ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ ನುಡಿ ನಿಜ ವಡನೆ ಪಡಗವ ತಂದು ಜಡದಿಡಸಿ ಜಡದಿಡಸಿ ನವನೀತ ಗಡಬಡಿಸಿ ಗಡಬಡಿಸಿ 1 ಮೀಸಲಮನ ಕೆನೆ ಮೊಸರನೆ ಮಾಡಿ ಶೋಧಿಸಿ ಶೋಧಿಸಿ ವಾಸನೆ ಮೊಸರ ಕರುಣಿಕುಸಕಿರಿದು ಮರ್ದಿನಿ ಮರ್ದಿನಿ ಮೋಸಹೋಗದೆ ದುರಾಶದ ಕಿಲ್ಮಿಷ ಝಾಡಿಸಿ ಝಾಡಿಸಿ ಧ್ಯಾನ ಬಲಿದು ಸುವಾಸನೆಕಳಲ ಕಡೆವದಾರಂಭಿಸಿ 2 ನಾಮದಿವ್ಯಮಂತ್ರÀವ ಕಟ್ಟಿ ವಿಷಮ ಬಿಡಿಸಿ ವಿಷಮಬಿಡಿಸಿ ನೇಮದಿಂದ ಸುಪ್ರೇಮದರವಿಗಿ ಘಮಗುಡಿಸಿ ಘಮಗುಡಿಸಿ ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ ಶ್ರಮಜನ್ಮದಹರುವ ಕ್ರಮಗೊಂಡಾಹಂಬಿಡಿಸಿ 3 ನಾವು ನೀವೆಂಬ ಹೊಲೆಗುಡತಿಯನ್ಯರೆ ಬಿಡಿಸಿನ್ಯರೆಬಿಡಿಸಿ ಸಾವಧಾನದಲಿ ಅನುಭವಾಮೃತ ನಿಜಕುಡಿಸಿ ನಿಜಕುಡಿಸಿ ನವನೀತ ಝಲ್ಲಿಸಿ ಝಲ್ಲಿಸಿ ಸವಿಸವಿಗೊಂಡು ಸುವಿದ್ಯಸಾರಾಯವ ಅನುಭವಿಸಿ 4 ಕಡವು ಕುಶಲಿ ಒಬ್ಬಳೇ ಬಲುನಿಜಙÁ್ಞನಶಕ್ತಿ ಶಕ್ತಿ ಒಡಗೂಡಲು ನಿಜಬಾಹುದು ಕೈಗೂಡಿ ಸದ್ಗತಿ ಸದ್ಗತಿ ಪಡಕೊಂಡರು ಇದರಿಂದಲಿ ಮುನಿಜನ ವಿಶ್ರಾಂತಿ ವಿಶ್ರಾಂತಿ ಕೊಂಡಾಡಿದ ಅನುಭವಸ್ತುತಿ ಮೂಢಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕುಂಟೆ ಹೊಡೆಯೊ ಜಾಣ ಅದನೋಡಿ ಕುಂಟೆ ಹರಗೋ ಜಾಣ ಪ ಕುಂಟೆ ಹೊಡ್ಸೋನಾಗಿ ಕಂಟಿಕಡಿದು ನೀ ಎಂಟೆತ್ತುಗಳ ಹೂಡಿ ಮಂಟಪದ್ಹೊಲವನ್ನುಅ.ಪ ಅರಿವೆಮಡಿಕೆಹೊಡೆಯೊ ಮರವ್ಯೆಂಬ ಕರಿಕಿದಡ್ಡನಳಿಯೊ ಶರಣೆಂಬಗುದ್ದಲ್ಹಿಡಿಯೊ ಗರುವೆಂಬ ದುರಿತಕರುಣಗಳಗಿಯೊ ತೆರಪಿಲ್ಲದ್ಹೇಳುತ ಜರಾಮರಣೆಂಬ ಕಸ ಕರುಣೆಂಬ ಮಾಗಿ ಮಡಿ ಮಾಡಿ ಭರದಿ ಹಸನಮಾಡು 1 ಧ್ಯಾನ ದಾಸರಸೇವೆಯೆಂದೆಂಬುವ ಖೂನ ಮಾಡೆಲೊ ಬದುವ ದಾನಧರ್ಮಯೆಂಬುವ ಸತತದಿ ಹನಿಸು ಗೊಬ್ಬರವ ಜ್ಞಾನಿಸಂಗವೆಂಬ ಜಾಣಬೆದೆಗಾಲದಿ ಜ್ಞಾನಕೂರಿಗೆಯಿಂದ ಧ್ಯಾನಬೀಜವ ಬಿತ್ತು 2 ಮನನೆಂಬಬೆಳೆ ಕಾಯೋ ನಿಜವಾದ ನೆನೆವೆಂಬರ ಕವಣ್ಹಿಡಿಯೊ ಮನಚಂಚಲ್ಹಕ್ಕ್ಹೊಡೆಯೊ ಶಾಂತಿಸದ್ಗುಣವೆಂಬ ಫಲ ಪಡೆಯೊ ಘನತರ ದೃಢವೆಂಬ ಧಾನ್ಯರಾಸಿಮಾಡಿ ವನಜಾಕ್ಷ ಶ್ರೀರಾಮನೊನರುಹಕರ್ಪಿಸು 3
--------------
ರಾಮದಾಸರು
ಮಾಲೆ ಧರಿಸಿಕೊಂಡೆ ಮಾಧವನೆಂಬ ಮಣಿ ಮಾಲೆ ಧರಿಸಿಕೊಂಡೆ ಪ ಮಾಲೆ ಧರಿಸಿಕೊಂಡೆ ನೀಲಶಾಮನದಿವ್ಯ ಲೀಲೆ ಮೂಲೋಕಕ್ಕೆ ಮೇಲುಮೇಲುಯೆಂಬ ಅ,ಪ ಭವದೂರ ಪಾದವಂದನೆಂಬ ಮುಕುಟ ಧರಿಸಿಕೊಂಡೆ ಮಾದಮರ್ದನನಂಘ್ರಿಸ್ಮರಣೆಂಬ ಕರ್ಣಕುಂಡಲಿಟ್ಟುಕೊಂಡೆ ಭುವನತ್ರಯದ ಮೇಲೆ ಜವನ ನಿರ್ಭಯಕೇಶವನ ದಯವು ಎಂಬ ಭವದೊಳಗೆ ಹೊಕ್ಕು 1 ಜಡಜನಾಭನಚರಣ ದೃಢವೆಂಬ ಮಡಿಯನುಟ್ಟುಕೊಂಡೆ ಕಡಲಶಯನನಡಿಯ ಭಕ್ತೆಂಬ ಕವಚ ತೊಟ್ಟುಕೊಂಡೆ ಪೊಡವಿಗಧಿಕ ಓರ್ವ ಒಡೆಯ ಹರಿ ಅಹುದೆಂಬ ದೃಢನಿಶ್ಚಯದ ಮೇಲ್ಮಾಡಿನೊಳಗೆ ಕೂತು 2 ಅಂಗಜಪಿತನೆಂಬ ಬಂಗಾರ ಕಂಕಣಿಟ್ಟುಕೊಂಡೆ ರಂಗ ಕೃಷ್ಣನೆಂಬ ರತ್ನದ ಉಂಗುರಿಟ್ಟುಕೊಂಡೆ ಮಂಗಲಮಯ ನೀಲಾಂಗ ಶ್ರೀರಾಮನಾಮ ಚಂದ್ರಹಾರ ಹಾಕಿಕೊಂಡು ಶೃಂಗಾರನಾಗಿ ನಿಂತೆ 3
--------------
ರಾಮದಾಸರು