ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣ ಬಾರದೆ ವಿಠ್ಠಲಾ | ಶ್ರೀ ಪಾಂಡುರಂಗ ಪ. ಸ್ಮರಣೆ ಮಾಡುತ ಪೊರೆ ಎಂದೆನ್ನುತ ವರಲುವಾ ಧ್ವನಿ ಕೇಳದೇ ಈ ಪರಿಯ ಗರ್ವವಿದೇನೊ ಹರಿಯೆ ಅ. ದೂರದಿಂದಲಿ ಬಂದೆನೋ | ಇಲ್ಲಿಂದ ಮುಂದೆ ದಾರಿ ಕಾಣದೆ ನಿಂದೆನೋ ದ್ವಾರಕಾಪತಿ ನೀನಲ್ಲದಿ ನ್ನಾರು ಕಾಯುವರೀಗ ಪೇಳು ಸಾರಿದೆನು ನಿನ್ನಂಘ್ರಿ ಕಮಲವ ಚಾರು ಚರಿತನೆ ಮಾರನೈಯ್ಯ 1 ತನುಸುಖ ಬೇಡಲಿಲ್ಲಾ | ನಿನ್ನ ನಾನು ಘನವಾಗಿ ಕಾಡಲಿಲ್ಲ ಮನದ ಹಂಬಲ ನೀನೆ ಬಲ್ಲೆಯೊ ಮನಕೆ ತಾರದೆ ಸುಮ್ಮನಿಪ್ಪೆಯೋ ಎನಗೆ ಪ್ರೇರಕ ನೀನೆ ಅಲ್ಲವೆ ನಿನಗೆ ದಾಸಳು ನಾನು ಅಲ್ಲವೆ 2 ಕರೆಕರೆ ಪಡಿಸುವುದೂ | ಸರಿಯಲ್ಲ ನಿನಗೆ ಕರಿವರದ ಕೇಳು ಇದೂ ನರಸಖನೆ ದಯದಿಂದ ನಿನ್ನ ಚರಣ ದರುಶನವಿತ್ತೆ ಒಲಿದು ಕರಪಿಡಿದು ಸಲಹೆಂದರೀಗ ತೆರೆದು ನೋಡದೆ ನೇತ್ರವಿರುವರೆ 3 ಜ್ಞಾನಿ ಹೃತ್ಕಮಲವಾಸ | ಶ್ರೀ ರುಕ್ಮಿಣೀಶ ಭಾನುಕೋಟಿ ಪ್ರಕಾಶ ನೀನೆ ಗತಿ ಇನ್ನಿಲ್ಲ ಅನ್ಯರು ಸಾನುರಾಗದಿ ಸಲಹೊ ಎನ್ನಲು ಆನನದಿ ಈಕ್ಷಿಸದೆ ನಿಂತರೆ ಮಾನ ಉಳಿವುದೆ ಭಕ್ತವತ್ಸಲ 4 ಇಟ್ಟಿಗೆ ಕೊಟ್ಟವನೊ ಕೊಟ್ಟನಿನ್ನೇನು ಅಷ್ಟು ಭಾಗ್ಯವನೂ ಕೊಟ್ಟೆ ಬಡ ಬ್ರಾಹ್ಮಣನ ಅವಲಿಗೆ ದೃಷ್ಟಿ ಬಿದ್ದರೆ ಕಷ್ಟ ಉಂಟೆ ಕೊಟ್ಟು ಅಭಯ ಪೊರೆ ಗೋಪಾಲ- ಕೃಷ್ಣವಿಠ್ಠಲ ಮನದಿ ತೋರೋ5
--------------
ಅಂಬಾಬಾಯಿ
ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ ಪ ಹರುವ ಸರ್ಪಯಿರುವ ಚೋರ ಶರಧಿ ಉರೆವ ಕಿಚ್ಚು ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ ಹೊಡೆವ ದೈತ್ಯಾ ತೊರೆವ ಸನ್ನ್ಯಾವ ಮೇರೆ ತಪ್ಪಿ ಭರದಿ ತನಗೆ ಇದಿರು ಬಂದವ ಕಾಣುತತಿ ಹರಿಯ ನಾಮ ಮುಟ್ಟುವ ದೇವ ಶ್ರೀನಿವಾಸಾ1 ಸೃಷ್ಟಿ ಜನರಿಗೊಂದು ಆಳು ಕೊಟ್ಟು ವೇಗದಿಂದ ಕರಿಯ ಲಟ್ಟಿದವರ ಕಾಣೆನಯ್ಯಾ ಎಷ್ಟೆಷ್ಟು ದೂರದಿಂದಲಿ ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ ಅಟ್ಟಹಾಸದಿಂದ ಮಂಗಳವ ಪಾಡಿ ಪೊರ ಮಟ್ಟ ಒಪ್ಪ ತಿರುವೆಂಗಳಾ2 ಹದಿನೆಂಟು ಜಾತಿಯವರು ಒದಗಿ ಮುದದಿಂದ ಕುಣಿದು ಪದೋಪದಿಗೆ ಹಾಡಿ ಪಾಡುತ ಹದುಳವಾದ ಪಂಚವಾದ್ಯ ಎದುರುನಿಂದು ಧ್ವನಿಯ ಮಾಡುತಾ ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತ ನಿತ್ಯ ನಿನ್ನ ಮದುವೆಯೆಂದು ಸುಖವು ಸುರಿಯುತ್ತಾ 3 ಎಲ್ಲರಿಲ್ಲಿಗೆ ಬಂದರೇನು ಯಿಲ್ಲ ಪು ಣ್ಯಲೇಶ ಮಾತ್ರ ಸಲ್ಲದಯ್ಯಾ ಮುಕ್ತಿಗವರು ಇಲ್ಲೆ ಸುಖವು ಬಟ್ಟು ಕಡಿಗೆ ಎಲ್ಲೆಲ್ಲಿ ಜನಿಸಿ ಬಹು ಭವದ ಪಲ್ಲಡಿಯೊಳಗೆ ಜನಿಸಿ ಜ್ಞಾನ ವಿಲ್ಲದೆ ಸಲ್ಲುವರು ದುರಿತವ ವಹಿಸಿ 4 ಮನುಜರೆಣಿಕೆ ಏನು ಮತ್ತೆ ವನಜ ಸಂಭವ ಈಶ ಮುಖ್ಯ ಅನಿಮಿಷರೆಲ್ಲ ಬಂದು ಭಯದಿ ಮನಸಿನಲಿ ನಿನ್ನ ಅರಸುತನದ ಶೌರ್ಯ ಮಣಿದು ನಮಸ್ಕರಿಸುತಾ ವಾಲ್ಗೈಸುತಾ ಹೊಣಿಯೊ ವಿಜಯವಿಠ್ಠಲ ಎನುತಾ 5
--------------
ವಿಜಯದಾಸ
ನೋಡಿದ್ಯಾ ಗುರುರಾಯರ ನೋಡಿದ್ಯಾ ಪ ನೋಡಿದ್ಯಾ ಮನವೆ ನೀನಿಂದು - ಕೊಂ - ಡಾಡಿದ್ಯ ಪುರದಲ್ಲಿ ನಿಂದು - ಆಹಾ ಮಾಡಿದ್ಯ ವಂದನೆ ಬೇಡಿದ್ಯ ವರಗಳ ಈಡು ಇಲ್ಲದೆ ವರ ನೀಡುವೊ ಗುರುಗಳ ಅ.ಪ ಸುಂದರ ತಮ ವೃಂದಾವನದಿ ತಾನು ನಿಂದು ಪೂಜೆಯ ಕೊಂಬ ಮುದದಿ - ಭಕ್ತನೀ ನಂದ ನೀಡುವೆನೆಂದು ತ್ವರದಿ ಇಲ್ಲಿ ಬಂದು ನಿಂತಿಹನು ಪ್ರಮೋದಿ ಆಹಾ ಹಿಂದಿನ ಮಹಿಮವು ಒಂದೊಂದೆ ತೋರುವಾ ಮಂದಜನರ ಹೃ - ನ್ಮಂದಿರಗತರನ್ನ 1 ದೂರದಿಂದಲಿ ಬಂದ ಜನರ - ಮಹ ಘೋರ ವಿಪತ್ಪರಿಹಾರಾ - ಮಾಡಿ ಸಾರಿದಭಿಷ್ಟವು ಪೂರಾ - ನೀಡಿ ಪಾರುಮಾಡುವ ತನ್ನ ಜನರಾ - ಆಹಾ ಆರಾಧಿಸುವರ ಸಂ -ಸಾರವಾರಿಧಿಯಿಂದ ಸೂರಿ ಕೊಡುವೊರನ್ನ 2 ಪಾದ - ಯುಗ ಸತ್ಯಪೂರ್ವಕದಿ ನಂಬೀದ - ನಿಜ ಭೃತ್ಯನಪೇಕ್ಷಮಾಡೀದ - ಕಾರ್ಯ ಸತ್ಯಮಾಡುವ ಪೂಜ್ಯಪಾದ - ಆಹಾ ಮತ್ರ್ಯಾದಿ ಸುರರೊಳು - ಎತ್ತ ನೋಡಿತಗಿನ್ನು ಉತ್ತುಮರಾರಯ್ಯ - ಭತ್ಯವತ್ಯಲರನ್ನ 3 ಅಂತರದಲಿ ತಾನು ನಿಂತು ಜನ ಸಂತತ ಕಾರ್ಯಗಳಿಂತು - ಮಾಡಿ ಕಂತುಪಿತಗೆ ಅರ್ಪಿಸ್ಯಂತು ತಿಳಿಸ ದಂತೆ ಎಮ್ಮೊಳಗಿರೊವೊ ತಂತು - ಆಹಾ ಸಂತತ ಕರ್ಮಗಳಂತು ಮಾಡುತ ಜೀವ ರಂತೆ ಗತಿಯು ತಾ ಪ್ರಾಂತಕ್ಕೆ - ನೀಡುವರ 4 ಅಗಣಿತ ಮಹಿಮವಗಾಧಾ - ಬಹು ಸುಗುಣನಿಧಿ ಮಹಾ ಭೋಧ - ನಾನು ಪೊಗಳುವದೇನು ಸಮ್ಮೋದ - ತೀರ್ಥ ಮೊದಲಾದ ಸುರರ ಪ್ರಮೋದ - ಆಹಾ ಮೊಗದಿಂದ ಶ್ರೀಗುರು ಜಗನ್ನಾಥ ವಿಠಲ ಸಂ ಮೊಗನಾದ ಕಾರಣ ಜಗದಿ ಮೆರೆವೊರನ್ನ 5
--------------
ಗುರುಜಗನ್ನಾಥದಾಸರು
ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ | ಶ್ರೀ ಭೂರಮಣನ ತನಯೇಪ ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು | ಇನ್ನು ನೀ ಮರಿಸದೇ | ಪುಣ್ಯನರನ ಮಾಡೊ ಪೂತೋಭಾವವೆಂದು | ಧನ್ಯ ಜನ ಮಾನ್ಯಾ ಭಕ್ತಜನ ಪ್ರಸನ್ನೇ 1 ಶಿವ ನಿನ್ನ ಶಿರದಲ್ಲಿ ಧರಿಸಿದೆ ಕಾರಣ ಪವಿತ್ರಂಗನಾದನೆಂದು | ಅವನಿಯೊಳಗೆ ಮಹಾ | ಕವಿಜನ ಪೇಳಿದ ಶ್ರವಣದಿಂದಲಿ ಭಕುತಿಯಿಂದಲಿ ನಿಂದೆ 2 ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ | ಪಾದ | ವಾರಿಜ ಪೊಗಳುವಂತೆ ಬುದ್ಧಿ ಪಾಲಿಸುವದು 3
--------------
ವಿಜಯದಾಸ