ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಅಪಮೃತ್ಯು ಪರಿಹರಿಸೊ ಶ್ರೀ ವೆಂಕಟೇಶ ಅಪರಾಧವೆಣಿಸದಲೆ ಉದ್ಧರಿಸೊ ಶ್ರೀಶಾ ಪ ಅಪರಾಧ ಸಹಸ್ರಗಳ ಮಾಡುತನುದಿನದಿ ಅಪರಿಮಿತ ಮಹಿಮ ನಿನ್ನನ್ನು ಸ್ಮರಿಸದೆ ಚಪಲ ಬುದ್ಧಿಗಳಿಂದ ತಪಿಸಿದೆನೊ ಭವದೊಳಗೆ ಗುಪಿತದಿಂ ಸಲಹಯ್ಯ ಪಿತನೆ ಕೈ ಮುಗಿವೆ 1 ಪೂರ್ವಕಾಲದೊಳೊಬ್ಬ ರಾಜಶೇಖರ ತನ್ನ ಮೋಜಿನಿಂದಲೆ ನಿನ್ನ ಸ್ಮರಣೆ ಮರೆತು ಮೂರ್ಜಗತ್ಪತಿಯ ಪೂಜಿಸದೆ ಕಾಲವ ಕಳೆಯೆ ಆ ಜವನ ದೂತರೆಳೆ ತಂದರೈ ಹರಿಯೆ 2 ಅಂದು ಯಮ ಭಟರುಗಳ ಬಂಧನದೊಳಿರೆ ನೃಪನು ಚಂದದಿಂ ಪಾಪಕರ್ಮಗಳ ನೋಡೆ ತುಂಬಿದ ಪಾಪವೆ ಬಹಳವಾಗುತಿರಲು ಇಂದಿರೇಶನ ಪೂಜೆ ಒಂದೆ ದಿನವೆನಲು 3 ಬಿಡದೆ ಇವನಿಗೆ ಶಿಕ್ಷೆ ಕೊಡಿರಿ ಎಂದೆನಲು ನುಡಿದರಾ ಭಟರುಗಳು ಮೊದಲು ಯಾವದು ಎನಲು ಮೊದಲು ಪುಣ್ಯವು ಎಂದು ನುಡಿದನಾ ನೃಪನು4 ತಕ್ಷಣವೆ ವಿಷ್ಣುದೂತರು ಬಂದು ನೃಪವರನ ಚಿತ್ತಜನಯ್ಯನಿಹ ಉತ್ತಮ ಸ್ಥಳಕೆ ಸತ್ಯವಂತರು ಬಹಳ ಕೀರ್ತಿಸುತ ಶ್ರೀಹರಿಯ ಮತ್ತೆ ವೈಕುಂಠದಲಿ ಮೆರೆಸಿದರು ಕ್ಷಣದಿ 5 ಒಡನೆ ಪುಣ್ಯವು ಮುಗಿಯೆ ನಡಿ ನರಕಕೆಂದೆನಲು ಒಡೆದು ಎದೆ ನಡುಗಿ ಕಳವಳಿಸಿ ನೃಪನು ನುಡಿದ ಹೀಗೆನುತ ಘರ್ಜಿಸುತ ಯಮದೂತರಿಗೆ ಬಿಡಿರಿ ನಿಮ್ಮಯ ಸತ್ಯ ನಿಜವಲ್ಲವೆನುತ 6 ನಾರಾಯಣನ ನೋಡಿದವರಿಗೆ ನರಕ ಭಯ ನಾರದರೆ ಈ ರೀತಿ ಸಾರಿ ಡಂಗುರವ ಹೀಗೆನಲು ನುಡಿಕೇಳಿ ಸಾರಿ ಪೇಳಿದರಾಗ ದೇವ ದೇವನೆ ಇದಕೆ ಉಪಾಯವೇನೆನಲು7 ಪರಮ ಕೃಪಾಳು ಹರಿ ಪರಮ ಭಕ್ತರನೆಲ್ಲ ಕರೆದು ಏಕಾಂತದಲಿ ಸರಸವಾಕ್ಯದಲಿ ಇರಲಿ ಈ ನರನ ವಾಕ್ಯದ ಜಾಣತನವನು ಸುರ ಲೋಕದವರು ಸ್ತುತಿ ಮಾಡಲೆಂದೆನಲು8 ಭಾಗವತ ಜನಪ್ರಿಯ ಬಾಗಿ ನಮಿಸುತಲಿ ವಂದನೆ ಮಾಡುವೆ ನಾಗಶಯನನೆ ನಿನ್ನ ಮಹಿಮೆಗೆಣೆಗಾಣೆನೊ ಬೇಗ ಪಾಲಿಸು ಕಮಲನಾಭ ವಿಠ್ಠಲನೆ 9
--------------
ನಿಡಗುರುಕಿ ಜೀವೂಬಾಯಿ
ಏತಕೆ ಒಣಭ್ರಾಂತಿ ತಿಳಿಯದು ಮೂರುದಿನದ ಸಂತಿ ನೀತಿಗೆಟ್ಟು ಸತಿಮೋಹದಿ ಕುಳಿತೆಮದೂತರೆಳೆಯುವಾಗೇನಂತಿ ಪ ಬರುವಾಗೊರ್ವಬಂದಿ ಬರುತಲೆ ಮಂದಿ ಮಕ್ಕಳೆಂದಿ ಇರು ಇರುತೆಲ್ಲ ನನ್ನದೆಂದಿ ಮರೆವಿನ ಆಲಯದೊಳು ನಿಂದಿ ಕರುಣವಿಲ್ಲದೆತುಸು ಹೆಡತಲೆಮೃತ್ಯು ಮುರಿದು ತಿನ್ನುವಾಗ್ಯಾರಿಲ್ಲ ಹಿಂದೆ 1 ತನುಜನರು ಇವರು ಧನಕನಕಿರುವತನಕ ಹಿತರು ಜನಕಜನನಿಯರು ಕೊನೆಗೆ ಸಂಗಡ ಬರರ್ಯಾರು ಕನಿಕರವಿಲ್ಲದೆ ಕಾಲದೂತರು ಘನಬಾಧೆಪಡಿಸಲು ಬಿಡಿಸರೋರ್ವರು 2 ಭೂಮಿ ಸೀಮೆಯೆಲ್ಲ ಈ ಮಹರಾಜ್ಯ ಭಂಡಾರ ಸುಳ್ಳು ಪಾಮರ ಸಂಸಾರ ಕಾಮಿಸಿ ಕೆಡಬೇಡೇಲೆ ಮಳ್ಳ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಭಜಿಸಿ ಭವಗೆಲಿದು ನೀ ಬಾಳೋ3
--------------
ರಾಮದಾಸರು
ಏನು ಬರುವುದೊ ಸಂಗಡೇನು ಬರುವುದೊ ಪ ದಾನ ಧರ್ಮ ಮಾಡಿ ಬಹು ನಿಧಾನಿ ಎನಿಸಿಕೊಳ್ಳೊ ಮನುಜಅ ಮಂಡೆ ತುಂಬ ಬಂಧುಬಳಗಕಂಡು ಬಿಡಿಸಿಕೊಂಬರಾರೊ ದುಂಡ ಯಮನ ದೂತರೆಳೆಯೆಬಂಡಿ ತುಂಬ ಇದ್ದ ಧನವು ಹಿಂದೆ ಉಳಿವುದಲ್ಲೊ ನಿನ್ನಅಂಡಿಕೊಂಡು ಬರುವ ವಸ್ತು ಕೀರ್ತಿ ಅಪಕೀರ್ತಿ ಎರಡೆ1 ಎನ್ನದೆಂದು ತನ್ನದೆಂದು ಹೊನ್ನು ಹೆಣ್ಣು ಮಣ್ಣಿಗಾಗಿಬನ್ನಪಟ್ಟು ಬಾಯಿಬಿಡುವೆ ಬರಿದೆ ಮೋಹದಿಚೆನ್ನ ಮನದಿ ಪರಹಿತಾರ್ಥ ಮಾಡಿ ಪುಣ್ಯಪಡೆಯೊ ನೀನುಇನ್ನು ಮುಂದೆ ಕಿತ್ತು ತಿಂಬ ಕೂಪದಲ್ಲಿ ಕೆಡಲು ಬೇಡ ಮನುಜ2 ಬತ್ತಲಿಂದ ಬರುತ್ತಿಹರು ಬತ್ತಲಿಂದ ಹೋಗುತಿಹರುಕತ್ತಲೆ ಕಾಲವನು ಬೆಳಕು ಮಾಡಿ ಹೊತ್ತುಗಳೆವರುಸತ್ತರಿಲ್ಲ ಅತ್ತರಿಲ್ಲ ಹೊತ್ತುಕೊಂಡು ಹೋಹರಿಲ್ಲಿಮತ್ತೆ ದೇಹ ಮಣ್ಣುಗೂಡಿದಂತೆ ಕೆಡಲು ಬೇಡ ಮನುಜ3 ಬಟ್ಟೆ ನಿನಗೆ ಹೊಂದಲಿಲ್ಲಕಟ್ಟ ಕಡೆಗೆ ದೃಷ್ಟಿ ನೋಟ ಬಟ್ಟ ಬಯಲು ಆಗುತಿಹುದು 4 ಕಾಲ ಕಳೆದೆ - ಮುಂ-ದರಿದು ನೋಡು ನರರ ತನುವು ದೊರಕಲರಿಯದುನೆರೆ ಮಹಾಮೂರ್ತಿ ಒಡೆಯ ಬಾಡದಾದಿಕೇಶವನಲಿಟ್ಟು ಭಕುತಿಚರಣ ಭಜಿಸಿ ಚಂಚಲಳಿಸಿ ವರವ ಪಡೆದು ಹೊಂದು ಮುಕುತಿ 5
--------------
ಕನಕದಾಸ
ದಾನಧರ್ಮವ ಮಾಡಿ ಸುಖಯಾಗು ಮನವೆ ಪ ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ಅ ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯಅಕ್ಕರಿಂದಲಿ ಪೂಜೆ ಮಾಡಲೇಕೆಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ 1 ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದುತಂಬಿಟ್ಟಿನಾ ದೀಪ ಹೊರಲೇತಕೆಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬದೊಂಬಿ ದೈವಗಳ ಭಜಿಸದಿರು ಮನವೆ2 ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆಬಗೆಬಗೆಯಿಂದ ಶೃಂಗಾರ ಮಾಡಿನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನುಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ 3 ದಾನಧರ್ಮ ಪರೋಪಕಾರವ ಮಾಡುದೀನನಾಗಿ ನೀ ಕೆಡಬೇಡವೊಜ್ಞಾನವಿಲ್ಲದೆ ಹೀನ ದೈವವ ಭಜಿಸಿದರೆಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ 4 ನರಲೋಕದಲಿ ಯಮನ ಬಾಧೆಯನು ಕಳೆಯಲುವರ ಪುಣ್ಯ ಕಥೆಗಳನು ಕೇಳುತಲಿಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿಸ್ಥಿರ ಪದವಿಯನು ಪಡೆ ಹುಚ್ಚು ಮನವೆ5
--------------
ಕನಕದಾಸ
ನಂಬಿದವರ ಇಂಬಾದಾ ಕಮ ಲಾಂಬಕನೇ ನಿನ್ನ ನಾಮ ಮಹಿಮೆಯಂತೋ ಪ ಪಾತ-ಕವ ಮಾಡಿಯಮ ದೂತರೆಳೆತರುತಿರಲು ಧಾತುಗಂದಿ ಅಜಮಿಳ ಭೀತಿಯಲಿ ಸುತನಾರಾಯಣ ನೆನಲು ಬಂದು ಖ್ಯಾತಿ-ನಾಮ ಹರಿಯಿತೋ ನೀಹೊರೆದೆಯೋ 1 ಪ್ರೇಮದಿಂದೋದಿ ಪಗಿಳಿಯಾ ವ್ಯಾಮೋಹ ಅಂತ್ಯದಲಿ ಕಾಮಿನಿ ಗಣಿಕೆ ದೇಹ ಬಿಡಲಾರದೇ ರಾಮರಾಮಾ ಮಾತಾಡೋಯನ್ನೆ ನಾಮವೇ ಗತಿ ನಿಡಿತೋ ನೀನೀಡಿದೆಯೋ 2 ಅಂದಿಗಿಂದಿಗ್ಯಾದ ಭಕ್ತ ವೃಂದ ದವಸರದಲ್ಲಿ ಛಂದದಿಂದ ಬಂದು ಕಾಮ್ಯ ಪೂರಿಸುವ ತಂದೆ ಮಹಿಪತಿ ಸ್ವಾಮಿ ನಾಮಾ ನಂದಬಲ್ಲ ನಲ್ಲದೇ ನಿನ್ನಾರು ಬಲ್ಲರೋ||3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿದ್ರೆ ಬಾರದೆ ಕನಸು ಬಿದ್ದುದನು ಕೇಳಿ ಬದ್ಧದೊಳು ಇದರ ಫಲವಿದ್ದರೇನು ಪೇಳಿ ಪ ಊರ ಗೆಲುವೆನು ಎಂದು ದಾರಿಯನು ಸಂವರಿಸಿ ಈರೈದು ಸಾವಿರವ ಹೇರಿಕೊಂಡು ಚೋರತ್ವದೊಳು ಸೇರಿ ಭಾರಿಯಗಳನು ಹಾರಿ ಧೀರರೈವರು ವ್ಯರ್ಥ ಸೂರೆಗೊಟ್ಟುದನು 1 ಹಸಿದ ಮಾರಿಯ ಹೊಲನ ನುಸಿವ ಕುರಿಯಂದದಲಿ ಎಸೆವ ಮೋಹಕದಿಂದ ಭರವಸೆಯೊಳು ಬೆಸನವನು ಮಾಡಿ ನಿಪ್ಪಸರದೊಳು ಮೈಮರೆದು ಬಿಸಿಯಾದ ಮಂಚದೊಳು ಹಮ್ಮೈಸಿಕೊಂಡುದನು2 ಮತಿಯಿಲ್ಲದಾತನಿಗೆ ಜೊತೆಯಾದ ಸೇವಕರು ಹಿತವಾದ ದಾರಿಯನು ತೋರುತಿಹರು ಮಿತಿಗಾಣೆನಿದರೊಳಗೆ ರಥಕೆ ಸಾರಥಿಯಿಲ್ಲ ಅತಿಶಯದ ಚತುರ ಶಿತಿಲಕ್ಷ ಸುಳಿವುದನು 3 ತೋರದಿಹ ಸೂತ್ರದೊಳು ಮೂರು ಕರಗಳ ಬಿಗಿದು ಭಾರಿ ಶಿಲೆಯನು ಹೇರಿ ಚೋರನಂದದಲಿ ಊರೊಳಗೆ ಮೆರೆಸುವುದು ತೋರುತಿಹ ಸ್ವಪ್ನಗಳು ಚಾರ ಫಲವೇನಿದಕೆ ಹೇಳಿ ಬಲ್ಲವರು4 ಮಳೆಗಾಲ ತುದಿಯೊಳಗೆ ಇಳೆಯಾರಿ ಬೆಳೆ ಕೆಡಲು ಕೊಳಕಾಲ್ಪೆಸರ ಬತ್ತಿ ಬಳಲುತಿರಲು ಸ್ಥಳದ ತೆರಿಗೆಗೆ ದೂತರೆಳೆದು ಕೇಳುತ್ತಿರಲು ಹಳೆಯ ಸಂಬಳದವರು ಒಳಒಳಗೆ ಸೇರುವುದ 5 ಬುದ್ಧಿ ತಪ್ಪಿದ ತೆರಿಗೆ ತಿದ್ದಿಕೊಳಬೇಕೆನುತ ಎದ್ದು ಬಹುಕ್ಲೇಶದಲಿ ಒದ್ದು ಕೈ ಕಾಲುಗಳ ತಿದ್ದಿ ಹೋದನು ಪುರಕೆ ಸಿದ್ಧ ಮಾಡುವರೆ 6 ಅಚ್ಚರಿಯ ಸ್ವಪ್ನಗಳು ಎಚ್ಚರದಿ ತೋರುತಿದೆ ಹುಚ್ಚನೆಂದು ಜನರು ನಚ್ಚರಿದನು ಮುಚ್ಚುಮರೆಯಾಕೆ ವರಾಹತಿಮ್ಮಪ್ಪನನು ಬಚ್ಚಿಟ್ಟು ಮನದೊಳಗೆ ಸ್ವೇಚ್ಛನಾಗುವುದು 7
--------------
ವರಹತಿಮ್ಮಪ್ಪ
ನಿನ್ನ ನಾಮವೆ ಘನವಆಗಿದೆ ನೆನೆವರಕಾವ ಕರುಣಿಯೆಂದು ಪ ಪಾದ ಯುಗವನಾ ಕಾಣಬಲ್ಲನೆ ಕೇಳಿ ಗರುಢಾ ರೂಢ ನಾಗಿ ಬಂದು ಗಜವ ಕಾಯ್ದವನೆಂದು 1 ಸಂಗದಿಂದಲಿ ಯಿರುತಿರಲು ಬಂದು ಯಮನ ದೂತರೆಳೆಯೆ ಭಯದಿ ತನ್ನ ನಂದನ ಕರೆದರೊಂದು ನಾಮವೆ ಕಾದುದೆಂದು 2 ದುರುಳ ಕಶ್ಯಪುಸುತನ ಭಾಧಿಸೆ ಮೊರೆಯಿಡಲದನುಕೇಳಿ ಭರದಿ ಕಂಬದಿ ಬಂದು ನರಹರಿಯಾಗಿ ನಿಂದು ಕರದೊಳವನ ಕೊಂದು ತರಳನ ಕಾಯ್ದೆಯೆಂದು 3 ಅಂಬುಧಿಶಯನ ನಿನ್ನ ರುಕ್ಮಾಂಗದ ಮೃತ್ಯವೆಂಬುದೆಲ್ಲವಗೆದ್ದು ಕುಂಭಿನಿಯೊಳು ಪೆಸರೊಡೆದರೆಂಬುದ ಕೇಳಿ 4 ಓಲಗದೊಳು ಶಾಲೆಯ ಸುಲಿಯೆ ದ್ರುಪದ ಭೀಮನಕೋಣೆ ಲಕ್ಷ್ಮೀ ಲೋಲ ಸೀರೆಯ ಸೆರಗ ಬೆಳೆಸಿದ ನಾಮವೆಂದು 5
--------------
ಕವಿ ಪರಮದೇವದಾಸರು
ಬ್ರಹ್ಮ ಲಿಖಿತವ ಮೀರಿ ಬಾಳ್ವರುಂಟುನಿರ್ಮಳದಿ ವೈಷ್ಣವರ ಮನಮುಟ್ಟಿ ಭಜಿಸಿ ಪ ಪಾಪಕೆ ಹೇಸದ ಶಬರ ಬಟ್ಟೆಯನು ಕಾದಿರಲುಆ ಪಥದಿ ಸಲೆ ವೈಷ್ಣವನು ಬಂದುಪಾಪವನು ತಪ್ಪಿಸಿ ರಾಮನಾಮವ ಕೊಡಲುಕಾಪಥಕ ವಾಲ್ಮೀಕಿ ಮುನಿಯಾಗಲಿಲ್ಲವೆ ? 1 ಪಂಚಮಹಾಪಾತಕವ ಮಾಡಿದ ಅಜಾಮಿಳನವಂಚಿಸಿ ಯಮದೂತರೆಳೆದೊಯ್ಯುತಿರಲುಕಿಂಚಿತ್ತು ಹರಿನಾಮವನಾಕಸ್ಮಿಕದಿ ನೆನೆಯೆಅಂಚಿಗೆಳೆದೊಯ್ದವರು ವಿಷ್ಣುದೂತರಲ್ಲವೆ ?2 ಬಾಲಕ ತನ್ನ ತಾಯ್ತಂದೆಯೊಳ್ ಮುನಿದು ಹಲವುಕಾಲ ವನದೊಳು ತಪವ ಮಾಡಲುನೀಲಮೇಘಶ್ಯಾಮ ಮೆಚ್ಚಿ ಬಾಲಕನಿಗೆಮೇಲಾದ ಪದವಿಯನು ಕೊಡಲಿಲ್ಲವೆ ? 3 ದಶಕಂಠನನುಜನು ಜಾನಕಿಯ ಬಿಡ ಹೇಳೆಅಸುರ ಕೋಪವ ತಾಳಿ ಹೊರಗಟ್ಟಿದಾಗಪೆಸರಗೊಳುತ ಬಂದು ಮೊರೆಹೊಕ್ಕ ವಿಭೀಷಣಗೆಶಶಿರವಿ ಪರ್ಯಂತ ಪಟ್ಟಗಟ್ಟಲಿಲ್ಲವೆ ? 4 ಕಲಿಗೆ ಬೆದರುವರಲ್ಲ ಕಾಲನ ಬಾಧೆಗಳಿಲ್ಲಛಲದಿ ನರಳಿ ಪುಟ್ಟುವ ಗಸಣೆಯಿಲ್ಲಒಲಿದು ಕಾಗಿನೆಲೆಯಾದಿಕೇಶವರಾಯನಸಲೆ ನಂಬಿದವರಿಗೆ ಮುಕುತಿಯಿತ್ತುದಿಲ್ಲವೆ ? 5
--------------
ಕನಕದಾಸ
ಸುಮ್ಮನೆ ಕಾಲವ ಕಳೆವರೆ - ಯಮ - |ಧರ್ಮರಾಯನ ದೂತರೆಳೆಯರೆ ಪ.ನರಿ - ನಾಯಿ ಜನುಮವು ಬಾರದೆ - ಹಾಗೆ - |ನರಜನ್ಮದಲಿ ಬಂದು ಸೇರದೆ ||ಹರಿಯ ಸ್ಮರಣೆ ಮಾಡಲಾರದೆ - ಸುಮ್ಮ |ನಿರಲು ಪಾಪದ ವಿಷವೇರದೆ 1ಬಾಲನಾಗಿದ್ದಾಗ ಬಹುಲೀಲೆ - ಮುಂದೆ |ಲೋಲನಾಗಿ ಬಾಳಿದ ಮೇಲೆ ||ಮೂಳ ವೃದ್ಧಾಪ್ಯ ಬಂತಾಮೇಲೆ - ಇನ್ನು - |ಬಾಳುವುದೆಲ್ಲ ನೂಲಮಾಲೆ 2ಮಡದಿ - ಮಕ್ಕಳ ಕೂಡಣ ಬಾಳು - ತನ್ನ |ಒಡಲಿಗಾಗೆ ತಾನು ಕರವಾಳು ||ಬಿಡದೆ ಸಂಕೀರ್ತನೆ ಮಾಡೇಳು - ಮಿಕ್ಕ - |ನುಡಿದ ನುಡಿಗಳೆಲ್ಲವು ಬೀಳು 3ಮನೆಮನೆ ವಾರ್ತೆಯು ಸ್ಥಿರವಲ್ಲ - ಈ |ಮನುಜರ ಮಾತೇನು ಘನವಲ್ಲ ||ವನಜಸಂಭವಗೂ ನಿಶ್ಚಯವಿಲ್ಲ - ಮುಂದೆ |ಹನುಮಂತ ಪಟ್ಟಕೆ ಬಹನಲ್ಲ 4ಇಂದಿನಹಮ್ಮು ನಾಳೆಗೆ ಇಲ್ಲ -ಭವ |ಬಂಧನದೊಳು ಸಿಕ್ಕಿ ನರಳಿದೆನಲ್ಲ ||ಮುಂದನರಿತು ನಡೆದುದಿಲ್ಲ - ಮೃತ್ಯು |ಬಂದಾಗ ಬಿಡಿಸಿಕೊಳ್ಳುವರಿಲ್ಲ 5ಮರಣವುಆವಾಗ ಬರುವುದೋ - ತನ್ನ |ಶರೀರವುಆವಾಗ ಮುರಿವುದೊ ||ಕರಣಂಗಳೆಲ್ಲವು ಜರಿವುದೊ - ತನ್ನ |ಗರುವದುಬ್ಬಸವೆಲ್ಲ ಮುರಿವುದೊ 6ಮರಣಕಾಲಕೆ ಅಜಮಿಳನಾಗ - ತನ್ನ |ತರಳನನಾರಗನೆಂದು ಕರೆದಾಗ ||ಕರುಣದಿ ವೈಕುಂಠ ಪದವೀಗ -ನಿತ್ಯ - |ಪುರಂದರವಿಠಲನ ನೆನೆ ಬೇಗ 7
--------------
ಪುರಂದರದಾಸರು