ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದತೀರ್ಥರಾನಂದದಿ ಭಜಿಸಿರೊ ಬಂದು ಸಲಹಬೇಕೆಂದು ಬೇಡುತ ಪ ಶ್ರದ್ಧೇ ರಮಣನು ಮಧ್ಯಗೇಹರ ಶುದ್ಧಕುಲದೊಳು ಉದ್ಭವಿಸಿದ 1 ಗೋಪ್ರದಾಯಕ ವಿಪ್ರವರ್ಯಗೆ ಕ್ಷಿಪ್ರದಲ್ಲಿ ಸುಪ್ರಜ್ಞೆಯಿತ್ತ 2 ದೂಷ್ಯವಾದ ದುರ್ಭಾಷ್ಯ ಖಂಡಿಸಿ ಶಿಷ್ಯರಿಗೆ ಸದ್ಭಾಷ್ಯ ಪೇಳಿದ 3 ಯವನ ನೃಪತಿಯ ಭವನಕೆ ಪೋಗಿ ಅವನ ಅರ್ಧರಾಜ್ಯವನೆ ತಂದ 4 ದೇವಗಂಗೆಯು ಪಾವನಾಂಶನ ಸೇವೆಮಾಡಿ ತಾ ಪಾವನಳಾದ 5 ಸಿರಿ ಸ್ವಾಮಿ ನೃಹರಿಯ ಪ್ರೇಮಬಲದಿ ನಿಸ್ಸೀಮರಾದ 6
--------------
ವಿದ್ಯಾರತ್ನಾಕರತೀರ್ಥರು
ಯತಿವರೇಣ್ಯರ ಮನುಜ ಸತತ ಭಜಿಸೆಲೊ ಪ ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ ಅ.ಪ ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ 1 ವಾಸುದೇವ ನಾಮದಿಂದ ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ 2 ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ3 ನರಿಯುತಕುತಿಗಳಿಂದ ಬೋಧಿಪ ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ4 ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ 5 ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ 6 ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ ಸಾರ ಪೇಳಿದ 7 ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ ವರ ಕರುಣವ ಪಡೆಯುವುದೇ ನಿರತ ಸುಖಕೆ ಪಥವೆಂದರುಹಿದ 8 ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ ನಿರತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂದ ಪ್ರಸನ್ನರಾದ 9
--------------
ವಿದ್ಯಾಪ್ರಸನ್ನತೀರ್ಥರು