ಶ್ರೀ ರಾಮಚಂದ್ರ ಧುರ
ಧೀರಾವನೀಂದ್ರವರ
ಕಾರುಣ್ಯ ರೂಪ ರಘು ರಾಮ ರಾಮ ರಾಮ ಪ
ಲೋಕೈಕ ಪಾಲಕ
ನಾಕಾಧಿಪತಿನುತ ರಾಮ ರಾಮ ರಾಮ 1
ಸುಂದರ ರೂಪಶ್ರೀ
ಮಂದಾರ ಪದನುತ
ಬೃಂದಾರಕಾ ಸೀತಾ ರಾಮ ರಾಮ ರಾಮ 2
ಪಾವನ ಚರಿತನೆ
ಭಾವಜ್ಞ ನರಹರಿ
ಶ್ರೀವತ್ಸ ಲಾಂಛನ ರಾಮ ರಾಮ ರಾಮ 3
ದೂರ್ವಾಪ್ರರೇಶನೆ
ದೂರ್ವಾಸವಂದಿತ
ಸರ್ವೇಶ ಕೇಶವ ರಾಮ ರಾಮ ರಾಮ 4