ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟೆಂದು ಪೇಳುವೆನು ನಮ್ಮುಡುಪಿಯ ಕೃಷ್ಣನÀ ಮಹಿಮೆಯನು ಅಷ್ಟೋತ್ತರ ಶತಯೀರೆಂಟು ಸಾವಿರ ಶ್ರೇಷ್ಠ ಮಹಿಷಿಯರ ಸೇವೆ ಕೈಗೊಂಬುದ ಪ. ದ್ವಾರಕೆಯೊಳಗೆ ನೆಲೆ ತೋರುತಲಿದ್ದು ಸ್ವಾರಿ ಹೊರಟ ಮೇಲೆ ಕಾರುಣ್ಯನಿಧಿ ಕಡಲೊಳು ಬಂದು ಕಮಲಾಸ- ನಾರೂಹನಾಗುವ ನರಯತಿಯನು ಕಂಡು ಘೋರತರ ಸಂಸಾರಕೂಪವ ಸೇರಿ ಬಳಲುವ ಸಕಲಸುಜನೋ- ದ್ಧಾರ ಮಾಡುವೆನೆಂದು ಮೂರ್ತಿಯ ತೋರುತಿಲ್ಲಿಹ ತ್ರಿಭುವನೇಶನ 1 ಪಾಪಿಷ್ಠ ಕಲಿಯಾಳುತ್ತಿರುವ ಕಾಲದಲಿ ಸ್ತ್ರೀ ರೂಪದಿಂದಲಿ ಪೂಜೆಯ ಕೊಳಲು ಸುಜ- ನಾಪವಾದದ ಭೀತಿಯ ತಾನೆನಸಿ ಮನದಲಿ ಕಾಪುರುಷನನು ಕಣ್ಣ ಕಟ್ಟಿ ಮಹಾಪರಾಧಿಗಳೊಳಗೆ ಸೇರಿಸಿ ಭೂಪತಿಗಳಲ್ಲಿರುವ ಯತಿವರ ರೂಪರೊಡನಾಡುವ ಪರಾತ್ಮನ 2 ಪಾಂಡುಕುಮಾರರು ಪರಿಯಾರು ಕ್ರಮದಿಂದ ಹೆಂಡತಿಯಾಳ್ದರೆಂದು ದೂಷಿಸುವರ ಕಂಡು ತಾ ಮನಕೆ ತಂದು ಕಾರುಣ್ಯ ಸಿಂಧು ಕುಂಡಲೀಂದ್ರ ಗಿರೀಂದ್ರ ನಿಜಪದ ಪುಂಡರೀಕ ಛಾಯಗಳ ಮತಿ- ವತ್ಸರ ದ್ವಯ ಖಂಡನೆ ಕೈಕೊಂಡು ಮೆರಪನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅತಿಭಾಷಿಯೆನಿಸದೆ ಪ. ದೂಷಿಸುವರಾಕ್ರೋಶದಿಂದಲಿ ರೋಷಗೊಳ್ಳುವೆÀ ಗಾಸಿಯಾಗುವೆ ಶೇಷಶಯನನ ದಾಸನೆÀನಿಪೊಡೆ 1 ಮೂಲಮಂತ್ರದ ಸಾರವಿದು ಮೇಲನರಿತು ಸುಶೀಲನೆನ್ನಿಸು ಕಾಲಪಾಶದಿ ಬೀಳದಂತಿರೆ 2 ಏಕೆ ಸೇರುವೆ ಜೋಕೆಯಿಂದಿರು ಮೂಕನಂತಿರು ಲೋಕನಾಥ ನೊ ಳೈಕ್ಯವಾಗಿ ವಿವೇಕಿಯೆನ್ನಿಸೆ 3 ಭೃತ್ಯರೆಲ್ಲರ ಸುತ್ತಿನೀಂ ಮತ್ತನಾಗದೆ ನಿತ್ಯತೃಪ್ತನ ಸತ್ಯಚರಿತನ ಸತ್ವವರಿವೊಡೆ 4 ಬಂದು ನುಡಿಯದಿರೆಂದೆ ಸುಮ್ಮನೆ ತಂದೆ ಶೇಷಗಿರೀಶ ನಂಘ್ರಿಯೆ ನಂಬಿ ನೀ ನಲವಿಂದ ಸುಖಿಪೊಡೆ 5
--------------
ನಂಜನಗೂಡು ತಿರುಮಲಾಂಬಾ
ನೀ ಪಾಲಿಸದಿರಲು ನಾ ಪೋಗುವುದು ಎತ್ತ ನೀ ಪೇಳೊ ಪರಮ ಪುರುಷಾ ಅಗಣಿತ ನಾಮ ಸುರ ಪ್ರೇಮ ಸ್ವರ್ಣ ಗಿರಿವಾಸ ನರಕೇಶ ಭೂಷಾ ಪ ಉದರ ಚಿಂತಿಯಲಿ ಉದಯದಲಿ ಯೆದ್ದು ಅವರಿವರ ಸದನದಲ್ಲಿಗೆ ಹೋಗದೆ ಮೃದು ವಾಕ್ಯವಾಡದಲೆ ಮದ ಗರ್ವ ಬಲದಿಂದ ಎದುರಾದವರ ಜರಿದೆ ಮನಸಿನ ಕ್ಲೇಶದ ಪರಸುದತಿಯರನೀಕ್ಷಿಸಿ ವಿದಿತ ಕರ್ಮಗಳ ತೊರೆದೆ ಒದಗಿ ಬಂದ ಪುಣ್ಯ ಬರಿಗೈದು ಪಾಪದ ಹುದಲೊಳಗೆ ಬಿದ್ದು ಸಂಪದವಿಗೆ ದೂರದವನಾ1 ಉತ್ತಮರ ನಿಂದಿಸಿದೆ ಉಚಿತಾರ್ಥ ತಿಳಿಯದಲೆ ಹೆತ್ತವರನ್ನ ಜರಿದೆ ಹತ್ತೆಗರೆದು ಪರಿಪಾಲಿಸಿದ ದಾತರನು ಹೊತ್ತಾಕೆ ಪ್ರೀತಿ ಪೇಳುವೆ ಮತ್ತೆ ಧರ್ಮವೆಯಿಲ್ಲಾ ಮಹಾಕೃಪಣನಾಗಿ ಪರ ವಿತ್ತಾಶೆ ಪೋಗಿ ಮುಳವೆ ಚಿತ್ತಪಲ್ಲಟವಾಗಿ ವಿಷವೆಂಬ ಹಾವಿನ ಹುತ್ತಿನೊಳು ಬಿದ್ದು ಪುನಿತನಾಗದವನಾ 2 ಗುರು ನಿಂದಕರ ನೋಡಿ ಸರವಾಗಿ ಪೋಗಳುವೆನೊ ವೇದ ಸಮ್ಮತವೆ ಬಿಟ್ಟು ಮರೆವೆ ನಿನ್ನಯ ಸ್ಮರಣೆ ಗತಿಗೆ ಸಾಧನವೆಂದು ಅರಿದರಿದು ಬುದ್ಧಿಗೆಟ್ಟು ಹರಿವಾಸರದುಪವಾಸ ಮಾಡುವ ಜನರಿಗೆ ಮುರಳಾಡಿ ಮುಟ್ಟಿಯಲಿಟ್ಟು ಜಾಗರ ತೊರೆದು ಹಿರಿ ಪಾಮರನಾಗಿ ಹರಣ ಸ್ಥಿರವೆಂದು ಮದುಕರಿಯಂತೆ ತಿರುಗುವೆ ನಾ3 ಕಾಸಿಗೆ ಕಾಸು ಘರ್ತಿಸಿ ಗಳಿಸಿ ಬಿಡದೆ ಮೀಸಲಾ ಪದಾರ್ಥವೆಂಬೆ ದೋಷಕ್ಕೆ ಗುರಿಯಾಗಿ ದುರ್ಜನರ ಒಡಗೂಡಿ ರಾಸಿ ದುರನ್ನ ಉಂಬೆ ಆಶೆಯನು ತೊರಿಯದಲೆ ಉಪರಾಗ ಪರ್ವದಲಿ ಕಾಸು ದಾನವನು ಕೊಂಬೆ ಲೇಸಾದರೆ ಹಿಗ್ಗಿ ಹಾರೈಸುವೆನು ಇಷ್ಟು ಕ್ಲೇಶ ಬಂದರೆ ದೈವವೆಂದು ದೂಷಿಸುವೆನಾ4 ಒಂದೇ ಎರಡೇ ಎನ್ನ ಅಪರಾಧ ಪೇಳಿದರೆ ಎಂದೆಗೆಂದಿಗೆ ಸವಿಯದು ನೊಂದು ದುಶ್ಚಿತ್ತದಲಿ ನೀನೆ ಗತಿ ಎಂದು ಬಾಗಿಲ ಕಾಯಿದುದು ಬಂದು ಮಾತುರದಲ್ಲಿ ಬಲು ದಯಾಳು ಎನ್ನ ಸಂದೇಹವನು ತೊಡೆದು ಮುಂದಾದರೂ ಭವದ ಅಂಧ ಕೂಪದೊಳಿಡದೆ ಪೊಂದಿಸುವ ನಿನ್ನವರೊಳಗೆ ವಿಜಯವಿಠ್ಠಲ ಎನಗೆ 5
--------------
ವಿಜಯದಾಸ
ಪಾನವ ಮಾಡುವೆನು ನಾಮನದಣಿಯ ನಾಮಾಮೃತವ ಪಾನವ ಮಾಡುವೆನು ಪ. ಶ್ರೀನಿವಾಸನ ನಾಮಸುಧಾರಸಏನುರುಚಿಯೋ ಕಾಣೆ ಜೇನುತುಪ್ಪದಂತೆ1 ಸಕ್ಕರೆ ಬೆರೆಸಿದ ಚೊಕ್ಕಪಾನಕವನ್ನುಮಿಕ್ಕು ಮೀರುತಲಿದೆ ರಕ್ಕಸಾರಿಯ ಧ್ಯಾನ 2 ಕದಳಿ ಖರ್ಜುರ ದ್ರಾಕ್ಷಿ ಅಡಕೆಯಿಮ್ಮಿಗಿಲಾಗಿಮುದಕೊಡುವುದು ಜಿಹ್ವೆಗೊದಗಿದ ತತ್‍ಕ್ಷಣ 3 ಕಾಸಿದ ಕೆನೆಹಾಲ ದೂಷಿಸುವಂತಿದೆಏಸುರುಚಿಯೋ ಹರಿದಾಸರೆ ಬಲ್ಲರು 4 ಹಯವದನನ ನಿರ್ಭಯದಿಂ ಭಜಿಸಲುದಯಮಾಡುವ ಸಾಯುಜ್ಯಪದವನಿತ್ತು5
--------------
ವಾದಿರಾಜ
ಶ್ರೀ ರಾಘವೇಂದ್ರರು ಯೋಗಿ ಕುಲವರ ಮಕುಟ ಗುರು ಶ್ರೀರಾಘವೇಂದ್ರನ ಭಜಿಸಿರೋ ಪ ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನು ದು ರ್ವಾದಿ ಗಜಸಮುದಾಯರೇ 1 ದೂಷಿಸುವ ಜನರುಗಳ ಗರ್ವ ಅಶೇಷ ಪರಿಹಾರಗೈಸುವಾ 2 ದಿನಪನಂದದಿ ಕಾಂತಿಬೃಂದಾ ಬನದೊಳಿದ್ದು ಪ್ರಕಾಶವಾಅಣುಗರಿಗೆ ಸಂತೃಪ್ತಿ ಸುಖವನುಅನವರತ ಪೂರೈಸುವಾ 3 ವ್ಯಾಕ್ತರಾಗಿಹ ಅಖಿಳರಿಗೆ ಫಲಪ್ರಾಪ್ತಿಗೋಸುಗ ಚರಿಸುವಾ 4 ಆಪ್ತರಿಲ್ಲದೆ ಈತನೇಯೆನಗಾಪ್ತನನುದಿನವಾಗುವಾ 5 ಕೋಲ ತನಯೆಯ ತೀರದಲಿ ಹೊ-ನ್ನಾಳಿಯಲಿ ವಿಹರಿಸುವಾಶೀಲ ಗೋಪತಿವಿಠಲನ ಕೃಪೆಗಾಲಯನು ಯೆಂದೆನಿಸುವಾ6
--------------
ಗೋಪತಿವಿಠಲರು