ್ನ ಭಿಮಾನವೆಂಬುದು ನನ್ನದು|| ಮಾನಿತರೊಳ್ಹಗತಿ ಮಾನವಂತೆಯೇ ಮಾನುನಿ ಮಣಿ ಅನುಮಾನವ ಬಿಟ್ಟು|| 1 ಎಷ್ಟು ಸ್ನೇಹವ ತೋರಲಿ|| ಬಂದೆ ಸಂತುಷ್ಟಳಾಗುತ ನಿನ್ನಲಿ|| ಶಿಷ್ಟಳೆ ನೀ ಕೇಳಸ್ಪಷ್ಟದಿ ನಿನಗೆ ದೃಷ್ಟಿಗೆ ಬೀಳಲು ಕಷ್ಟಗಳುಂಟೆ|| 2 ಚಿಂತಿಸಿದಿ ಯಾಕೆನ್ನನು|| ಬಂದಂತಹ ಚಿಂತೆ ಎಲ್ಲಾನೂ ಕಳೆವೆನು|| ಸಂತೋಷದಲಿ ಅನಂತಾದ್ರೀಶನ ಚಿಂತನದಿಂದಿರು ಚಿಂತೆಯನು ಬಿಟ್ಟು|| 3 ಆರ್ಯಾ ಅತಿ ಹಿತ ವಚನವನು ಕೇಳಿ || ಅತಿ ಹರುಷಿತಳಾದಳಾಗ ಆ ಬಾಲೆ ಹಿತವಾಯಿತು ಎನಗೆಂದು || ನತಿಸುತ ಮಾತಾಡಿದಳು ಹೀಗೆಂದು|| 1 ಪದ ರಾಗ:ಮುಖಾರಿ ಆದಿತಾಳ ತುಳುಜಾದೇವಿಯೇ|| ಪ ನಮೋ ಎಂಬೆ ಮತ್ತು ಜಗದ್ಥಾತ್ತಿಯೆ || ಬಹುಪ್ರಮಿತಾ ಹಿಮಾಚಲನ ಪುತ್ರಿಯೇ || ಸುಮಹಿಮ ಸುಂದರಗಾತ್ರಿಯೇ|| ಮನದಾ ಅಮಿತಾರೋಗಕ್ಕೆ ಮಹಾಮಾತ್ತಿಯೇ|| 1 ತ್ವರಿತಾದಿಂದಲೇ ಬಂದಂಥಾಕಿಯೇ || ಎಂದು ತ್ವರಿತಾ ತ್ವರಿತಾದೇವಿಯು ಎನಿಸು ವಾಕೆಯೆ|| ಮರೆತಿರಲಾರೆ ನಾ ನಿನ್ನಕಿಯೇ || ಸ್ನೇಹಾಭರಿತಾಗಿ ಭಕ್ತರನ ಸಲಹವಾಕಿಯೇ|| 2 ಚಿಂತಿ ಮಾಡಲು ಬಂದು ನಿಂತಿಯೇ || ಎನಗೆ ಚಿಂತಿಯು ಮಾಡಬ್ಯಾಡಂತಿಯೇ|| ಎಂಥಾಕಿ ನೀನು ದಯಾವಂತಿಯೇ || ವರದಾ ನಂತಾದ್ರೀಶನ ಸಖನ ಕಾಂತಿಯೇ|| 3 ಆರ್ಯಾ ಕರ ಮುಗಿದು|| 1 ಪದ ರಾಗ :ಆನಂದ ಭೈರವಿ ವರಕೊಡು ಎನಗಿದು ತ್ವರಿತದಿ ತಾಯಿ|| ಮರೆಯ ದೆಂದೆಂದೂ ಹಗಲಿರುಳು ನೀ ಕಾಯಿ|| ಪ ಮಂದ ಮತಿಯು ದೈತ್ಯ ಬಂದಿಹನೋಡು|| ಕೊಂದವನ ಎನಗಾನಂದವ ನೀಡು 1 ಮಾಡುವ ತಪಸ್ಸಿಗೆ ಕೇಡು ತಂದಿಹನು|| ಮಾಡಲಿನ್ನೇನು ನಿನಗೆ ಬೇಡಕೊಂಬುವೆನು|| 2 ಪತಿಯ ಸೇವಿಸುವಂಥ ಸತಿಯು ಬೇಡುವೆನೂ|| ಸತತಾನಂತಾದ್ರೀಶನಾ ಸ್ವøತಿಯು ಮಾಡುವೆನು|| 3 ಅನುಭೂತಿಯ ವಚನವನು || ಅನುಸರಿಸುತ ಬ್ಯಾಗಕೊಟ್ಟು ಎನಗಿಲ್ಲೆಂತ್ಯಂದಳಾಗ ಜಗದಂಬಾ|| 1 ಮಾಡಿದಳು|| ಹುಂಕಾರ|| 2 ಒಗೆದಾನು ಯುದ್ಧದಲ್ಲಿ ಜಾಣಾ|| 3 ಸಾರಶಕ್ತಿಯನು ತೆಗೆದಾ ಶೌರ್ಯದಿ ಮತ್ತಾಕೆಯಲ್ಲೇ ಒಗೆದಾ|| 4 ಎದೆಗ್ಹೊಡೆದಳು ಶೂಲದಲೆ||ಅದುರೂಪವು ಬಿಟ್ಟು|| ತನ್ನಕ ಪಟದಲೆ ಕುದುರೆಯ ರೂಪವ ಧರಿಸಿ|| ಒದರುತ ನಿಂತಾಗ ಮುಂದ ಖ್ಯಾಕರಿಸಿ|| 5 ಗಾಢನೆ ಮಹಿಷಾಗಿ ಬಂದ ಬದಿಯ್ಮಲೇ 6 ತೋರುವ ಬಹುಬೆಟ್ಟಗಳ|| ಕೊಡಗಳಿಂದಲೇ ಕೊಡಗಳ್ಹಗಳು| ಮಾಡುವ ವೃಷ್ಟಿಯದೆಷ್ಟು|| ಕಾಡುವ ಕಪಟದಿಂದ ಮತ್ತಿಷ್ಟು 7 ಶೃಂಗಗಳಿಂದ ಹಿಡಿದಳು ದÉೈತ್ಯಬಾಯಿಬಿಡುವಾ|| 8 ಅವನ ಮುರದೊತ್ತಿ 9 ಕಡೆದಳು ಆಗವನ ಬಿಲ್ಲುಬಾಣದಲೆ|| 10 ದಾನವನು|| ಹುಟ್ಟಿದ ಸೈನ್ಯವು ಎಲ್ಲಾ|| ಪೆಟ್ಟು ಹಾಕುತ ಬಂತು ಭೂತಗಳಿಗೆಲಾ||್ಲ 11 ತಡಿಯದೇ ಅವನ ಹುಡುಕುತಲಿ || ಕಡಿದಳು ಶಿರ ಕಡೆದಳು ಮತ್ತವನ ಶಿರವು ಖಡ್ಗದಲೇ|| 12 ಸುರರು ಥಟ್ಟನೆ ಕರೆದರು ಪುಷ್ಪ ದೃಷ್ಟಿಯನು|| 13 ಪದ್ಯ ರಾಗ:ದೇಶಿ ಅಟತಾಳ, ಸ್ವರ ಷಡ್ಜ ಓಡಿ xಟ್ಟನೆ ಹಿಡಿದರಾಗ|| 1 ಕುಕ್ಷಿಗಿಲ್ಲದಲೆ ಬುಭೂಕ್ಷಿತರದು ಎಲ್ಲಾ ಭಕ್ಷಣ ಮಾಡುವರು|| ಅಕ್ಷಯ ಬಲದಿಂದ ದಕ್ಷರು ಎಲ್ಲಾರು ರಾಕ್ಷಸರಾದರು|| 2 ಭೈರವಾದಿಗಳು ಎಲ್ಲಾರು ದೇವಿಯ ಪರಿಚಾರಕರಾದವರು ಸೇರಿ ಸೈನ್ಯದಲ್ಲಿ ಅಪಾರ ಸಂಭ್ರಮದಲ್ಲಿ ಹಾರ್ಯಾಡುತಿರುವರು3 ಆ ತಾಳಮೊರದಂಥ ಬೇತಾಳ ಗಣಗಳು ಪ್ರೇತ ಪಿಶಾಚಿಗಳು|| ಯಮದೂತರಸಮರವರು|| 4 ರಕ್ತ ಪಾನವ ಮಾಡಿದರು|| 5 ದುರುಳರನೆಲ್ಲನು ಹೊರಳಿಸಿ ಹೊಟ್ಟೆಯ ಕರಳವ ಬಗಟಿದರು| ಸರಳವಾದ ಆ ಕರಳ ಮಾಲೆಯ ಮಾಡಿ ಕೊರಳೊಗ್ಹಾಕಿದರು||6 ಹಾಕಿಕೊಂಡು ಕುಣಿದಾಡಿದರು||7 ಕಂಕಲಾದಿಗಳು ಭಯಂಕರರವರು ಅಸಂಖ್ಯಾಕರಾಸವರು|| ಶಾಂಕರೀ ದೇವಿಯ ಕಿಂಕರರಿಂಥ ಅಲಂಕಾರಗಳನಿಟ್ಟರು || 8 ಅವನಂತವ ಅರಿಯೇ ನಾನು|| 9 ಆರ್ಯಾ ಬಲ್ಲಿದ ದೈತ್ಯದ ಕೊಂದು || ನಿಲ್ಲದೆ ಅನುಭೂತಿ ಬದಿಯಲೇ ಬಂದು || ಅಲ್ಲಿಹಳು ಮಹಾಮಾಯಾ|| ಇಲ್ಲಿ ಗೆ ಪೂರ್ಣಾಯಿತು ಎರಡು ಅಧ್ಯಾಯಾ || ಶ್ರೀ ಹರೇಪ್ರಸೀದ||
--------------
ಅನಂತಾದ್ರೀಶ - ಕಥನಕಾವ್ಯಗಳು
ಬುದ್ಧಿಯ ನಾನೇ ಹೇಳುವೆ ಎಲೆ ಎಂಗರವಟ್ಟೆಬುದ್ಧಿಯ ನಾನು ಹೇಳುವೆಬುದ್ಧಿಯ ನಾನು ಹೇಳುವೆ ಶುದ್ಧ ಬ್ರಹ್ಮನು ನೀನು ಎಲೆ ಎಂಗರವಟ್ಟೆ ಪ ಸತಿ ಎಲ್ಲಿ ಹಿಂದಣ ಸುತರೆಲ್ಲಿಹಿಂದಾದುದನು ಬಿಟ್ಟು ಇಂದಿದು ನನ್ನದೆಂಬೆ ಎಲೆ ಎಂಗರವಟ್ಟಿ 1 ಮುಂದಾವ ಜನ್ಮ ಭೋಗಿಪೆಯೋ ಎಲೆ ಎಂಗರವಟ್ಟೆಮುಂದಾರ ಮದುವೆಯಹೆ ಎಲೆ ಎಂಗರವಟ್ಟೆಮುಂದಣ ತಾಯಿ ಯಾರು ಮುಂದಣ ತಂದೆ ಯಾರುಮುಂದಣ ಹಿಂದಣದರಿಯೆ ಇಂದಿನದು ಎನ್ನದೆಂಬೆ ಎಲೆ ಎಂಗರವಟ್ಟಿ2 ಭಿಕ್ಷವ ಹಾಕಲಾರಿ ಎಲೆ ಎಂಗರವಟ್ಟೆ ಕುಕ್ಷಿಗೆ ತಿನ್ನಲಾರಿಲಕ್ಷ ಹೊನ್ನುಗಳನ್ನು ನೆತ್ತಿಗೆ ಇಟ್ಟುಕೊಂಬೆಯಾ ಎಲೆ ಎಂಗರವಟ್ಟೆ 3 ತನುವಿದು ತನ್ನದೆಂಬೆ ಎಲೆ ಎಂಗರವಟ್ಟೆ ತನುವನು ನೋಡಿಕೊಂಬೆನಿನ್ನ ಮುಂದೆಯೇ ತನು ತಾನು ಹೋಗುವುದುತನುವದು ನಿನಗಿಲ್ಲ ತನು ಸಂಬಂಧವೆಂತೋ ಎಲೆ ಎಂಗರವಟ್ಟೆ4 ಹಿಡಿಯೋ ಗುರುಪಾದವನು ಎಲೆ ಎಂಗರವಟ್ಟೆ ಪಡೆಯೋ ಕಟಾಕ್ಷವನುಸಡಿಲದೇ ದೃಷ್ಟಿಯನು ತಿರುಹಿ ನಿನ್ನೊಳಗಿಟ್ಟುಒಡೆಯ ಚಿದಾನಂದನು ನೀನಾಗಿ ನೀನಿರು 5
--------------
ಚಿದಾನಂದ ಅವಧೂತರು
ವೈಶಾಖದುತ್ಸವ ಗೀತೆ ವರ್ಣಿಸಲಳವೆ ವೈಶಾಖದುತ್ಸವವಾ ಪ. ವೃಷಭಸೇರಿದ ವೈಶಾಖಮಾಸದ ಶುಕ್ಲ ಪಕ್ಷದ ಷಷ್ಠಿಯಲಿ ಕಂಕಣವ ಕಟ್ಟಿ ಪಟ್ಟದರಸಿ ಯರ್ಸಹಿತ ದಿಟ್ಟತನದಲಿ ಪೊರಟು ಶ್ರೇಷ್ಠವಾದ ಮಧ್ಯಮಂಟಪಕೆ ನಡೆತಂದ 1 ಮುದ್ದುಮೊಖ ಮುಗುಳ್ನಗೆಯು ವಜ್ರದ ಕಿರೀಟವು ತಿದ್ದಿದ ಕಸ್ತೂರಿತಿಲಕ ಹೊಳೆವ ವಜ್ರದ ಪದಕಗಳು ನಾಲ್ಕು ಮೂರನೆ ಧರಿಸಿ ಪ್ರಜ್ವಲಿಸುತ ಬಂದ ಅರ್ಜುನ ಸಾರಥಿಯು 2 ಶಿರದಿ ಪುಷ್ಪವ ಧರಿಸಿ ಪರಮಪುರುಷನು ತಾನು ಕೊರಳಲ್ಲಿ ವೈಜಯಂತಿಮಾಲೆಯನು ಧರಿಸಿ ಕರದಲ್ಲಿ ಪರಿಮಳದ ಗಂಧವನು ಧರಿಸಿ ಪರಮ ಪುರುಷನು ಬರುವ ಪರಿಯನೇನೆಂಬೆ 3 ದಂತದ ಉಯ್ಯಾಲೆಮಂಟಪದಲಿ ನಿಂದು ಕಂತುಪಿತ ಕರ್ಪೂರದಚೂರ್ಣದಲಿ ಮಿಂದು ಅಂತರಂಗದಿ ಭಕ್ತರಿತ್ತ ನೈವೇದ್ಯ ಉಂಡ ಲಕ್ಷ್ಮೀ ಕಾಂತನು ನಡೆತರುವ ಪರಿಯನೇನೆಂಬೆ 4 ಮುಂದೆ ದ್ರಾವಿಡವೇದ ಹಿಂದೆ ವೇದಘೋಷಗಳು ಆ ನಂದದಿಂ ಭಕ್ತರೆಲ್ಲ ಮುಂದೆ ಬರುತಿರಲು ಛಂದದಿಂ ರಂಭೆಯರ ಕೋಲಾಟಗಳ ನೋಡಿ ಇಂದಿರೆಯಿದಿರು ಮಂಟಪಕೆ ನಡೆತಂದ 5 ಸೃಷ್ಟಿಪತಿ ರಂಗನಿಗೆ ದೃಷ್ಟಿ ತಾಕುವುದೆಂದು ಹಿಟ್ಟಿನಾರತಿಯಿಂದ ದೃಷ್ಟಿಯನು ತೆಗೆದು ಶ್ರೇಷ್ಠವಾದ ಕರ್ಪೂರದ ಆರತಿಯನೆತ್ತಲು ಥಟ್ಟನೆ ತಿರುಗಿದನು ಕೃಷ್ಣಮೂರುತಿ ತಾನು 6 ಸಪ್ತದಿನದಲಿ ರಂಗ ರತ್ನಮೌಳಿಯ ಧರಿಸಿ ಮುತ್ತಿನಾ ಹಾರವನು ಹಾಕಿ ರತ್ನದ ಉಡದಾರ ಉಡಗೆಜ್ಜೆಯನು ಧರಿಸಿ ಪತ್ನಿ ಸಹಿತಲೆ ಬಂದು ಭತ್ತವನಳಿಸುವ ಸೊಬಗ 7 ಮುತ್ತಿನ ಕಿರೀಟವಿಟ್ಟು ಮುದದಿ ನಿಲುವಂಗಿ ತೊಟ್ಟು ರತ್ನದಾ ಹಸ್ತದಲಿ ಅಭಯವನು ಕೊಟ್ಟು ಕತ್ತಿ ಈಟಿ ಗುರಾಣಿ ಬತ್ತಳಿಕೆ ಅಳವಟ್ಟು ಹಸ್ತದಲಿ ಕಡಿವಾಣವಿಟ್ಟು ಬರುವ ಸೊಬಗ 8 ಹತ್ತಿ ಹಯವನು ರಂಗ ಒಂಭತ್ತು ದಿನದಲಿ ಮತ್ತೆ ಪುಷ್ಕರಣಿಯ ತೀರ್ಥದಲ್ಲಿ ಮಿಂದು ಅರ್ತಿಯಿಂ ಬಂದ ನೀರಾಳಿಮಂಟಪಕೆ 9 ಮಿಂದು ಮಡಿಯನೆ ವುಟ್ಟು ಛಂದದಿಂದಲೆ ರಂಗ ಬಂದು ಕಂಕಣವನ್ನು ಬಿಚ್ಚಿ ಆ ಘೃತ ಚೂತಫಲಗಳ ಸವಿದು ನಿಂದ ವೆಂಕಟರಂಗ [ಕರುಣಾಂತರಂಗ] 10
--------------
ಯದುಗಿರಿಯಮ್ಮ
ಶ್ರೀವಿನಾಯಕ ಪಿನಾಕಿ ಸುತ ಜಗ ದೇಕನಾಥನ ನಾಭಿಮಂದಿರ ಲೇಖಕಾಗ್ರಣಿ ವಿಷ್ಣುಕೀರ್ತನ ಮಾನಿ ಸಾಧಕನೆ ಪರಾಕು ನುಡಿಯುವೆ ನೂಕಿ ವಿಘ್ನವ ಸಾಕು ನಮ್ಮನು ನೋಕನೀಯನ ಭಜಿಸಲನುವಾಗೆಂದು ಬೇಡುವೆನು 1 ಕಾಣೆ ನಿನಗೆಣೆ ಮೂರುಲೋಕದಿ ಮಾನ್ಯನಾಗಿಹೆ ಸರ್ವರಿಂದಲು ಶ್ರೀನಿಧಿಯ ದಯದಿಂದ ಪ್ರಾಣಾವೇಶಸಂಯುತನೆ ಧ್ಯಾನ ಮಾಡುವೆ ವಿಶ್ವತೈಜಸ ನನ್ನು ಮಹದಾಕಾಶಮಾನಿಯೆ ಆನತಾಮರಧೇನು ಸಿದ್ಧಿವಿನಾಯಕನೆ ನಮಿಪೆ 2 ದೈತ್ಯಗಣಗಳಿಗಿತ್ತು ವರವು ನ್ಮತ್ತರನು ಮಾಡುತಲಿ ಶ್ರೀಪುರು ಷೋತ್ತಮನ ಸೇವಿಸುವೆ ವಿದ್ಯಾಧೀಶ ಸುಖಭೋಕ್ತ ಮಾತರಿಶ್ವನ ದಾಸರಿಗೆ ಹರಿ ಭಕ್ತಿ ವಿಷಯ ವಿರಕ್ತಿ ನೀಡುವೆ ಶಕ್ತಿ ನೀ ನಾಲ್ಕೆರಡು ಕಲ್ಪದಿ ಸಾಧಿಸಿರೆ ಪದವಿ 3 ವಕ್ರ ತುಂಡನೆ ನೀಗಿಸೆನ್ನಯ ವಕ್ರಬುದ್ಧಿ ವಿವೇಕನೀಡುತ ದಕ್ಕಿಸೈ ಶಾಸ್ತ್ರಾರ್ಥ ಚಯನವ ಚಾರುವಟು ಗಣಪ ರಕ್ತಗಂಧಪ್ರೀಯ ಸೋಮನ ಸೊಕ್ಕು ಮುರಿದೆಯೊ ಭೂಪ ಭಕ್ತಿಯ ಉಕ್ಕಿ ಸೈ ಹರಿಯಲ್ಲಿ ತವಕದಿ ಮಂಗಳಪ್ರದನೆ 4 ರಂಗ ಮಂದಿರ ದಕ್ಷಿಣಸ್ಥವಿ ಹಂಗಗಮನನ ರಾಣಿ ರುಕ್ಮಿಣಿ ಯಂಗದಲಿ ಪುಟ್ಟುತಲಿ ದಿತಿಜಾಂತಕನೆನಿಸಿಕೊಂಡು ಗಂಗೆಪಿತನನು ಸೇವಿಸಿದೆ ಮಾ ತಂಗಮುಖ ಮಹಕಾಯ ನಾರೀ ಸಂಗವರ್ಜಿತ ಬೀರು ಕರುಣಾಪಾಂಗ ದೃಷ್ಟಿಯನು 5 ಮೊದಲು ಪೊಜೆಯ ನಿನಗೆ ವಿಹಿತವು ವಿಧಿ ಭವಾದ್ಯರ ಪೊರೆವ ವಿಶ್ವನು ಮುದದಿ ನೀಡಿಹ ವರವ ಸಿದ್ಧಿಯ ಕೊಡುವೆ ಭಕ್ತರಿಗೆ ಮದದಿ ಬಿಡುವರಿಗೆಲ್ಲ ಖೇದವೆ ಒದಗಿ ಬರ್ಪುದು ಬಾಗಿ ಭಜಿಸುವೆ ಸದಯನಾಗುತ ವಿಷ್ಣು ಭಕ್ತರ ಸಂಗ ನೀಡೆನಗೆ 6 ವ್ಯಾಪ್ತ ದರ್ಶಿಯೆ ವಂದಿಸುವೆ ಪರ ಮಾಪ್ತ ಹರಿ ಭಕ್ತರಿಗೆ ನೀನಿಹೆ ಸೂಕ್ತ ಸಾಧನೆ ಗೈಸು ಖೇಶನೆ ಸೋಮಪಾನಾರ್ಹ ಆರ್ತನಿಹೆ ಬಹುಮೂಢ ಖರೆವೇ ದೋಕ್ತಮರ್ಮವ ಭಾಸಗೈಸಿ ಕೃ ತಾರ್ಥನೆನಿಸೈ ಮೃದ್ಭವ ವಿರೂಪಾಕ್ಷ ತತ್ವೇಶ 7 ಬರೆದೆ ಭಾರತ ವೇದವ್ಯಾಸರ ಕರುಣದಿಂದಲಿ ಭಕ್ತಿಯೋಗಿಯೆ ಶರಣು ಶೇಷಶತಸ್ಥರಿಗೆ ಗುರುವಿರ್ಪೆ ಹೇರಂಭ ದುರಳ ಗಣಗಳ ಕಾಟತಪ್ಪಿಸಿ ಹರಿಗೆ ಸಮ್ಮತವಿಲ್ಲ ದೆಡೆಯಲಿ ಮರುಳುಗೊಲ್ಲದ ಮನವು ನನಗಿರಲೆಂದು ಹರಸೆಂಬೆ 8 ಜಯಜಯತು ವಿಶ್ವಂಭರ ಪ್ರೀಯ ಜಯಜಯವು ಮೈನಾಕಿತನಯಗೆ ಜಯಜಯವು ಶ್ರೀಕೃಷ್ಣವಿಠ್ಠಲನ ದಾಸವರ್ಯನಿಗೆ ಜಯಜಯವು ಸದ್ವಿದ್ಯೆಕೋಶಗೆ ಮೀನಾಂಕ ಭ್ರಾತೃವೆ ಜಯಜಯವು ವಿಘ್ನೇಶ ಮಂಗಳಮೂರ್ತಿ ಗಣಪನಿಗೆ 9
--------------
ಕೃಷ್ಣವಿಠಲದಾಸರು