ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ವರದ ವೆಂಕಟ ಶ್ರೀನಿವಾಸ ಪ ಕರುಣದಿ ಪಿಡಿಯೊ ಎನ್ನ ಶೇಷಗಿರೀಶಾಅ.ಪ. ಘೋರ ಭವದಿ ನೊಂದೆನು ಇಂದು ಭಾರ ನಿನ್ನದು ಎಂದು ಸಾರಿ ಬೇಡಿದೆ ನಿನಗೆ ಭಕ್ತಬಂಧು ದೂರಮಾಡಲು ಬೇಡ ಕರುಣಾ ಸಿಂಧು ವಾರಿಜಾಸನ ವಂದ್ಯ ನೀರಜನಯನನೆ ಶರಣರ ಪೊರೆಯುವ ಸುರ ದ್ರುಮನೆ ಪರಿಪರಿ ಭವಣೆಯ ತರಿಮಹಿದಾಸನೆ ಚರಣ ಸೇವಕರ ಸೇವಕನೆನಿಸೊ ಶ್ರೀಶನೆ ದುರುಳ ಅಸುರನ ಶಿರವ ತರಿದು ತರಳ ಪ್ರಹ್ಲಾದನ ಪೊರೆದೆ ಎಂದು ಸುರರು ಪೊಗಳವುದನ್ನು ತಿಳಿದು ಭರದಿ ಬಂದು ಶಿರವ ನಮಿಸುವೆ ನಿಂದು 1 ಸಿರಿ ಅಜಭವಾದಿ ವಂದಿತ ಚರಣ ಪರಿಮಿತಿಯಿಲ್ಲದ ಗುಣ ಗಣ ಪೂರ್ಣ ನೀರಜ ಭವಾಂಡೋದಯಕೆ ಕಾರಣ ದುರಿತ ಹರಣ ಕ್ರೂರಜನ ಕುಠಾರ ದೇವನೆ ಗರುಡಗಮನ ಭೀಮರೂಪನೆ ಅರಗಳೆಣಿಸದೆ ಪೊರೆಯಂ ಬೇಗನೆ ಕರವ ಮುಗಿದು ಸಾರಿ ಬೇಡುವೆ ಕರಿಯ ತೊಡರನು ತರಿದು ನಕ್ರನ ಶಿರವ ಸೀಳಿದ ಕರುಣಿ ಕೃಷ್ಣನೆ ಸೀರೆ ಪಾಲಿಸಿ ಪೊರೆದ ದಾತನೆ ಮರಳಿ ಬರುವ ಭವವ ಬಿಡಿನೊ ರಂಗನೆ 2 ನಂಬಿದವರ ಕಲ್ಪವೃಕ್ಷ ನಂಬದವರ ಕಲುಷಕೆ ಶಿಕ್ಷಾ ಇಂಬಾಗಿ ಸರ್ವತ್ರ ಸುಜನರ ರಕ್ಷಾ ತುಂಬಿದ ವೈಭವದಿ ಮೆರೆಯೊ ದಕ್ಷಾ ಕಂಬುಕಂಠನೆ ನಿನ್ನ ನಂಬಿದೆ ಅಂಬರದಲಿ ಕಾಣೆಂದು ಬೇಡಿದೆ ಬಿಂಬನ ನಾಮನುಡಿಸೆಂದು ಕೇಳಿದೆ ಶಂಬರವೈರಿ ನಿನ್ನ ಚರಣವ ಸಾರಿದೆ ಶಂಭುವಂದಿತ ತುಂಬುರ ಪ್ರಿಯ ನಂಬಿ ಭಜಿಸುವೆ ತುಂಬು ಮನದೊಳು ಅಂಬುಜಾಕ್ಷನೆ ಜಯತೀರ್ಥ ಮುನೀಂದ್ರ ಬೆಂಬಲವಾಯುಗ ಶ್ರೀ ಕೃಷ್ಣವಿಠಲಾ 3
--------------
ಕೃಷ್ಣವಿಠಲದಾಸರು