ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ನಂಜನಗೂಡು ದೇವತಾಮಯನಾಗಿ ಸಕಲ ಪ್ರಾಣಿಗಳ ನಾ- ನಾ ವಿಧದ ಪೂಜೆಗಳ ಕೈಗೊಂಬದೇವ ಪ ಕಪಟಮಾತಾರೂಪವಳವಡಿಸಿ ಕೊಲಲೆಂದು ಚಪಲಗತಿಯಿಂ ಬಂದ ಪೂತನಿಯನು ಉಪಮೆಯಿಂದಸುವರೆಸಿ ಘನಕುಚಂಗಳನೂಡೆ ಅಪರಿಮಿತವಾದ ನಂಜುಂಡ ಮಹದೇವ 1 ಕಡಹದ ಮರದ ಕೊನೆಯನಡರಿ ಕಾಳಿಂದಿಯ ಮಡುವಿನಲಿ ಧುಮುಕಿ ಪಣಿಪೆಡೆಯ ತುಳಿದು ಮೃಡ ಮುಖ್ಯಸುರರುಘೇಯೆನೆ ಕೋಪಶಿಖಿಯಿಂದ ಮಡುವಿಲುರುತರದ ನಂಜುಂಡ ಮಹದೇವ 2 ರುದ್ರಾಂತರಾತ್ಮ ವೈಕುಂಠಸಂಕರ್ಷಣ ಸ- ಮುದ್ರ ಮಥನದ ಕಡೆಯಲುದಿಸಿ ಜಗವ ರೌದ್ರವತಾರದಿಂದುರಿಯುರುಪುತಿರೆ ಕಂತು ಸದೃಢಮನದಿ ನಂಜುಂಡ ಮಹದೇವ 3
--------------
ಬೇಲೂರು ವೈಕುಂಠದಾಸರು
ನಂಬಿ ನೆಚ್ಚದಿರು ನರಲೋಕ ಸುಖವೆಂಬ, ಅಂಬಲಿ ಪರಮಾನ್ನ ಪ ಹಂಬಲಿಸುವುದು ಹರಿಲೋಕಾನಂದವೆಂಬ ಪೀಯೂಷಪಾನ ಅ.ಪ ನೊಣ ಬೆರಸಿದ ಊಟ ಪರಮಭಾಗವತರ ಪದಸಂಗವೆಂಬುದು ಮಸ್ತಕದ ಮಕುಟ ಕೇವಲ ಯಮಕಾಟ ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ 1 ಹಾರಿ ಹೋಗುವ ಹೊಟ್ಟು ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು 2 ಅಲ್ಪಾವಕಾಶವು ಈ ಶರೀರವು ಗಾಳಿಗೊಡ್ಡಿದ ದೀಪ ನೋಡು ಹಾಲುಸಕ್ಕರೆ ತುಪ್ಪ ಬಲ್ಪಂಥ ಮಾಡದಿರು ಜನ್ಮಜನ್ಮದಲಿ ಬಿಡದೆಲೊ ಸಂತಾಪ ಸ್ವಲ್ಪಕಾಲಾದರೂ ಮಧ್ವಮತವೊಂದು ಭವವೇ ನಿರ್ಲೇಪ3 ಕರ್ಮ ಆವುದಾದರು ಸೂಳೆಗಿಕ್ಕ್ಕಿದ ವಿತ್ತ ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ ನಿರುತಗ್ರಾಸಕೆ ಚಿಂತೆಮಾಡಲು ಒದಗದು ಪುಣ್ಯವು ನಿನಗೆತ್ತ ಅರೆಮನವಿಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ಯ4 ಭಾವವಿರಕ್ತಿಯ ವಹಿಸದಿದ್ದರೆ ನಿನಗಾಗುವುದು ಖೇದ ಪರಿಪರಿಯಾಸ್ವಾದ ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ ತೀರುಥ ಪ್ರಾಸಾದ ನಿತ್ಯ ನರಕವಾಸ ಎನ್ನತಲಿದೆ ವೇದ 5
--------------
ವಿಜಯದಾಸ
ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ಪ. ಸಾರಿದೆನೊ ನಿನ್ನ ಪದವ ಅನುದಿನ ಸೇರಿಸೆನ್ನನು ಭಕ್ತಕೂಟದಿ ಗಾರು ಮಾಡುವುದುಚಿತವೇ ಹರಿ ಭವ ಸಮುದ್ರದಿ ಅ.ಪ. ತಾಪ | ನಾನಾರಿಗುಸುರಲೊ ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ ಭವ ಶ್ರೀಪ | ತೋರದಿರು ಕೋಪ ಘುಡು ಘುಡುಸಿ ನೀ ಎನ್ನ ಬೆದರಿಸೆ ತಡೆವೆನೇ ನಿನ್ನ ಕೋಪದಗ್ನಿಗೆ ಬಿಂಕ ಎನ್ನೊಳು ತಡೆಯೊ ಎನ್ನ ದುರುಳತನಗಳ ಕಡುಕರುಣಿ ನೀನಲ್ಲವೆ ಹರಿ ಒಡಲೊಳಗೆ ಪ್ರೇರಕನು ನೀನೆ ನಡಸಿದಂದದಿ ನಡೆವೆನಲ್ಲದೆ ಒಡೆಯ ಎನ್ನ ಸ್ವತಂತ್ರವೇನೊ? 1 ದುರುಳತನದಲಿ ದೈತ್ಯ | ಭೂವಲಯವೆಲ್ಲವ ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ ಕರಕರೆ ಪಿತ ಬಡಿಸುತಿರಲು ದೊರೆಯೆ ನೀ ಪೊರೆ ಎಂದು ಮೊರೆಯಿಡೆ ಸರ್ವವ್ಯಾಪಕನೆಂದು ತೋರಲು ತ್ವರಿತದಲಿ ಕಂಭದಲಿ ಬಂದು ಸರಸಿಜವು ಕಂಗೆಡುವೊ ಕಾಲದಿ ಧರಿಸಿ ತೊಡೆಯ ಮೇಲಸುರ ಕಾಯವ ಕರುಳ ಬಗೆದು ಮಾಲೆ ಧರಿಸಿ ಪೊರೆದೆಯೊ ಸ್ತುತಿ ಕೇಳಿ ಬಾಲನ 2 ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ ನಿಜಮನವ ನೀ ತಿಳಿದು ಸಲಹೊ ಕಮಲ ತೋರಿ ಕುಜನನಲ್ಲವೊ ಹಿರಿಯರೆನಗೆ ಪಥ ತೋರುತಿಹರೊ ರಜ ತಮವ ದೂರಟ್ಟಿ ಶುದ್ಧದಿ ಭಜಿಸುವಂದದಿ ಕೃಪೆಯ ಮಾಡಿ ಸುಜನರೆನ್ನನು ಪಾಲಿಸುತ್ತಿರೆ ನಿಜದಿ ಗೋಪಾಲಕೃಷ್ಣವಿಠ್ಠಲ3
--------------
ಅಂಬಾಬಾಯಿ