ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋದಾವರಿ ಎನಗೆ ಶ್ರೀಧರನ ತೋರೆ ಪ. ನೀ ದಯದಿ ಸಲಹೆನ್ನ ಮಾಧವಗೆ ಪ್ರಿಯೆ ಅ.ಪ. ಸ್ವಚ್ಛವರ್ಣಳೆ ಬಹು ಹೆಚ್ಚಾಗಿ ಪರಿಯುವಳೆ ಮುಚ್ಚಿರುವ ಮಲಗಳನು ದೂರಮಾಡೆ ಅಚ್ಯುತನ ಪದವೀವ ಹೆಚ್ಚಿನಾ ಜ್ಞಾನವನು ಸ್ವಚ್ಛತನದಲಿ ಕೊಟ್ಟು ಮೆಚ್ಚಿ ಎನ್ನನು ಸಲಹೆ 1 ಧರೆಯ ಜನರು ನಿನ್ನೊಳ್ ಬರುತ ಮಲಗಳ ತೊಳೆಯೆ ಅರಿತು ಅದನು ಮನದಿ ಪರಿಹರಿಸಿಕೊಳಲು ಪರಮ ಭಾಗವತರ ವರ ಮಂದಿರಕೆ ಪೋಗಿ ವರಹ ವೆಂಕಟಗಿರಿಯೊಳ್ ಸ್ಥಿರವಾಗಿ ನಿಂತೆ 2 ಬರುತ ದಾರಿಯೊಳೆನಗೆ ಸ್ವಪ್ನದಲಿ ತೋರಿದೆ ವರ ದಿವ್ಯರೂಪವನು ನಾರಿಮಣಿಯೆ ಸರಿಗೆ ಕಂಕಣ ಮುತ್ತಿನಾ ಬುಗುಡಿಯನೆ ಧರಿಸಿ ವರ ಮುತ್ತೈದೆಯರಿಬ್ಬರಂದದಲಿ ತೋರಿದೆ 3 ಮುಕ್ಕೋಟಿ ಗಂಧರ್ವ ದೇವರ್ಕಳೂ ಬರುತಿರಲು ಅಕ್ಕರದಿ ತಂಗಿಯನೆ ಒಡಗೂಡುತ ಲಕ್ಕುಮಿ ಸ್ವಾಮಿ ಶ್ರೀ ಪುಷ್ಕರಣಿ ಸಾರಿರಲು ಉಕ್ಕುವೋ ಉಲ್ಲಾಸದಿಂದ ತೆರಳಿದೆಯೆ 4 ಜಿಷ್ಣು ಸಖನ ದಿವ್ಯ ಪಟ್ಟಣವ ಸೇರಲು ಕೃಷ್ಣವೇಣಿಯ ಒಡಗೂಡಿ ವಿಷ್ಣುಪಾದೋದ್ಭವೆಗೆ ಸರಿಯೆನಿಸಿ ಗೋಪಾಲ ಕೃಷ್ಣವಿಠ್ಠಲನ ಬಹುನಿಷ್ಠೆಯಿಂ ಧ್ಯಾನಿಸುವೆ 5
--------------
ಅಂಬಾಬಾಯಿ
ಚಿಂತೆ ಪರಿಹರ ಮಾಡೋ ಎನ್ನಯ್ಯ ಸಜ್ಜನರ ಪ್ರಿಯ ಪ ಚಿಂತೆ ಪರಿಹರ ಮಾಡೊ ಎನ್ನಯ ಚಿಂತೆ ಪರಿಹರ ಮಾಡಿ ಎನ್ನ ಅಂತರಂಗದಿ ನಿಮ್ಮ ನಿರ್ಮ ಲಂತ:ಕರುಣದ ಚರಣವಿರಿಸಿ ಸಂತಸದಿ ಪೊರೆ ಸಂತರೊಡೆಯ ಅ.ಪ ನಿಮ್ಮ ಪಾದವ ನಂಬಿಕೊಂಡಿರುವ ಈ ಬಡವನನ್ನು ಕಮ್ಮಿ ದೃಷ್ಟಿಯಿಂ ನೋಡದಿರು ದೇವ ನಿನ್ನ ಬಿಟ್ಟೆನ ಗ್ಹಿಮ್ಮತನ್ಯರದಿಲ್ಲ ಜಗಜೀವ ಭಜಕಜನ ಕಾವ ಮೂಡಿಮುಳುಗುತಿಹ್ಯದೈ ಸಮ್ಮತದಿ ಸಲಹೆನ್ನ ದಯಾನಿಧಿ ಬ್ರಹ್ಮಬ್ರಹ್ಮಾದಿಗಳ ವಂದ್ಯನೇ 1 ಆರುಮೂರರಿಕ್ಕಟ್ಟಿನೊಳು ಗೆಲಿಸೋ ಘನಪಿಂಡಾಕಾರ ಆರು ಎರಡರ ಸಂಗ ತಪ್ಪಿಸೋ ಮಹಬಂಧ ಬಡಿಪ ಘೋರ ಸಪ್ತಶರಧಿ ದಾಂಟಿಸೋ ತವದಾಸನೆನಿಸೊ ಗಾರುಮಾಡಿ ಕೊಲ್ಲುತಿರ್ಪ ದೂರಮಾಡೆನ್ನ ದುರಿತದುರ್ಗುಣ ಸೇರಿಸು ತ್ವರ ದಾಸಸಂಗದಿ ನಾರಸಿಂಹ ನಾರದವಿನುತ 2 ಪಾಮರತ್ವ ತಾಮಸವ ಬಿಡಿಸೋ ವಿಷಯಲಂಪಟ ಪ್ರೇಮ ಮೋಹ ಕಾಮ ಖಂಡ್ರಿಸೋ ಹರಲಿರುಳು ನಿಮ್ಮ ಭಜನಾನಂದ ಕರುಣಿಸೊ ಸುಚಿಂತದಿರಿಸೊ ಕಾಮಿತಜನಕಾಮಪೂರಿತ ನಾಮರೂಪರಹಿತಮಹಿಮ ಸ್ವಾಮಿ ಅಮಿತಲೀಲ ವರ ಶ್ರೀರಾಮ ಪ್ರಭು ತ್ರಿಜಗದ ಮೋಹ 3
--------------
ರಾಮದಾಸರು
ಬಂದ ದುರಿತವಾ ಚನ್ನಕೇಶವಾ ನಂದನಂದನಾ ದೂರಮಾಡೆಲೋ ಪ ಆದಿದೇವನೇ ಮರೆಯ ಹೊಕ್ಕೆನೋ ಸಾದುವರ್ಯರ ಮನ್ನಿಸೋ ಹರೇ1 ಭವದಿ ನೊಂದೆನೋ ಬಂಧ ಬಿಡಿಸಲೋ ಅವನಿಪಾಲನೆ ಸಾನುರಾಗದೀ 2 ಸುಜನಪಾಲನೇ ಕುಜನ ಕಾಲನೇ ಭಜನೆ ಮಾಳ್ಪಿನೊ ರಕ್ಷಿಸೋ ಹರೇ 3
--------------
ಕರ್ಕಿ ಕೇಶವದಾಸ