ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ ನುಡಿ ನಿಜ ವಡನೆ ಪಡಗವ ತಂದು ಜಡದಿಡಸಿ ಜಡದಿಡಸಿ ನವನೀತ ಗಡಬಡಿಸಿ ಗಡಬಡಿಸಿ 1 ಮೀಸಲಮನ ಕೆನೆ ಮೊಸರನೆ ಮಾಡಿ ಶೋಧಿಸಿ ಶೋಧಿಸಿ ವಾಸನೆ ಮೊಸರ ಕರುಣಿಕುಸಕಿರಿದು ಮರ್ದಿನಿ ಮರ್ದಿನಿ ಮೋಸಹೋಗದೆ ದುರಾಶದ ಕಿಲ್ಮಿಷ ಝಾಡಿಸಿ ಝಾಡಿಸಿ ಧ್ಯಾನ ಬಲಿದು ಸುವಾಸನೆಕಳಲ ಕಡೆವದಾರಂಭಿಸಿ 2 ನಾಮದಿವ್ಯಮಂತ್ರÀವ ಕಟ್ಟಿ ವಿಷಮ ಬಿಡಿಸಿ ವಿಷಮಬಿಡಿಸಿ ನೇಮದಿಂದ ಸುಪ್ರೇಮದರವಿಗಿ ಘಮಗುಡಿಸಿ ಘಮಗುಡಿಸಿ ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ ಶ್ರಮಜನ್ಮದಹರುವ ಕ್ರಮಗೊಂಡಾಹಂಬಿಡಿಸಿ 3 ನಾವು ನೀವೆಂಬ ಹೊಲೆಗುಡತಿಯನ್ಯರೆ ಬಿಡಿಸಿನ್ಯರೆಬಿಡಿಸಿ ಸಾವಧಾನದಲಿ ಅನುಭವಾಮೃತ ನಿಜಕುಡಿಸಿ ನಿಜಕುಡಿಸಿ ನವನೀತ ಝಲ್ಲಿಸಿ ಝಲ್ಲಿಸಿ ಸವಿಸವಿಗೊಂಡು ಸುವಿದ್ಯಸಾರಾಯವ ಅನುಭವಿಸಿ 4 ಕಡವು ಕುಶಲಿ ಒಬ್ಬಳೇ ಬಲುನಿಜಙÁ್ಞನಶಕ್ತಿ ಶಕ್ತಿ ಒಡಗೂಡಲು ನಿಜಬಾಹುದು ಕೈಗೂಡಿ ಸದ್ಗತಿ ಸದ್ಗತಿ ಪಡಕೊಂಡರು ಇದರಿಂದಲಿ ಮುನಿಜನ ವಿಶ್ರಾಂತಿ ವಿಶ್ರಾಂತಿ ಕೊಂಡಾಡಿದ ಅನುಭವಸ್ತುತಿ ಮೂಢಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ಕುಂಟೆ ಹೊಡೆಯೊ ಜಾಣ ಅದನೋಡಿ ಕುಂಟೆ ಹರಗೋ ಜಾಣ ಪ ಕುಂಟೆ ಹೊಡ್ಸೋನಾಗಿ ಕಂಟಿಕಡಿದು ನೀ ಎಂಟೆತ್ತುಗಳ ಹೂಡಿ ಮಂಟಪದ್ಹೊಲವನ್ನುಅ.ಪ ಅರಿವೆಮಡಿಕೆಹೊಡೆಯೊ ಮರವ್ಯೆಂಬ ಕರಿಕಿದಡ್ಡನಳಿಯೊ ಶರಣೆಂಬಗುದ್ದಲ್ಹಿಡಿಯೊ ಗರುವೆಂಬ ದುರಿತಕರುಣಗಳಗಿಯೊ ತೆರಪಿಲ್ಲದ್ಹೇಳುತ ಜರಾಮರಣೆಂಬ ಕಸ ಕರುಣೆಂಬ ಮಾಗಿ ಮಡಿ ಮಾಡಿ ಭರದಿ ಹಸನಮಾಡು 1 ಧ್ಯಾನ ದಾಸರಸೇವೆಯೆಂದೆಂಬುವ ಖೂನ ಮಾಡೆಲೊ ಬದುವ ದಾನಧರ್ಮಯೆಂಬುವ ಸತತದಿ ಹನಿಸು ಗೊಬ್ಬರವ ಜ್ಞಾನಿಸಂಗವೆಂಬ ಜಾಣಬೆದೆಗಾಲದಿ ಜ್ಞಾನಕೂರಿಗೆಯಿಂದ ಧ್ಯಾನಬೀಜವ ಬಿತ್ತು 2 ಮನನೆಂಬಬೆಳೆ ಕಾಯೋ ನಿಜವಾದ ನೆನೆವೆಂಬರ ಕವಣ್ಹಿಡಿಯೊ ಮನಚಂಚಲ್ಹಕ್ಕ್ಹೊಡೆಯೊ ಶಾಂತಿಸದ್ಗುಣವೆಂಬ ಫಲ ಪಡೆಯೊ ಘನತರ ದೃಢವೆಂಬ ಧಾನ್ಯರಾಸಿಮಾಡಿ ವನಜಾಕ್ಷ ಶ್ರೀರಾಮನೊನರುಹಕರ್ಪಿಸು 3
--------------
ರಾಮದಾಸರು
ಚಿಂತೆ ಮಾಡುವುದ್ಯಾಕೆ ಮನವೆ ನೀನು ಕರ್ಮ ಎಂದಿಗಾದರೂ ಬಿಡದು ಪ ಮಗÀನಾರು ನೀನಾರು ಪೇಳೊ ಸಿದ್ಧ ನಿಗಮಾರ್ಥಗಳಿಂದ ಸಜ್ಜನರ ಕೇಳೊ ತಗಿದು ಕಳಿ ಶೋಕದ ಗೋಳು ನಿತ್ಯ ನಗಧರನ ಭಕ್ತಿಯಲಿ ಸುಖದಲ್ಲಿ ಬಾಳೋ 1 ಸಾಹನಶಕ್ತಿಯನ್ನು ಮಾಡೊ ಬರಿದೆ ಸ್ನೇಹ ಮಾಡಿದರಿಂದ ಜ್ಞಾನಕ್ಕೆ ಕೇಡು ತಾಹಾದು ಸ್ಥಿರವೆಂದು ನೋಡೊ ನೀನೂ ಮಾಹಪದವಿಗೆ ಬಂದೆ ಸುದೃಢವೆ ಬೇಡು2 ವಿರಕ್ತಿ ತೊಡು ತೊಡು ಬಿಡದೆ ಎಂದು ಸಾರಿದೆ ಪೇಳಿ ಧರ್ಮದಲಿನ್ನು ನುಡಿದೆ ವಾರವಾರಕೆ ಹೀಗೆ ಕೆಡದೇ ಶ್ರಿಂ ಗಾರ ಶ್ರೀ ವಿಜಯವಿಠ್ಠಲಲೆನ್ನು ದು:ಖಬಡದೆ 3
--------------
ವಿಜಯದಾಸ
ಪರಿ ನಿರ್ದಯಗೈದಿರಿ ತಂದೆ ಶ್ರೀ ಗುರುವೆ ಪೇಳಿ ಪ. ನೊಂದೆನು ಈ ದಿನ ನಿಮ್ಮ ವಾರ್ತೆ ತಿಳಿಯದೆ ಕುಂದೇನು ತೊರಿತೋ ಎನ್ನಿಂದ ಕ್ಷಮಿಸಿರಿ ಅ.ಪ. ಪ್ರತಿದಿನದಲಿ ನಿಮ್ಮ ಹಿತವಾರ್ತೆ ಕೇಳುತ ಅತಿಶಯಾನಂದವ ಪಡುತಲಿದ್ದೆ ಇಂದು ಅತಿಶಯದ ನಿಮ್ಮ ಹಿತವಾರ್ತೆ ತಿಳಿಯದೆ ಮತಿ ಹೀನಳಾಗಿಹೆ 1 ಉಲ್ಲಾಸಗೊಳಿಸುವ ಪುಲ್ಲನಾಭವ ಮಹಿಮೆ ಸೊಲ್ಲು ಸೊಲ್ಲಿಗೆ ನುಡಿಸಿ ಭವದಾಟಿಸಿ ಒಲ್ಲೆನು ನಾನೊಂದು ಇಹಪರ ಸೌಖ್ಯವು ನಿಲ್ಲಲಿ ಎನ್ನಮನ ನಿಮ್ಮ ಪಾದದಿ ನಿರುತ 2 ತನುಮನ ಒಪ್ಪಿಸಿ ಮನದಿ ಧ್ಯಾನಿಸುವುದು ಘನಮನಕಿನ್ನೀಗ ಬರಲಿಲ್ಲವೆ ವನಜಜಾಡಂಡದೊಳಿನ್ನು ಎನ್ನ ರಕ್ಷಿಸುವರ ಮನದಿ ನಾ ಕಾಣೆನು ವನಜಾಕ್ಷ ಬಲ್ಲನು 3 ಮೊರೆಯ ಕೇಳುತಲೀಗ ತ್ವರಿತದಿಂ ಬನ್ನಿರಿ ಸರಸಿಜಾಕ್ಷನ ತೋರಿ ಹರುಷವಿತ್ತು ದುರಿತವ ತೊಲಗಿಸಿ ಕರಕರಗೊಳಿಸದೆ ಪರಮಪ್ರಿಯರು ಎಂಬೊ ಬಿರುದುಳ್ಳ ಶ್ರೀ ಗುರುವೆ 4 ತಡಮಾಡದೆ ಭವಕಡಲ ದಾಟಿಸಿ ಈಗ ಮೃಡಸಖನನು ತೋರಿ ದೃಢ ಮನದಿ ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲ ಜಗಕೆ ಬಿಡದೆ ಪೊರೆಯುವನೆಂಬೊ ದೃಢವೆನಗೆ ಕರುಣಿಸಿ 5
--------------
ಅಂಬಾಬಾಯಿ
ಮಾಲೆ ಧರಿಸಿಕೊಂಡೆ ಮಾಧವನೆಂಬ ಮಣಿ ಮಾಲೆ ಧರಿಸಿಕೊಂಡೆ ಪ ಮಾಲೆ ಧರಿಸಿಕೊಂಡೆ ನೀಲಶಾಮನದಿವ್ಯ ಲೀಲೆ ಮೂಲೋಕಕ್ಕೆ ಮೇಲುಮೇಲುಯೆಂಬ ಅ,ಪ ಭವದೂರ ಪಾದವಂದನೆಂಬ ಮುಕುಟ ಧರಿಸಿಕೊಂಡೆ ಮಾದಮರ್ದನನಂಘ್ರಿಸ್ಮರಣೆಂಬ ಕರ್ಣಕುಂಡಲಿಟ್ಟುಕೊಂಡೆ ಭುವನತ್ರಯದ ಮೇಲೆ ಜವನ ನಿರ್ಭಯಕೇಶವನ ದಯವು ಎಂಬ ಭವದೊಳಗೆ ಹೊಕ್ಕು 1 ಜಡಜನಾಭನಚರಣ ದೃಢವೆಂಬ ಮಡಿಯನುಟ್ಟುಕೊಂಡೆ ಕಡಲಶಯನನಡಿಯ ಭಕ್ತೆಂಬ ಕವಚ ತೊಟ್ಟುಕೊಂಡೆ ಪೊಡವಿಗಧಿಕ ಓರ್ವ ಒಡೆಯ ಹರಿ ಅಹುದೆಂಬ ದೃಢನಿಶ್ಚಯದ ಮೇಲ್ಮಾಡಿನೊಳಗೆ ಕೂತು 2 ಅಂಗಜಪಿತನೆಂಬ ಬಂಗಾರ ಕಂಕಣಿಟ್ಟುಕೊಂಡೆ ರಂಗ ಕೃಷ್ಣನೆಂಬ ರತ್ನದ ಉಂಗುರಿಟ್ಟುಕೊಂಡೆ ಮಂಗಲಮಯ ನೀಲಾಂಗ ಶ್ರೀರಾಮನಾಮ ಚಂದ್ರಹಾರ ಹಾಕಿಕೊಂಡು ಶೃಂಗಾರನಾಗಿ ನಿಂತೆ 3
--------------
ರಾಮದಾಸರು
ನಿನ್ನದೋ ನಿಖಿಲ ನಿನ್ನದೋಕುನ್ನಿ ಮನುಜರಾಧೀನೇನಿಲ್ಲ ಶ್ರೀಹರಿ ಪನೀನಿಟ್ಟ ರವಿಶಶಿಗಳುಹರಿನೀನಿಟ್ಟ ದಶದಿಕ್ಕುಗಳುಹರಿನೀನಿಟ್ಟ ಅಗ್ನಿಜ್ಯೋತಿಗಳುಹರಿನೀನಿಟ್ಟ ನದಿತಟಗಳು ಅಹನೀನಿಟ್ಟ ಚಳಿಗಾಳಿ ನೀಕೊಟ್ಟ ಮಳೆಬೆಳೆನೀನಿಟ್ಟ ಉತ್ಪತ್ತಿ ಸ್ಥಿತಿಲಯ ಸಕಲವು 1ನಿನ್ನ ಅಡಿಯೆ ಮಹಾಕ್ಷೇತ್ರಹರಿನಿನ್ನ ನುಡಿಯೆ ವೇದಮಂತ್ರಹರಿನಿನ್ನ ದೃಢವೆ ಸತ್ಯಯಾತ್ರೆಹರಿನಿನ್ನ ಬೆಡಗು ಸ್ಮ್ರತಿಶಾಸ್ತ್ರ ಅಹನಿನ್ನ ಅರಿವೆನಿತ್ಯನಿನ್ನ ಮರವೆಮಿಥ್ಯನಿನ್ನ ಕರುಣ ಎಲ್ಲ ಪ್ರಾರಬ್ಧಗಳ ಗೆಲವು 2ನಿನ್ನ ನಾಮವೆ ಕ್ಷೇಮಕವುಹರಿನಿನ್ನ ನಾಮವೆ ಭವಗೆಲವುಹರಿನಿನ್ನ ನಾಮವೆ ಚಾರುಪದವುಹರಿನಿನ್ನ ನಾಮದ ಬಲವೆ ಬಲವುಹರಿನಿನ್ನ ನಾಮ ಗಾಯತ್ರಿ ನಿನ್ನ ನಾಮತಾರಕನಿನ್ನ ನಾಮ ಭಕ್ತಿ ಯುಕ್ತಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು