ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ನಾಟಿ ಅಗ್ರಹಾರದ ಶ್ರೀರಾಮ) ಕಂಡಿರೆ ನಾಟಿ ಕೋದಂಡ ರಾಮನ ಪದ್ಮ- ಜಾಂಡದಿ ನಾಯಕನಾ ಕಟಕ ಕಿರೀಟಧಾರಿ ಮಾ- ರ್ತಾಂಡ ಕೋಟಿಪ್ರಭನಾ ಪ. ಭೂತಳದೊಳಗೆ ವಿಖ್ಯಾತರಾಗಿಹ ರಘು- ನಾಥ ಒಡೆಯರ ಮೇಲೆ ಪ್ರೀತಿಯಿಂದಲಿ ಬಂದ ಪವಮಾನವಂದಿತ- ನೀತನು ನಿಜ ಜನರ ಬೀತಿಯ ಬಿಡಿಸುವೆನೆಂದು ಬಿಲ್ಲಂಬುಗ- ಳಾಂತು ಕರಾಬ್ಜದಲಿ ಪಾತಕಗಳ ಪರಿಹಾರಗೈದರಿಗಳ ಘಾತಿಸುವನು ಜವದಿ 1 ಕಡು ಪರಾಕ್ರಮಿ ವಾಯಿನು ಧಿಕ್ಕರಿಸಿ ಕೈ ಪಿಡಿದಂತೆ ರವಿಜನಸು ಬಡವರ ಭಕ್ತಿಯ ದೃಢಕೆ ಮೆಚ್ಚುತ ಜಗ- ದೊಡೆಯನು ಸಂತಸದಿ ಒಡೆಯ ನೀ ಸಲಹೆಂದು ವಂದಿಸಿ ತುಲಸಿಯ ಕೊಡುವನು ಕರುಣ ಕಟಾಕ್ಷದಿ ಪುರುಷಾರ್ಥ ತಡೆಯದೆ ತವಕದಲಿ 2 ಎರಡು ಭಾಗದಿ ಭಕ್ತ ಗರುಡ ಮಾರುತಿಯರ- ನಿರಿಸಿ ಕೊಂಡವನುದಿನದಿ ನಿರವಧಿ ಸೇವೆಯ ಕೈಕೊಂಡು ಜಾನಕಿ- ವರನಿಹನೀಪುರದಿ ಸಿರಿವರ ವೆಂಕಟಗಿರಿ ರಾಜನಿವನೆಂದು ನೆರೆ ನಂಬಿ ಸೇವಿಪರಾ ಪರಿಕಿಸಿ ತನ್ನಯ ಚರಣ ಸೇವೆಯನಿತ್ತು ಪೊರೆವನು ಕರುಣಾಕರ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಮನೆಬಾಗಿಲ ಮೇಲೆ ಶ್ರೀನಿವಾಸ ಮೂರ್ತಿ) ಮಾಧವ ನಿಧಿಗಿರಿನಾಯಕ ಪದಕಮಲಾಶ್ರಿತ ಪರುಷಸುಖದಾಯಕ ಪ. ಬಲಿಯ ದೃಢಕೆ ಮೆಚ್ಚಿ ಬಾಗಿಲ ಕಾಯ್ದನಿ- ರ್ಮಲ ಕರುಣಾಮೃತ ವಾರಿಧೆ ಸುಲಭದಿ ಮುಂದಿನ ವಲಭಿತ್ಪದವನು ಸಲಿಸುತ ನೀನೀ ನಿಲಯದಿ ಸೇರಿದಿ 1 ಮಾಕಳತ್ರ ಮಮತಾನರಮೋಹ ನಿ- ರಾಕರಿಸಖಿಳ ಸುಖಾಕರನೆ ಸ್ವೀಕರಿಸೆನ್ನಯ ಸರ್ವ ಸಮರ್ಪಣ ಬೇಕು ಸರ್ವದಾ ತ್ವಜನ ತರ್ಪಣ 2 ಭೂರಮೇಶ ಗೃಹದ್ವಾರದಿ ನೀ ನೆಲೆ- ದೋರಲು ದುರಿತವು ಸೇರದಲೆ ದೂರೋಡುವದೆಂದರಿತು ನಂಬಿದೆನು ನೀರಜಾರಮಣ ಶೇಷ ಗಿರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರ್ಮ ದೊಡ್ಡದೊ ಸ್ವಾಮಿ ನಿನ್ನ ಮಹಿಮೆ ದೊಡ್ಡದೊ ಮುನ್ನಿನ ದೃಷ್ಟಾಂತದಿಂದ ನಿರ್ಣಯಿಸುವ ನಿತ್ಯಾನಂದ ಪ. ಅಡವಿಯಲ್ಲಿ ನಿಂತು ಮೃಗವ ಬಡಿದು ತಿಂಬ ಬ್ಯಾಡ ಕಡೆಗೆ ಗಿಡವ ಕೂಡಿಸೆಂದ ನುಡಿಯ ದೃಢಕೆ ಮೆಚ್ಚಿ ಕಡೆಹಾಯಿಸಿದೆ 1 ಉಗ್ರಭಾವದಿಂದ ತಮ್ಮ ಅಗ್ರಜರನ್ನು ಕೊಲಿಸಿದಂಥ ಸುಗ್ರೀವ ವೈಶ್ರವಣರ ಭಕ್ತಾಗ್ರಣ್ಯರೆಂದು ಕಾಯ್ದೆ 2 ಕರ್ಮ ಬಾಧೆ ಕಳದು ಕರುಣದಿಂದ ಮಾಧವ ನೀ ಸಲಹೊ ಶೇಷ ಭೂಧರೇಂದ್ರ ಶಿಖರವಾಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬೊಮ್ಮ ಮೃಡ ಮುಖ್ಯ ಸುರರಿಗೆಡೆಯನೆನಿಪ ಮುದ್ದು ಉಡುಪಿಯ ಕೃಷ್ಣನ ಪ. ಪೊಡವಿಯೊಳಗೆ ತನ್ನ ಅಡಿಗಳ ಧೇನಿಪ-ರಡಿಗಡಿಗವರ ವಾಂಛಿತ ವÀಸ್ತುವಕಡೆದು ಕೊಡುವೆನೆಂದು ಕಡೆಗೋಲ ನೇಣನೆಪಿಡಿದಿಹ ಸಿರಿಯರಾ ದೃಢಕೆ ಮೆಚ್ಚಿದನ 1 ಹರಿಸರ್ವೋತ್ತಮನೆಂಬೊ ಪರಮಸಿದ್ಧಾಂತಕ್ಕೆ ಮ-ಚ್ಚರಿಸುವ ಕುಮತದ ಕುಜನರಭರದಿ ಬಂಧಿಸಿ ಬನ್ನಂಬಡಿದು ಶಿಕ್ಷಿಪೆನೆಂದುವರಪಾಶದಂಡಧಾರಿಯಾಗಿ ತೋರಿಪ್ಪನ 2 ಭಕ್ತವತ್ಸಲನೆಂಬೊ ಸುಲಭೋಕ್ತಿಯನು ಬಂದನಿಕರಕ್ಕೆ ಪೇಳಲು ದ್ವಾರಕಾಪುರಿಯಸುಖತೀರ್ಥಮುನಿಗೆ ಸುಖಕರನಾಗಿ ಬಂದಅಕುಟಿಲ ಕೃಷ್ಣ ಹಯವದನರಾಯನ 3
--------------
ವಾದಿರಾಜ
ವಾಮನಾವತಾರ ವಾಮನನನು ನೆನೆ ಹೇ ಮನವೇ ವಟು ವಾಮನನನು ನೆನೆ ಹೇ ಮನವೇ ಕಾಮಪೂರಣ ಲಕ್ಷ್ಮೀಧಾಮನ ಮರೆಯದೆ ಪ. ಶ್ಯಾಮಸುಂದರ ಸುರ ಪ್ರೇಮದಿ ಕಶ್ಯಪ ಧಾಮವಾ ಬೆಳಗುತ ಬಂದ ಭೂಮಿಯನಳದ ಸುತ್ರಾಮಗಿತ್ತ ನಿ ಸ್ಸೀಮ ಸಾಹಸ ಗೋವಿಂದ ನೀ ಸಲಹೆಂದು 1 ಬಲಿಯ ದೃಢಕೆ ಮೆಚ್ಚಿ ಸಲಹುತ ಮುಂದಿನ ವಲಭಿದಾಗುವೀ ನೀನೆಂದ ಕಲುಷಾಪಹಪದಕಮಲವ ಶಿರದೊಳು ನಿಲಿಸಿ ಬಾಗಿಲೊಳು ನಿಂದವ ನೀನೆಂದು 2 ಶ್ರೀ ಭೂಮಿಯುತ ಮುಕ್ತಾಭರಣಾಶ್ರಿತ ಸೌಭಾಗ್ಯಕರ ಲೀಲಾ ಆಭೀರರ ಕನ್ನೆಯರೊಲಿಸಿದ ಪದ್ಮ- ನಾಭ ವೆಂಕಟಪತಿ ಪರಮ ಪುರುಷನೆಂದು 3
--------------
ತುಪಾಕಿ ವೆಂಕಟರಮಣಾಚಾರ್ಯ