ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಬಲವಂತನೋ ಭಾರತೀಕಾಂತಾ ಎಂಥಾ ದಯವಂತನೋ ಪ ಎಂಥ ಮಹಬಲವಂತ ಬಹುಗುಣ - ವಂತ ಸರ್ವದಾನಂತಚೇತನ ರಂತರಾದೋಳ್ನಿಂತು ಪ್ರೇರಿಪ ನಂತು ಮಹಿಮೆಯ ಅಂತು ತಿಳಿಯದೊ ಅ.ಪ ವೀರರಾಘವನಂಘ್ರಿಯ ಭಜಿಸಿ ಕಪಿ - ವೀರನಾದನು ಮಹರಾಯಾ ವಾರಿಧಿಯಾಗಾಧತೋಯ ಲಂಘಿಸಿ ಲಂಕಾ ಸಾರಿ ಪೇಳಿದ ವಾರ್ತೆಯ ವೀರ ವನವನಂಗಾರಮುಖಕೆ ಇತ್ತು ವೀರಾಕ್ಷನೆನಿಪ ಕುಮಾರನ ದಂಡಿಸಿ ಸಾರಿ ಉಂಗುರವಿತ್ತು ಮತ್ತೆ ವಾರಿಧಿ ವಾನÀರೇಶನು ತೋರಿ ರಾಮನ ಪದಕೆ ನಮಿಸಿ ಚಾರು ರಾಗಟೆ ಇತ್ತ ತ್ವರದಿ 1 ತರುಳೆ ದ್ರೌಪದಿಯನ್ನು ಶರಗು ಪಿಡಿದು ಶಳದಾನು ಕರಿಯಲು ಬ್ಯಾಗ ಹರಿ ತಾನಂಬರವಿತ್ತನು ಧುರದಿ ಭೀಮನು ನಿನ್ನ ತರಿದರಕ್ತದಿ ತಾನು ಬೆರೆಸಿ ಕೇಶವ ಕಟ್ಟಿ ಕರುಳ ದಂಡೆಯನಿಟ್ಟು ಮೇರೆವೆ ಕೇಳೆಲೋ ದುರುಳನೆಂದಾ - ತರುಣಿವಚನವ ಸ್ಥಿರವ ಮಾಡಿದ ಧರಿಯತಳದಲಿ ಸರಿಯುಗಾಣೆನೊ ವgವÀೃಕೋದರ ಪರಮ ಕರುಣಿಯೆ 2 ಭೂತೇಶ ಸರ್ವೋತ್ತುಮಾನೆಂಬುವೊ ಮಹಾ - ಪಾತಕಿ ಜನಮಾತನೇಮ ಈತ ಮಾಡಿದ ನಿರ್ಧೂಮ ಹರಿಗೆ ಶಿವ ದೂತಜನರಿಗುತ್ತುಮ ಖ್ಯಾತಿ ಮಾಡಿದ ಜೀವಜಾತಿ ಪ್ರೇರಕನಾಗಿ ಶ್ವೇತವಾಹನ ದೂತನಾಗಿಹ ನಾಥ ಗುರು ಜಗನ್ನಾಥವಿಠಲ ಧಾತನಾಂಡಕೆನಾಥ, ನಿರ್ಜರÀ ನಾಥರೆಲ್ಲರೂ ದೂತರೆಂದರು 3
--------------
ಗುರುಜಗನ್ನಾಥದಾಸರು
ಕಂದ ಭೀಮಗೆ ಸರಿಯಿಲ್ಲ ಎಂದೆಂದಿಗೆ ಬಿಡದೆ ಬಂದಾ ಪ್ರತಿಬಂಧಕಗಳ ನಿತ್ಯ ಅರಿತುಳಿವಾ ಸತ್ಕೀರ್ತಿ ಪೊಳವ ಪ ಪ್ರಳಯಾಂತದಲ್ಲಿ ತಾನು ತಿಳಿದು ಸತ್ವ ಜೀವರ ನೆಲೆ ಗೊಳಿಸುವೆನೆಂದು ಬಲುಹರುಷದಲಿ ಜಲಜನಾಭನ ಚರಣಾಬ್ಜಕರಿಗೆ ಹಸ್ತ ಮುಗಿದು ಶ್ರುತಿವಿನುತ ಇದೇ ಕಾಯವನಿತ್ತ 1 ಮಂಡೆ ಮೇಲೆ ಭಾರವ ಕೊಂಡಾ ಸಹಸ್ರ ಫಣ ಕುಂಡಲಿಯ ಪೊತ್ತಾ ಗಂಡುಗಲಿ ಕೂರ್ಮನಾ ಕೊಂಡಾಡಲು ನಮಗೆ ಸಗುಣಾಖ್ಯಾ ಗುರುವೀತನೇ ಮುಖ್ಯಾ 2 ಭೀಮನೆ ಭೀಮಸೇನಾ ಭೀಮರಾಯನೆಂದು ನೇಮದಿಂದಲಿ ನಾಮವ ನೆನೆದಡೆ ಪಾಮರ ಬುಧ್ಧಿಯನ್ನು ನಿತ್ಯ ಸತ್ಪುಣ್ಯ ಅನುಗಣ್ಯ ಬಲು ಗುಣ್ಯಮಾಡಿಸುವನನ್ಯ 3 ಹಿಂದೆ ರಘುನಾಥನ ಛಂದದ ದೂತನಾಗಿ ಇಂದು ವಂಶದಲಿಂದು ಮಂದಹಾಸದಲುದಿಸಿ ನಂದದಿಂದಲಿ ಕುರುಬಲವ ಗೆದ್ದ ಚಲುವ ಭಕ್ತಗೊಲಿವ ಮೂಲೋಕವ ಗೆಲುವ 4 ಜ್ಞಾನ ಭಕ್ತಿ ವೈರಾಗ್ಯ ನಾನಾ ಪ್ರಕಾರ ಭೀಷ್ಟೆ ಮಾಣದೆ ಕೊಡುವನು ಅನಂತ ಕಾಲಕೂ ಆನಂದತೀರ್ಥನೀತಾ ಪ್ರಾಣಾದಿ ಪಂಚರೂಪ ಶ್ರೀನಾಥ ವಿಜಯ ವಿಠ್ಠಲಾ ಸಿರಿನಲ್ಲಾ ಪೊರೆವೆಲ್ಲಾ ಒಂದೆಂಬದಲ್ಲಾ 5
--------------
ವಿಜಯದಾಸ
ಭಾರತಿ ದೇವಿಯೆ ಮಾರುತಿ ರಾಣಿಯೆ ಪ. ಮಂದಿ ನಾಲ್ವರನು ಹೊಂದಿಸಿ ಉದರÀದಿಒಂದೆ ರೂಪದಿ ಜನರಿಗೆ ತೋರುವ ಸತಿ1 ಸೀತಾಕಾಂತನ ದೂತನಾಗಿ ಪ್ರ-ಖ್ಯಾತಿಯ ಪಡೆದನ ಪ್ರೀತಿಯ ಸತಿಯಳೆ 2 ದುಷ್ಟ ಕಲಿಯ ಕುಲಕುಟ್ಟಿ ಕೆಡಹಿದ ಭಲಕಟ್ಟಾಳು ಭೀಮನ ಪಟ್ಟದಸತಿಯಳೆ 3 ಮೂರುಏಳುಕುಲ ಮಾಯಿಗಳನು ಗೆದ್ದುಬೋರೆಮರದ ಕೆಳಗಿರುವನ ಸತಿಯಳೆ 4 ಹಗಲಿರುಳೆನ್ನದೆ ಹಯವದನನ ಪದಹೃದಯ ಕಮಲದೊಳು ಭಜಿಪನ ಸತಿಯಳೆ 5
--------------
ವಾದಿರಾಜ
ಭಾರತೀಶ ಹರಿದಾಸನಾದನಿಲ್ಲೀ ವೀಣೆಯ ಧರಿಸುತಲೀ ಪ. ಭಾರಿಭಾರಿಗವತಾರ ಮಾಡಿ ಬಳಲೀ ಆನಂದದಲ್ಲೀ ಅ.ಪ. ತ್ರೇತೆಯಲ್ಲಿ ಶ್ರೀ ರಾಮದೂತನಾಗಿ ತನುಸುಖವ ನೀಗಿ ಪ್ರೀತಿ ಭಕ್ತಿಯಲಿ ರಾಮ ಕಾರ್ಯಕಾಗಿ ತನುವಪ್ಪಿಸಿ ಬಾಗಿ ಖ್ಯಾತಿ ಪಡೆದು ಶರಧಿಯ ಲಂಘಿಸಿ ಪೋಗಿ ಸೀತೆಯ ಕಂಡೆರಗಿ ವೀಹೋತ್ರಗೆ ಪುರವಪ್ಪಿಸಿ ತಿರುಗೀ ರಾಮರ ಕಂಡೆರಗಿ 1 ಕುಂತಿಯ ಜಠರದಿ ಜನಿಸಿ ಭೀಮನೆನಿಸೀ ಬಕಮುಖರನೆ ಜೈಸಿ ಸಂತೋಷದಿ ಸೌಗಂಧ ಸತಿಗೆ ಸಲಿಸೀ ಕೌರವರ ಸಂಹರಿಸೀ ಅಂತರಂಗದಲಿ ಕೃಷ್ಣನಂಘ್ರಿ ಭಜಿಸಿ ಪಾಂಡವರನೆ ಮೆರಸೀ ಕಂತುಪಿತನ ಕಡುಕೃಪೆಯ ಪಡೆದು ಸುಖಿಸೀ ಮೇಲ್ತೋರದೆ ಸ್ಮರಿಸೀ 2 ಮೂರನೆ ರೂಪದಿ ಮುನಿಯಾಗವತರಿಸೀ ದುರ್ಮತಗಳ ಜೈಸೀ ಸಾರತತ್ವಮತ ಸಜ್ಜನರಿಗೆ ತಿಳಿಸೀ ಸರ್ವೋತ್ತಮ ಹರಿ ಎನಿಸೀ ಆರು ಅರಿಯದಂತೆ ದಾಸತ್ವವಚರಿಸೀ ದುರ್ಮತಗಳ ಜೈಸೀ ತೋರಿ ತೋರದಂತೆ ಸದ್ಗ್ರಂಥದಿ ತಿಳಿಸೀ ಯತಿ ಕುಲಜರೋಳ್ ನಿಲಿಸೀ 3 ಮೀಸಲ ದಾಸ್ಯವ ಮೂರವತಾರದಲ್ಲಿ ಚರಿಸಲು ಕಲಿಯಲ್ಲೀ ವ್ಯಾಸ ಮುನಿಯು ಬಹಿರಂಗಪಡಿಸೆ ಚಲ್ಲೀ ನಾರದ ಮುನಿಯಲ್ಲೀ ಪುರಂದರ ಗುರುವೆನಿಸುತಲೀ ಮೆರೆಯಲು ಜಗದಲ್ಲೀ ಮೀಸಲು ಉಳಿಯದೆ ಪೋಯಿತೆಂದು ಇಲ್ಲೀ ದಾಸ ತಾನಾಗುತಲೀ 4 ದಾಸತನದ ಆನಂದವನನುಭವಿಸೇ ದೇವತೆಗಳು ಬಯಸೇ ಭೂಸುರ ಜನ್ಮದಿ ಭೂಮಿಯಲವತರಿಸೇ ಹರಿದಾಸರಾಗಿ ಸುಖಿಸೇ ವಾಸುದೇವಗೆ ತಾ ನಿಜದಾಸನು ಎನಿಸೇ ಮಾರುತಿ ಇದ ಬಯಸೇ ಶ್ರೀಶ ಗೋಪಾಲಕೃಷ್ಣವಿಠಲದಾಸಾ ಬೆಳಗಾವಿ ವಾಸಾ 5
--------------
ಅಂಬಾಬಾಯಿ
ಮಲಗು ಮಲಗಯ್ಯ ಹನುಮ ಕಲಿಭಂಜನ ಭೀಮ ಜಲಧಿ ಅಲವಬೋಧನಾಮಾ ಜೋ ಜೋ ಪ ತ್ರೇತೆಯಲಿ ರಾಮದೂತನಾಗಿ ನೀ ಬಂದು ಭೀತಿಯಿಲ್ಲದೆ ಲಂಕೆಯ ದಹಿಸಿದೆಯೊ ಅಂದು ಸೀತೆಯಿತ್ತಂಥ ಚೂಡಾಮಣಿಯನು ತಂದು ಪ್ರೀತಿಪಡಿಸಿದೆ ರಾಮನ ನೀ ದಯಾಸಿಂಧು 1 ದ್ವಾಪರಾಂತದಲಿ ಭೀಮನಾಗಿ ನೀ ಬಂದೆ ಪಾಪಿ ಕೀಚಕ ದುಶ್ಶಾಸನಾದ್ಯರ ಕೊಂದೆ ಸಿರಿ ಕೃಷ್ಣನ ಪಾದಕೆರಗಿ ನಿಂದೆ ಭಾಪು ಭಾಪುರೆಂದೆನಿಸಿಕೊಂಡೆ ಅವನಿಂದೆ 2 ನಾನೆ ದೇವರೆಂಬ ಮತವನು ಹೆಮ್ಮೆಯಿಂದ ದಾನವರೀ ಕಲಿಯುಗದಲಿ ಪೊಗಳೆ ಮುದದಿಂದ ನೀನವತರಿಸಿ ಮಧ್ವಮುನಿ ಪೆಸರಿನಿಂದ ಹೀನ ಮತವ ಮುರಿದೆಯೊ ವಾಗ್ಭಾಣಗಳಿಂದ 3 ಏಕಾದ್ಯಶ ಕರ್ಮಗಳ ಶ್ರೀ ಹರಿಗರ್ಪಿಸಿ ಆತನನು ನೀ ಬಹು ಸಂತೋಷವನುಪಡಿಸಿ ಜಾತರಹಿತನಾಗೆನುತ ಆಶಿಷವ ವಹಿಸಿ ವಾತಸುತ ಕುಳಿತಿಹೆ ಯಂತ್ರೋದ್ಧಾರನೆನಿಸಿ 4 ಕಂಗಳನು ಮುಚ್ಚಿ ಜಪಮಾಲೆಯನು ತಿರುಗಿಸುತ ರಂಗೇಶವಿಠಲನ ತಾನದೊಳು ಸ್ಮರಿಸುತ ಹಿಂಗೇಕೆ ಕುಳಿತಿಹೆ ಮಲಗೇಳಯ್ಯ ದಾತ ತುಂಗ ವಿಕ್ರಮ ನೀನು ತ್ರಿಭುವನದಿ ಪ್ರಖ್ಯಾತ 5
--------------
ರಂಗೇಶವಿಠಲದಾಸರು
ಸಂತೋಷ ಕಂಡ್ರೀ ಸ್ವಾಮಿ ಸಂತೋಷ ಕಂಡ್ರೀ ಪಚಿಂತೆ ಚಿಂತೆ ಬಿಟ್ಟೀ ಶಾಂತದೂತನಾಗಿಕಂತುಪಿತನ ಚಿಂತಿಸುವಗೆ ಸಂತೋಷ ಕಂಡ್ರೀ1ಕೆಟ್ಟ ದುಷ್ಟ ಕಾರ್ಯ ಮಾಡೀ ಕಷ್ಟ ನಷ್ಟಗಳಿಗೆ ಸಿಕ್ಕಿಹೊಟ್ಟೆಹೊರೆವದುಷ್ಟಗೆಲ್ಲ ಸಂತೋಷ ಕಂಡ್ರಿ2ಆಶಾಪಾಶ ತ್ಯಜಿಸಿ ಹಲವು ಲೇಸು ಶ್ರೇಯ ಕಾಯಗೈದಈಶನಂಘ್ರಿ ದಾಸರಿಗೆ ಸಂತೋಷ ಕಂಡ್ರಿ3ತರುಣಿ ತರುಣರಿದ್ದರೇನು ಧರಣಿಗರನಾದರೇನುಹರಿಯ ಕರುಣವಿಲ್ಲದುಂಟೇ ಸಂತೋಷ ಕಂಡ್ರೀ4ಕಾಯದಲ್ಲಿ ಮೋಹ ತೊರೆದುಜೀಯಕೃಷ್ಣರಾಯನೆಂದುನ್ಯಾಯವಂತ ಜೀವರೀಗೆ ಸಂತೋಷ ಕಂಡ್ರೀ5ಯುಕ್ತಾಯುಕ್ತ ಯೋಚಿಸದೆ ಪಕ್ತ ಕಾಮಸಕ್ತನಾದರಕ್ತಮದದ ಶಕ್ತಗಿಹುದೆ ಸಂತೋಷ ಕಂಡ್ರಿ6ತಂದೆ ತಾಯಿ ನೀನೆಂದೆಂಬ ಬಂಧು ಬಳಗ ನೀನೆಂದೆಂಬಗೋವಿಂದನಾ ದಾಸರ್ಗೆಲ್ಲ ಸಂತೋಷ ಕಂಡ್ರೀ7<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ