ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರಾಧನೆ ಪರಮಾನಂದ ಪ ತಾರಾನಾಥ ಕುಲೋದ್ಭವ ಕೃಷ್ಣನ ಅ.ಪ ಘೋರವು ಈ ಸಂಸಾರವೆನ್ನುವುದು ದೂರಿನ ನುಡಿಯಿದು ಬಾಳುವಗೆ ನೂರು ವರುಷಗಳ ಮೀರಿ ಜೀವಿಸಲು ಕೋರಿಕೆ ಬರುವುದು ಧೀರ ಜನರಿಗೆ 1 ನಿರ್ಮಲ ದೇಹವು ನಿರ್ಮಲ ಹೃದಯವು ನಿರ್ಮಲ ನಡೆನುಡಿ ಕರ್ಮಗಳು ಮರ್ಮಜ್ಞರ ಮಾರ್ಗಗಳಲಿ ಸ್ವೋಚಿತ ಧರ್ಮಗಳಲಿ ವಿಶ್ವಾಸವಿರುವವರಿಗೆ 2 ಅನ್ನವಿರುವವರಿಗೆ ತಿನ್ನಲಾಗದು ತಿನ್ನಬಲ್ಲವರಿಗೆ ಅನ್ನವು ಸಿಗದು ಘನ್ನ ಮಹಿಮನ ಪ್ರಸನ್ನತೆಯಿಂದಲಿ ಅನ್ನ ಪಡೆದು ತಿನ್ನಲು ಬಲ್ಲವರಿಗೆ 3
--------------
ವಿದ್ಯಾಪ್ರಸನ್ನತೀರ್ಥರು
ಎಲ್ಲರ ಮನೆ ದೋಸೆ ತೂತು ಪ ಚಿಲ್ಲರೆಯಲ್ಲವಿದೀ ಮಾತು ಅ.ಪ ಗಾಜಿನ ಮನೆಯಲಿ ವಾಸಿಸುವ ಪರ ಗೇಹಕೆ ಕಲ್ಲುಗಳೆಸೆಯುಬಹುದೇ ಮೂರ್ಜಗನಿಂದಕ ತನ್ನಯ ನಾಶಕೆ ಬೀಜ ಬಿತ್ತಿ ಫಲ ಭೋಜನ ಮಾಡುವ 1 ನೀರ ಕ್ಷೀರ ನ್ಯಾಯವ ಕೇಳದ ಜನ ರ್ಯಾರಿರುವರು ಈ ಧರೆಯೊಳಗೆ ಬಾರಿಬಾರಿಗದ ಮನಕೆ ತಾರದೆಲೆ ದೂರಿನ ನುಡಿಯಲಿ ರುಚಿಯು ಉಚಿತವೆ 2 ಗೂಳಿಯು ಹಳ್ಳಕೆ ಬಿದ್ದ ಕಾಲದಲಿ ಆಳಗೊಂದು ಕಲ್ಲೆಸೆಯುವರು ಬಾಳಿಬಾಳಿಸುವ ನರನ ಪ್ರಸನ್ನನು ಕಾಲಕಾಲದಲಿ ಸಲಹದೇ ಇರುವನೆ 3
--------------
ವಿದ್ಯಾಪ್ರಸನ್ನತೀರ್ಥರು
ನಾರಸಿಂಹ ನಿನ್ನ ಭಜಿಸುವೆನು ಶ್ರೀ ಮಾರಜನಕನೆ ನಾರಸಿಂಹ ನಿನ್ನ ಭಜಿಸುವೆ ಪ ಕ್ರೂರ ದೈತ್ಯನ ಕೊರಳ್ಹಾರ ಹರಿದಶಿರಿ1 ಶ್ರೀಶ ನಿನ್ನಯದಾಸತ್ವಕೆ ಆಶಿಸುವೆ | ಎನ್ನ ಪೋಷಿಸುವುದೊ ದೋಷದೂರಿನೆ ನರಸಿಂಹ ವಿಠಲ 2 ಎನ್ನ ಬಿನ್ನಪವನ್ನು ಮನ್ನಿಸಿ ಇನ್ನು ಈ ಪುರಕಿನ್ನು ಸಾರಿದೆ ಘನ್ನ ಮಹಿಮೆ ಶಿರಿ ನರಸಿಂಹ ವಿಠಲನೆ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ ಪ ನಿತ್ಯ ಮುಕ್ತ ಪೂರ್ಣ ಕಾಮ ಒಂದಕು ಸಿಲುಕದ ಮತ್ತೆ ಇದ್ದ ನಿನ್ನ ತನು ದೀನರ ತೋರಿ ಹತ್ತು ಜನುಮವ ಕೊಟ್ಟು ಭಕ್ತ ಜನರ ಬಲು ಕೃತ್ಯ ನಿಮಿತ್ಯ ಕೊಡಿಸ್ಯಾಡಿಸಿದನರಿಯ 1 ಒಂದಕೂ ಸಿಲುಕದಾ ನಿನ್ನ ವತ್ಸದ ದಾವು ಬಂಧದಿ ಬಿಗಿಸಿತೀ ಗೋಪಿಯ ಕೈಯ ವೃಂದಾರಕರ ಸ್ತುತಿಗೊಶವಲ್ಲದವನ ಗೋಪ ಮಂದಿಯ ದೂರಿನ ಪಾತ್ರನ್ನ ಮಾಡಿತು 2 ಪೇಳಿಕೊಂಬಿಯೊ ಲೋಕದೊಡೆಯನು ನಾನೆಂದು ಊಳಿಗತನ ನಿನ್ನ ಕೈಯ ಮಾಡಿಸಿತಯ್ಯ ಕೇಳೊ ಭಕುತರಿನ್ನು ಏನಾಡಿದರನ್ನ ತಾಳಬೇಕಾಯಿತೋ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ತಾಪಡೆದು ಬಂದುದಕುಪಾಯವೇನು |ಕೋಪದಲಿ ಶ್ರೀಪತಿಯ ಶಾಪಿಸಿದರೇನು ಪ.ಅನ್ನವಸ್ತ್ರವಿಲ್ಲವೆಂದು ಅತಿ ಕ್ಲೇಶಪಟ್ಟರೇನು |ಧಾನ್ಯಧನಗಳ ಬೇಡಿ ಧರೆಗಿಳಿದರೇನು |ಎಣ್ಣಿಯನು ಪೂಸಿ ಹುಡಿಯೊಳಗೆ ಹೊರಳಿದರೇನು |ತನ್ನ ತಲೆ ಅಡಿಮಾಡಿ ತಪವ ಮಾಡಿದರೇನು 1ಸರಿಯ ಸುಜನರ ಕಂಡು ಕರುಬಿ ಕೊರಗಿದರೇನು |ಬರಿಮಾತುಗಳನಾಡಿ ಭ್ರಷ್ಟನಾದರೆ ಏನು ||ಇರುಳು ಹಗಲೂ ಹೋಗಿ ಆರ ಮೊರೆಯಿಟ್ಟರೇನು |ಅರಿಯದ - ಮನುಜರಿಗೆ ಆಲ್ಪರಿದರೇನು 2ಹೋಗದೂರಿನ ದಾರಿಕೇಳಿ ಮಾಡುವದೇನು |ಮೂಗನ - ಕೂಡ ಏಕಾಂತವೇನು ||ಯೋಗೀಶ ಪುರಂದರವಿಠಲನ ನೆನೆಯದವ |ತ್ಯಾಗಿಯಾದರೆ ಏನು ಭೋಗಿಯಾದರೆ ಏನು 3
--------------
ಪುರಂದರದಾಸರು
ಬಾತೆಗೆ ಬಾರದ ವಸ್ತು ಬಹಳಿದ್ದರೇನುಹೋತಿನ ಕೊರಳೊಳಗೆ ಮಾಲೆಯಿದ್ದರೇನು ? ಪ.ತಾನು ಉಣ್ಣದ ದ್ರವ್ಯ ತಾಳೆಯುದ್ದ ಇದ್ದರೇನು?ದಾನವಿಲ್ಲದ ಮನೆಯು ದೊಡ್ಡದಾದರೇನು ?ಹೀನ ಕುಲದವಂಗೆ ಹಿರಿತದ ಬಂದರೇನುಶ್ವಾನನ ಮೊಲೆಯೊಳು ಹಾಲಿದ್ದರೇನು 1ವಾದಿಸುವ ಮಗನು ಒಯ್ಯಾರದಲಿದ್ದರೇನುಕಾದುವಸತಿ ಕೆಲದೊಳಿದ್ದರೇನು ?ಕ್ರೋಧವನು ಅಳಿಯದ ಸೋದರನು ಇದ್ದರೇನುಮಾದಿಗರ ಮನೆಯಲಿ ಮದುವೆ ಆದರೇನು 2ಹೋಗದೂರಿನ ಹಾದಿಕೇಳಿ ಮಾಡುವುದೇನುಮೂಗನ ಕಾಡ ಏಕಾಂತವಿನ್ನೇನು ?ಯೋಗಿ ಶ್ರೀ ಪುರಂದರವಿಠಲನ ನೆನೆಯದವಯೋಗಿಯಾದರೆ ಏನು ಜೋಗಿಯಾದರೆ ಏನು ? 3
--------------
ಪುರಂದರದಾಸರು