ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಾಲಿ ಲಾಲಿ ಹನುಮ ಲಾಲಿ ಬಲಭೀಮ ಲಾಲಿ ಲಾಲಿ ಮಧ್ವರಾಯ ಗುರುವರ್ಯ ಪ ತ್ರೇತೆಯಲಿ ರಘುಪತಿಯ ಸೇವೆ ಸಲಿಸಿದವನೆ ಸೀತೆಯನು ಕಂಡು ರಕ್ಕಸರ ಗೆಲಿದವನೆ ದೂತರಾವಣಗೆ ನೀತಿಗಳ ಕಲಿಸಿದವನೆ ಭೀತಿಯಿಲ್ಲದೆ ಲಂಕಾಪುರವ ದಹಿಸಿದವನೆ 1 ದ್ವಾಪರದಿ ಶ್ರೀ ಕೃಷ್ಣನನು ಪೂಜಿಸಿದವನೆ ಪಾಪಿ ದುರ್ಯೋಧನಾದಿಗಳ ಗೆಲಿದವನೆ ಕೋಪದಲಿ ಜರಾಸಂಧನನು ಸೀಳಿದವನೆ ಶ್ರೀಪತಿಯ ಸೇವೆಯಲಿ ನಿಸ್ಸೀಮನೆನಿಸಿದವನೆ2 ಮಧ್ವಮತದವರನುದ್ಧರಿಸಿ ಮೆರೆದವನೆ ಶ್ರದ್ಧೆಯಿಂದಲಿ ಹರಿಯ ಭಜಿಪ ಗುರುವರನೆ ಮುದ್ದು ಕಮಲನಾಭ ವಿಠ್ಠಲನೊಲಿಸಿದವನೆ ಶುದ್ಧ ಮೂರುತಿ ಉಡುಪಿ ಕೃಷ್ಣನರ್ಚಿಸಿದವನೆ3
--------------
ನಿಡಗುರುಕಿ ಜೀವೂಬಾಯಿ
ಲಾಲಿ ಲಾಲಿ ಹನುಮ ಲಾಲಿ ಬಲಭೀಮ ಲಾಲಿ ಲಾಲಿ ಲಾಲಿ ಗುರು ಮಧ್ವನಾಮ ಪ ತ್ರೇತೆಯಲಿ ಸಾಗರವ ದಾಟಿ ನಿಮಿಷದಲಿ ಸೀತೆಗುಂಗರ ಕೊಟ್ಟು ಕುಶಲ ತಿಳಿಸುತಲಿ ದೂತರಾವಣಗೆ ಶೌರ್ಯಗಳ ತೋರುತಲಿ ಸೀತೆಯ ಕ್ಷೇಮ ರಘುನಾಥಗರುಹುತಲಿ 1 ದ್ವಾಪರದಿ ಕೃಷ್ಣನಿಗೆ ಪರಮಾಪ್ತನಾಗಿ ದ್ರೌಪದಿಯ ವಚನವನು ಸಲಿಸಬೇಕಾಗಿ ಕೋಪದಲಿ ಖಳನ ಸೀಳುತ ತೃಪ್ತನಾಗಿ ಈ ಪರಿಯಲಿ ಹರಿಗೆ ಅರ್ಪಿಸುತ ಚನ್ನಾಗಿ2 ಮಧ್ವಮತವನುದ್ಧರಿಸಬೇಕೆನುತ ಶ್ರದ್ಧೆಯಲಿ ಕೃಷ್ಣನ್ನ ಸೇವಿಸುತ ಸತತ ಮುದ್ದು ಕಮಲನಾಭ ವಿಠ್ಠಲನ ಸ್ಮರಿಸುತ್ತಸದ್ಗ್ರಂಥ ರಚಿಸಿ ಬದರಿಯಲಿ ವಾಸಿಸುತ 3
--------------
ನಿಡಗುರುಕಿ ಜೀವೂಬಾಯಿ