ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಇಂದುವದನೇ ಸರಸಿಜಸದನೇ ನಿಂದಿತ ಜನಸೂದನೆ ಪ ವಂದಿಸುವೆನೆ ಅರವಿಂದಗಂಧಿನಿ ಮಂದಿರದಲಿ ಗೋವಿಂದನ ತೋರಿಸೆ ಅ.ಪ. ಮೂಲೋಕಮಾತೆ ವಿಖ್ಯಾತೆ ಕೈವಲ್ಯದಾತೆ ಕಾಲ ದೇಶದಿ ವ್ಯಾಪಿತೆ ಭಜಕರಪ್ರೀತೆ ಶೀಲೆ ಸಂಪೂರ್ಣ ಗುಣವ್ರಾತೇ ಫಾಲನಯನ ತ್ರಿದಶಾಲಯ ಪ್ರಮುಖರ ಪಾಲಿಸುತಿಹೆ ಮಂದಜಾಲಜನಕೆ ರಮೇ ಶ್ರೀಲತಾಂಗಿ ನಿನ್ನಾಳುಗಳೊಳು ಹರಿ ಲೀಲೆಯ ಮನದಲಿ ಅಲೋಚನೆ ಕೊಡೆ 1 ಲೋಕನಾಯಕಿ ಲಕುಮಿ ಶ್ರೀ ಸಾರ್ವ ಭೌಮೆ ಶೋಕರಹಿತ ಸುನಾಮೆ ನಾಕಜವನಧಿ ಸೋಮೆ ದೇವಲಲಾಮೆ ಸಾಕಾರವಂತೆ ಗುಣ ಸÉ್ತೂೀಮೆ ನೀ ಕರುಣಿಸಿ ಅವಲೋಕಿಸಿ ಎನ್ನಯ ಕಾಕುಮತಿಯ ಕಳೆದೇಕಾಂತದಿ ನಿತ್ಯ ಏಕ ಮನದಿ ಹರಿ ಶ್ರೀ ಕರಪದಧ್ಯಾನ ನೀ ಕರುಣಿಸು ನಿರಾಕರಿಸದಲೆ 2 ಜಾತರಹಿತ ಜಯವಂತೆ ದೈತ್ಯಕೃತಾಂತೆ ಸೀತಾಂಶುಕೋಟಿ ಮಿಗೆಕಾಂತೆ ಪಾತಕದೂರೆ ನಿಜಪಂಥೆ ನಿತ್ಯಾ ನಿಶ್ಚಿಂತೆ ನೀತದೂರಾದಿ ಮಧ್ಯಾಂತೆ ಪುರುಹೂತ ಮುಖಾವರ ವ್ರಾತ ವಿನುತೆ ಅತಿಪ್ರೀತಿಯಿಂದಲಿ ನಮ್ಮ ವಾತಜನಕ ಜಗನ್ನಾಥ ವಿಠಲನ ಮಾತು ಮಾತಿಗೆ ನೆನೆವಾತುರ ಮನ ಕೊಡೇ 3
--------------
ಜಗನ್ನಾಥದಾಸರು
ದಿಮ್ಮಾಕ ನಿನಗ್ಯಾಕೆ ಎಲೆ ಎಲೆ ಜಮ್ಮಾಸಿ ಜರ ತಿಳಿಕೊ ಪ ದಿಮ್ಮಾಕ ನಿನಗ್ಯಾಕೆ ಛೀಮಾರಿ ನಿನ್ನ ದಿಮ್ಮಾಕ ಮುರಿಲಿಕ್ಕೆ ಗುಮ್ಮವ್ವ ನಿಂತಾಳೆ ಅ.ಪ ಸೊಕ್ಕಿನಿಂದ ನಡೆವಿ ಮುಂದಿಂದು ಲೆಕ್ಕಕ್ಕೆ ತರದಿರುವಿ ಫಕ್ಕನೊಯ್ದೆಮನವರು ಉಕ್ಕಿನ ಪ್ರತಿಮೆಯ ತೆಕ್ಕೆಯೊಳಾನಿಸಿ ನಿನ್ನ ಒಕ್ಕಲಿಕ್ಕುವರವ್ವ 1 ತಾರತಿಗಡಿ ತುಸು ವಿ ಚಾರಮಾಡಿನೋಡು ಘೋರ ಯಮದೂತರು ಹಾರೆ ಕಾಸಿ ಯೋನಿ ದ್ವಾರದಿ ಸೇರಿಸಿ ಘೋರ ಬಡಿವರವ್ವ 2 ಪಾಮರಳಾದಲ್ಲೆ ಮುಂದಿನ ಕ್ಷೇಮವ ಮರೆತಲ್ಲೇ ಭೂಮಿಸುಖಕೆ ಮೆಚ್ಚಿ ತಾಮಸದಲಿ ಬಿದ್ದು ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರಾದಿ 3
--------------
ರಾಮದಾಸರು
ಮಾಡಿದಫಲವನುಭವಿಸಣ್ಣ ನೀ ಒಲ್ಲೆಂದರೆ ಬೆನ್ನ ಬಿಡದಣ್ಣ ದೊರಕುವುದ್ಹ್ಯಾಗಣ್ಣ ಪ ಜತೆಯಿಲ್ಲದೆ ನೀ ಮೊದಲ್ಹುಟ್ಟಿ ಮತ್ತು ಜತೆಯಿಲ್ಲದ್ಹೋಗ್ವುದು ಮರೆತುಬಿಟ್ಟಿ ಸತಿಸುತರ್ಹಿತರೆಂದು ಮತಿಗೆಟ್ಟ ಮಂದ ಮತಿಯಾಗಿ ಸಂಸಾರ ತಿಳಿದಿ ಗಟ್ಟಿ ಗತಿಸುವ ದೇಹದ ಸ್ಥಿತಿ ವಿಚಾರಿಸದೆ ಸತತ ಒದ್ದಾಡಿದಸತ್ಯದೊಳಗೆ ಭ್ರಷ್ಟ 1 ಗಳಿಸಲು ತುಸು ಬೇಸರಲ್ಲದ್ಹೋಗಿ ಕೇಳಿದಳುಕಿ ಅಳುಕಿ ಜನರಿಗೆ ಬಾಗಿ ಅಳಿದುಪೋಗುವ ಕಾಸು ಹಣಕಾಗಿ ಕೆಟ್ಟು ಬಳಲಿಬಳಲಿ ದುಡಿದೆಲೆ ಗೂಗಿ ನಳಿನಾಕ್ಷನ ಪೂಜೆ ಒಮ್ಮೆ ಮಾಡೆನ್ನಲು ಅಳುಮೋರೆ ಮಾಡಿದಿ ತಲೆಬಾಗಿ 2 ಕೆಟ್ಟ ಕೃತ್ಯದಿ ನಿನ್ನ ವಯ ಕಳೆದಿ ಮನೆ ಗಿಷ್ಟಮಿತ್ರರು ಬರಲತಿ ನೊಂದಿ ಕೊಟ್ಟದ್ದು ಕೊಡಲಿಕ್ಕೆ ಸಿಟ್ಟಿಗೆದ್ದಿ ನೀ ಶಿಷ್ಟರ ಸಂಗಕೆ ದೂರಾದಿ ಇಷ್ಟದಾಯಕ ನಮ್ಮ ಶಿಷ್ಟ ಶ್ರೀರಾಮನಡಿ ಗಟ್ಟ್ಯಾಗಿ ಭಜಿಸದೆ ಕೆಟ್ಟ್ಹೋದಿ 3
--------------
ರಾಮದಾಸರು
ಹೊತ್ತಾಗಿ ಹೊರಟಿಹೆನು ವೈಕುಂಠಕೆ ಮುಟ್ಟಬೇಕು ನಾನು ಪ ಹೊತ್ತಾಗಿ ಹೊರಟಿಹೆ ಹೊತ್ತುಗಳೆದು ವ್ಯರ್ಥ ವತ್ತರದಿಂ ಪೋಗಿ ಹೊತ್ತೆ ಮುಟ್ಟಬೇಕು ಅ.ಪ ಊರುದೂರಾದಿನ್ನು ಕೇಳದೆ ಅರುಮಾತನಾನು ಊರಜನರ ಮಾತು ಮೀರಿ ಆತುರದಿಂದ ಪಾರವಾರಿಲ್ಲದ ವಾರಿಧಿಯನೀಸಿ 1 ದಾರಿ ಅರಿಯೆ ನಾನು ಬಲ್ಲವರು ತೋರಿರೆ ಮಾರ್ಗವನು ಸಾರಮೋಕ್ಷಕ್ಕಾಧಾರನ ಪಟ್ಟಣ ಸಾರಸೌಖ್ಯ ತಲೆಸೇರಿ ಸಕಲ ಮೀರಿ 2 ಆ ಮಹ ಸುಕೃತಗೂಡಿ ನಾಮಾಮೃತಮಂ ನೇಮದಿ ಸವಿಯುತ ಸ್ವಾಮಿ ಶ್ರೀರಾಮನ ಪ್ರೇಮಯಾನವೇರಿ 3
--------------
ರಾಮದಾಸರು