ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಿವನು ಈಗ ಬರಲಿದಕೆ ಬಗೆಯೇನುಚೆನ್ನಾಗಿ ಪೇಳೆ ರಮಣಿ ಪ ಮನ್ನಿಸಿ ಮಮತೆಯಲಿ ಮನವ ಸೆಳಕೊಂಡೊಯ್ದುಅನ್ಯರನು ಕೂಡುವನೆ ಕೆಳದಿ ಅ.ಪ. ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳಚಿನ್ನದ ಶ್ರೀರೇಖೆ ಸೀರೆಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣಕರ್ಪೂರ ಕಾಚಿನುಂಡೆಕಣ್ಣಿಗಿಂಪಾದ ಕಡು ಚೆಲ್ವ ಮಲ್ಲಿಗೆ ಮೊಗ್ಗೆ ಉನ್ನತವಾದ ದಂಡೆಇನ್ನು ಈ ಪರಿಮಳವು ಬಗೆಬಗೆಯ ಆಭರಣರನ್ನ ಕೆತ್ತಿಸಿದ ಗೊಂಡೆಮುನ್ನ ಸಿಂಗರ ಮಾಡಿ ಎದೆಹಿಡಿದು ಬಿಗಿಯಪ್ಪಿನಿನ್ನ ಈ ವೇಳೆ ಕೂಡಿದೆ ದೃಢದೆ 1 ಈಗಾಗು ಬಾಹನೆಂತಿರುವೆ ತಾನೂರಿದ್ದಉಗುರು ಗುರುತನು ನೋಡುತಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದುಬೇಗ ನಟನೆಯ ಮಾಡುತರಾಗದಿಂದದಲಿ ರವಿಕೆ ನೆರಿಯನು ಬದಲುಟ್ಟುಭೋಗಕ್ಕೆ ಅನುವಾಗುತಹಿಂಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆಹೇಗೇ ಸೈರಿಪೆ ಕೂಡದೆ ಮುಂದೆ 2 ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆಕಂದರ್ಪ ಕಾಡುತಿಹನೆತಂದು ತೋರಿಸು ತನ್ನ ತಂದೆಯನೆಂದು ಪೂ-ವಿಂದ ಬಾಣವ ಎಸೆವನೆಇಂದುಬಿಂಬವು ಮಂದ ಮಾರುತವು ಸುಮದ ಮಳೆ-ಯಿಂದ ಸೆಕೆಗಾನಾರೆನೆಒಂದು ನಿಮಿಷದಲಿ ಶ್ರೀರಂಗ ವಿಠ್ಠಲನನ್ನುಹೊಂದಿಸೆನ್ನಗಲದಂತೆ ಕಾಂತೆ 3
--------------
ಶ್ರೀಪಾದರಾಜರು
ನೀ ಕೃಪೆ ಮಾಡೋ ಹರಿಯೇ ಲೋಕವಿನುತ ಸಿರಿಯೇ ಪ ಶ್ರೀಕರ ಭಾಸ್ವರಾ ಭಕ್ತಸುಧಾಕರ ಶೋಕಹರಣಾ ನೀ ಶೂರಾ ಅ.ಪ ನಡು ನೀರೋಳೆನ್ನ ಕೈಯ ಬಿಡಬೇಡ ಮಾರನಯ್ಯ ಅಡಿಗೆರಗುವೆನಯ್ಯ ಕೊಡು ನಿನ್ನ ನಾಮಾವಳಿಯ ದೃಢದೆ ಭಜಿಪೆನಯ್ಯ ಮೃಡನುತಾನೇ ಗೋವಿಂದಯ್ಯ 1 ಕಳೆದ ದುರಿತಾವೃತ ಉಳಿದುದು ವೋವರಾ ಅಳಿವ ಕಾಲವಿದಿನ್ನು ಬಳಲಿಸೋಲುವೆ[ನಯ್ಯ] ಘಳಿಲನೆ ನಿನ್ನ ನಾಮಾವಳಿಯ ಸ್ಮರಣೆಯ 2 ಅನ್ಯರ ಭಜಿಸೆನು ಅನ್ಯರ ನುತಿಸೆನು ಅನ್ಯರಿಗೆರಗೆನು ಅನ್ಯರ [ಪೂಜಿ]ಸೆನು [ಅ ನನ್ಯ ಶರಣನೆ ಮನ್ನಿಸೊ ಶರಣುಬಂದಿಹೆನು] 3 ಕಾವಧೀರನು ಇನ್ನು ಅವನೇ ಶ್ರೀಹರಿ ಸೇವಕರಿಗೆ ನಾನು ಸೇವಕನೆನ್ನುತಾ ಭಾವಿಸೋ ದೇವದೇವಾ ಮಾವಿನಾಕೆರೆರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಂಡರಿನಾಥ ಪಾವನ ಸುಚರಿತ ಪ ಪಾಂಡವಪ್ರಿಯದೂತ ಶರಣರ ಕಾದುಕೊಂಡಿಹ ಖ್ಯಾತ ದಾತಅ.ಪ. ಮಾತಾಪಿತನು ಭ್ರಾತನು ಹಿತನು ನಾಥನು ಜ್ಞಾತನು ಸಂತಾರಕನು ಮತಿಯೂ ನೀನೆ ಗತಿಯೂ ನೀನೆ ಕಾತರ ವ್ಯಾತರದು ಬೀತುದು ದೇವ 1 ತನುಮನಧನಗಳ ನಿನಗರ್ಪಿಸಿದೆ ಎನಿತಾದರು ಇಡು ಅನುಮಾನಿಸಿದೆ ಜನರ ನಿಂದನೆ ಮೇಣಾನಂದನೆ ಮಾನ ಅವಮಾನ ನಿನ್ನದು ದೇವ 2 ಚಿಂತೆಯ ಮರೆದೆ ಭ್ರಾಂತಿಯ ತೊರೆದೆ ಸಂತರ ಚರಣವನಾಂತೆ ದೃಢದೆ ಸ್ವಾಂತವು ಮೋದವಾಂತುದು ಶ್ರೀದ ಸಂತತ ಶ್ರೀಕಾಂತ ನಿಶ್ಚಿತ ದೇವ 3
--------------
ಲಕ್ಷ್ಮೀನಾರಯಣರಾಯರು
ಯಾತಕೆ ಚಿಂತಿಪೆ ಬಿಡು ನೀ | ಪರ ಮಾತುಮ ಪೊರೆವನು ಶರಣರ ಬಿಡದೆ ಸಂಶಯ ಬಿಡದೆ ನಂಬು ನೀ ದೃಢದೆ ಪ ಧರ್ಮವು ಹೊಸಗಿ ಅಧರ್ಮವು ಮುಸುಗಿರೆ ಧರ್ಮಸ್ಥಾಪಕ ತಾನು ಒಮ್ಮೆಲೆ ಬಹನೆ ದೀಕ್ಷೆಯಿಂದಿಹನೆ ಕೀರ್ತಿಯತಹನೆ 1 ದುಷ್ಟರ ಶಿಕ್ಷಿಸೆ ಶಿಷ್ಟರ ರಕ್ಷಿಸೆ ಸೃಷ್ಟಿಗೆ ಬಹೆನೆಂದು ಕೊಟ್ಟಿಹನಭಯ ಎಂದಿಗು ಮರೆಯ ನಮ್ಮನು ತೊರೆಯ 2 ಅನ್ಯ ಚಿಂತೆಯ ಬಿಟ್ಟು ತನ್ನಲೆ ಮನವಿಟ್ಟು ಭಾರ ತನ್ನದೆಂದಾತ ಘನ್ನ ಶ್ರೀಕಾಂತ ಮುಕ್ತಿಪ್ರಧಾತ3
--------------
ಲಕ್ಷ್ಮೀನಾರಯಣರಾಯರು
ಸಾರಿ ಧ್ಯಾನ ಒಂದಿದ್ದರೆ ಸಾಕೆಲೊ ಸಂ ಸಾರ ತ್ಯಜಿಸುವುದ್ಯಾಕೊ ಪ ಹಿಂಸೆಗುಣಗಳನ್ನು ತ್ಯಜಿಸಿ ಸತತ ಅ ಹಿಂಸೆಯೆಂಬ ಧರ್ಮ ಗಳಿಸಿದರಾಯ್ತೆಲೊ ಅ.ಪ ಜಡಭವತೊಡರನು ಕಡಿದುರುಳಿಸುತ ದೃಢದೆ ಬಿಡದೆ ಕಡುಸತ್ಯ ನುಡಿಯುತ ಅಡಿಗಡಿಗೊಡಲೊಳು ಜಡಜನಾಭ ಜಗ ದೊಡೆಯನಡಿಯ ಧ್ಯಾನಿವಿದ್ದರದೊಂದೆ ಸಾಕೊ 1 ಮೋಸ ಠಕ್ಕು ಕ್ಲೇಶಗುಣ ಕಳೆದು ಭವ ಮೋಸದ ಫಾಸಿಯ ಮೂಲವ ತುಳಿದು ಆಸೆನೀಗಿ ಮನ ಬೆರಿಯದೆ ಜಗ ದೀಶನ ಸಾಸಿರನಾಮ ಧ್ಯಾಸದಿರೆ 2 ಶುನಕನ ಕನಸಿನ ಪರಿಭವನೆನುತ ತನುಮನಧನವೀಡ್ಯಾಡುತ ಅನುದಿನ ಮನಸಿಜನ ಶ್ರೀರಾಮನ ಚರಣವ ಘನತರಭಕುತಿಲಿ ನೆನೆಯುತ ಕುಣಿಯಲು 3
--------------
ರಾಮದಾಸರು